ಏಳು ದಿನಗಳಲ್ಲಿ ನಾಲ್ಕು ಹತ್ಯೆ; ಸಂಬಂಧಿಕರನ್ನು ಕೊಲೆ ಮಾಡಿ ಹೆಣದ ಸಮೇತ ಪೊಲೀಸ್ ಠಾಣೆಗೆ ಬಂದ ಭೂಪ!

ಕೊಲೆ ನಡೆದ ನಂತರ ಆರೋಪಿ ಶಂಕರ್​ ಮೌಂಟ್​ ಶಾಸ್ತಾ ಪೊಲೀಸ್​ ಠಾಣೆಗೆ ಹೆಣದ ಸಮೇತ ಹೋಗಿದ್ದ. ನಾಲ್ಕೂ ಕೊಲೆಯನ್ನು ತಾನೇ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದ.

Rajesh Duggumane | news18-kannada
Updated:October 18, 2019, 3:31 PM IST
ಏಳು ದಿನಗಳಲ್ಲಿ ನಾಲ್ಕು ಹತ್ಯೆ; ಸಂಬಂಧಿಕರನ್ನು ಕೊಲೆ ಮಾಡಿ ಹೆಣದ ಸಮೇತ ಪೊಲೀಸ್ ಠಾಣೆಗೆ ಬಂದ ಭೂಪ!
ಸಾಂದರ್ಭಿಕ ಚಿತ್ರ
  • Share this:
ಸ್ಯಾನ್​ ಫ್ರಾನ್ಸಿಸ್ಕೋ: ಸಂಬಂಧಿಕರನ್ನು ಕೊಲೆ ಮಾಡಿದ ಆರೋಪದ ಮೇಲೆ ಅಮೆರಿಕದಲ್ಲಿ ವಾಸವಾಗಿದ್ದ ಭಾರತ ಮೂಲಕ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಾಕಿಂಗ್​ ವಿಚಾರ ಎಂದರೆ, ಈತ ಕೊಲೆ ಮಾಡಿದ ನಂತರ ಹೆಣದ ಸಮೇತ ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದ.

ಶಂಕರ್​ ಹಂಗುದ್​ (53) ಬಂಧಿತ ವ್ಯಕ್ತಿ. ಈತ ಅಕ್ಟೋಬರ್​ 7ರಂದು ಪ್ಲೇಸರ್ ಕೌಂಟಿ ಬಳಿಯ ಅಪಾರ್ಟ್​ಮೆಂಟ್​ನಲ್ಲಿ ಎರಡು ಕೊಲೆ ಮಾಡಿದ್ದ. ಮರುದಿನ ಇದೇ ಅಪಾರ್ಟ್​​ಮೆಂಟ್​ನಲ್ಲಿ ಮತ್ತೊಂದು ಕೊಲೆ ನಡೆದಿತ್ತು. ಅಕ್ಟೋಬರ್​ 13ರಂದು ಸಿಸ್ಕಿಂ ಕೌಂಟಿಯಲ್ಲಿ ಮತ್ತೊಂದು ಕೊಲೆ ನಡೆದಿತ್ತು.

ಈ ಕೊಲೆ ನಡೆದ ನಂತರ ಆರೋಪಿ ಶಂಕರ್​ ಮೌಂಟ್​ ಶಾಸ್ತಾ ಪೊಲೀಸ್​ ಠಾಣೆಗೆ ಹೆಣದ ಸಮೇತ ಹೋಗಿದ್ದ. ನಾಲ್ಕೂ ಕೊಲೆಯನ್ನು ತಾನೇ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದ. ಈತನ ಹೇಳಿಕೆಯಂತೆ ಅಪಾರ್ಟ್​ಮೆಂಟ್​ಗೆ ಹೋಗಿ ಪರಿಶೀಲಿಸಿದಾಗ ಉಳಿದ ಮೂರು ಶವಗಳು ಪತ್ತೆಯಾಗಿವೆ.

ಸದ್ಯ, ಶಂಕರ್​ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಈ ಕೊಲೆಗೆ ಕಾರಣವೇನು ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಭಾರತದಲ್ಲಿರುವ ಮೃತರ ಸಂಬಂಧಿಗಳಿಗೆ ಮಾಹಿತಿ ನೀಡಲಾಗಿದ್ದು, ಶವವನ್ನು ಭಾರತಕ್ಕೆ ಕಳುಹಿಸಲು ಸಿದ್ಧತೆ ಮಾಡಲಾಗಿದೆ.

First published:October 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading