Indian Air Force Day 2020: ಇಂದು ಭಾರತೀಯ ವಾಯುಪಡೆ ದಿನ; ಇತಿಹಾಸ ಮತ್ತು ಮಹತ್ವ ತಿಳಿಯಿರಿ

1932ರಲ್ಲಿ ಭಾರತೀಯ ವಾಯುಪಡೆ ಸ್ಥಾಪನೆಯಾಯಿತು. ಅಂದಿನಿಂದ ಐಎಎಫ್​ ಹಲವಾರು ಪ್ರಮುಖ ಯುದ್ಧಗಳು ಮತ್ತು ಕಾರ್ಯಾಚರಣೆಗಳಲ್ಲಿ ಭಾಗಿಯಾಗಿ ಪ್ರಮುಖ ಪಾತ್ರ ವಹಿಸಿತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ(ಅ.08): ಭಾರತೀಯ ರಕ್ಷಣಾ ಪಡೆಯು ವಾಯುಪಡೆ, ಸೇನಾಪಡೆ ಮತ್ತು ನೌಕಾಪಡೆ ಎಂಬ ಮೂರು ಘಟಕಗಳನ್ನು ಹೊಂದಿದೆ. ಇಂದು ಅಕ್ಟೋಬರ್ 8. ಇವತ್ತು 88ನೇ ಭಾರತೀಯ ವಾಯುಪಡೆ ದಿನವನ್ನು ಆಚರಿಸಲಾಗುತ್ತಿದೆ. ಪ್ರತೀ ವರ್ಷ ಅಕ್ಟೋಬರ್ 8ನ್ನು ಭಾರತೀಯ ವಾಯುಪಡೆ ದಿನವನ್ನಾಗಿ ಆಚರಿಸಲಾಗುತ್ತದೆ. ಅದೇ ರೀತಿ ಇಂದೂ ಸಹ ಇಂಡಿಯನ್ ಏರ್​​ಫೋರ್ಸ್​​ ಡೇಯನ್ನು ಆಚರಿಸಲಾಗುತ್ತಿದೆ. ಇಂದಿನ ವಿಶೇಷ ದಿನವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಮರಿಸಿದ್ದಾರೆ. ಜೊತೆಗೆ ವಾಯುಪಡೆ​​ ಸೈನಿಕರನ್ನು ನೆನೆದು ಅವರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು. ಏನೇ ಬರಲಿ, ಭಾರತೀಯ ವಾಯುಪಡೆಯು ಯಾವಾಗಲೂ ರಾಷ್ಟ್ರದ ಆಕಾಶವನ್ನು ಕಾಪಾಡುತ್ತದೆ ಎಂಬ ವಿಶ್ವಾಸ ನನಗಿದೆ. ಸದಾ ನೀಲಿ ಆಕಾಶವಿರಲಿ ಮತ್ತು ಖುಷಿಯ ಲ್ಯಾಂಡಿಂಗ್ ಆಗಲಿ ಎಂದು ನಾನು ಹಾರೈಸುತ್ತೇನೆ ಎಂದಿದ್ದಾರೆ.

  ಭಾರತೀಯ ವಾಯುಪಡೆಯ ಇತಿಹಾಸ ಮತ್ತು ಮಹತ್ವ:

  ಇಂದು ಭಾರತೀಯ ವಾಯುಪಡೆದ ದಿನ. ಹೀಗಾಗಿ ನಮ್ಮ ದೇಶದ ವಾಯುಪಡೆಯ ಬಗ್ಗೆ ಕೆಲವೊಂದು ವಿಚಾರಗಳನ್ನು ನಾವು ತಿಳಿದುಕೊಳ್ಳಲೇಬೇಕಾಗಿದೆ. 1932ರಲ್ಲಿ ಭಾರತೀಯ ವಾಯುಪಡೆ ಸ್ಥಾಪನೆಯಾಯಿತು. ಅಂದಿನಿಂದ ಐಎಎಫ್​ ಹಲವಾರು ಪ್ರಮುಖ ಯುದ್ಧಗಳು ಮತ್ತು ಕಾರ್ಯಾಚರಣೆಗಳಲ್ಲಿ ಭಾಗಿಯಾಗಿ ಪ್ರಮುಖ ಪಾತ್ರ ವಹಿಸಿತು. ಐಎಎಫ್​ ಬ್ರಿಟಿಷ್​ ಸಾಮ್ರಾಜ್ಯದ ಸಹಾಯಕ ವಾಯುಪಡೆಯ ಒಂದು ಭಾಗವಾಗಿ ಸ್ಥಾಪಿತವಾದರೂ, ಕ್ರಮೇಣ ಅಂದರೆ 1947ರಲ್ಲಿ ದೇಶವು ಸ್ವಾತಂತ್ರ್ಯ ಪಡೆದ ಬಳಿಕ ಭಾರತದ ಒಂದು ಭಾಗವಾಗಿ ಮಾರ್ಪಟ್ಟಿತು.

  ಪ್ರತಿಸ್ಪರ್ಧಿ ಯಾರು ಅನ್ನೋದು ಮುಖ್ಯ ಅಲ್ಲ, ಗೆಲ್ಲೋದು ಅಷ್ಟೇ ಮುಖ್ಯ; ಕಾಂಗ್ರೆಸ್ ಅಭ್ಯರ್ಥಿ ಕುಸುಮಾ

  ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಭಾರತೀಯ ವಾಯುಪಡೆಯು ಬ್ರಿಟಿಷ್​ ಸೈನ್ಯಕ್ಕೆ ಸಹಾಯ ಮಾಡಿತು.1947ರ ನಂತರ ಭಾರತೀಯ ವಾಯುಪಡೆಗೆ ರಾಯಲ್ ಇಂಡಿಯನ್ ಏರ್​ಫೋರ್ಸ್​​​ ಎಂದು ಹೆಸರಿಡಲಾಗಿತ್ತು. 1950ರಲ್ಲಿ ರಾಯಲ್ ಹೆಸರನ್ನು ತೆಗೆದು ಹಾಕಿ, ಇಂಡಿಯನ್ ಏರ್​ಪೋರ್ಸ್​​ ಎಂದಷ್ಟೇ ಉಳಿಸಿಕೊಳ್ಳಲಾಯಿತು.

  ಭಾರತೀಯ ಸಂವಿಧಾನದ ಪ್ರಕಾರ, ರಾಷ್ಟ್ರಪತಿಗಳು ವಾಯುಪಡೆಯ ಸುಪ್ರೀಂ ಕಮಾಂಡರ್ ಹುದ್ದೆಯನ್ನು ಅಲಂಕರಿಸುತ್ತಾರೆ. ಮುಂದಿನ ಸ್ಥಾನದಲ್ಲಿ ಚೀಫ್​​ ಆಫ್​​ ಏರ್​​ ಸ್ಟಾಫ್​, ಏರ್​​ ಚೀಫ್​ ಮಾರ್ಷಲ್ ಬರುತ್ತಾರೆ. ಪ್ರಮುಖ ಕಾರ್ಯಾಚರಣೆಗಳ ನಿರ್ಧಾರವನ್ನು ತೆಗೆದುಕೊಳ್ಳುವ ಜವಾಬ್ದಾರಿ ಏರ್​​ ಚೀಫ್ ಮಾರ್ಷಲ್​​ ಅವರ ಮೇಲಿದೆ.
  Published by:Latha CG
  First published: