ದೇಶೀಯ ಶಸ್ತ್ರಗಳಿಂದಲೇ ಮುಂದಿನ ಯುದ್ಧ ಗೆಲ್ಲುತ್ತೇವೆ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಭವಿಷ್ಯದಲ್ಲಿ ಯುದ್ಧವೆಂಬುದು ಅಸ್ಪಾರ್ಶಿಕವಾಗಿ ನಡೆಯಬಹುದು. ನಾವು ಸೈಬರ್​ಸ್ಪೇಸ್, ಲೇಸರ್, ಎಲೆಕ್ಟ್ರಾನಿಕ್, ರೋಬೋಟಿಕ್ ಹಾಗೆಯೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇತ್ಯಾದಿ ತಂತ್ರಜ್ಞಾನಗಳಿರುವ ಯುದ್ಧ ವ್ಯವಸ್ಥೆಯನ್ನು ರೂಪಿಸಬೇಕು. ಈಗಲೇ ಇದು ಪ್ರಾರಂಭವಾಗದಿದ್ದರೆ ಕಾಲ ಮೀರಿ ಹೋಗಬಹುದು ಎಂದು ಬಿಪಿನ್ ರಾವತ್ ಎಚ್ಚರಿಸಿದ್ದಾರೆ.

news18
Updated:October 15, 2019, 4:21 PM IST
ದೇಶೀಯ ಶಸ್ತ್ರಗಳಿಂದಲೇ ಮುಂದಿನ ಯುದ್ಧ ಗೆಲ್ಲುತ್ತೇವೆ: ಸೇನಾ ಮುಖ್ಯಸ್ಥ ಬಿಪಿನ್ ರಾವತ್
ಬಿಪಿನ್ ರಾವತ್
  • News18
  • Last Updated: October 15, 2019, 4:21 PM IST
  • Share this:
ನವದೆಹಲಿ(ಅ. 15): ಭಾರತದಲ್ಲಿ ಯುದ್ಧ ಸಂಬಂಧಿತ ತಂತ್ರಜ್ಞಾನ ಹೆಚ್ಚೆಚ್ಚು ಬೆಳೆಯಬೇಕು. ಭಾರತೀಯ ಸೇನೆಯಲ್ಲಿ ದೇಶೀಯ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಕೆ ಮಾಡಬೇಕು. ಭಾರತ ತನ್ನ ಮುಂದಿನ ಯುದ್ಧವನ್ನು ದೇಶೀ ಯುದ್ಧ ತಂತ್ರಜ್ಞಾನದ ಸಹಾಯದಿಂದಲೇ ಗೆಲ್ಲುತ್ತದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ವಿಶ್ವಾಸ ವ್ಯಕ್ತಪಡಿಸಿದರು. 41ನೇ ಡಿಆರ್​ಡಿಓ ನಿರ್ದೇಶಕರ ಸಮಾವೇಶದಲ್ಲಿ ಮಾತನಾಡಿದ ಅವರು, ಭವಿಷ್ಯದ ಯುದ್ಧ ತಂತ್ರಗಳನ್ನು ಗಮನದಲ್ಲಿಟ್ಟುಕೊಂಡು ದೇಶೀಯವಾಗಿ ಶಸ್ತ್ರಾಸ್ತ್ರ ವ್ಯವಸ್ಥೆ ರೂಪಿತವಾಗಬೇಕು ಎಂದು ರಾವತ್ ಅಭಿಪ್ರಾಯಪಟ್ಟರು.

ಭಾರತದ ರಕ್ಷಣಾ ಸಂಶೋಧನಾ ಸಂಸ್ಥೆಯಾಗಿರುವ ಡಿಆರ್​ಡಿಓ ಕಳೆದ ಕೆಲ ದಶಕಗಳಿಂದ ಮಾಡಿರುವ ಸಾಧನೆಯನ್ನು ಸೇನಾ ಮುಖ್ಯಸ್ಥರು ಈ ಸಂದರ್ಭದಲ್ಲಿ ಕೊಂಡಾಡಿದರು.

ಇದನ್ನೂ ಓದಿ: ಜೆಎನ್​ಯು-ಪ್ರೆಸಿಡೆನ್ಸಿಗಳಲ್ಲಿ ಕನ್ಹಯ್ಯ ಕುಮಾರ್​ ನಂತಹ ಸಾವಿರಾರು ವಿದ್ಯಾರ್ಥಿಗಳಿಗೆ ಆದರ್ಶವಾಗಿದ್ದ ಅಭಿಜಿತ್​ ಸಾಧನೆಯ ಹಾದಿ

“ಅತಿ ಹೆಚ್ಚು ಶಸ್ತ್ರಾಸ್ತ್ರಗಳ ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ಸ್ವಾತಂತ್ರ್ಯ ಬಂದು 70 ವರ್ಷಗಳ ಇದು ಮುಜುಗರ ತರುವ ವಿಷಯವೇ. ಆದರೆ, ಕಳೆದ ಕೆಲ ವರ್ಷಗಳಲ್ಲಿ ಇದು ಬದಲಾಗುತ್ತಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳ ಮೂಲಕ ನಮ್ಮ ಸೇನಾ ಅಗತ್ಯತೆಗಳನ್ನ ಪೂರೈಸಲು ಡಿಆರ್​ಡಿಓ ಶ್ರಮಿಸುತ್ತಿದೆ. ಮುಂದಿನ ಯುದ್ಧವನ್ನು ನಾವು ದೇಶೀಯ ಶಸ್ತ್ರಾಸ್ತ್ರ ವ್ಯವಸ್ಥೆಯ ನೆರವಿನಿಂದಲೇ ಗೆಲ್ಲುತ್ತೇವೆಂಬ ವಿಶ್ವಾಸವಿದೆ” ಎಂದು ಜನರಲ್ ಬಿಪಿನ್ ರಾವತ್ ಹೇಳಿದರು.

ಭವಿಷ್ಯದಲ್ಲಿ ಯುದ್ಧವೆಂಬುದು ಸ್ಪಾರ್ಶಿಕವೇ(Contact warfare) ಆಗಬೇಕೆಂದಿಲ್ಲ. ಅಸ್ಪಾರ್ಶಿಕ ಯುದ್ಧದ ತಂತ್ರವೂ (Non-contact warfare) ಇದೆ. ನಾವು ಆಗಸ, ಸೈಬರ್​ಸ್ಪೇಸ್, ಲೇಸರ್, ಎಲೆಕ್ಟ್ರಾನಿಕ್, ರೋಬೋಟಿಕ್ ಹಾಗೆಯೇ ಕೃತಕ ಬುದ್ಧಿಮತ್ತೆ(ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಇತ್ಯಾದಿಗಳ ಅಭಿವೃದ್ಧಿಯತ್ತ ನಮ್ಮ ಚಿತ್ತ ಹರಿಯಬೇಕು ಎಂದು ಸಲಹೆ ನೀಡಿದ ಬಿಪಿನ್ ರಾವತ್, ಈ ನಿಟ್ಟಿನಲ್ಲಿ ನಾವು ಈಗಲೇ ಗಮನ ಕೊಡಲು ಪ್ರಾರಂಭಿಸದಿದ್ದರೆ ಕಾಲ ಮೀರಿ ಹೋಗಬಹುದು ಎಂದೂ ಎಚ್ಚರಿಸಿದರು.

ದೆಹಲಿಯ ಡಿಆರ್​ಡಿಓ ಭವನದಲ್ಲಿ ಇಂದ ಪ್ರಾರಂಭಗೊಂಡ ಎರಡು ದಿನಗಳ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೌರವ ಅತಿಥಿಯಾಗಿದ್ದರು. ಭದ್ರತಾ ಸಲಹೆಗಾರ ಅಜಿತ್ ದೋವಲ್, ವಾಯು ಸೇನೆ ಮುಖ್ಯಸ್ಥ ಆರ್.ಎಸ್. ಭಡೋರಿಯಾ, ನೌಕಾ ಪಡೆ ಮುಖ್ಯಸ್ಥ ಕರಂಬೀರ್ ಸಿಂಗ್ ಮತ್ತು ಡಿಆರ್​ಡಿಓ ಮುಖ್ಯಸ್ಥ ಜಿ. ಸತೀಶ್ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: October 15, 2019, 4:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading