Tokyo Olympics: ನೆದರ್​ಲ್ಯಾಂಡ್ಸ್​ ವಿರುದ್ದ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಸೋಲು

ಭಾರತದ ಏಕೈಕ ಗೋಲನ್ನು ತಂಡದ ನಾಯಕಿ ರಾಣಿ ರಾಂಪಾಲ್ 10 ನೇ ನಿಮಿಷದಲ್ಲಿ ಗಳಿಸಿದರು. ಗೋಲ್​ ಕೀಪರ್​ ಸವಿತಾ ಪುನಿಯಾ ಪಂದ್ಯದ ಮೊದಲೆರಡು ಕ್ವಾರ್ಟರ್​ನಲ್ಲಿ ತೋರಿಸಿದ ರಕ್ಷಣಾತ್ಮಕ ಆಟ ಎದುರಾಳಿ ತಂಡಕ್ಕೆ ನುಂಗದ ತುತ್ತಾಯಿತು.

ಪಂದ್ಯ ಗೆದ್ದ ಸಂಭ್ರಮದಲ್ಲಿ ನೆದರ್​ಲ್ಯಾಂಡ್ ವನಿತೆಯರು

ಪಂದ್ಯ ಗೆದ್ದ ಸಂಭ್ರಮದಲ್ಲಿ ನೆದರ್​ಲ್ಯಾಂಡ್ ವನಿತೆಯರು

 • Share this:
  ಭಾರತದ ಮಹಿಳಾ ಹಾಕಿ ತಂಡವು ಪಂದ್ಯದ ಮೊದಲೆರಡು ಕ್ವಾರ್ಟರ್​ನಲ್ಲಿ ಧೈರ್ಯದಿಂದ ಎದುರಾಳಿ ಪಡೆಯ ವಿರುದ್ದ ಹೋರಾಡಿತು, ಆದರೆ ಆನಂತರ ಮಾಡಿದ ತಪ್ಪುಗಳಿಂದ ಬಲಿಷ್ಟ ನೆದರ್​ಲ್ಯಾಂಡ್​ ತಂಡದ ವಿರುದ್ದ  ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಶನಿವಾರ ನಡೆದ ಆರಂಭಿಕ ಪಂದ್ಯದಲ್ಲಿ 1-5 ಗೋಲುಗಳ ಅಂತರದಲ್ಲಿ ಸೋಲನ್ನಪಿತು.

  ನೆದರ್‌ಲ್ಯಾಂಡ್ ತಂಡದ ಫೆಲಿಸ್ ಆಲ್ಬರ್ಸ್ 6ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಮಾರ್ಗಾಟ್ ವ್ಯಾನ್ ಜೆಫೆನ್ (33 ನೇ ನಿಮಿಷ), ಫ್ರೆಡೆರಿಕ್ ಮಾಟ್ಲಾ (45 ನಿಮಿಷ) ಮತ್ತುly ಕೈಯಾ ಜಾಕ್ವೆಲಿನ್ ವ್ಯಾನ್ ಮಾಸಕ್ಕರ್ (52 ನೇ) ನಿಮಿಷದಲ್ಲಿ ಗೋಲು ಬಾರಿಸಿ ವಿಜಯದ ಅಂತರವನ್ನು ಹೆಚ್ಚಿಸಿದರು. ಮೂರು ಬಾರಿ ಚಾಂಪಿಯನ್ ಮತ್ತು ಒಲಿಂಪಿಕ್ ಬೆಳ್ಳಿ ಪದಕ ಗೆದ್ದ ತಂಡ ಕೊನೆಗೂ ಗೆಲುವಿನ ನಗೆ ಬೀರಿತು.

  ಭಾರತದ ಏಕೈಕ ಗೋಲನ್ನು ತಂಡದ ನಾಯಕಿ ರಾಣಿ ರಾಂಪಾಲ್ 10 ನೇ ನಿಮಿಷದಲ್ಲಿ ಗಳಿಸಿದರು. ಗೋಲ್​ ಕೀಪರ್​ ಸವಿತಾ ಪುನಿಯಾ ಪಂದ್ಯದ ಮೊದಲೆರಡು ಕ್ವಾರ್ಟರ್​ನಲ್ಲಿ ತೋರಿಸಿದ ರಕ್ಷಣಾತ್ಮಕ ಆಟ ಎದುರಾಳಿ ತಂಡಕ್ಕೆ ನುಂಗದ ತುತ್ತಾಯಿತು. ಅಲ್ಲದೇ ಭಾರತದ ವನಿತೆಯರೂ ಸಹ ಅತ್ಯಂತ ರಕ್ಷಣಾತ್ಮಕವಾಗಿ ಎದುರಾಳಿ ಪಡೆಯನ್ನು ಪಂದ್ಯದ ಆರಂಭದಲ್ಲಿ ಎದುರಿಸಿದರು.

  ಭಾರದ ವನಿತೆಯರು ಸಾಕಷ್ಟು ರಕ್ಷಣಾತ್ಮಕವಾಗಿ ನೆದರ್​ಲ್ಯಾಂಡ್​ ತಂಡವನ್ನು ಎದುರಿಸಿದರು, ಅಲ್ಲದೇ ಸಾಕಷ್ಟು ಅಚ್ಚರಿಯ ಆಟಕ್ಕೆ ಈ ಪಂದ್ಯ ಸಾಕ್ಷಿಯಾಯಿತು, 6ನೇ ನಿಮಿಷದಲ್ಲಿ ಆಲ್ಬರ್ಸ್ ಗಳಿಸಿದ ಗೋಲಿನಿಂದ ವಿಚಲಿತರಾಗದ ಭಾರತೀಯ ವನಿತೆಯರು ಮತ್ತಷ್ಟು ರಕ್ಷಣಾತ್ಮಕ ತಂತ್ರಗಳನ್ನು ಹೂಡಿದರು. 10 ನೇ ನಿಮಿಷದ ಹೊತ್ತಿಗೆ ತಂಡದ ನಾಯಕಿ ರಾಣಿ ರಾಂಪಾಲ್​ ತಮಗೆ ಸಿಕ್ಕ ಅವಕಾಶವನ್ನು ಬಿಡದೆ ಗೋಲು ಗಳಿಸಿದರು. ಇದಾದ ನಂತರ ಆಕ್ರಮಣಕಾರಿ ಆಟಕ್ಕೆ ಇಳಿದ ವಿರೋಧಿ ತಂಡ ನಾಲ್ಕು ಬಾರಿ ಪೆನಾಲ್ಟಿ ಶೂಟೌಟ್​ ಅವಕಾಶ ಪಡೆಯಿತು. ಭಾರತೀಯ ಆಟಗಾರ್ತಿ ಸವಿತಾ ಗೋಡೆಯಾಗಿ ನಿಂತು ಆಟವಾಡಿದರು.

  ಪಂದ್ಯದ ಮೊದಲಾರ್ಧದ ಹೊತ್ತಿಗೆ 1-1 ಸಮ ಬಲದಿಂದ ಆಟ ಕೂಡಿತ್ತು. ವಿರಾಮದ ನಂತರ ಚುರುಕಿನ ಆಟ ಪ್ರದರ್ಶಿಸಿದ ಡಚ್​ ಮಹಿಳೆಯರು ಮೂರು ಗೋಲುಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡರು. ಇದರಿಂದ ಕೊಂಚ ವಿಚಲಿತರಾದಂತೆ ಕಂಡು ಬಂದ ಭಾರತೀಯ ವನಿತೆಯರು ಮೊದಲು ಪ್ರದರ್ಶಿಸಿದ ರಕ್ಷಣಾತ್ಮಕ ಆಟವನ್ನು ಮರೆತಂತೆ ಭಾಸವಾಯಿತು. ತೃತಿಯಾರ್ಧ ಮುಗಿಯಲು ಮೂರು ನಿಮಿಷ ಬಾಕಿ ಇರುವಾಗ ಪೆನಾಲ್ಟಿ ಕಾರ್ನರ್​ನಲ್ಲಿ ಸಿಕ್ಕ ಅವಕಾಶವನ್ನು ಬಿಡದ ನೆದರ್​ಲ್ಯಾಂಡ್​ ಅದನ್ನು ಗೋಲಾಗಿ ಪರಿವರ್ತಿಸಿತು.

  ನೆದರ್ಲ್ಯಾಂಡ್ ಅಟಗಾರ್ತಿ ಆಲ್ಬರ್ಸ್ (43 ನಿಮಿಷ) ಮತ್ತು ಫ್ರೆಡೆರಿಕ್ ಮಾಟ್ಲಾ (45ನಿಮಿಷ)ದ  ಹೊತ್ತಿಗೆ ಒಂದರ ಹಿಂದೆ ಒಂದರಂತೆ ಗೋಲು ಗಳಿಸಿದರು. ಇಲ್ಲಿಗೆ ಭಾರತದ ಗೆಲುವಿನ ಬಾಗಿಲು ಸಂಪೂರ್ಣ ಮುಚ್ಚಿದಂತಾಯಿತು. ಇದೂ ಸಾಲದೆಂಬಂತೆ 52 ನೇ ನಿಮಿಷದಲ್ಲಿ ಕೈಯಾ ಜಾಕ್ವೆಲಿನ್ ಪೆನಾಲ್ಟಿ ಕಾರ್ನರ್​ನಿಂದ ಚೆಂಡನ್ನು ಗೋಲಾಗಿ ಪರಿವರ್ತಿಸಿದರು.

  ಎ ಗುಂಪಿನ ಪಂದ್ಯವು ಜುಲೈ 26ಕ್ಕೆ ನಡೆಯಲಿದ್ದು ಬಲಿಷ್ಟ ಜರ್ಮನಿ ತಂಡವನ್ನು ಭಾರತ ಅಂದು ಎದುರಿಸಲಿದೆ.


  ಇದನ್ನೂ ಓದಿ: Tokyo Olympics: ರಾಷ್ಟ್ರೀಯ ಕೋಚ್​ ಸಲಹೆ ನಿರಾಕರಿಸಿದ ಟೇಬಲ್​ ಟೆನ್ನಿಸ್​ ಆಟಗಾರ್ತಿ ಮನಿಕಾ

  ಇದುವರೆಗೂ ಎರಡು ಬಾರಿ ಮಾತ್ರ ಒಲಂಪಿಕ್​ನಲ್ಲಿ ಕಾಣಿಸಿಕೊಂಡಿರುವ ಭಾರತೀಯ ವನಿತೆಯರ ಹಾಕಿ ತಂಡವು 36 ವರ್ಷಗಳ ನಂತರ ರಿಯೋ ಒಲಂಪಿಕ್​ನಲ್ಲಿ ಕಾಣಿಸಿಕೊಂಡಿತ್ತು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: