ಭಾರತವೇ ತರಲಿದೆ ಡಿಜಿಟಲ್ ಕರೆನ್ಸಿ : ಶೀಘ್ರದಲ್ಲೇ ಪ್ರಾಯೋಗಿಕ ಪರೀಕ್ಷೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸದ್ಯ ಎಲ್ಲವೂ ಡಿಜಟಲೀಕರಣವಾಗಿರುವುದರಿಂದ ಜಾಗತಿಕವಾಗಿ ಕಾಗದದ ಹಣದ ಬದಲಿಗೆ ಡಿಜಿಟಲ್ ನಗದು ಎಲ್ಲರಿಗೂ ಸರಳ ಆರ್ಥಿಕ ಚಟುವಟಿಕೆಗೆ ಅನುಕೂಲಕಾರಿಯಾಗಿದೆ. ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಯ ಅವಲಂಬನೆಯಿಂದ ವಿಳಂಬ ಕಡಿಮೆಯಾಗುವುದರ ಜೊತೆಗೆ ತೆರಿಗೆ ವಂಚನೆಯಂಥ ಹಣದ ಸೋರಿಕೆಯನ್ನು ತಡೆಯಬಹುದಾಗಿದೆ.

ಮುಂದೆ ಓದಿ ...
 • Share this:

  ಡೆಪ್ಯೂಟಿ ಗವರ್ನರ್ ಟಿ ರಬಿ ಶಂಕರ್ ಅವರ ಪ್ರಕಾರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ)ಯನ್ನು ಜಾರಿಗೆ ತರಲು "ಹಂತ ಹಂತವಾಗಿ ಅನುಷ್ಠಾನಗೊಳಿಸುವ ವಿಧಾನ" ದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.


  ಕೇಂದ್ರೀಯ ಬ್ಯಾಂಕ್ ಪ್ರಮುಖ ಹಣಕಾಸು ಸಂಸ್ಥೆ ಸಿಬಿಡಿಸಿಗಳ ವ್ಯಾಪ್ತಿಯೊಂದಿಗೆ ಈ ಕರೆನ್ಸಿಯನ್ನು ಹೇಗೆ ಬಳಸಬಹುದು ಎನ್ನುವ ಕುರಿತು ಪರಿಶೀಲಿಸುತ್ತಿದೆ. ಅವುಗಳನ್ನು ಚಿಲ್ಲರೆ ರೂದಲ್ಲಿ ಬಳಸಬಹುದಾ ಅಥವಾ ಹೆಚ್ಚುವರಿಯಾಗಿ ಸಗಟು ರೂಪದಲ್ಲಿ ಬಳಸಬೇಕೇ ಅಥವಾ ಬೇಡವೇ ಎಂದು ಹಂತ, ಹಂತವಾಗಿ ಯೋಜಿಸುತ್ತಿದೆ ಎಂದು ಹೇಳಿದ್ದಾರೆ.


  ಪ್ರಸ್ತುತ ಚಾಲ್ತಿಯಲ್ಲಿರುವ ತಂತ್ರಜ್ಞಾನ ಬಳಸಿಕೊಂಡು ಅನುಷ್ಠಾನಕ್ಕೆ ತರುವ ಪ್ರಸ್ತಾಪವಿದೆ.  ಉದಾಹರಣೆಗೆ ಬಿಡಿ, ಬಿಡಿಯಾದ ಲೆಡ್ಜರ್ ಇಲ್ಲವೇ ಕೇಂದ್ರಿಕೃತವಾದ ಒಂದೇ ಲೆಡ್ಜರ್ ಬಳಸಬೇಕೋ, ಹೀಗೆ ಬಳಕೆಗೆ ಅನುಗುಣವಾಗಿ ತಂತ್ರಜ್ಞಾನದಲ್ಲಿ ಏನೆಲ್ಲಾ ಬದಲಾವಣೆ ತರಬೇಕು ಎನ್ನುವ ಚಿಂತನೆ ನಡೆದಿದೆ. ಮೌಲ್ಯಯುತ ಕಾರ್ಯವಿಧಾನ - ಟೋಕನ್ ಆಧಾರಿತ ಅಥವಾ ಖಾತೆ ಆಧಾರಿತ (ವಿತರಣಾ ರಚನೆ - ಆರ್‌ಬಿಐ ಅಥವಾ ಬ್ಯಾಂಕುಗಳ ಮೂಲಕ ನೇರ ವ್ಯವಹಾರ; ಗುಣಮಟ್ಟ ಮತ್ತು ಪ್ರಮಾಣ, ಇತ್ಯಾದಿ)
  ಸಗಟು ಮತ್ತು ಚಿಲ್ಲರೆ ವಿಭಾಗಗಳಲ್ಲಿ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸುವುದು ಸದ್ಯದಲ್ಲಿಯೇ ಸಾಧ್ಯ ಎಂದು ಶಂಕರ್ ಗುರುವಾರ ಮುಖ್ಯ ಭಾಷಣದಲ್ಲಿ ಹೇಳಿದರು.


  'ಸಿಬಿಡಿಸಿ ಎನ್ನುವುದು ಕೇಂದ್ರೀಯ ಬ್ಯಾಂಕ್ ನೀಡುವ ಕಾನೂನುಬದ್ಧ ಟೆಂಡರ್​​ನ ಡಿಜಿಟಲ್ ರೂಪವಾಗಿದೆ. ಇದು ಫಿಯೆಟ್ ಹಣದಂತೆಯೇ ಕಾರ್ಯನಿರ್ವಹಿಸುತ್ತದೆ ಮತ್ತು ಫಿಯೆಟ್ ಹಣಕ್ಕಾಗಿ ಒಂದರಿಂದ ಒಂದು ಅನುಪಾತದಲ್ಲಿ ವಿನಿಮಯ ಮಾಡಿಕೊಳ್ಳಬಹುದು ಆದರೆ ಇದರ ರೂಪ ಮಾತ್ರ ಭಿನ್ನವಾಗಿದೆ' ಎಂದು ಶಂಕರ್ ತಿಳಿಸಿದರು.


  ಕ್ರಿಪ್ಟೋಕರೆನ್ಸಿಗಳನ್ನು ನಿಯಂತ್ರಿಸುವ ನೀತಿ ಮತ್ತು ಕಾನೂನು ಚೌಕಟ್ಟಿನ ಪರೀಶೀಲನೆ ಹಿನ್ನಲೆಯಲ್ಲಿ ಹಣಕಾಸು ಸಚಿವಾಲಯವು ನವೆಂಬರ್ 2017 ರಲ್ಲಿ ರೂಪಿಸಿದ ಮಂತ್ರಿ ಮಂಡಲ ಸಮಿತಿಯು ಸಿಬಿಡಿಸಿಗಳನ್ನು ಭಾರತದಲ್ಲಿ ಫಿಯೆಟ್ ಹಣದ ಡಿಜಿಟಲ್ ರೂಪದಲ್ಲಿ ಪರಿಚಯಿಸಬೇಕೆಂದು ಪ್ರಸ್ತಾಪಿಸಿತು.


  ಆರ್‌ಬಿಐ, ಇತರ ಕೇಂದ್ರ ಬ್ಯಾಂಕುಗಳಂತೆ, ಸಿಬಿಡಿಸಿಗಳನ್ನು ಪರಿಚಯಿಸುವ ಪ್ರಯೋಜನಗಳು ಮತ್ತು ನ್ಯೂನತೆಗಳ ಕುರಿತು ಅನೇಕ ದಿನಗಳಿಂದ ಅಧ್ಯಯನ ನಡೆಸುತ್ತಿದೆ.


  ತಳಮಟ್ಟದಲ್ಲಿ ಕಾನೂನು ಅಧ್ಯಯನ


  ಪ್ರಸ್ತುತ ನಿಬಂಧನೆ, ಕಾನೂನುಗಳನ್ನು ಕಾಗದದ ಕರೆನ್ಸಿಯನ್ನು ಗಮನದಲ್ಲಿಟ್ಟುಕೊಂಡು ಬರೆಯಲಾಗುತ್ತಿರುವುದರಿಂದ, ಸಿಬಿಡಿಸಿಯ ಪರಿಚಯಕ್ಕೆ ಕಾನೂನು ಚೌಕಟ್ಟಿನ ಅನಿವಾರ್ಯವಿದೆ. 2011 ರ ನಾಣ್ಯಗಳ ಕಾಯ್ದೆ, ಫೆಮಾ, 1999, ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರಂತಹ ಇತರ ಕಾಯಿದೆಗಳಿಗೆ ಹೊಂದಾಣಿಕೆ ಅಗತ್ಯ ಎಂದು ಅವರು ಹೇಳಿದರು.


  ಸಿಬಿಡಿಸಿಯ ಪ್ರಸ್ತುತಿಯು ಹೆಚ್ಚು ಬಲವಾದ, ಪ್ರಭಾವಶಾಲಿ, ವಿಶ್ವಾಸಾರ್ಹ, ನಿರ್ವಹಿಸಿದ ಮತ್ತು ಕಾನೂನುಬದ್ಧವಾದ ಟೆಂಡರ್ ಆಧಾರಿತ ಪಾವತಿಗೆ ಪ್ರೇರೇಪಿಸುತ್ತದೆ. ಇದನ್ನು ಜಾರಿಗೆ ತಂದರೂ ಇಲ್ಲೂ ಸಹ ಇದಕ್ಕೆ ಸಂಬಂಧಿಸಿದ ಒಂದಷ್ಟು ಅಪಾಯಗಳಿವೆ. ಆದರೂ ಅವುಗಳನ್ನು ಜಾಗ್ರತೆಯಿಂದ ನಿರ್ವಹಿಸಬೇಕು. ನಾವುಗಳು ಸಿಬಿಡಿಸಿ ಕಡೆಗೆ ವಾಲುತ್ತಿದ್ದಂತೆ, ಪಾವತಿಗಳ ಚೌಕಟ್ಟುಗಳಲ್ಲಿ ಭಾರತದ ಆಡಳಿತಾತ್ಮಕ ಪಾತ್ರವನ್ನು ಒತ್ತಿಹೇಳುವ ಅಗತ್ಯ ಪ್ರಗತಿಯನ್ನು ನಾವು ಸಾಧಿಸಬೇಕು ಇದು ಆರ್‌ಬಿಐನ ಕಾರ್ಯವಾಗಿದೆ ಎಂದು ಅವರು ಹೇಳಿದರು.


  ಇದನ್ನೂ ಓದಿ: UP: ಅಧಿಕಾರಕ್ಕೆ ಬಂದರೆ ರಾಮ ಮಂದಿರ ತ್ವರಿತ ನಿರ್ಮಾಣ ಎಂದ ಬಿಎಸ್​ಪಿ

  ಸದ್ಯ ಎಲ್ಲವೂ ಡಿಜಟಲೀಕರಣವಾಗಿರುವುದರಿಂದ ಜಾಗತಿಕವಾಗಿ ಕಾಗದದ ಹಣದ ಬದಲಿಗೆ ಡಿಜಿಟಲ್ ನಗದು ಎಲ್ಲರಿಗೂ ಸರಳ ಆರ್ಥಿಕ ಚಟುವಟಿಕೆಗೆ ಅನುಕೂಲಕಾರಿಯಾಗಿದೆ. ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಯ ಅವಲಂಬನೆಯಿಂದ ವಿಳಂಬ ಕಡಿಮೆಯಾಗುವುದರ ಜೊತೆಗೆ ತೆರಿಗೆ ವಂಚನೆಯಂಥ ಹಣದ ಸೋರಿಕೆಯನ್ನು ತಡೆಯಬಹುದಾಗಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: