Indian Army: ಗಡಿ ದಾಟಿ ಭಾರತಕ್ಕೆ ಬಂದ 3 ವರ್ಷದ ಪಾಕಿಸ್ತಾನಿ ಬಾಲಕ! ಮಾನವೀಯತೆ ಮೆರೆದ ಭಾರತೀಯ ಸೇನೆ

ಅಚಾತುರ್ಯದಿಂದ ಗಡಿ ದಾಟಿದ ಪ್ರಕರಣ ಎಂದು ಅರಿತ ಬಿಎಸ್‌ಎಫ್ ಪಂಜಾಬ್ ಫ್ರಾಂಟಿಯರ್ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ರೇಂಜರ್ಸ್‌ಗೆ ತೆರಳಿ ಸೌಹಾರ್ದತೆಯ ಸೂಚಕವಾಗಿ ಮಗುವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಭಾರತೀಯ ಸೇನೆಯ  ಮಾನವೀಯ ಮುಖವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ. ಪಂಜಾಬ್‌ನ ಅಂತರರಾಷ್ಟ್ರೀಯ ಗಡಿಯನ್ನು (IB) ಅಜಾಗರೂಕತೆಯಿಂದ ಅರಿವಿಲ್ಲದೇ ದಾಟಿದ ಮೂರು ವರ್ಷದ ಪಾಕಿಸ್ತಾನಿ ಬಾಲಕನನ್ನು (Pakistani Child) ಗಡಿ ಭದ್ರತಾ ಪಡೆ (BSF) ಪಾಕಿಸ್ತಾನಿ ರೇಂಜರ್‌ಗಳಿಗೆ ಹಸ್ತಾಂತರಿಸಿದೆ ಎಂದು ಭಾರತೀಯ ಸೇನೆಯ (Indian Army) ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಫಿರೋಜ್‌ಪುರ ಸೆಕ್ಟರ್‌ನಲ್ಲಿ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಐಬಿ ಬೇಲಿ ಬಳಿ ಮಗು ಅಳುತ್ತಿರುವುದನ್ನು ಬಿಎಸ್‌ಎಫ್ ಯೋಧರು ಗಮನಿಸಿದ್ದಾರೆ. ಮಗು ಬೇಕಂತಲೇ ಗಡಿ ದಾಟಿ ಬಂದಿಲ್ಲ ಎಂಬುದು ಈ ಸಮಯದಲ್ಲಿ ಭಾರತೀಯ ಯೋಧರ ಗಮನಕ್ಕೆ ಬಂದಿದೆ. 

  ಅಚಾತುರ್ಯದಿಂದ ಗಡಿ ದಾಟಿದ ಪ್ರಕರಣ ಎಂದು ಅರಿತ ಬಿಎಸ್‌ಎಫ್ ಪಂಜಾಬ್ ಫ್ರಾಂಟಿಯರ್ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ರೇಂಜರ್ಸ್‌ಗೆ ತೆರಳಿ ಸೌಹಾರ್ದತೆಯ ಸೂಚಕವಾಗಿ ಮಗುವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ.

  ಇದನ್ನೂ ಓದಿ: Vice President Election: ಅಮರೀಂದರ್ ಸಿಂಗ್ ಬಿಜೆಪಿ ಸೇರಿ ಎನ್​ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿ ಆಗ್ತಾರಾ?

  ಶುಕ್ರವಾರ ರಾತ್ರಿ 7:15 ರ ಸುಮಾರಿಗೆ, 182 ಬಿಎನ್ ಬಿಎಸ್ಎಫ್, ಫಿರೋಜ್‌ಪುರ ಸೆಕ್ಟರ್‌ನ ಪಡೆಗಳು ಸುಮಾರು 3 ವರ್ಷ ವಯಸ್ಸಿನ  ಪಾಕಿಸ್ತಾನಿ ಮಗುವನ್ನು ಗಡಿ ದಾಟಿ ಭಾರತದ ಪ್ರದೇಶವನ್ನು ಪ್ರವೇಶಿಸಿದಾಗ ವಶಕ್ಕೆ ಪಡೆದುಕೊಳ್ಳಲಾಯಿತು ಎಂದು ಬಿಎಸ್‌ಎಫ್ ಮಾಹಿತಿ ನೀಡಿದೆ.  ರಾತ್ರಿ 9:45ಕ್ಕೆ ಹಸ್ತಾಂತರ
  3 ವರ್ಷದ ಮಗು  ಅಚಾತುರ್ಯದಿಂದ ಗಡಿ ದಾಟಿದ ದಾಟಿದ ಪ್ರಕರಣವಾದ್ದರಿಂದ, BSF ಪಾಕ್ ರೇಂಜರ್‌ಗಳನ್ನು ಸಂಪರ್ಕಿಸಿದೆ. ರಾತ್ರಿ 9:45 ರ ಸುಮಾರಿಗೆ, ಪಾಕಿಸ್ತಾನಿ ಮಗುವನ್ನು ಸದ್ಭಾವನೆಯ ಸೂಚಕವಾಗಿ ಮತ್ತು ಮಾನವೀಯ ನೆಲೆಯಲ್ಲಿ ಪಾಕ್ ರೇಂಜರ್‌ಗಳಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದೆ.

  ಇದನ್ನೂ ಓದಿ: Xi Jinping: ಹಾಂಗ್​ಕಾಂಗ್​ಗೆ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಭೇಟಿ ನೀಡಿದ್ದೇಕೆ?

  BSF ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್‌ಗಳ ದೇಶದ ಪಶ್ಚಿಮ ಪಾರ್ಶ್ವದ ಉದ್ದಕ್ಕೂ ಚಲಿಸುವ 3,300 ಕಿ.ಮೀ ಉದ್ದದ ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯನ್ನು ರಕ್ಷಿಸುತ್ತದೆ.

  ಇದು ಮೊದಲ ಪ್ರಕರಣವೇನಲ್ಲ
  ಈ ಮುನ್ನ ಕೂಡ BSF 6 ಪಾಕಿಸ್ತಾನಿ ಯುವಕರನ್ನು ಪಾಕ್ ರೇಂಜರ್‌ಗಳಿಗೆ ಹಸ್ತಾಂತರಿಸಿತ್ತು.  ಕಳೆದ ವರ್ಷ ಪಂಜಾಬ್‌ನ ಅಂತರಾಷ್ಟ್ರೀಯ ಗಡಿಯಿಂದ ಭಾರತದ ಕಡೆಗೆ "ಅಚಾತುರ್ಯದಿಂದ" ದಾಟಿದ ಆರು ಪಾಕಿಸ್ತಾನಿ ಯುವಕರನ್ನು BSF ಪಾಕಿಸ್ತಾನ ರೇಂಜರ್‌ಗಳಿಗೆ ಹಸ್ತಾಂತರಿಸಿತ್ತು.
  Published by:guruganesh bhat
  First published: