• Home
  • »
  • News
  • »
  • national-international
  • »
  • IMC 5G Launch: ಟೆಲಿಕಾಂ ಕ್ಷೇತ್ರದ ಇತಿಹಾಸದಲ್ಲಿ ಈ ದಿನ ಸುವರ್ಣಾಕ್ಷರಗಳಲ್ಲಿ ದಾಖಲಾಗಲಿದೆ: ಅಶ್ವಿನಿ ವೈಷ್ಣವ್

IMC 5G Launch: ಟೆಲಿಕಾಂ ಕ್ಷೇತ್ರದ ಇತಿಹಾಸದಲ್ಲಿ ಈ ದಿನ ಸುವರ್ಣಾಕ್ಷರಗಳಲ್ಲಿ ದಾಖಲಾಗಲಿದೆ: ಅಶ್ವಿನಿ ವೈಷ್ಣವ್

ಸಚಿವ ಅಶ್ವಿನಿ ವೈಷ್ಣವ್

ಸಚಿವ ಅಶ್ವಿನಿ ವೈಷ್ಣವ್

IMC 2022: ಇಂದಿನಿಂದ ಭಾರತದಲ್ಲಿ ಅಲ್ಟ್ರಾ ಹೈಸ್ಪೀಡ್ ಇಂಟರ್ನೆಟ್‌ನ ಹೊಸ ಯುಗ ಪ್ರಾರಂಭವಾಗಿದೆ. ಪ್ರಧಾನಿ ಮೋದಿ ಇಂದು 5G ಸೇವೆಯನ್ನು ಪ್ರಾರಂಭಿಸಿದ್ದಾರೆ. 5ಜಿ ಸೇವೆಗೆ ಚಾಲನೆ ನೀಡಿದ ಈ ಸಂದರ್ಭದಲ್ಲಿ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಟೆಲಿಕಾಂ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ದಾಖಲಾಗಲಿದೆ ಎಂದಿದ್ದಾರೆ.

ಮುಂದೆ ಓದಿ ...
  • Share this:

ನವದೆಹಲಿ(ಅ.01): ಇಂದಿನಿಂದ ಭಾರತದಲ್ಲಿ ಅಲ್ಟ್ರಾ ಹೈಸ್ಪೀಡ್ ಇಂಟರ್ನೆಟ್‌ನ ಹೊಸ ಯುಗ ಪ್ರಾರಂಭವಾಗಿದೆ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು, ಶನಿವಾರ ದೆಹಲಿಯಲ್ಲಿ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ 2022 (India Mobile Congress 2022) ಕಾರ್ಯಕ್ರಮದ ವೇದಿಕೆಯಿಂದ 5G ಟೆಲಿಫೋನ್ ಸೇವೆಗಳಿಗೆ ಚಾಲನೆ ನೀಡಿದ್ದಾರೆ. 5ಜಿ ಸೇವೆಗೆ ಚಾಲನೆ ನೀಡಿದ ಈ ಸಂದರ್ಭದಲ್ಲಿ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ (Telecom Minister Ashwini Vaishnav) ಮಾತನಾಡಿ, ಟೆಲಿಕಾಂ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ದಾಖಲಾಗಲಿದೆ ಎಂದಿದ್ದಾರೆ. ಅಲ್ಲದೇ 'ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭಾರತದಲ್ಲಿ 5G ಸೇವೆಯನ್ನು ಪ್ರಾರಂಭಿಸುತ್ತಿದ್ದಾರೆ. ದೂರಸಂಪರ್ಕ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ದಾಖಲಾಗಲಿದೆ. ಟೆಲಿಕಾಂ ಡಿಜಿಟಲ್ ಇಂಡಿಯಾದ ಗೇಟ್‌ವೇ, ಅಡಿಪಾಯ. ಪ್ರತಿಯೊಬ್ಬ ವ್ಯಕ್ತಿಗೂ ಡಿಜಿಟಲ್ ಸೇವೆಗಳನ್ನು ತಲುಪಿಸುವ ಮಾಧ್ಯಮವಾಗಿದೆ ಎಂದಿದ್ದಾರೆ.


ಇದನ್ನೂ ಓದಿ: 5G Launch: ಪ್ರಾಕೃತಿಕ ವಿಕೋಪ ಬರೋ ಮೊದಲೇ ಸಿಗುತ್ತೆ ಸೂಚನೆ, C-Dot Technologyಯಿಂದ ಮೊಬೈಲ್​ಗೆ ಸಂದೇಶ!


ಮತ್ತಷ್ಟು ಮಾತನಾಡಿದ ಅಶ್ವಿನಿ ವೈಷ್ಣವ್ ಈ ಹಿಂದೆ ಟೆಲಿಕಾಂ ವಲಯದಲ್ಲಿ ಅನುಮೋದನೆಗೆ ಸರಾಸರಿ 300 ದಿನಗಳನ್ನು ತೆಗೆದುಕೊಳ್ಳಲಾಗುತ್ತಿತ್ತು, ಈಗ ಅದು ಕೇವಲ 7 ದಿನಗಳಿಗೆ ಇಳಿದಿದೆ ಎಂದು ಅವರು ಹೇಳಿದರು. ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್‌ನ ಪರಿಣಾಮ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಗೋಚರಿಸುತ್ತಿದೆ. ಮುಂದಿನ ದಿನಗಳಲ್ಲಿ ಭಾರತ ಟೆಲಿಕಾಂ ಕ್ಷೇತ್ರದಲ್ಲಿ ವಿಶ್ವ ನಾಯಕನಾಗಿ ಹೊರಹೊಮ್ಮಲಿದೆ ಎಂದಿದ್ದಾರೆ.


ಮುಕೇಶ್ ಅಂಬಾನಿ ಕೊಟ್ಟ ಭರವಸೆ ಏನು?


ಅದೇ ಸಮಯದಲ್ಲಿ, ಬಿಲಿಯನೇರ್ ಉದ್ಯಮಿ ಮುಕೇಶ್ ಅಂಬಾನಿ ತಮ್ಮ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಮುಂದಿನ ವರ್ಷ ಡಿಸೆಂಬರ್ ವೇಳೆಗೆ ದೇಶಾದ್ಯಂತ 5G ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಜಿಯೋ ಈ ತಿಂಗಳ ಅಂತ್ಯದ ವೇಳೆಗೆ 5G ಸೇವೆಗಳನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್-2022 ರ ಕಾರ್ಯಕ್ರಮದಲ್ಲಿ, ಜಿಯೋ 5G ಕೈಗೆಟುಕುವ ಸೇವೆಗಳನ್ನು ಪ್ರಾರಂಭಿಸುತ್ತದೆ ಮತ್ತು ಈ ಸೇವೆಗಳನ್ನು ಡಿಸೆಂಬರ್ 2023 ರ ವೇಳೆಗೆ ದೇಶದ ಮೂಲೆ ಮೂಲೆಗಳಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ಅಂಬಾನಿ ಹೇಳಿದರು.


ಗ್ಲೋಬಲ್ ಮೊಬೈಲ್ ಕಾಂಗ್ರೆಸ್ ಆಶಯ


ನಾವೇನು ತೋರಿಸಿದ್ದೇವೋ ಆ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದ್ದಾರೆ. ನಾನು COAI (ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ) ಮತ್ತು DoT (ಟೆಲಿಕಾಂ ಇಲಾಖೆ) ಗೆ ಹೇಳುತ್ತೇನೆ, ನಾವು ಮುನ್ನಡೆ ಸಾಧಿಸಲು ಸಿದ್ಧರಿದ್ದೇವೆ ಮತ್ತು ಭಾರತೀಯ ಮೊಬೈಲ್ ಕಾಂಗ್ರೆಸ್ ಮುಂದೆ ಏಷ್ಯನ್ ಮೊಬೈಲ್ ಕಾಂಗ್ರೆಸ್ ಆಗಿ ಬಳಿಕ ಗ್ಲೋಬಲ್ ಮೊಬೈಲ್ ಕಾಂಗ್ರೆಸ್ ಆಗಬೇಕು ಎಂದಿದ್ದಾರೆ.


ಇದನ್ನೂ ಓದಿ: Reliance AGM 2022: ಕೈಗೆಟುಕುವ ದರದಲ್ಲಿ 5ಜಿ ಸ್ಮಾರ್ಟ್ ಫೋನ್ಸ್! ರಿಲಯನ್ಸ್ ಕನಸಿಗೆ ಗೂಗಲ್ ಬೆಂಬಲ


ಅತೀ ವೇಗ


ಮುಂದಿನ ಪೀಳಿಗೆಯ ಸಂಪರ್ಕಕ್ಕಿಂತ 5G ವೇಗ ಬಹಳ ಹೆಚ್ಚು ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ. ಕೃತಕ ಬುದ್ಧಿಮತ್ತೆ, ಇಂಟರ್ನೆಟ್ ಆಫ್ ಥಿಂಗ್ಸ್, ರೋಬೋಟಿಕ್ಸ್, ಬ್ಲಾಕ್‌ಚೇನ್ ಮತ್ತು ಮೆಟಾವರ್ಸ್‌ನಂತಹ 21 ನೇ ಶತಮಾನದ ಇತರ ತಂತ್ರಜ್ಞಾನಗಳ ಸಂಪೂರ್ಣ ಸಾಮರ್ಥ್ಯವನ್ನು ಅನ್ಲಾಕ್ ಮಾಡುವ ಮೂಲಭೂತ ತಂತ್ರಜ್ಞಾನ ಇದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.


ಇಂಡಿಯಾ ಮೊಬೈಲ್ ಕಾಂಗ್ರೆಸ್‌ನ 6 ನೇ ಆವೃತ್ತಿ


ಇದು ಇಂಡಿಯಾ ಮೊಬೈಲ್ ಕಾಂಗ್ರೆಸ್‌ನ 6 ನೇ ಆವೃತ್ತಿಯಾಗಿದ್ದು, ಇದರ ಥೀಮ್ 'ನ್ಯೂ ಡಿಜಿಟಲ್ ವರ್ಲ್ಡ್​' ಆಗಿದೆ. ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ, 5G ಟೆಲಿಕಾಂ ನೆಟ್‌ವರ್ಕ್‌ನಿಂದ ಮೊಬೈಲ್ ಡೇಟಾ ಅಧಿಕ ಪಟ್ಟು ಹೆಚ್ಚು ಲಭ್ಯವಿರುತ್ತದೆ ಮತ್ತು ಜನರು ವಿಶ್ವದರ್ಜೆಯ ಸಂವಹನ ಸೌಲಭ್ಯಗಳನ್ನು ಪಡೆಯುತ್ತಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, 'ಸ್ವಲ್ಪ ಸಮಯದ ನಂತರ ಭಾರತದಲ್ಲಿ 5G ಕ್ರಾಂತಿಯನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿರುವ ಭಾರತೀಯ ಮೊಬೈಲ್ ಕಾಂಗ್ರೆಸ್ ಪ್ರಾರಂಭವಾಗಲಿದೆ' ಎಂದು ಟ್ವೀಟ್ ಮಾಡಿದ್ದಾರೆ.

Published by:Precilla Olivia Dias
First published: