ಮಿತಿಮೀರುತ್ತಿದೆ ಕೊರೋನಾ; ಶೀಘ್ರವೇ ರಷ್ಯಾ ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಬರಲಿದೆ ಭಾರತ?

ಲಾಕ್​ಡೌನ್​ ಅವಧಿಯಲ್ಲಿ ಭಾರತ ಸಶಕ್ತವಾಗಿ ಕೊರೋನಾ ವೈರಸ್​ ನಿಯಂತ್ರಣ ಮಾಡಿತ್ತು. ಯಾವಾಗ ಅನ್​ಲಾಕ್​ ಪ್ರಕ್ರಿಯೆ ಆರಂಭವಾಗಿತ್ತೋ ಆಗ ಕೊರೋನಾ ವೈರಸ್​ ಮಿತಿ ಮೀರಿ ಹರಡಲು ಆರಂಭವಾಗಿದೆ. ಈಗ ನಿತ್ಯ ಸಮಾರು 15-20 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ.

news18-kannada
Updated:June 29, 2020, 8:42 AM IST
ಮಿತಿಮೀರುತ್ತಿದೆ ಕೊರೋನಾ; ಶೀಘ್ರವೇ ರಷ್ಯಾ ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಬರಲಿದೆ ಭಾರತ?
ಸಾಂದರ್ಭಿಕ ಚಿತ್ರ.
  • Share this:
ನವದೆಹಲಿ (ಜೂ.29): ಆರಂಭದಲ್ಲಿ ನಿಯಂತ್ರಣದಲ್ಲಿದ್ದ ಕೊರೋನಾ ವೈರಸ್​ ಲಾಕ್​ಡೌನ್​ ತೆರವುಗೊಳ್ಳುತ್ತಿದ್ದಂತೆ ಭಾರತದಲ್ಲಿ ರೌದ್ರ ನರ್ತನ ಆರಂಭಿಸಿದೆ. ಕೊರೋನಾ ಪ್ರಕರಣಗಳ ವಿಚಾರದಲ್ಲಿ  ವಿಶ್ವಮಟ್ಟದಲ್ಲಿ ಎರಡು ತಿಂಗಳ ಹಿಂದೆ 14ನೇ ಸ್ಥಾನದಲ್ಲಿದ್ದ ಭಾರತ ಈಗ ನಾಲ್ಕನೇ ಸ್ಥಾನಕ್ಕೆ ಬಂದಿದೆ. ಇನ್ನು, ಕೆಲವೇ ದಿನಗಳಲ್ಲಿ ಮೂರನೇ ಸ್ಥಾನದಲ್ಲಿರುವ ರಷ್ಯಾವನ್ನು ಹಿಂದಿಕ್ಕುವ ಸಾಧ್ಯತೆ ಇದೆ ಎನ್ನಲಾಗಿದೆ.

ಲಾಕ್​ಡೌನ್​ ಅವಧಿಯಲ್ಲಿ ಭಾರತ ಸಶಕ್ತವಾಗಿ ಕೊರೋನಾ ವೈರಸ್​ ನಿಯಂತ್ರಣ ಮಾಡಿತ್ತು. ಯಾವಾಗ ಅನ್​ಲಾಕ್​ ಪ್ರಕ್ರಿಯೆ ಆರಂಭವಾಗಿತ್ತೋ ಆಗ ಕೊರೋನಾ ವೈರಸ್​ ಮಿತಿ ಮೀರಿ ಹರಡಲು ಆರಂಭವಾಗಿದೆ. ಈಗ ನಿತ್ಯ ಸಮಾರು 15-20 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ.

ಶನಿವಾರ ಒಂದೇ ದಿನ 20 ಸಾವಿರ ಕೊರೋನಾ ಪ್ರಕರಣ ದಾಖಲಾಗಿದೆ. ಭಾನುವಾರ 19,906 ಕೋವಿಡ್​ ಕೇಸ್​ ವರದಿಯಾಗಿದೆ. ಇದು ಹೀಗೆಯೇ ಮುಂದುವರಿದರೆ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ  ನಾವು ರಷ್ಯಾವನ್ನು ಹಿಂದಿಕ್ಕುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: ಬೆಂಗಳೂರಲ್ಲಿ ಈವರೆಗೆ 31 ಪೊಲೀಸ್ ಸ್ಟೇಷನ್ ಸೀಲ್​ಡೌನ್; 140ಕ್ಕೂ ಹೆಚ್ಚು ಪೊಲೀಸರಿಗೆ ಸೋಂಕು

ಸದ್ಯ ಭಾರತದಲ್ಲಿ, 5.49 ಲಕ್ಷ ಕೊರೋನಾ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 16 ಸಾವಿರ ಸಾವು ಸಂಭವಿಸಿದೆ. ಇನ್ನು, ರಷ್ಯಾದಲ್ಲಿ 6.34 ಲಕ್ಷ ಕೊರೋನಾ ಕೇಸ್​ಗಳು ವರದಿ ಆಗಿವೆ. ರಷ್ಯಾಗೆ ಹೋಲಿಸಿದರೆ ಭಾರತದಲ್ಲಿ ಕೊರೋನಾ ಮಿತಿಮೀರಿ ಹರಡುತ್ತಿದೆ. ಹೀಗಾಗಿ ಶೀಘ್ರವೇ ರಷ್ಯಾವನ್ನು ನಾವು ಹಿಂದಿಕ್ಕುವ ಸಾಧ್ಯತೆ ಇದೆ.

ಭಾರತದಲ್ಲಿ ಕೊರೋನಾ ಸಮುದಾಯಕ್ಕೆ ಹರಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೊರೋನಾ ವೈರಸ್​ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡರೂ ಯಾವುದೇ ಅನುಮಾನವಿಲ್ಲ ಎಂಬುದು ತಜ್ಞರ ಅಭಿಪ್ರಾಯ.
First published:June 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading