RIL AGM 2020: ‘ಕೋವಿಡ್​​-19 ಕ್ರೈಸಿಸ್​​ಗೆ ಮುನ್ನವೇ ಭಾರತ ಅತೀ ವೇಗದಿಂದ ಅಭಿವೃದ್ದಿ ಸಾಧಿಸುತ್ತದೆ‘ - ಮುಕೇಶ್​​ ಅಂಬಾನಿ

ಕೋವಿಡ್​​-19 ಸಂಕಷ್ಟ ಮುನ್ನವೇ ಭಾರತ ಅತೀಹೆಚ್ಚು ವೇಗದಿಂದ ಅಭಿವೃದ್ಧಿ ಸಾಧಿಸುತ್ತದೆ. ಹೀಗಾಗಿ ರಿಲಾಯನ್ಸ್ ಇಂಡಸ್ಟ್ರೀಸ್‌ನ 43ನೇ ವಾರ್ಷಿಕ ಸಭೆಗೆ ಎಲ್ಲರನ್ನು ಸಂತೋಷದಿಂದ ಸ್ವಾಗತಿಸುತ್ತೇನೆ ಎಂದು ಮುಖೇಶ್​ ಅಂಬಾನಿ.

ಮುಖೇಶ್​ ಅಂಬಾನಿ

ಮುಖೇಶ್​ ಅಂಬಾನಿ

  • Share this:
    ಭಾರತದ ಶ್ರೀಮಂತ ಉದ್ಯಮಿ ಮುಕೇಶ್​​ ಅಂಬಾನಿ ನೇತೃತ್ವದ ರಿಲಾಯನ್ಸ್ ಇಂಡಸ್ಟ್ರೀಸ್​ನ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಶುರುವಾಗಿದೆ. ಜಗತ್ತಿನ ಅತ್ಯಂತ ದೊಡ್ಡ ಹೂಡಿಕೆದಾರರನ್ನು ಆಕರ್ಷಿಸುವ ಮೂಲಕ ಬಹಳ ಸದ್ದು ಮಾಡಿದ್ದ ರಿಲಿಯಾನ್ಸ್​ ಈಗ ಮತ್ತೊಮ್ಮೆ ಎಜಿಎಂ ಸಭೆ ಮೂಲಕ ದೇಶದ ಗಮನ ಸೆಳೆಯುತ್ತಿದೆ. ಈ ಸಭೆಯಲ್ಲಿ ಆನ್​ಲೈನ್​​ ಮೂಲಕವೇ 500 ಸ್ಥಳಗಳಿಂದ 1 ಲಕ್ಷಕ್ಕೂ ಹೆಚ್ಚು ಷೇರುದಾರರು ಒಮ್ಮೆಗೇ ಲಾಗ್ ಇನ್ ಆಗಿ ಭಾಗಿಯಾಗಿದ್ದಾರೆ. ಈ ವಿನೂತನ ತಂತ್ರಜ್ಞಾನದ ಮುಖೇನ ನಡೆಯುತ್ತಿರುವ ಸಭೆಯನ್ನುದ್ದೀಶಿಸಿ ಮುಕೇಶ್​​ ಅಂಬಾನಿ ಮಾತನಾಡಿದರು.

    ಕೋವಿಡ್​​-19 ಸಂಕಷ್ಟ ಮುನ್ನವೇ ಭಾರತ ಅತೀಹೆಚ್ಚು ವೇಗದಿಂದ ಅಭಿವೃದ್ಧಿ ಸಾಧಿಸುತ್ತದೆ. ಹೀಗಾಗಿ ರಿಲಾಯನ್ಸ್ ಇಂಡಸ್ಟ್ರೀಸ್‌ನ 43ನೇ ವಾರ್ಷಿಕ ಸಭೆಗೆ ಎಲ್ಲರನ್ನು ಸಂತೋಷದಿಂದ ಸ್ವಾಗತಿಸುತ್ತೇನೆ ಎಂದರು ಮುಕೇಶ್​ ಅಂಬಾನಿ.

    ಇನ್ನು, ಕೋವಿಡ್​-19 ಕ್ರೈಸಿಸ್​​ ಮಾವನನ ಆಧುನಿಕ ಇತಿಹಾಸದಲ್ಲೇ ದುರಂತ ಘಟನೆ ಎನ್ನಬಹುದು. ಆದರೂ, ಭಾರತ ಸೇರಿದಂತೆ ಜಗತ್ತಿನ ಎಲ್ಲಾ ದೇಶಗಳು ಕೊರೋನಾ ಕ್ರೈಸಿಸ್​ಗೆ ಮುನ್ನವೇ ಸ್ವಾವಲಂಬನೆ ಸಾಧಿಸುತ್ತವೆ ಎನ್ನುವುದರಲ್ಲಿ ನಂಬಿಕೆ ಇದೆ. ಈ ಸಂಕಷ್ಟ ಕಾಲವೇ ಮುಂದೊಂದು ದಿನ ಹೊಸ ಅವಕಾಶಗಳನ್ನು ನೀಡುತ್ತಿದೆ ಎಂದು ರಿಲಾಯನ್ಸ್​ ಇಂಡಸ್ಟ್ರೀ ಮುಖ್ಯಸ್ಥ ಅಂಬಾನಿ ಹೇಳಿದರು.


    ಇದನ್ನೂ ಓದಿ: RIL AGM 2020 - ರಿಲಾಯನ್ಸ್ ಎಜಿಎಂ; ಮೊದಲ ಬಾರಿಗೆ ಆನ್​ಲೈನ್​ನಲ್ಲಿ ಮಹಾಸಭೆ; Chatbot ಪ್ರಯೋಗ

    ಫೇಸ್​ಬುಕ್​ನದ್ದು ಸೇರಿದಂತೆ 13 ಹೂಡಿಕೆ ಒಪ್ಪಂದಗಳಿಂದ ರಿಲಾಯನ್ಸ್ 1.18 ಲಕ್ಷ ಕೋಟಿ ರೂ ಬಂಡವಾಳ ಸಂಗ್ರಹಿಸಿದೆ. ಇದಕ್ಕಾಗಿ ಸಂಸ್ಥೆಯ ಡಿಜಿಟಲ್ ವ್ಯವಹಾರದ ಶೇ. 25.24 ಪಾಲು ಮಾರಿದೆ. ಹಾಗೆಯೇ, ಹಾಲಿ ಷೇರುದಾರರಿಗೆ ತನ್ನ ಷೇರುಗಳನ್ನ (ರೈಟ್ಸ್ ಇಷ್ಯೂ) ಮಾರುವ ಮೂಲಕ 53,124 ಕೋಟಿ ರೂ ಹಣ ಸಂಗ್ರಹಿಸಿದೆ. ಇದರ ಜೊತೆಗೆ ಕಳೆದ ವರ್ಷ ತನ್ನ ಪೆಟ್ರೋಲಿಯಂ ವ್ಯವಹಾರದಲ್ಲಿ ಶೇ. 49ರಷ್ಟು ಪಾಲನ್ನು ಬಿಪಿ ಸಂಸ್ಥೆಗೆ ಮಾರುವ ಮೂಲಕ 7 ಸಾವಿರ ಕೋಟಿ ರೂ ಆದಾಯ ಗಳಿಸಿತ್ತು. ಇವೆಲ್ಲವೂ ಸೇರಿ 1.75 ಲಕ್ಷ ಕೋಟಿಗೂ ಅಧಿಕ ಹಣವನ್ನು ಮುಕೇಶ್ ಅಂಬಾನಿ ಮಾಲಕತ್ವದ ಸಂಸ್ಥೆ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕಳೆದ ವರ್ಷದ ಸಭೆಯಲ್ಲಿ ತನ್ನ ಷೇರುದಾರರಿಗೆ ನೀಡಿದ್ದ ವಾಗ್ದಾನವನ್ನು ಅಂಬಾನಿ ಉಳಿಸಿಕೊಂಡಿದ್ದಾರೆ.
    Published by:Ganesh Nachikethu
    First published: