Indian Army| ಇದೇ ಮೊದಲ ಬಾರಿಗೆ ಐವರು ಮಹಿಳಾ ಅಧಿಕಾರಿಗಳಿಗೆ ಕರ್ನಲ್ ಶ್ರೇಣಿ ನೀಡಿದ ಭಾರತೀಯ ಸೇನೆ!

26 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಕರ್ನಲ್ ಶ್ರೇಣಿಯನ್ನು ನೀಡಲಾಗುತ್ತದೆ. ಸೈನ್ಯಕ್ಕೆ ಖಾಯಂ ಆಯೋಗವನ್ನು ನೀಡಿದ್ದರಿಂದ ಮಹಿಳೆಯರು ಕರ್ನಲ್ (ಟೈಮ್ ಸ್ಕೇಲ್) ಶ್ರೇಣಿಗೆ ಅರ್ಹರಾಗಿದ್ದಾರೆ ಎಂದು ತಿಳಿದುಬಂದಿದೆ.

ಭಾರತದ ಮಹಿಳಾ ಸೇನಾನಿಗಳು.

ಭಾರತದ ಮಹಿಳಾ ಸೇನಾನಿಗಳು.

  • Share this:
    ನವ ದೆಹಲಿ (ಆಗಸ್ಟ್​ 23); ಭಾರತೀಯ ಸೇನೆ ಇಂದು ಹೊಸ ಇತಿಹಾಸವನ್ನು ನಿರ್ಮಿಸಿದೆ. ಭಾರತದ ಸೇನೆಯಲ್ಲಿ (Indian Army) ಈವರೆಗೆ ಅತ್ಯುತ್ತಮ ಸೇವೆ ಸಲ್ಲಿಸಿದ ಪುರುಷ ಅಧಿಕಾರಿಗಳಿಗೆ ಮಾತ್ರ ಕರ್ನಲ್ ಶ್ರೇಣಿಯನ್ನು (Colonel) ನೀಡಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಭಾರತೀಯ ಸೇನೆಯ ಆಯ್ಕೆ ಮಂಡಳಿಯು ಐವರು ಮಹಿಳಾ ಅಧಿಕಾರಿಗಳನ್ನು ಕರ್ನಲ್ (ಟೈಮ್ ಸ್ಕೇಲ್) ಶ್ರೇಣಿಗೆ ಆಯ್ಕೆ ಮಾಡಿದೆ. 26 ವರ್ಷಗಳ ‘ಗಣನೀಯ ಸೇವೆ’ ಪೂರ್ಣಗೊಳಿಸಿದ ನಂತರ ಈ ಐವರೂ ಮಹಿಳಾ ಅಧಿಕಾರಿಗಳಿಗೆ ಬಡ್ತಿ ನೀಡುವ ಬಗ್ಗೆ ಸೇನೆ ಇಂದು ಸ್ಪಷ್ಟಪಡಿಸಿದೆ. ನಿರ್ಧಾರವನ್ನು ಪ್ರಕಟಿಸಿದ ಭಾರತೀಯ ಸೇನೆಯು ಸೋಮವಾರ, "ಕಾರ್ಪ್ ಆಫ್ ಸಿಗ್ನಲ್, ಕಾರ್ಪ್ ಆಫ್ ಎಲೆಕ್ಟ್ರಾನಿಕ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ಸ್ (ಇಎಂಇ) ಹಾಗೂ ಕಾರ್ಪ್ ಆಫ್ ಇಂಜಿನಿಯರ್‌ಗಳೊಂದಿಗೆ ಸೇವೆ ಸಲ್ಲಿಸುತ್ತಿರುವ ಮಹಿಳಾ ಅಧಿಕಾರಿಗಳು ಕರ್ನಲ್ ಹುದ್ದೆಗೆ ಅನುಮೋದನೆ ಪಡೆಯುತ್ತಿರುವುದು ಇದೇ ಮೊದಲು" ಎಂದು ಹೇಳಿದೆ.

    ಕಾರ್ಪ್ ಆಫ್‌ ಸಿಗ್ನಲ್‌ನ ಲೆಫ್ಟಿನೆಂಟ್ ಕರ್ನಲ್ ಸಂಗೀತಾ ಸರ್ದನ, ಲೆಫ್ಟಿನೆಂಟ್ ಕರ್ನಲ್ ಸೋನಿಯಾ ಆನಂದ್, ಕಾರ್ಪ್ ಆಫ್‌ ಇಎಂಇ ಲೆಫ್ಟಿನೆಂಟ್ ಕರ್ನಲ್ ನವನೀತ್ ದುಗ್ಗಲ್, ಕಾರ್ಪ್‌ ಆಫ್‌ ಇಂಜಿನೀರ್‌ಸ್‌ ಲೆಫ್ಟಿನೆಂಟ್ ಕರ್ನಲ್ ರೀನು ಖನ್ನಾ ಮತ್ತು ಲೆಫ್ಟಿನೆಂಟ್ ಕರ್ನಲ್ ರಿಚ ಸಾಗರ್‌‌, ಒಟ್ಟು ಐವರು ಕರ್ನಲ್ (ಟೈಮ್ ಸ್ಕೇಲ್) ಶ್ರೇಣಿಗೆ ಆಯ್ಕೆಯಾದ ಮಹಿಳಾ ಅಧಿಕಾರಿಗಳು ಎಂದು ಸೇನೆಯು ಹೇಳಿದೆ.

    16 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಕರ್ನಲ್ ಹುದ್ದೆಗೆ ಮೊದಲ ಆಯ್ಕೆ ನಡೆಯುತ್ತದೆ, ಇದರಲ್ಲಿ ಉಳಿದವರಿಗೆ 26 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಕರ್ನಲ್ ಶ್ರೇಣಿಯನ್ನು ನೀಡಲಾಗುತ್ತದೆ. ಸೈನ್ಯಕ್ಕೆ ಖಾಯಂ ಆಯೋಗವನ್ನು ನೀಡಿದ್ದರಿಂದ ಮಹಿಳೆಯರು ಕರ್ನಲ್ (ಟೈಮ್ ಸ್ಕೇಲ್) ಶ್ರೇಣಿಗೆ ಅರ್ಹರಾಗಿದ್ದಾರೆ ಎಂದು ತಿಳಿದುಬಂದಿದೆ.

    ಇದನ್ನೂ ಓದಿ: Explained: ತೈಲ ಹಾಗೂ ಅನಿಲ ಕಂಪನಿಗಳು ನೈಸರ್ಗಿಕ ಶಕ್ತಿ ಮೂಲಗಳನ್ನು ಅನ್ವೇಷಿಸುತ್ತಿರುವುದಕ್ಕೆ ಕಾರಣವೇನು?

    ಖಾಯಂ ಆಯೋಗ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ ನಂತರ ವಿಶೇಷ ಮಂಡಳಿಯಿಂದ 615 ರಲ್ಲಿ 424 ಮಹಿಳೆಯರನ್ನು ಖಾಯಂ ಆಯೋಗಕ್ಕೆ ಪರಿಗಣಿಸಲಾಗಿದೆ. I ಹಿಂದೆ, ಕರ್ನಲ್ ಹುದ್ದೆಗೆ ಬಡ್ತಿ ಪಡೆಯುವುದು ಕೇವಲ ಸೇನಾ ವೈದ್ಯಕೀಯ ದಳ (AMC), ನ್ಯಾಯಾಧೀಶ ಅಡ್ವೋಕೇಟ್ ಜನರಲ್ (JAG) ಮತ್ತು ಸೇನಾ ಶಿಕ್ಷಣ ದಳ (AEC) ದ ಮಹಿಳಾ ಅಧಿಕಾರಿಗಳಿಗೆ ಮಾತ್ರ ಸಾಧ್ಯವಾಗುತ್ತಿತ್ತು.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    Published by:MAshok Kumar
    First published: