• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • The Vial: ಕೋವಿನ್ ಆ್ಯಪ್ ಗೇಮ್ ಚೇಂಜರ್ ಆಯ್ತು! 'ದಿ ವೈಲ್'‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ

The Vial: ಕೋವಿನ್ ಆ್ಯಪ್ ಗೇಮ್ ಚೇಂಜರ್ ಆಯ್ತು! 'ದಿ ವೈಲ್'‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ

ನರೇಂದ್ರ ಮೋದಿ

ನರೇಂದ್ರ ಮೋದಿ

ಹಿಸ್ಟರಿ TV18ನ ಸಾಕ್ಷ್ಯಚಿತ್ರ ದಿ ವೈಲ್ - ಇಂಡಿಯಾಸ್ ವ್ಯಾಕ್ಸಿನ್ ಸ್ಟೋರಿಯಲ್ಲಿ ಕೋವಿಡ್-19 ವಿರುದ್ಧ ಭಾರತದ ಹೋರಾಟದಲ್ಲಿ CoWin ಆ್ಯಪ್ ವಹಿಸಿದ ಪಾತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • Share this:

ಮುಂಬೈ: ವಿಶ್ವವನ್ನೇ ಎರಡು ವರ್ಷಗಳ ಕಾಲ ಕೋವಿಡ್-19 (Covid 19) ಎಂಬ ಮಾರಕ ವೈರಸ್ ಭಯಂಕರವಾಗಿ ಕಾಡಿತ್ತು. ಭಾರತ, ಅಮೆರಿಕಾ, ಬ್ರೆಜಿಲ್ ಸೇರಿದಂತೆ ಹಲವರು ರಾಷ್ಟ್ರಗಳು ಕೊರೊನಾ ವೈರಸ್​ನಿಂದ (Coronavirus) ಭಾರಿ ಅನಾಹುತ ಅನುಭವಿಸಿದ್ದವು. ಆದರೆ ಭಾರತದಂತಹ (India) ಒಂದುವರೆ ಶತಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಕೋವಿಡ್​ ನಿಯಂತ್ರಣಕ್ಕೆ ಲಸಿಕೆ ನೀಡುವುದು ದೊಡ್ಡ ಸವಾಲಿನ ಕೆಲಸವಾಗಿತ್ತು. ಆದರೂ ನೂರು ಕೋಟಿ ದಾಟಿರುವ ಜನಸಂಖ್ಯೆಗೆ ಲಸಿಕೆ ಹಾಕುವ ಬೃಹತ್ ಕಾರ್ಯಕ್ರಮಕ್ಕೆ COWIN ಪ್ಲಾಟ್‌ಫಾರ್ಮ್‌ ಪ್ರಮುಖ ಪಾತ್ರವಹಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಟಿವಿ 18ನ ದಿ ವೈಲ್ - ಇಂಡಿಯಾಸ್ ವ್ಯಾಕ್ಸಿನ್ ಸ್ಟೋರಿಯಲ್ಲಿ  ಶ್ಲಾಘಿಸಿದ್ದಾರೆ.


ಹಿಸ್ಟರಿ TV18ನ ಸಾಕ್ಷ್ಯಚಿತ್ರ The Vial – India’s Vaccine Storyಯಯಲ್ಲಿ ಕಾಣಿಸಿಕೊಂಡಿರು ಪ್ರಧಾನಿ ಮೋದಿ  ಕೋವಿಡ್-19 ವಿರುದ್ಧ ಭಾರತದ ಹೋರಾಟದಲ್ಲಿ CoWin ಆ್ಯಪ್​ ವಹಿಸಿದ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಸುಲಭವಾಗಿ ಲಸಿಕೆ ತಲುಪಲು ಕೋವಿನ್ ಮಹತ್ವದ ಪಾತ್ರ


COWIN ​ನಂತಹ ಪ್ಲಾಟ್‌ಫಾರ್ಮ್‌ಗೆ ನಾವು ಧನ್ಯವಾದ ಹೇಳಬೇಕು. ಶತಕೋಟಿ ದಾಟಿರುವ ದೇಶದಲ್ಲಿ ಜನರು ಎಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕು, ಅಪಾಯದ ಸಂದರ್ಭದಲ್ಲಿ  ಜನಸಂದಣಿಯಾಗದಂತೆ ಲಸಿಕಾ ಕೇಂದ್ರವನ್ನು ಯಾವ ಸಮಯದಲ್ಲಿ ತಲುಪಬೇಕು ಎಂಬುದನ್ನು ಸುಲಭವಾಗಿ  ಜನರೇ ನೋಡುವುದಕ್ಕೆ ಈ ಆ್ಯಪ್​ ಅವಕಾಶ ಮಾಡಿಕೊಟ್ಟಿತು.  ಈ ರೀತಿಯ ವ್ಯವಸ್ಥೆ ಮಾಡಿಕೊಟ್ಟಿದ್ದ ಏಕೈಕ ದೇಶ ಭಾರತವಾಗಿತ್ತು. ಮೊದಲ ಡೋಸ್​ ನಂತರ ಎರಡನೇ ಡೋಸ್​ ಯಾವಾಗ ತೆಗೆದುಕೊಳ್ಳಬೇಕು ಎಂಬ ವಿವರಗಳನ್ನು ಕೋವಿನ್​​ ನೀಡುತ್ತಿತ್ತು. ಕೋವಿಡ್​ ಬಿಕ್ಕಟ್ಟಿನ ಸಂದರ್ಭದಲ್ಲಿ ತಂತ್ರಜ್ಞಾನವನ್ನು ಭಾರತ ಸಮರ್ಥವಾಗಿ ಬಳಸಿಕೊಳ್ಳಲಾಗಿದೆ ಎಂದು ಮೋದಿ ಸ್ಮರಿಸಿದ್ದಾರೆ.


ಇದನ್ನೂ ಓದಿ:  The Vial: ಸಾಕ್ಷ್ಯಚಿತ್ರಕ್ಕೆ ದನಿಯಾಗಿದ್ದೇಕೆ ಮನೋಜ್ ಬಾಜಪೇಯಿ? ಅನುಭವ ಹಂಚಿಕೊಂಡ ಬಾಲಿವುಡ್ ನಟ


ಕೋವಿಡ್​ ಲಸಿಕೆ ತಯಾರಿಸುವುರಿಂದ ಜನರಿಗೆ ತಲುಪುವವರೆಗೆ ವಿವರ


ಹೆಸರಾಂತ ನಟ ಮನೋಜ್ ಬಾಜಪೇಯಿ ಧ್ವನಿ ನೀಡಿರುವ The Vial ಸಾಕ್ಷ್ಯಚಿತ್ರ ಕೋವಿಡ್​ 19 ಲಸಿಕೆಯನ್ನು ತಯಾರಿಸುವ ಒಳಗಿನ ಕಥೆಯನ್ನು ಜೀವಂತಗೊಳಿಸಿದೆ. ಲಸಿಕೆ ಅಭಿವೃದ್ಧಿಪಡಿಸುವಲ್ಲಿ  ಮತ್ತು ವಿಶಾಲ ದೇಶಕ್ಕೆ ತಲುಪಿಸುವಲ್ಲಿ ಭಾರತದ ಯಶಸ್ಸಿನ ಹಿಂದಿನ ಕಥೆಯನ್ನು ಹಂತ ಹಂತವಾಗಿ ಬಿಚ್ಚಿಟ್ಟಿದೆ.


50ಕ್ಕೂ ಹೆಚ್ಚಿನ ರಾಷ್ಟ್ರಗಳಿಂದ ಕೋವಿನ್​ ಆ್ಯಪ್​ ಬಗ್ಗೆ ಆಸಕ್ತಿ


ಕೋವಿನ್​ ಆ್ಯಪ್​ಅನ್ನು ಪಾರದರ್ಶಕವಾಗಿ ಮಾಡಲಾಗಿತ್ತು. ಇದರಲ್ಲಿ ವಿವಿಐಪಿ ಯಿಂದ ಸಾಮಾನ್ಯ ಜನರು ಕೂಡ ಅದೇ ಡ್ಯಾಶ್​ ಬೋರ್ಡ್​ ಅನ್ನು ನೋಡುತ್ತಿದ್ದರು. ಆ ಸಂದರ್ಭದಲ್ಲಿ ಮಾಹಿತಿ ಒದಗಿಸುವುದು ಬಹಳ ಮುಖ್ಯವಾಗಿತ್ತು. ಕೆನಡಾ, ಮೆಕ್ಸಿಕೋ, ನೈಜೀರಿಯಾ ಮತ್ತು ಪನಾಮಾ ಸೇರಿದಂತೆ ಸುಮಾರು 50 ದೇಶಗಳು ತಮ್ಮ ವ್ಯಾಕ್ಸಿನೇಷನ್ ಡ್ರೈವ್​ ನಡೆಸಲು CoWIN ನಂತಹ ವ್ಯವಸ್ಥೆಯನ್ನು ಹೊಂದುವುದಕ್ಕೆ ಆಸಕ್ತಿ ತೋರಿಸಿದ್ದವು. ಭಾರತ ಕೂಡ ಮೂಲ ಸಾಫ್ಟ್‌ವೇರ್ ಅನ್ನು ಉಚಿತವಾಗಿ ಇತರೆ ದೇಶಗಳೊಂದಿಗೆ ಹಂಚಿಕೊಳ್ಳಲು ಸಿದ್ಧವಾಗಿದೆ ಎಂದು ಸಾಕ್ಷ್ಯ ಚಿತ್ರದಲ್ಲಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಡಾ.ಆರ್.ಎಸ್.ಶರ್ಮಾಹೇಳಿದ್ದಾರೆ.


COWIN ಅನ್ನು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಸಿಇಒ ಮಾರ್ಕ್ ಸುಜ್ಮಾನ್ ಸಹ ಶ್ಲಾಘಿಸಿದ್ದಾರೆ. " CoWIN ಅಪ್ಲಿಕೇಶನ್ ಜಾಗತಿಕವಾಗಿ ಮಾದರಿಯಾಗಿದೆ., ಆಫ್ರಿಕಾ ಸೇರಿದಂತೆ ಇತರ ದೇಶಗಳು ಈ ಕಠಿಣ ಸಂದರ್ಭದಲ್ಲಿ ಆರೋಗ್ಯಕ್ಕಾಗಿ ತಮ್ಮದೇ ಆದ ಮಧ್ಯಸ್ಥಿಕೆಗಳನ್ನು ಹೇಗೆ ತೆಗೆದುಕೊಳ್ಳಬಹುದು ಮತ್ತು ಅಭಿವೃದ್ಧಿಪಡಿಸಬಹುದು ಎಂಬುದನ್ನು ಅದು ತೋರಿಸುವ ಸಾಮರ್ಥ್ಯವನ್ನು ಹೊಂದಿದೆ  " ಎಂದು ಹೇಳಿದ್ದಾರೆ.




ಕೋವಿಡ್​ ಲಸಿಕೀಕರಣದ ಬಗ್ಗೆ ಮಾಹಿತಿ


The Vial 60 ನಿಮಿಷಗಳ ಸಾಕ್ಷ್ಯಚಿತ್ರವಾಗಿದ್ದು, ಇದರಲ್ಲಿ ಮೊದಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಣಿಸಲಿದ್ದು, ಅವರು ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ವಿಜಯದ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.


ಸಾಕ್ಷ್ಯಚಿತ್ರವು ಕೋವಿಶೀಲ್ಡ್​ ಲಸಿಕೆಯ ಅಭಿವೃದ್ಧಿಯನ್ನು ವಿವರಿಸುತ್ತದೆ. ಲಸಿಕೆ ತಯಾರಿಸಿದ ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ  ಬಗ್ಗೆ ಹಾಗೂ ವಿಶ್ವದ ಎರಡು ಅತ್ಯಂತ ಪರಿಣಾಮಕಾರಿ ಲಸಿಕೆಗಳು ದೇಶದ ಬೃಹತ್ ಜನಸಂಖ್ಯೆ ತಲುಪಿದ ಬಗ್ಗೆ ವಿವಿರವಾಗಿ ತಿಳಿಸಿಕೊಡಲಿದೆ.

top videos


    ಕಾಡುಮೇಡು, ದೂರದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಲಸಿಕೆಯನ್ನು ಪೂರೈಸಲು ಭಾರತ ಸರ್ಕಾರ ಮತ್ತು ಆರೋಗ್ಯ ಕಾರ್ಯಕರ್ತರ ವಹಿಸಿದ ಪಾತ್ರಗಳ ಮೇಲೆ ಗಮನ ಸೆಳೆಯುವ ಕೆಲವು ಕೇಸ್ ಸ್ಟಡೀಸ್ ಅನ್ನು ಈ ಸಾಕ್ಷ್ಯ ಚಿತ್ರ ವಿವರಣಾತ್ಮಕವಾಗಿ ತಿಳಿಸಿಕೊಡಲಿದೆ.

    First published: