Kaali Poster: ಕೆನಡಾದಲ್ಲಿ ಸಿಗರೇಟ್ ಸೇದುವ ಕಾಳಿಮಾತೆ ಪೋಸ್ಟರ್! ತಕ್ಷಣ ತೆಗೆಯುವಂತೆ ಭಾರತ ಸೂಚನೆ

ಕಾಳಿ ದೇವಿಯ ವೇಷ ಧರಿಸಿದ ಮಹಿಳೆ ಕಾಮನಬಿಲ್ಲಿನೊಂದಿಗೆ ಸಿಗರೇಟ್ ಸೇದುತ್ತಿರುವಂತೆ ತೋರಿಸುವ ಚಿತ್ರದ ಪೋಸ್ಟರ್​ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಕಾಳಿ ಸಿನಿಮಾ ಪೋಸ್ಟರ್

ಕಾಳಿ ಸಿನಿಮಾ ಪೋಸ್ಟರ್

  • Share this:
ಕೆನಡಾ(ಜು.05): ಉತ್ತರ ಅಮೆರಿಕಾದ (America) ಟೊರೊಂಟೊದಲ್ಲಿರುವ ಅಗಾ ಖಾನ್ ಮ್ಯೂಸಿಯಂನಿಂದ ಚಲನಚಿತ್ರ ನಿರ್ಮಾಪಕಿ (Film Producer) ಲೀನಾ ಮಣಿಮೇಕಲೈ ಅವರ ಅಭಿನಯದ ಸಾಕ್ಷ್ಯಚಿತ್ರ ‘ಕಾಳಿ’ ಯ ಪೋಸ್ಟರ್ (Kaali Poster) ಅನ್ನು ತೆಗೆದುಹಾಕುವಂತೆ ಭಾರತವು ಕೆನಡಾವನ್ನು ಒತ್ತಾಯಿಸಿದೆ. ಒಟ್ಟಾವಾದಲ್ಲಿರುವ ಭಾರತದ ಹೈಕಮಿಷನ್ ಕೆನಡಾ ಸರ್ಕಾರ (Canada Govt) ಮತ್ತು ಮ್ಯೂಸಿಯಂನಲ್ಲಿ ನಡೆಯುತ್ತಿರುವ 'ಅಂಡರ್ ದಿ ಟೆಂಟ್' ಕಾರ್ಯಕ್ರಮದ ಆಯೋಜಕರು ಕಾಳಿ ದೇವಿಯ ವೇಷ ಧರಿಸಿದ ಮಹಿಳೆ ಕಾಮನಬಿಲ್ಲಿನೊಂದಿಗೆ ಸಿಗರೇಟ್ ಸೇದುತ್ತಿರುವಂತೆ ತೋರಿಸುವ ಚಿತ್ರದ ಪೋಸ್ಟರ್  (Poster) ಅನ್ನು ರಿಮೂವ್ ಮಾಡುವಂತೆ ಒತ್ತಾಯಿಸಿದರು. LGBTQIA (ಲೆಸ್ಬಿಯನ್, ಗೇ, ದ್ವಿಲಿಂಗಿ, ಟ್ರಾನ್ಸ್ಜೆಂಡರ್, ಕ್ವೀರ್, ಇಂಟರ್ಸೆಕ್ಸ್, ಅಲೈಂಗಿಕ) ಸಮುದಾಯವನ್ನು ಪ್ರತಿನಿಧಿಸುವ ಧ್ವಜದ ಜೊತೆ ಕಾಳಿ ಸಿಗರೇಟ್ ಸೇದುವ ದೃಶ್ಯ (Scene) ಪೋಸ್ಟರ್​ನಲ್ಲಿದೆ.

ಅಗಾಖಾನ್‌ನಲ್ಲಿ ಟೆಂಟ್ ಯೋಜನೆಯ ಭಾಗವಾಗಿ ಪ್ರದರ್ಶಿಸಲಾದ ಚಿತ್ರದ ಪೋಸ್ಟರ್‌ನಲ್ಲಿ ಹಿಂದೂ ದೇವರನ್ನು ಅಗೌರವವಾಗಿ ಚಿತ್ರಿಸಿರುವ ಬಗ್ಗೆ ಕೆನಡಾದ ಹಿಂದೂ ಸಮುದಾಯದ ಮುಖಂಡರಿಂದ ನಮಗೆ ದೂರುಗಳು ಬಂದಿವೆ ಎಂದು ಮ್ಯೂಸಿಯಂ, ಟೊರೊಂಟೊವನ್ನು ಟ್ಯಾಗ್ ಮಾಡಿ ಭಾರತದ ಹೈ ಕಮಿಷನ್ ಟ್ವೀಟ್ ಮಾಡಿದೆ.





ಟೊರೊಂಟೊದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಅವರು ಈವೆಂಟ್‌ನ ಸಂಘಟಕರಿಗೆ ಜನರ ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಟೊರೊಂಟೊದಲ್ಲಿರುವ ಯಾರ್ಕ್ ವಿಶ್ವವಿದ್ಯಾನಿಲಯದಿಂದ ಲಲಿತಕಲೆಯಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಮಣಿಮೇಕಲೈ ಅವರು ಜುಲೈ 2 ರಂದು ಪೋಸ್ಟರ್‌ನ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇತ್ತೀಚೆಗೆ ಟ್ವೀಟ್ ಮಾಡಿದ್ದ ಮಣಿಮೃಕಲೈ

ಅವರ ಇತ್ತೀಚಿನ ಚಲನಚಿತ್ರ ಕಾಳಿಯನ್ನು ಅದರ “ರಿದಮ್ಸ್ ಆಫ್ ಕೆನಡಾ” ಯೋಜನೆಯ ಭಾಗವಾಗಿ ಅಗಾ ಖಾನ್ ಮ್ಯೂಸಿಯಂನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹಂಚಿಕೊಂಡಿದ್ದಾರೆ. CERC ವಲಸೆಯ "ಅಂಡರ್ ದಿ ಟೆಂಟ್" ಅಗಾ ಖಾನ್ ಫೌಂಡೇಶನ್‌ನ "ರಿದಮ್ಸ್ ಆಫ್ ಕೆನಡಾ" ಯೋಜನೆಯ ಭಾಗವಾಗಿದೆ.

ಹಿಂದೂ ಜನರಿಂದ ತೀವ್ರ ವಿರೋಧ

ಸಿನಿಮಾದ ಪೋಸ್ಟರ್ ಒಂದಷ್ಟು ಜನರನ್ನು ತೀವ್ರವಾಗಿ ಕೆರಳಿಸಿದೆ. ಹಲವಾರು ಹಿಂದೂ ಗುಂಪುಗಳು ಕ್ರಮ ಕೈಗೊಳ್ಳಲು ಕೆನಡಾದ ಅಧಿಕಾರಿಗಳನ್ನು ಸಂಪರ್ಕಿಸಿವೆ ಎಂದು ನಮಗೆ ತಿಳಿಸಲಾಗಿದೆ" ಎಂದು ಒಟ್ಟಾವಾದಲ್ಲಿರುವ ಭಾರತದ ಹೈಕಮಿಷನ್ ಹೇಳಿದೆ. "ಕೆನಡಾದ ಅಧಿಕಾರಿಗಳು ಮತ್ತು ಈವೆಂಟ್ ಆಯೋಜಕರು ಇಂತಹ ಎಲ್ಲಾ ಪ್ರಚೋದನಕಾರಿ ವಸ್ತುಗಳನ್ನು ಹಿಂತೆಗೆದುಕೊಳ್ಳುವಂತೆ ನಾವು ಒತ್ತಾಯಿಸುತ್ತೇವೆ ಎಂದು ಟ್ವೀಟ್​ನಲ್ಲಿ ಹೇಳಲಾಗಿದೆ.

ದೆಹಲಿ ಮೂಲದ ವಕೀಲೆಯಿಂದ ಕೇಸ್

ದೆಹಲಿ ಮೂಲದ ವಕೀಲರೊಬ್ಬರು ತಮ್ಮ ಹೊಸ ಸಾಕ್ಷ್ಯಚಿತ್ರದ ವಿವಾದಾತ್ಮಕ ಪೋಸ್ಟರ್ ಕುರಿತು ನಿರ್ದೇಶಕಿ ಲೀನಾ ಮಣಿಮೇಕಲೈ ವಿರುದ್ಧ ಸೋಮವಾರ ಪೊಲೀಸ್ ದೂರು ದಾಖಲಿಸಿದ್ದಾರೆ.

ಈ ವಿವಾದಾತ್ಮಕ ಪೋಸ್ಟರ್ ಅನ್ನು ಜುಲೈ 2 ರಂದು ಮಣಿಮೇಕಲೈ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಕಾಳಿ ದೇವಿಯು ಸಿಗರೇಟ್ ಸೇದುತ್ತಿರುವುದನ್ನು ತೋರಿಸಲಾಗಿದೆ. ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವ ನಿರ್ದೇಶಕರನ್ನು ಬಂಧಿಸಲು ಬೇಡಿಕೆಯೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗಿದೆ. ತಮಿಳು ಸುದ್ದಿ ಪೋರ್ಟಲ್ ಪ್ರಕಾರ, ಮಣಿಮೇಕಲೈ ಸಾಕ್ಷ್ಯಚಿತ್ರವು ಒಂದು ಸಂಜೆ ಕಾಳಿ ದೇವಿಯು ಕಾಣಿಸಿಕೊಂಡಾಗ ಮತ್ತು ಟೊರೊಂಟೊದ ಬೀದಿಗಳಲ್ಲಿ ಅಡ್ಡಾಡಿದಾಗ ನಡೆಯುವ ಘಟನೆಗಳ ಬಗ್ಗೆ ಚಿತ್ರಿಸಲಾಗಿದೆ.
Published by:Divya D
First published: