ಹೊಸ ವರ್ಷಕ್ಕೆ ವಿಶ್ವವ್ಯಾಪಿ 4 ಲಕ್ಷ ಶಿಶುಗಳ ಜನನ: ನಂ.1 ಸ್ಥಾನದಲ್ಲಿ ಭಾರತ....!

2020ರ ಹೊಸ ವರ್ಷಕ್ಕೆ ಕಾಲಿಡುತ್ತಿದಂತೆ ಎಷ್ಟು ಶಿಶುಗಳು ಜನಿಸಿವೆ ಎಂಬ ಅಂಕಿ ಅಂಶವನ್ನು ಯುನೈಟೆಡ್ ನೇಷನ್ಸ್​ ಚಿಲ್ಡ್ರನ್ ಫಂಡ್ ಸಂಸ್ಥೆ (UNICEF) ವರದಿ ಬಿಡುಗಡೆ ಮಾಡಿದೆ. ಜ.1ರಂದು ಈ ಎಂಟು ದೇಶದಲ್ಲಿ ಅತಿಹೆಚ್ಚು ಮಕ್ಕಳು ಜನಿಸಿವೆ ಎಂದು ಯುನಿಸೆಫ್​ ತಿಳಿಸಿದೆ.

Seema.R | news18-kannada
Updated:January 2, 2020, 1:43 PM IST
ಹೊಸ ವರ್ಷಕ್ಕೆ ವಿಶ್ವವ್ಯಾಪಿ 4 ಲಕ್ಷ ಶಿಶುಗಳ ಜನನ: ನಂ.1 ಸ್ಥಾನದಲ್ಲಿ ಭಾರತ....!
ಸಾಂದರ್ಭಿಕ ಚಿತ್ರ
  • Share this:
ಹೊಸ ವರ್ಷದ ಸಂಭ್ರಮದಂದೇ ಮನಗೆ ಹೊಸ ಸದಸ್ಯನ ಆಗಮನವಾಗುವುದು ಎಂದರೇ ನಿಮ್ಮ ಸಂಭ್ರಮ ದುಪ್ಪಟ್ಟುಗೊಂಡಂತೆ. ಇದೇ ಕಾರಣಕ್ಕಾಗಿ ಹೊಸ ಹೊರ್ಷದಂದೇ ಹಲವು ತಾಯಂದಿರು ತಮ್ಮ ಮಕ್ಕಳ ಆಗಮನ ಎದುರು ನೋಡುತ್ತಾರೆ. ಅದರಲ್ಲಿಯೂ ಈ ವರ್ಷ 2020 ಆಗಿರುವುದು ಇನ್ನಷ್ಟು ಗಮನಸೆಳೆಯುವಂತೆ ಮಾಡಿದೆ.

ಈ ಬಾರಿ ಹೊಸ ವರ್ಷದಂದು ವಿಶ್ವದಾದ್ಯಂತ 4 ಲಕ್ಷ ಮಕ್ಕಳು ಜನಿಸಿದ್ದಾರೆ. ಇದರಲ್ಲಿ ಭಾರತದಲ್ಲಿಯೇ ಅತಿ ಹೆಚ್ಚು ಮಕ್ಕಳು ಜನನವಾಗಿರುವುದು. ಭಾರತದಲ್ಲಿ ಹೊಸ ವರ್ಷದಂದು 67.385 ಮಕ್ಕಳು ಜನಿಸಿದರೆ, ಚೀನಾದಲ್ಲಿ 42.669 ಮಕ್ಕಳು ಜನಿಸಿದ್ದಾರೆ.

2020ರ ಹೊಸ ವರ್ಷಕ್ಕೆ ಕಾಲಿಡುತ್ತಿದಂತೆ ಎಷ್ಟು ಶಿಶುಗಳು ಜನಿಸಿವೆ ಎಂಬ ಅಂಕಿ ಅಂಶವನ್ನು ಯುನೈಟೆಡ್ ನೇಷನ್ಸ್​ ಚಿಲ್ಡ್ರನ್ ಫಂಡ್ ಸಂಸ್ಥೆ (UNICEF) ವರದಿ ಬಿಡುಗಡೆ ಮಾಡಿದೆ. ಜ.1ರಂದು ಈ ಎಂಟು ದೇಶದಲ್ಲಿ ಅತಿಹೆಚ್ಚು ಮಕ್ಕಳು ಜನಿಸಿವೆ ಎಂದು ಯುನಿಸೆಫ್​ ತಿಳಿಸಿದೆ.

ಭಾರತದಲ್ಲಿ (67.385), ಚೀನಾ (46,299), ನೈಜೀರಿಯಾ (26,039), ಪಾಕಿಸ್ತಾನ (16,787), ಇಂಡೋನೇಷಿಯಾ (13020). ಅಮೆರಿಕ (10.452, ದಿ ಡೆಮಾಕ್ರಟಿಕ್​ ರಿಪಬ್ಲಿಕ್​ ಆಫ್​ ಕಾಂಗೋ (10.247) ಮತ್ತು ಇಥಿಯೋಪಿಯಾ (8493) ಮಕ್ಕಳು ಜನಿಸಿವೆ.

ಈ ಮಕ್ಕಳಲ್ಲಿ ಅವಧಿ ಪೂರ್ವವಾಗಿ ಜನಿಸಿದೆ 2.5 ಮಿಲಿಯನ್​ ಮಕ್ಕಳು ಹುಟ್ಟಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿವೆ. ಆದಾಗ್ಯೂ ಕಳೆದ ಮೂರು ದಶಕಗಳಿಗೆ ಹೋಲಿಸಿ ನೋಡಿದರೆ ಶಿಶು ಜನನ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಶಿಶು ಮರಣ ಸಂಖ್ಯೆ ಕಳೆದ 5 ವರ್ಷಗಳಲ್ಲಿ ಕಡಿಮೆಯಾಗಿದೆ.

ಇದನ್ನು ಓದಿ: ಗ್ರಾಹಕರಿಗೆ ಸಿಹಿಸುದ್ದಿ: ಈರುಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ; ಒಂದು ಕೆಜಿಗೆ ಎಷ್ಟು ಗೊತ್ತೇ?

ಭಾರತದ ಮಕ್ಕಳ ಜನಸಂಖ್ಯೆ ಗಮನಿಸಿದಾಗ 2027ರ ಹೊತ್ತಿಗೆ ಭಾರತ ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಲಿದೆ, 2019 ರಿಂದ 2053ರವೆಗೆ 273 ಮಿಲಿಯನ್​ ಸಂಖ್ಯೆ ಹೆಚ್ಚಾಗಬಹುದು. ನೈಜೀರಿಯಾ ಜನಸಂಖ್ಯೆ ಕೂಡ ಶೇ 200ರಷ್ಟು ಹೆಚ್ಚಾಗಲಿದೆ, ಈ ಎರಡು ದೇಶಗಳ ಜನಸಂಖ್ಯೆ ವಿಶ್ವದ ಜನಸಂಖ್ಯೆಯಲ್ಲಿಯೇ ಶೇ 23ರಷ್ಟು ಆಗಲಿದೆ, ಸದ್ಯ ಚೀನಾ 1.43 ಬಿಲಿಯನ್​ ಜನಸಂಖ್ಯೆ ಹೊಂದಿದ್ದರೆ, ಭಾರತ 1.37 ಬಿಲಿಯನ್​ ಜನ ಸಂಖ್ಯೆ ಹೊಂದಿದೆ.
Published by: Seema R
First published: January 2, 2020, 12:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading