Taj Mahal: ಈ ಬಾರಿ ಫ್ರೀ ಆಗಿ ನೋಡಿ ತಾಜ್​ ಮಹಲ್​! ಜೊತೆಗೆ ನಿಮಗೆ ಸಿಗುತ್ತೆ ಡಬಲ್ ಧಮಾಕಾ

ಉರುಸ್​ ಆಚರಣೆ ಹಿನ್ನೆಲೆ ತಾಜ್​ ಮಹಲ್​ಗೆ ಉಚಿತ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಪ್ರವಾಸಿಗರು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು.

ತಾಜ್​ ಮಹಲ್​

ತಾಜ್​ ಮಹಲ್​

  • Share this:
ದೆಹಲಿ (ಫೆ.19):  ತಾಜ್​ ಮಹಲ್​ ನೋಡ್ಬೇಕು ಅಲ್ಲೇ ತಮ್ಮ ಪ್ರೇಮಿಗೆ ಪ್ರಪೋಸ್ (Propose)​ ಮಾಡ್ಬೇಕು ಅನ್ನೋದು ಹಲವು ಪ್ರೇಮಿಗಳ (Lovers) ಬಯಕೆಯಾಗಿರುತ್ತೆ. ಪ್ರತಿಯೊಬ್ಬ ಪತಿಯು ತನ್ನ ಹೆಂಡತಿಯೊಂದಿಗೆ ಒಮ್ಮೆಯಾದರೂ ತಾಜ್ ಮಹಲ್ ಗೆ ಹೋಗಬೇಕು ಎಂದು ಬಯಸುತ್ತಾನೆ. ಇನ್ನು ವಿಶ್ವದ ಏಳು ಅದ್ಭುತಗಳಲ್ಲಿ (7 wonders of the world) ಒಂದಾಗಿರುವ ತಾಜ್ ಮಹಲ್ ಮುಂದೆ ನಿಂತು ಫ್ಯಾಮಿಲಿ ಫೋಟೋ ತೆಗೆದುಕೊಳ್ಳೋ ಆಸೆ ಕೂಡ ಅಧಿಕ ಮಂದಿಗಿದೆ. ಪ್ರೀತಿಯ ಸಂಕೇತವಾಗಿರುವ ಈ ತಾಜ್​ ಮಹಲ್ ವೀಕ್ಷಣೆಗೆ ಪ್ರತಿನಿತ್ಯ ಪ್ರಪಂಚದ ಮೂಲೆ ಮೂಲೆಯಿಂದ ಜನರು ಬರುತ್ತಾರೆ. ಪ್ರವಾಸಿಗರಿಗೆ ಭಾರತೀಯ ಪುರಾತತ್ವ ಇಲಾಖೆ (ISI) ಒಂದು ಗುಡ್​ ನ್ಯೂಸ್ (Good news) ನೀಡಿದೆ. ಫೆಬ್ರವರಿ 27, 28 ಹಾಗೂ ಮಾರ್ಚ್ 1ರಂದು ಪ್ರವಾಸಿಗರಿಗೆ ಉಚಿತ ಪ್ರವೇಶ ನೀಡುವುದಾಗಿ ತಿಳಿಸಿದೆ.

ತಾಜ್​ ಮಹಲ್​ಗೆ 3 ದಿನ ಉಚಿತ ಪ್ರವೇಶ

3 ದಿನ ತಾಜ್​ ಮಹಲ್​ಗೆ ಉಚಿತ ಪ್ರವೇಶ ಭಾರತೀಯ ಪುರಾತತ್ವ ಇಲಾಖೆ ಫೆಬ್ರವರಿ 27, 28 ಹಾಗೂ ಮಾರ್ಚ್ 1ರಂದು ಪ್ರವಾಸಿಗರಿಗೆ ಉಚಿತ ಪ್ರವೇಶ ನೀಡುವುದಾಗಿ ತಿಳಿಸಿದೆ. ಈ 3 ದಿನ ತಾಜ್ ಮಹಲ್​ನಲ್ಲಿ ಷಹಜಹಾನನ  ಉರುಸ್​ ಆಚರಿಸಲಾಗುವುದು. ಹೀಗಾಗಿ ಈ 3 ದಿನಗಳಲ್ಲಿ ಪ್ರವಾಸಿಗರು ವಿನಾಯಿತಿ ಪಡೆಯಲಿದ್ದಾರೆ ಭಾರತೀಯ ಪುರಾತತ್ವ ಇಲಾಖೆ  ಅಧಿಕಾರಿಗಳ ತಿಳಿಸಿದ್ದಾರೆ. ಪ್ರತಿ ವರ್ಷ ಉರುಸ್ ಆಚರಣೆ ಸಂದರ್ಭದಲ್ಲಿ ಈ ವಿನಾಯಿತಿಯನ್ನು ನೀಡಲಾಗುತ್ತದೆ. ಇದರೊಂದಿಗೆ ವಿಶ್ವ ಪ್ರವಾಸೋದ್ಯಮ ದಿನದಂದು ಕೂಡಾ ತಾಜ್ ಮಹಲ್​ನಲ್ಲಿ ಪ್ರವಾಸಿಗರಿಗೆ ಉಚಿತ ಪ್ರವೇಶ ದೊರೆಯಲಿದೆ.

ಇದನ್ನೂ ಓದಿ: COVID-19 effect: ಕೋವಿಡ್ ನಿಂದಾಗಿ ತಾಜ್ ಮಹಲ್ ಆಫ್‌ಲೈನ್‌ ಟಿಕೆಟ್ ಬಂದ್

ಉರುಸ್ ಆಚರಣೆ ಹಿನ್ನೆಲೆ ವಿನಾಯಿತಿ

ತಾಜ್ ಮಹಲ್​ನಲ್ಲಿ ಮುಮ್ತಾಜ್ ಮಹಲ್ ಸಮಾಧಿ ಇದೆ. ಷಹಜಹಾನ್ನನ್ನು ಅವನ ಪತ್ನಿಯೊಂದಿಗೆ ಸಮಾಧಿ ಮಾಡಲಾಗಿತ್ತು. ಸರ್ವೋಚ್ಚ ನ್ಯಾಯಾಲಯದ ಅನುಮತಿಗೆ ಅನುಗುಣವಾಗಿ ಪ್ರತಿ ವರ್ಷ ಚಕ್ರವರ್ತಿಯ ಷಹಜಹಾನ್ ಮೃತಪಟ್ಟ ದಿನದಂದು ಇಲ್ಲಿ ಉರುಸ್ ನಡೆಯುತ್ತದೆ ಫೆಬ್ರವರಿ 27ರಂದು ಷಹಜಹಾನ್​ನ ಉರುಸ್ ಮೊದಲ ದಿನ. ಅಂದು ಮಧ್ಯಾಹ್ನ 2 ಗಂಟೆಯಿಂದ ಸೂರ್ಯಾಸ್ತದ ವರೆಗೆ ಎಲ್ಲಾ ಪ್ರವಾಸಿಗರಿಗೂ ಉಚಿತ ಪ್ರವೇಶ ಇರಲಿದೆ. ಫೆಬ್ರವರಿ 28 ರಂದು ಹಿಂದಿನ ದಿನದ ವೇಳಾಪಟ್ಟಿ ಅನುಸರಿಸಲಾಗುತ್ತದೆ. ಮಾರ್ಚ್ 1 ಉರುಸ್ ಕೊನೆಯ ದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಉಚಿತ ಪ್ರವೇಶ ಇರಲಿದೆ ಎಂದು ಎಎಸ್ಐನ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಡಾ. ರಾಜ್​ಕುಮಾರ್ ಪಟೇಲ್ ತಿಳಿಸಿದ್ದಾರೆ.

ಕೋವಿಡ್ ಮಾರ್ಗಸೂಚಿ ಕಡ್ಡಾಯ

ಷಹಜಹಾನ್ ನ 3 ದಿನಗಳ ಉರುಸ್ ಸಂದರ್ಭದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ ಇರಲಿದೆ. ಹೀಗಾಗಿ ತಾಜ್ ಮಹಲ್​ ಭದ್ರತಾ ವ್ಯವಸ್ಥೆ ಬಲಪಡಿಸಲಾಗುತ್ತದೆ. ಉಚಿತ ಪ್ರವೇಶ ಪಡೆಯುವ ಪ್ರವಾಸಿಗರು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Taj Mahal : ಒಂದು ವರ್ಷದ ನಂತರ ಪ್ರವಾಸಿಗರಿಗೆ ರಾತ್ರಿವೇಳೆ ತಾಜ್​ಮಹಲ್ ಕಣ್ತುಂಬಿಕೊಳ್ಳೋ ಅವಕಾಶ, ಯಾವಾಗಿನಿಂದ? ಯಾವ ಸಮಯದಲ್ಲಿ ಅನುಮತಿ?

ತಾಜ್​ ಮಹಲ್​ ಭೇಟಿಗೆ ಫೆಬ್ರವರಿ ತಿಂಗಳೇ ಉತ್ತಮ

ತಾಜ್​ ಮಹಲ್​ಗೆ ಭೇಟಿ ನೀಡುವವರು ನವೆಂಬರ್ ನಿಂದ ಫೆಬ್ರವರಿ ಅಂತ್ಯದೊಳಗೆ ಹೋಗದೇ ಉತ್ತಮ, ಬಳಿಕ ಬೇಸಿಗೆ ಬಿಸಿಲು ಶುರುವಾಗುತ್ತೆ ಅಸಹನೀಯವಾಗಿ ಬಿಸಿಯಾಗಬಹುದು ಅಥವಾ ಮಳೆಯಾಗಬಹುದು. ಆದರೂ ನೀವು ಕೆಲವು ಅತ್ಯುತ್ತಮ ಆಫ್-ಸೀಸನ್ ರಿಯಾಯಿತಿಗಳನ್ನು ಪಡೆಯಬಹುದು. ತಾಜ್ ಮಹಲ್ ಅದರ ಬಣ್ಣವನ್ನು ದಿನಕ್ಕೆ ಬದಲಾಗುತ್ತಿರುವ ಬೆಳಕಿನಲ್ಲಿ ಕ್ರಮೇಣ ಮಾರ್ಪಡಿಸುತ್ತದೆ. ಯಮುನ ನದಿ ತೀರದಲ್ಲಿರೋ ತಾಜ್ ಮಹಲ್​ ಬಳಿ ಸುರ್ಯೋದಯ ನೋಡೋದೆ ಒಂದು. ಬೆಳಗಿನ ಜಾವ ಇಂಥಾ ಅನುಭವ ಪಡೆಯಲು ಪ್ರವಾಸಿಗರು ಕಾಯುತ್ತಿರುತ್ತಾರೆ. ನಿತ್ಯ ಈ ಸುಂದರ ತಾಣ ನೋಡಲು ಸಾವಿರಾರು ಪ್ರವಾಸಿಗರ ದಂಡೇ ಹರಿದು ಬರುತ್ತೆ.
Published by:Pavana HS
First published: