• Home
  • »
  • News
  • »
  • national-international
  • »
  • Leopard: 70 ವರ್ಷಗಳ ಬಳಿಕ ಚಿರತೆಗಳಿಗೆ ನೆಲೆಯಾಗಲಿದೆ ಭಾರತ; ಆಗಸ್ಟ್ ನಲ್ಲಿ ದೇಶಕ್ಕೆ ಬರಲಿವೆಯಂತೆ ನಮೀಬಿಯಾದ 8 ಚಿರತೆಗಳು

Leopard: 70 ವರ್ಷಗಳ ಬಳಿಕ ಚಿರತೆಗಳಿಗೆ ನೆಲೆಯಾಗಲಿದೆ ಭಾರತ; ಆಗಸ್ಟ್ ನಲ್ಲಿ ದೇಶಕ್ಕೆ ಬರಲಿವೆಯಂತೆ ನಮೀಬಿಯಾದ 8 ಚಿರತೆಗಳು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಚಿರತೆಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಭಾರತದಲ್ಲಿ ವನ್ಯಜೀವಿ ಸಂಪತ್ತಿನ ಅಭಿವೃದ್ಧಿಯಾಗುತ್ತಿದೆ. ಅಳಿವಿನಂಚಿನ ಪ್ರಾಣಿಗಳು ಎಂದು ಘೋಷಣೆಯಾದ 70 ವರ್ಷಗಳ ಬಳಿಕ ಮೊದಲ ಬಾರಿಗೆ ದೇಶದ ಕಾಡುಗಳು ಚಿರತೆಗಳಿಗೆ ನೆಲೆಯಾಗುತ್ತಿವೆ.

  • Share this:

ಚಿರತೆಗಳ (Leopard) ಸಂಖ್ಯೆ ಹೆಚ್ಚಳವಾಗುತ್ತಿದ್ದು, ಭಾರತದಲ್ಲಿ ವನ್ಯಜೀವಿ ಸಂಪತ್ತಿನ ಅಭಿವೃದ್ಧಿಯಾಗುತ್ತಿದೆ. ಅಳಿವಿನಂಚಿನ ಪ್ರಾಣಿಗಳು (Animal) ಎಂದು ಘೋಷಣೆಯಾದ 70 ವರ್ಷಗಳ ಬಳಿಕ ಮೊದಲ ಬಾರಿಗೆ ದೇಶದ ಕಾಡುಗಳು ಚಿರತೆಗಳಿಗೆ ನೆಲೆಯಾಗುತ್ತಿವೆ. ಅಳಿವಿನಂಚಿಗೆ ತಳ್ಳಲ್ಪಟ್ಟು ಸುಮಾರು ಎಪ್ಪತ್ತು ವರ್ಷಗಳ ನಂತರ ಕೇಂದ್ರ ಸರ್ಕಾರವು (Central Government) ಚಿರತೆಯನ್ನು ಮತ್ತೆ ದೇಶದಲ್ಲಿ ಪರಿಚಯಿಸುವ ತನ್ನ ಯೋಜನೆಯನ್ನು ಇತ್ತೀಚೆಗಷ್ಟೇ ಘೋಷಿಸಿತ್ತು. ಈ ವರ್ಷದ ಆಗಸ್ಟ್ ವೇಳೆಗೆ ಮಧ್ಯಪ್ರದೇಶದ (Madhya Pradesh) ಕುನೋ-ಪಾಲ್ಪುರ್ ರಾಷ್ಟ್ರೀಯ ಉದ್ಯಾನವನಕ್ಕೆ (National Park) ದಕ್ಷಿಣ ಆಫ್ರಿಕಾದಿಂದ ಚಿರತೆಗಳನ್ನು ತರಲು ಭಾರತ ಸಜ್ಜಾಗಿದೆ ಎಂದು ಕೇಂದ್ರ ಪರಿಸರ ಸಚಿವಾಲಯ ತಿಂಗಳ ಹಿಂದೆ ತಿಳಿಸಿತ್ತು.


ವಿಶ್ವದಲ್ಲಿ ಚಿರತೆಗಳ ಅತಿದೊಡ್ಡ ನೆಲೆ
ಪ್ರಸ್ತುತ ಕೇಂದ್ರ ಸರ್ಕಾರದ ಯೋಜನೆ ಸದ್ಯದಲ್ಲಿಯೇ ಸಾಕಾರಗೊಳ್ಳಲಿದ್ದು, ಅವುಗಳಲ್ಲಿ ಎಂಟು ಚಿರತೆ ಆಗಸ್ಟ್ ನಲ್ಲಿ ಆಫ್ರಿಕಾದ ನಮೀಬಿಯಾದಿಂದ ಬರಲಿವೆ, ನಮೀಬಿಯಾ ವಿಶ್ವದಲ್ಲಿ ಚಿರತೆಗಳ ಅತಿದೊಡ್ಡ ನೆಲೆಯಾಗಿದೆ.


ಭಾರತದಲ್ಲಿ ಅಳಿವಿನಂಚಿನಲ್ಲಿರುವ ಏಕೈಕ ದೊಡ್ಡ ಮಾಂಸಾಹಾರಿ ಪ್ರಾಣಿ
ಚಿರತೆಯು ಭಾರತದಲ್ಲಿ ಅಳಿವಿನಂಚಿನಲ್ಲಿರುವ ಏಕೈಕ ದೊಡ್ಡ ಮಾಂಸಾಹಾರಿ ಪ್ರಾಣಿಯಾಗಿದೆ. 1952ರಲ್ಲಿ, ಭಾರತ ಸರ್ಕಾರವು ದೇಶದಲ್ಲಿ ಚಿರತೆಗಳು ಅಳಿವಿನಂಚಿನಲ್ಲಿದೆ ಎಂದು ಅಧಿಕೃತವಾಗಿ ಘೋಷಿಸಿತ್ತು. ಇದಾದ ದಶಕಗಳ ನಂತರ ಈ ದೈತ್ಯ ಪ್ರಾಣಿಗಳ ಮರಳುವಿಕೆ ಮತ್ತೆ ದೇಶದಲ್ಲಿ ಸಂಭವಿಸುತ್ತಿದೆ.


ಚಿರತೆ ವಿಶ್ವದ ಅತಿ ವೇಗದ ಭೂ ಪ್ರಾಣಿ, ಇದು ಗಂಟೆಗೆ 70 ಮೈಲುಗಳ (113 ಕಿಮೀ) ವೇಗವನ್ನು ತಲುಪುತ್ತದೆ. ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ರೆಡ್ ಲಿಸ್ಟ್ ಆಫ್ ಥ್ರೆಟೆನ್ಡ್ ಸ್ಪೀಷೀಸ್ ಅಡಿಯಲ್ಲಿ ಅಳಿವಿನಂಚಿನ ಜಾತಿಗಳೆಂದು ವರ್ಗೀಕರಿಸಲಾಗಿದೆ, ಪ್ರಪಂಚದಾದ್ಯಂತ ಕಾಡಿನಲ್ಲಿ ಕೇವಲ 7,000 ಚಿರತೆಗಳು ಮಾತ್ರ ಇವೆ ಎಂದು ಅಂಕಿಅಂಶಗಳು ಹೇಳುತ್ತವೆ.


ಆಫ್ರಿಕನ್ ಚಿರತೆಗಳ ಆಮದು
2020ರಲ್ಲಿ, ಸರ್ಕಾರದ ಮನವಿಗೆ ಪ್ರತಿಕ್ರಿಯಿಸುವಾಗ, ಸುಪ್ರೀಂ ಕೋರ್ಟ್ ಆಫ್ರಿಕನ್ ಚಿರತೆಗಳನ್ನು ಪ್ರಾಯೋಗಿಕ ಆಧಾರದ ಮೇಲೆ "ಎಚ್ಚರಿಕೆಯಿಂದ ಆಯ್ಕೆ ಮಾಡಿದ ಸ್ಥಳದಲ್ಲಿ" ಪರಿಚಯಿಸಬಹುದು ಎಂದು ಘೋಷಿಸಿತು. ಸುಪ್ರಿಂ ಆದೇಶದ ಎರಡು ವರ್ಷಗಳ ಬಳಿಕ ಪ್ರಾಣಿಗಳನ್ನು ಹೇಗೆ ಸಾಗಿಸುವುದು ಎಂಬುದರ ಕುರಿತು ಕೆಲಸ ಮಾಡಿದ ನಂತರ ಅಧಿಕಾರಿಗಳು ಹೊಸ ಒಪ್ಪಂದವನ್ನು ಘೋಷಿಸಿದರು. ಮತ್ತು ಬೇರೆ ದೇಶಗಳ ಜೊತೆ ಒಪ್ಪಂದ ಮಾಡಿಕೊಂಡು ಚಿರತೆಗಳನ್ನು ಆಮದು ಮಾಡಿಕೊಳ್ಳುವತ್ತ ಹೆಜ್ಜೆ ಹಾಕಿದರು.


ಇದನ್ನೂ ಓದಿ: Viral Video Of Dudhsagar: ಸ್ವರ್ಗ ಭೂಮಿಯನ್ನು ಭೇಟಿಯಾದಂತಿದೆ, ದೂಧ್ ಸಾಗರ್ ಜಲಪಾತದ ಮೋಹಕ ದೃಶ್ಯ!


ಪ್ರಸ್ತುತ ಮೊದಲಿಗೆ ಬರುವ ಚಿರತೆಗಳನ್ನು ಮಧ್ಯಪ್ರದೇಶ ರಾಜ್ಯದ ಕುನೊ-ಪಾಲ್ಪುರ್ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ ಒಳಗಾಗಿ ಚಿರತೆಗಳನ್ನು ತರಿಸಲು ಕೇಂದ್ರ ಯೋಜನೆ ಹಾಕಿಕೊಂಡಿದೆ. ರಾಷ್ಟ್ರವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಸಂಭ್ರಮದ ಜೊತೆ ವನ್ಯ ಜೀವಿಗಳ ಸಂಪತ್ತು ವೃದ್ಧಿಸುತ್ತಿರುವುದು ಕೂಡ ಖುಷಿ ತರುವ ವಿಚಾರವಾಗಿದೆ.


ಭಾರತದ ಪರಿಸರ ಸಚಿವ ಭೂಪೇಂದರ್ ಯಾದವ್, "ಭಾರತದಲ್ಲಿ ಅತಿವೇಗದ ಭೂಪ್ರದೇಶದ ಪ್ರಮುಖ ಪ್ರಭೇದಗಳಾದ ಚಿರತೆಗಳನ್ನು ಮರುಸ್ಥಾಪಿಸುವ ಮೂಲಕ ಸ್ವಾತಂತ್ರ್ಯದ 75 ಅದ್ಭುತ ವರ್ಷಗಳನ್ನು ಪೂರ್ಣಗೊಳಿಸಲಾಗುವುದು. ಇದು ಭೂದೃಶ್ಯದ ಪರಿಸರ ಚಲನಶೀಲತೆಯನ್ನು ಪುನರುಜ್ಜೀವನಗೊಳಿಸುತ್ತದೆ" ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.


ಚಿರತೆಗಳು ಕಣ್ಮರೆಯಾಗಲು ಕಾರಣವೇನು  
ಪ್ರಾಣಿಗಳ ಮಿಂಚಿನ ವೇಗದ ಹೊರತಾಗಿಯೂ, ಬೇಟೆಯಾಡುವುದು, ಆವಾಸಸ್ಥಾನದ ನಷ್ಟ ಮತ್ತು ಆಹಾರದ ಕೊರತೆ ಇಂದಾಗಿ ಭಾರತದಲ್ಲಿ ಚಿರತೆ ಕಣ್ಮರೆಗೆ ಕಾರಣವಾಯಿತು. ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ನಂತರ ದೇಶದಲ್ಲಿ ಅಳಿವಿನಂಚಿನಲ್ಲಿರುವ ಏಕೈಕ ದೊಡ್ಡ ಸಸ್ತನಿ ಇದಾಗಿದೆ. ಏಷಿಯಾಟಿಕ್ ಚೀತಾ ಒಂದು ಕಾಲದಲ್ಲಿ ಅರೇಬಿಯನ್ ಪೆನಿನ್ಸುಲಾದಿಂದ ಅಫ್ಘಾನಿಸ್ತಾನದವರೆಗಿನ ಪ್ರದೇಶಗಳಲ್ಲಿ ಕಂಡುಬರುತ್ತಿತ್ತು. ಆದರೆ ಕಾಲಕ್ರಮೇಣ ಈ ಚಿರತೆಗಳು ಅವನತಿಯತ್ತ ಸಾಗಿದವು. ಏಷಿಯಾಟಿಕ್ ಚೀತಾ ಈಗ ಇರಾನ್‌ನಲ್ಲಿ ಮಾತ್ರ ಉಳಿದುಕೊಂಡಿದೆ ಎಂದು ತಿಳಿದುಬಂದಿದೆ. 2022ರಲ್ಲಿ ಅಲ್ಲಿನ ಸರ್ಕಾರಿ ಅಧಿಕಾರಿಗಳು ಕೇವಲ 12 ಚಿರತೆಗಳು ಮಾತ್ರ ಇರುವುದಾಗಿ ತಿಳಿಸಿದ್ದರು.


ಇದನ್ನೂ ಓದಿ:  Water Police: ಇಲ್ಲಿ ನೀರಿನ ಬಳಕೆಗೂ ಇದೆ ಮಿತಿ, ಸ್ವಲ್ಪ ಯಾಮಾರಿದ್ರೂ ದಂಡ ಗ್ಯಾರೆಂಟಿ


1950ರ ದಶಕದಿಂದಲೂ ಭಾರತದಲ್ಲಿ ಚಿರತೆಯ ಸಂಖ್ಯೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳನ್ನು ಮಾಡಲಾಗಿದೆ. 1970ರ ದಶಕದಲ್ಲಿ, ಆಗಿನ ಪ್ರಧಾನಿ ಇಂದಿರಾಗಾಂಧಿ ಅವರು ಏಷ್ಯಾಟಿಕ್ ಚಿರತೆಗಳನ್ನು ನೀಡಲು ಇರಾನಿಗೆ ವಿನಂತಿಸಿದ್ದರು. ಇರಾನಿನಿಂದ ಪ್ರತಿಕ್ರಿಯೆ ಸಕಾರಾತ್ಮಕವಾಗಿದ್ದರೂ, ಭಾರತದಲ್ಲಿ ತುರ್ತು ಪರಿಸ್ಥಿತಿಯ ಘೋಷಣೆ ಮತ್ತು ಇರಾನ್ ಕ್ರಾಂತಿ, ಶಾ ಮೊಹಮ್ಮದ್ ರೆಜಾ ಪಹ್ಲವಿಯನ್ನು ಪದಚ್ಯುತಿಯಿಂದಾಗಿ ಯೋಜನೆಯು ಅರ್ಧಕ್ಕೆ ನಿಂತಿತು.


ಸದ್ಯ ದೀರ್ಘಾವಧಿಯಲ್ಲಿ ಯಶಸ್ವಿಯಾಗುವ ಚಿರತೆಗಳ ಕರೆತರುವಿಕೆಯ ಇತ್ತೀಚಿನ ಪ್ರಯತ್ನಕ್ಕೆ ಭಾರತೀಯ ಅಧಿಕಾರಿಗಳು ಉತ್ಸುಕರಾಗಿದ್ದಾರೆ.

Published by:Ashwini Prabhu
First published: