ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಭಾನುವಾರ ಈಶಾನ್ಯ ರಾಜ್ಯಗಳಾದ ತ್ರಿಪುರಾ ಮತ್ತು ಮೇಘಾಲಯದಲ್ಲಿ (Tripura And Meghalaya) ವಿವಿಧ ಯೋಜನೆಗಳನ್ನು (Many Projects) ಉದ್ಘಾಟನೆ ಮಾಡಿದರು. ತ್ರಿಪುರಾ ಮತ್ತು ಮೇಘಾಲಯದಲ್ಲಿ ಸುಮಾರು 6,800 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ರಾಜ್ಯಗಳಿಗೆ ಉಡುಗೊರೆ ನೀಡಿದ್ದಾರೆ. ಯೋಜನೆಗಳ ಉದ್ಘಾಟನೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮೇಘಾಲಯದ ಫುಟ್ಬಾಲ್ ಮೈದಾನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಇಂದು ಪ್ರಪಂಚದಾದ್ಯಂತ ಫಿಫಾ ವಿಶ್ವಕಪ್ ಜ್ವರ ಹರಡಿದೆ. ಭಾರತದಲ್ಲಿ ಕೂಡ ಫಿಫಾ ವಿಶ್ವಕಪ್ ನಂತಹ ಕಾರ್ಯಕ್ರಮ ಆಯೋಜಿಸುವುದಾಗಿ ಭರವಸೆ ನೀಡಿದ್ದಾರೆ.
ಭಾರತದಲ್ಲಿ ಫಿಫಾ ವಿಶ್ವಕಪ್ ನಂತಹ ಕಾರ್ಯಕ್ರಮ ಆಯೋಜಿಸುವುದಾಗಿ ಮೋದಿ ಭರವಸೆ
ಮೇಘಾಲಯದ ಫುಟ್ಬಾಲ್ ಮೈದಾನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ವಿಶ್ವದಾದ್ಯಂತ ಫಿಫಾ ವಿಶ್ವಕಪ್ ಜ್ವರ ಹಬ್ಬಿದೆ. ಭಾರತದಲ್ಲಿಯೂ ಫಿಫಾ ವಿಶ್ವಕಪ್ ನಂತಹ ಕಾರ್ಯಕ್ರಮ ಆಯೋಜನೆ ಮಾಡುವುದಾಗಿ ಭರವಸೆ ನೀಡಿದರು.
ಕತಾರ್ ನಲ್ಲಿ ಫಿಫಾ ವಿಶ್ವಕಪ್ ನಲ್ಲಿ ಸೆಣಸಾಡುತ್ತಿರುವ ಎರಡೂ ತಂಡಗಳು ವಿದೇಶಿಯರು. ನಾವೂ ಸಹ ಭಾರತದಲ್ಲಿ ಫಿಫಾ ವಿಶ್ವಕಪ್ ನಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಿ, ತ್ರಿವರ್ಣ ಧ್ವಜಕ್ಕೆ ಮತ್ತಷ್ಟು ರಂಗು ತುಂಬೋಣಾ ಎಂದು ಹೇಳಿದ್ದಾರೆ.
Today the teams playing in the Qatar final is between foreign countries.
But, I can say with assurance that we will be organizing an event like FIFA world cup in India and will cheer for the tricolor.
- PM @narendramodi pic.twitter.com/RsmBNIrHao
— BJP (@BJP4India) December 18, 2022
ಬಿಜೆಪಿ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್
ಇನ್ನೂ ಮೇಘಾಲಯದಲ್ಲಿ ಪ್ರಧಾನಿ ಮೋದಿ ನೀಡಿದ ಭರವಸೆಯನ್ನು ಬಿಜೆಪಿ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಹಂಚಿಕೊಂಡಿದೆ.
ಮೇಘಾಲಯದ ಫುಟ್ಬಾಲ್ ಮೈದಾನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವಾಗ ಮೋದಿ ಅವರು, ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯ ನಡೆಯುತ್ತಿದೆ. ಈ ಸಮಯದಲ್ಲಿ ನಾನು ಫುಟ್ಬಾಲ್ ಮೈದಾನದಲ್ಲಿ ಫುಟ್ಬಾಲ್ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಕಾಕತಾಳೀಯ ಎಂದು ಹೇಳಿದರು.
ಕೇಂದ್ರ ಸರ್ಕಾರ ಕ್ರೀಡಾ ಕ್ಷೇತ್ರದಲ್ಲಿ ಹೊಸ ಹೊಸ ವಿಧಾನ ತರುತ್ತಿದೆ
ಒಂದೆಡೆ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯ ನಡೆಯುತ್ತಿದೆ. ಇಲ್ಲಿ ನಾವು ಫುಟ್ಬಾಲ್ ಮೈದಾನದಿಂದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿದ್ದೇವೆ ಎಂದು ಹೇಳಿದರು. ಕೇಂದ್ರ ಸರ್ಕಾರ ಕ್ರೀಡಾ ಕ್ಷೇತ್ರದಲ್ಲಿ ಹೊಸ, ಹೊಸ ವಿಧಾನ ತರುತ್ತಿದೆ. ಈಶಾನ್ಯ ಭಾಗವು ಭಾರತದ ಮೊಟ್ಟ ಮೊದಲ ಕ್ರೀಡಾ ವಿಶ್ವವಿದ್ಯಾಲಯವನ್ನೂ ಸಹ ಹೊಂದಿದೆ.
ಈಶಾನ್ಯ ಭಾಗವು ವಿವಿಧುದ್ದೇಶ ಯೋಜನೆಗಳ ಮೂಲಕ 90 ಯೋಜನೆಗಳನ್ನು ಉಡುಗೊರೆಯಾಗಿ ಪಡೆಯುತ್ತಿದೆ. ಇದರಲ್ಲಿ ಸಭಾಂಗಣ, ಅಥ್ಲಿಟ್ ಟ್ರ್ಯಾಕ್, ಫುಟ್ಬಾಲ್ ಮೈದಾನ ಸಹ ಸೇರಿದೆ . ಕಳೆದ ಎಂಟು ವರ್ಷಗಳಲ್ಲಿ ಈಶಾನ್ಯ ಗಡಿಯಲ್ಲಿ ಅಭಿವೃದ್ಧಿ ವಿರೋಧಿಗಳಿಗೂ ರೆಡ್ ಕಾರ್ಡ್ ತೋರಿಸಿದ್ದೇವೆ ಎಂದು ತಿಳಿಸಿದರು.
ಮೇಘಾಲಯದಲ್ಲಿ 4ಜಿ ಮೊಬೈಲ್ ಟವರ್ ಯೋಜನೆ ಉದ್ಘಾಟನೆ
ಮೇಘಾಲಯದಲ್ಲಿ ಮೋದಿ ಅವರು, 4ಜಿ ಮೊಬೈಲ್ ಟವರ್ ಯೋಜನೆ ಉದ್ಘಾಟಿಸಿದರು. ನಂತರ ಮಾತನಾಡಿ, ಮೇಘಾಲಯದ ಎನ್ ಡಿಎ ಸರ್ಕಾರ ಭ್ರಷ್ಟಾಚಾರ, ತಾರತಮ್ಯ, ಹಿಂಸಾಚಾರ ಮತ್ತು ವೋಟ್ ಬ್ಯಾಂಕ್ ರಾಜಕೀಯ ಮಟ್ಟ ಹಾಕಲು ಶತಾಯ, ಗತಾಯ ಗಂಭೀರ ಪ್ರಯತ್ನ ಮಾಡುತ್ತಿದೆ.
ಇದನ್ನೂ ಓದಿ: ಸಂಸತ್ ಒಳಗೆ ಕದನ, ಹೊರಗೆ ಪುಷ್ಕಳ ಭೋಜನ! ಸಿರಿಧಾನ್ಯ ಖಾದ್ಯ ಸವಿದ ಮೋದಿ-ಖರ್ಗೆ!
ಕಳೆದ ಎಂಟು ವರ್ಷಗಳಿಂದ ಈಶಾನ್ಯ ಭಾಗದಲ್ಲಿ ಅಭಿವೃದ್ಧಿ ವಿಚಾರದಲ್ಲಿ ಹಲವು ಅಡೆ ತಡೆ ಎದುರಾಗಿವೆ. ಇದಕ್ಕೆಲ್ಲಾ ಕೇಂದ್ರ ಸರ್ಕಾರವು ಕೆಂಪು ಕಾರ್ಡ್ ತೋರಿಸಿದೆ.. ವೋಟ್ ಬ್ಯಾಂಕ್ ರಾಜಕೀಯ ಸೇರಿದಂತೆ ಎಲ್ಲಾ ಕೆಟ್ಟ ವ್ಯವಸ್ಥೆಯನ್ನು ಪ್ರಾಮಾಣಿಕವಾಗಿ ತೆಗೆದು ಹಾಕುತ್ತೇವೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ