Covid Vaccination: ಕೋವಿಡ್ ಲಸಿಕೆಯಿಂದ ಭಾರತದಲ್ಲಿ 34 ಲಕ್ಷ ಜನರ ಪ್ರಾಣ ರಕ್ಷಣೆ: ಅಧ್ಯಯನ ವರದಿ

ಕೋವಿಡ್ ಲಸಿಕಾ ಅಭಿಯಾನ

ಕೋವಿಡ್ ಲಸಿಕಾ ಅಭಿಯಾನ

ಕೊರೊನಾ ಸಾಂಕ್ರಾಮಿಕ ಸೋಂಕು ಆರಂಭಿಕ ಹಂತದಲ್ಲಿ ಸೋಂಕಿತರ ಪತ್ತೆ, ಸಾಮೂಹಿಕ ಪರೀಕ್ಷೆ, ಹೋಂ ಕ್ವಾರಂಟೈನ್, ಸೂಕ್ತ ಔಷಧಗಳ ವಿತರಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆಯೂ ಸ್ಟ್ಯಾನ್‌ಫೋರ್ಡ್‌ ವಿವಿ ನಡೆಸಿದ ಈ ವರದಿಯಲ್ಲಿ ಸಮಗ್ರ ರೀತಿಯಲ್ಲಿ ಅಧ್ಯಯನ ಮಾಡಲಾಗಿದೆ.

ಮುಂದೆ ಓದಿ ...
  • Share this:

ಹೊಸದಿಲ್ಲಿ: ಕೊರೊನಾ ಸಾಂಕ್ರಾಮಿಕ (Coronacirus) ಕಾಯಿಲೆ ಇಡೀ ವಿಶ್ವವನ್ನೇ ತಲ್ಲಣಗೊಳಿಸಿತ್ತು. ಆರಂಭದಲ್ಲಿ ಚೀನಾ (China) ದೇಶದಲ್ಲಿ ಕಾಣಿಸಿಕೊಂಡಿದ್ದ ಈ ಸೋಂಕು ನಂತರ ವಿಶ್ವದಾದ್ಯಂತ ಹಬ್ಬಿ ಲಕ್ಷ ಲಕ್ಷ ಜನರ ಮಾರಣ ಹೋಮ ನಡೆಸಿತ್ತು. ಆಯಾ ದೇಶಗಳ ಸರ್ಕಾರಗಳ ನಿಯಂತ್ರಣಕ್ಕೂ ಸಿಗದೆ ಪರಿಸ್ಥಿತಿ ಮಿತಿ ಮೀರಿತ್ತು. ಈ ಮಧ್ಯೆ ಭಾರತದಂತಹ ದೊಡ್ಡ ದೇಶದಲ್ಲಿ ಕೊರೊನಾ ಅಟ್ಟಹಾಸ ಮೆರೆದರೂ, ಸಾವಿರಾರು ಜನರ ಸಾವಿಗೆ ಕಾರಣವಾದರೂ ಜಗತ್ತಿಗೆ ಹೋಲಿಸಿದರೆ ಭಾರತದಲ್ಲಿ ಕೊರೊನಾ ಆಪತ್ತು (Covid Vaccination) ದೊಡ್ಡಮಟ್ಟದಲ್ಲಿ ಉಂಟಾಗಿಲ್ಲ ಎಂದು ಹೇಳಲಾಗಿದೆ.


ಕೊರೊನಾ ಸಮಯದಲ್ಲಿ ಆಪತ್ತಿನಿಂದ ಪಾರಾಗಲು ಭಾರತದಲ್ಲಿ ನಡೆಸಿದ ಲಸಿಕಾ ಅಭಿಯಾನದಿಂದಾಗಿ ಸುಮಾರು 34 ಲಕ್ಷ ಜನರ ಜೀವವನ್ನು ಉಳಿಸಲು ಸಾಧ್ಯವಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಸ್ಟ್ಯಾನ್‌ಫೋರ್ಡ್‌ ವಿವಿ ನಡೆಸಿದ ಅಧ್ಯಯನದಲ್ಲಿ ಈ ವಿಷಯ ಬಹಿರಂಗವಾಗಿದ್ದು, ಭಾರತ ದೇಶದಲ್ಲಿ ಕೋವಿಡ್ ಲಸಿಕಾ ಅಭಿಯಾನ ನಡೆಸಿದ ಪರಿಣಾಮ 18.3 ಬಿಲಿಯನ್ ಅಮೆರಿಕ ಡಾಲರ್ ಮೌಲ್ಯದ ಆರ್ಥಿಕ ಕುಸಿತ ತಡೆಗಟ್ಟಲು ಸಾಧ್ಯವಾಗಿದೆ ಎಂದು ವರದಿ ತಿಳಿಸಿದೆ.


ಇದನ್ನೂ ಓದಿ: Pearl Farming: ಕೊರೊನಾದಿಂದ ಕೆಲಸ ಹೋಯ್ತು; 25 ಸಾವಿರ ಹೂಡಿಕೆಯಿಂದ ಯಶಸ್ವಿ ರೈತನಾದ ಸುಳ್ಯ ವ್ಯಕ್ತಿ


ಸ್ಯಾನ್‌ಫೋರ್‌ ವಿಶ್ವವಿದ್ಯಾಲಯ ಅಧ್ಯಯನ


ಸ್ಟ್ಯಾನ್‌ಫೋರ್ಡ್‌ ವಿಶ್ವ ವಿದ್ಯಾಲಯವು ‘ಭಾರತದ ಆರ್ಥಿಕತೆ ಮೇಲೆ ಕೋವಿಡ್ ಲಸಿಕಾ ಅಭಿಯಾನದ ಪರಿಣಾಮ’ ಎಂಬ ವಿಷಯದ ಮೇಲೆ ಸಂಶೋಧನಾ ವರದಿ ಪ್ರಕಟ ಮಾಡಿದ್ದು, ಕೋವಿಡ್ ಕಾಲದಲ್ಲಿ ಆದ ವಿದ್ಯಮಾನಗಳ ಬಗ್ಗೆಯೂ ಅಧ್ಯಯನ ಮಾಡಲಾಗಿದೆ. ಕೋವಿಡ್ 19 ಆಗ ತಾನೆ ಶುರುವಾಗುತ್ತಿದ್ದಾಗ ಜನವರಿ 2020ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ತುರ್ತು ಪರಿಸ್ಥಿತಿಯನ್ನು ವಿಶ್ವಾದ್ಯಂತ ಘೋಷಣೆ ಮಾಡಿತು. ಈ ವೇಳೆ ಕೊರೊನಾ ವಿರುದ್ಧ ಸಮರ ಸಾರಿದ ವಿಶ್ವವು, ಕೋವಿಡ್‌ನಿಂದ ಎದುರಾಗಬಹುದಾದ ಹಲವು ರೀತಿಯ ಆರ್ಥಿಕ, ವೈದ್ಯಕೀಯ ಸವಾಲುಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಲ್ಲಲು ವಿಶ್ವದ ಎಲ್ಲಾ ರಾಷ್ಟ್ರಗಳೂ ತಮ್ಮದೇ ಆದ ರೀತಿಯಲ್ಲಿ ಕಾರ್ಯತಂತ್ರ ರೂಪಿಸಿದವು. ಈ ಪೈಕಿ ಭಾರತದ ಕಾರ್ಯತಂತ್ರ ಫಲ ನೀಡಿತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಹೇಳಿದ್ದಾರೆ.


ಇದನ್ನೂ ಓದಿ: COVID Fear: ಕೊರೊನಾ ಭಯಕ್ಕೆ 3 ವರ್ಷಗಳ ಕಾಲ ಮಗನೊಂದಿಗೆ ಮಹಿಳೆ ಮನೆಯಲ್ಲೇ ಲಾಕ್​; ಗಂಡನಿಗೂ ನೋ ಎಂಟ್ರಿ!


ಸಮಗ್ರ ಸರ್ಕಾರ ಹಾಗೂ ಸಮಗ್ರ ಸಮಾಜ ನೀತಿ


ಸ್ಟ್ಯಾನ್‌ಫೋರ್ಡ್‌ ವಿವಿಯ ಅಮೆರಿಕ - ಏಷ್ಯಾ ತಾಂತ್ರಿಕ ನಿರ್ವಹಣಾ ಕೇಂದ್ರ ಆಯೋಜಿಸಿದ್ದ ಕೋವಿಡ್ ಲಸಿಕಾ ಅಭಿಯಾನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ನಡೆದ ಸಂವಾದದಲ್ಲಿ ವರ್ಚ್ಯುಯಲ್ ಆಗಿ ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ, ಕೋವಿಡ್ ತುರ್ತು ಪರಿಸ್ಥಿತಿ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಸಮಗ್ರ ಸರ್ಕಾರ ಹಾಗೂ ಸಮಗ್ರ ಸಮಾಜ ನೀತಿಯೊಂದಿಗೆ ಮುನ್ನಡೆಯಿತು. ಈ ವೇಳೆ ಸರ್ಕಾರವೇ ಮುಂದಾಳತ್ವ ವಹಿಸಿ ಸಮಗ್ರವಾಗಿ ಈ ಸನ್ನಿವೇಶವನ್ನು ನಿಭಾಯಿಸಲು ಕಾರ್ಯತಂತ್ರ ರೂಪಿಸಿತು ಎಂದರು.


ಕೊರೊನಾ ಸಾಂಕ್ರಾಮಿಕ ಸೋಂಕು ಆರಂಭಿಕ ಹಂತದಲ್ಲಿ ಸೋಂಕಿತರ ಪತ್ತೆ, ಸಾಮೂಹಿಕ ಪರೀಕ್ಷೆ, ಹೋಂ ಕ್ವಾರಂಟೈನ್, ಸೂಕ್ತ ಔಷಧಗಳ ವಿತರಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆಯೂ ಸ್ಟ್ಯಾನ್‌ಫೋರ್ಡ್‌ ವಿವಿ ನಡೆಸಿದ ಈ ವರದಿಯಲ್ಲಿ ಸಮಗ್ರ ರೀತಿಯಲ್ಲಿ ಅಧ್ಯಯನ ಮಾಡಲಾಗಿದೆ. ಇದಲ್ಲದೆ ಭಾರತದಲ್ಲಿ ಕಂಟೈನ್‌ಮೆಂಟ್ ಝೋನ್‌ಗಳ ಸೃಷ್ಟಿ, ವೈರಸ್ ತಡೆಯಲು ಕೈಗೊಂಡ ಕ್ರಮಗಳು, ಮೇಲಿನ ಹಂತದಿಂದ ಕೆಳಗಿನ ಹಂತದವರೆಗೂ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ಎಲ್ಲದರ ಬಗ್ಗೆಯೂ ಈ ಅಧ್ಯಯನ ವರದಿಯಲ್ಲಿ ಸಮಗ್ರ ರೀತಿಯಲ್ಲಿ ಪರಿಶೀಲನೆ ನಡೆಸಲಾಗಿದೆ.

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು