Agniveer Recruitment 2022: ಅಗ್ನಿವೀರ್ ನೇಮಕಾತಿ ರ್ಯಾಲಿ ವೇಳಾಪಟ್ಟಿ ಬಿಡುಗಡೆ, ಇಲ್ಲಿದೆ ಸಂಪೂರ್ಣ ಮಾಹಿತಿ

Agniveer Recruitment 2022-2023: ಅಗ್ನಿವೀರ್ ನೇಮಕಾತಿ ರ್ಯಾಲಿಗಳ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತೀಯ ಸೇನೆಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ (Website) ಅಗ್ನಿವೀರ್ (Agniveer) ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಕ್ಲರ್ಕ್/ ಸ್ಟೋರ್ ಕೀಪರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‌ಮ್ಯಾನ್ (Agniveer Tradesman) ಗಾಗಿ ನೇಮಕಾತಿ ಪ್ರಕ್ರಿಯೆ (Recruitment) ನಡೆಸುತ್ತಿದೆ. 10 ನೇ ತರಗತಿ ಪಾಸ್ ಮತ್ತು ಅಗ್ನಿವೀರ್ ಟ್ರೇಡ್ಸ್‌ಮ್ಯಾನ್ 8 ನೇ ಪಾಸ್‌ ಮಾಡಿದವರಿಗಾಗಿ ನೇಮಕಾತಿ ರ್ಯಾಲಿ (Recruitment Rally) ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜುಲೈ 30, 2022 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ (Online Application) ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ಜುಲೈ 1, 2022 ರಿಂದ ಈ ತಿಂಗಳ ಆರಂಭದಲ್ಲಿ ಪ್ರಾರಂಭವಾಗಿದೆ. ಅಭ್ಯರ್ಥಿಗಳು ಎಲ್ಲರಿಗೂ ಆನ್‌ಲೈನ್ ನೋಂದಣಿ (Registration) ಕಡ್ಡಾಯವಾಗಿದೆ (Mandatory) ಎಂಬುದನ್ನು ಪ್ರಮುಖ ಅಂಶ.

ರ್ಯಾಲಿ ಸೈಟ್ ಪ್ರವೇಶಿಸಲು ಇವಿಷ್ಟು ನಿಮ್ಮ ಕೈಯಲ್ಲಿರಲಿ

ಮಾನ್ಯತೆ ಇರುವ ಎಡ್ಮಿಟ್ ಕಾರ್ಡ್‌ಗಳು, ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣಪತ್ರ, ನೋಟರಿಯಿಂದ ಸರಿಯಾಗಿ ಭರ್ತಿ ಮಾಡಿದ ಮತ್ತು ಸಹಿ ಮಾಡಿದ ಮಾನ್ಯ ಅಫಿಡವಿಟ್‌ಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ನೇಮಕಾತಿ ರ್ಯಾಲಿ ಸೈಟ್‌ನಲ್ಲಿ ಪ್ರವೇಶವನ್ನು ಅನುಮತಿಸಲಾಗುವುದು ಎಂಬುದನ್ನು ಸಹ ಸ್ಪಷ್ಟವಾಗಿ ಹೇಳಲಾಗಿದೆ.

ಹೇರ್​ಕಟ್, ಕ್ಲೀನ್ ಶೇವ್ ಕಡ್ಡಾಯ

ಅಭ್ಯರ್ಥಿಗಳು ಸರಿಯಾದ ಹೇರ್ ಕಟ್ ಮತ್ತು ಕ್ಲೀನ್ ಶೇವ್ ಮಾಡಿರಬೇಕು. (ಗಡ್ಡ, ಎದೆಯ ಕೂದಲು, ). ಸಾಂಸ್ಥಿಕ ಅಗತ್ಯತೆಗಳು ಮತ್ತು ನೀತಿಗಳ ಆಧಾರದ ಮೇಲೆ ಪ್ರತಿ ಬ್ಯಾಚ್‌ನಲ್ಲಿ ತಮ್ಮ ನಿಶ್ಚಿಥ ಅವಧಿಯನ್ನು ಪೂರ್ಣಗೊಳಿಸುತ್ತಿರುವ ಅಗ್ನಿವೀರ್‌ಗಳಿಗೆ IA ನಿಯಮಿತ ಕೇಡರ್‌ನಲ್ಲಿ ದಾಖಲಾತಿಗಾಗಿ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗುತ್ತದೆ.

ವಯಸ್ಸಿನ ಅರ್ಹತೆ

17 ರಿಂದ 21ರ ಇಸವಿಗೆ 23 ವರ್ಷಗಳಾಗಿರುವುದು ಅರ್ಜಿದಾರರಿಗೆ ಅರ್ಹತೆಯ ವಯಸ್ಸಾಗಿದೆ.

1. ಉದ್ಯೋಗಾವಕಾಶ ಕಾಲಕಾಲಕ್ಕೆ ನಿರ್ಧರಿಸಿದಂತೆ ಸಾಂಸ್ಥಿಕ ಆಸಕ್ತಿಯಲ್ಲಿ ಯಾವುದೇ ಕರ್ತವ್ಯವನ್ನು ನಿರ್ವಹಿಸಲು ಅಗ್ನಿವೀರ್‌ಗಳು ಜವಾಬ್ದಾರರಾಗಿರುತ್ತಾರೆ.

2. ಅಗ್ನಿವೀರ್‌ಗಳನ್ನು ಯಾವುದೇ ರೆಜಿಮೆಂಟ್/ಘಟಕಕ್ಕೆ ಪೋಸ್ಟ್ ಮಾಡಬಹುದು ಮತ್ತು ಸಾಂಸ್ಥಿಕ ಆಸಕ್ತಿಯಲ್ಲಿ ಇತರ ರೆಜಿಮೆಂಟ್‌ಗಳು/ಘಟಕಗಳಿಗೆ ಅಥವಾ ಬೇರೆ ವಿಭಾಗಗಳಿಗೆ ವರ್ಗಾಯಿಸಬಹುದು.

ಅಗ್ನಿವೀರ್ ವೇತನ ಹೀಗಿದೆ























ವರ್ಷ 1ಕೆಲಸ/ಹುದ್ದೆಗೆ ನೀಡಲಾಗುವ ವೇತನ30,000/- (ಇತರ ಭತ್ಯೆಗಳು)
ವರ್ಷ 2 ಕೆಲಸ/ಹುದ್ದೆಗೆ ನೀಡಲಾಗುವ ವೇತನ33,000/- (ಇತರ ಭತ್ಯೆಗಳು)
ವರ್ಷ 3 ಕೆಲಸ/ಹುದ್ದೆಗೆ ನೀಡಲಾಗುವ ವೇತನ36,000/- (ಇತರ ಭತ್ಯೆಗಳು)
ವರ್ಷ 4 ಕೆಲಸ/ಹುದ್ದೆಗೆ ನೀಡಲಾಗುವ ವೇತನ40,000/- (ಇತರ ಭತ್ಯೆಗಳು)

ಆನ್​ಲೈನ್​ನಲ್ಲಿ ನೋಂದಾಯಿಸಿ ಅರ್ಜಿ ಸಲ್ಲಿಸುವುದು ಹೇಗೆ?

1. www.joinindianarmy.nic.in ಗೆ ಲಾಗ್ ಇನ್ ಆಗಿ, ಅರ್ಹತಾ ಸ್ಥಿತಿಯನ್ನು ಪರಿಶೀಲಿಸಿ . ಪ್ರೊಫೈಲ್ ಅನ್ನು ರಚಿಸಿ.

2. ಆನ್‌ಲೈನ್ ನೋಂದಣಿ (ಅರ್ಜಿಯ ಸಲ್ಲಿಕೆ) 01 ಜುಲೈ 2022 ರಿಂದ ಪ್ರಾರಂಭವಾಗಿದೆ. 30 ಜುಲೈ 2022 ರಂದು ಮುಕ್ತಾಯಗೊಳ್ಳುತ್ತದೆ.

3. ಅಭ್ಯರ್ಥಿಗಳು 31 ಜುಲೈ 2022 ರ ನಂತರ ಮತ್ತೊಮ್ಮೆ ಲಾಗಿನ್ ಆಗಿ ರ್ಯಾಲಿ ಸೈಟ್‌ಗೆ ಪ್ರವೇಶ ಪಡೆಯಲು ಅಗತ್ಯವಾಗಿ ಬೇಕಾಗಿರುವ ಎಡ್ಮಿಟ್ ಕಾರ್ಡ್‌ನ ಪ್ರಿಂಟ್‌ಔಟ್ ತೆಗೆದುಕೊಳ್ಳಬೇಕು. (ಎಡ್ಮಿಟ್ ಕಾರ್ಡ್​ ಇಲ್ಲದೆ ಯಾವುದೇ ಅಭ್ಯರ್ಥಿಗೆ ರ್ಯಾಲಿ ಸೈಟ್​ಗೆ ಪ್ರವೇಶವಿರುವುದಿಲ್ಲ)

ಇದನ್ನೂ ಓದಿ: Agneepath Recruitment: ಅಗ್ನಿಪಥ್​​ ಯೋಜನೆ ಮೂಲಕ ಸೇನೆಯಲ್ಲಿ ಸೇವೆ ಸಲ್ಲಿಸಿ; ಇಲ್ಲಿದೆ ಅರ್ಜಿ ಸಲ್ಲಿಕೆ ಸಂಪೂರ್ಣ ವಿವರ

4. ರ್ಯಾಲಿಗಾಗಿ ಎಡ್ಮಿಟ್ ಕಾರ್ಡ್ ಅನ್ನು 31 ಜುಲೈ 2022 ರಿಂದ 14 ಆಗಸ್ಟ್ 2022 ರವರೆಗೆ ನೋಂದಾಯಿತ ಇಮೇಲ್ ಮೂಲಕ ಕಳುಹಿಸಲಾಗುತ್ತದೆ. ಅಭ್ಯರ್ಥಿಯು ಎಡ್ಮಿಟ್​ ಕಾರ್ಡ್‌ನಲ್ಲಿ ನಮೂದಿಸಿದ ದಿನಾಂಕ ಮತ್ತು ಸಮಯದಲ್ಲಿ ಸ್ಥಳವನ್ನು ತಲುಪಬೇಕು.

5. ದಿನಾಂಕ ಮತ್ತು ಸ್ಥಳವನ್ನು ತಾತ್ಕಾಲಿಕವಾಗಿ ಬದಲಾಯಿಸಬಹುದು. ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ನೀಡಿದರೆ ರ್ಯಾಲಿಯಲ್ಲಿ ಭಾಗವಹಿಸಲು ಅನುಮತಿಸಲಾಗುತ್ತದೆ.
Published by:Divya D
First published: