ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಉದ್ಯೋಗವಕಾಶ; 220 ಹುದ್ದೆಗಳಿಗೆ ಅರ್ಜಿ ಆಹ್ವಾನ

Indian Military Nursing Recruitment 2019: ಒಟ್ಟು 220 ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಮಿಲಿಟರಿ ಸಶಸ್ತ್ರ ಪಡೆಗಳ ಆಸ್ಪತ್ರೆಯಲ್ಲಿ ಟೈನಿಂಗ್​​ ನೀಡಲಾಗುತ್ತದೆ. 4 ವರ್ಷ ಪೂರ್ಣಗೊಂಡ ನಂತರ, ಅಭ್ಯರ್ಥಿಯನ್ನು ಖಾಯಂಗೊಳಿಸಲಾಗುತ್ತದೆ.

news18-kannada
Updated:November 16, 2019, 4:54 PM IST
ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಉದ್ಯೋಗವಕಾಶ; 220 ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತೀಯ ಸೇನೆ
  • Share this:
ಭಾರತೀಯ ಸೇನೆಗೆ ಸೇರ ಬಯಸುವ ಯುವತಿಯರಿಗೆ ಸಿಹಿ ಸುದ್ದಿಯೊಂದು ಪ್ರಕಟವಾಗಿದೆ. ಮಿಲಿಟರಿ ನರ್ಸಿಂಗ್​ ಸರ್ವಿಸ್​ ವಿಭಾಗದಲ್ಲಿ ಬಿಎಸ್ಸಿ ಕೋರ್ಸ್​ಗೆ ಅರ್ಹ ಮತ್ತು ಆಸಕ್ತ ಯುವತಿಯರಿಗೆ ಅರ್ಜಿ ಆಹ್ವಾನಿಸಿದೆ.

ಒಟ್ಟು 220 ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಮಿಲಿಟರಿ ಸಶಸ್ತ್ರ ಪಡೆಗಳ ಆಸ್ಪತ್ರೆಯಲ್ಲಿ ಟೈನಿಂಗ್​​ ನೀಡಲಾಗುತ್ತದೆ. 4 ವರ್ಷ ಪೂರ್ಣಗೊಂಡ ನಂತರ, ಅಭ್ಯರ್ಥಿಯನ್ನು ಖಾಯಂಗೊಳಿಸಲಾಗುತ್ತದೆ. ಅಥವಾ ಶಾರ್ಟ್​ ಸರ್ವೀಸ್​ ಕಮಿಷನ್​ ಪ್ರಕಾರ ನೇಮಕ ಮಾಡಲಾಗುತ್ತದೆ. ಒಟ್ಟು ಹುದ್ದೆಗಳ ಪೈಕಿ ಬೆಂಗಳೂರಿನ ಮಿಲಿಟರಿ ಆಸ್ಪತ್ರೆಯಲ್ಲಿ 40 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.

ವಯೋಮಿತಿ

1995 ಅಕ್ಟೋಬರ್ 1 ಮತ್ತು 2003 ಸೆಪ್ಟೆಂಬರ್ 30 ರ ನಡುವೆ ಜನಿಸಿದ ಯುವತಿಯರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅಂದರೆ 24 ವರ್ಷ ವಯೋಮಿತಿ ಮೀರಿರಬಾರದು.

ಅರ್ಹತೆ

ಭಾರತೀಯ ಸೇನೆ ಹೊರಡಿಸಿರುವ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿಜ್ಞಾನ ವಿಷಯದಲ್ಲಿ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆ ಹೊಂದಿರುವವರು ಅಪ್ಲಿಕೇಶನ್ ಸಲ್ಲಿಸಬಹುದು. ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ವಿಷಯಗಳನ್ನು ಅಧ್ಯಯನ ಮಾಡಿರಬೇಕು. ಶೇ.55 ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು. ಪ್ರಸ್ತುತ ಪಿಯುಸಿ ಅಧ್ಯಯನ ಮಾಡುತ್ತಿರುವ ಯುವತಿಯರು ಸಹ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸ ಬಯಸುವ ಯುವತಿಯರು ಕನಿಷ್ಠ 148 ಸೆಂ.ಮೀ ಎತ್ತರ ಇರಬೇಕು.

ನೇಮಕಾತಿ ವಿಧಾನಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 2020 ರ ಏಪ್ರಿಲ್‌ನಲ್ಲಿ ಆನ್‌ಲೈನ್‌ ಸಿಬಿಟಿ ಪರೀಕ್ಷೆ ನಡೆಸಲಾಗುತ್ತದೆ. ಸಂದರ್ಶನ, ದೇಹದಾಡ್ಯತೆ ಪರೀಕ್ಷೆಗಳನ್ನು ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವೇಳೆ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲು ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಡಿಸೆಂಬರ್ 2, 2019

ಪ್ರವೇಶ ಪತ್ರ ಪ್ರಕಟ: 2020 ಮಾರ್ಚ್ ತಿಂಗಳ 3ನೇ ವಾರ.

ಆನ್‌ಲೈನ್‌ ಪರೀಕ್ಷೆ ದಿನಾಂಕ : 2020 ಏಪ್ರಿಲ್ ತಿಂಗಳು.

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ : 011-23092294

ಅಧಿಸೂಚನೆ ಹೀಗಿದೆ

ವೆಬ್‌ಸೈಟ್‌ಗಾಗಿ ಕ್ಲಿಕ್ ಮಾಡಿ

 
First published: November 16, 2019, 4:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading