ಯುಎಸ್(US) ಮೂಲದ ಪತ್ರಕರ್ತ(Journalist) ಮತ್ತು ಸೌದಿ ಅರೇಬಿಯಾ(Saudi Arabia) ಸರ್ಕಾರದ ವಿಮರ್ಶಕ ಜಮಾಲ್ ಖಶೋಗಿ ಹತ್ಯೆಗೆ ಆದೇಶ ನೀಡಿದ ಆರೋಪ ಹೊತ್ತಿರುವ ಸೌದಿ ನಾಯಕ ಮೊಹಮ್ಮದ್ ಬಿನ್ ಸಲ್ಮಾನ್ಗೆ ಮೊಕದ್ದಮೆಯಿಂದ ವಿನಾಯಿತಿಯನ್ನು ನೀಡುವ ಕುರಿತು ಹೇಳಿಕೆ ನೀಡುವಾಗ, ಅಮೆರಿಕದ(America) ರಾಜ್ಯ ಇಲಾಖೆಯ ಅಧಿಕಾರಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಉಲ್ಲೇಖಿಸಿದ್ದು, ಈ ಕುರಿತು ಭಾರತ(India) ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ.
ನರೇಂದ್ರ ಮೋದಿ ಹೆಸರಿನ ಉಲ್ಲೇಖ
ಸೌದಿ ಕ್ರೌನ್ ಪ್ರಿನ್ಸ್ಗೆ ವಿನಾಯಿತಿಯನ್ನು ನೀಡುವ ಕುರಿತು ತಮ್ಮ ಹೇಳಿಕೆಯಲ್ಲಿ, ಯುಎಸ್ ರಾಜ್ಯ ಇಲಾಖೆಯ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್, ಯುಎಸ್ ವಿನಾಯಿತಿಯನ್ನು ನೀಡುತ್ತಲೇ ಬಂದಿದ್ದು ಈ ಹಿಂದೆ ಕೂಡ ಇದೇ ಕ್ರಮಗಳನ್ನು ಅನುಸರಿಸಿದೆ ಎಂದು ತಿಳಿಸಿದ್ದಾರೆ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜ್ಯದ ಹಲವಾರು ಮುಖ್ಯಸ್ಥರಿಗೆ ವಿನಾಯಿತಿ ನೀಡಿದ ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ.
ಯುಎಸ್ ಹಾಗೂ ಭಾರತದ ಬಾಂಧವ್ಯ
ಮೋದಿಯವರ ಬಗ್ಗೆ ಪ್ರಧಾನ ಉಪವಕ್ತಾರ ಮಾಡಿರುವ ಕಾಮೆಂಟ್ ಘಟನೆಗೆ ಸಂಬಂಧಿಸಿದಂತೆ ಹೇಗೆ ಪ್ರಸ್ತುವಾಗಿದೆ, ಅವಶ್ಯಕವಾಗಿದೆ ಅಥವಾ ಸಂದರ್ಭೋಚಿತವಾಗಿದೆ ಎಂಬುದನ್ನು ಅರಿತುಕೊಳ್ಳಲು ನಾನು ವಿಫಲಗೊಂಡಿರುವೆ ಎಂದು MEA ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ. ಎರಡೂ ದೇಶಗಳು ವಿಶೇಷವಾದ ಬಾಂಧವ್ಯವನ್ನು ಹೊಂದಿದ್ದು ಆ ಬಾಂಧವ್ಯವನ್ನು ವಿಶೇಷವಾಗಿ ಕಾಣುತ್ತವೆ ಹಾಗೂ ಆನಂದಿಸುತ್ತವೆ.
ಭಾರತ ಹಾಗೂ ಯುಎಸ್ ಜೊತೆಯಾಗಿ ಒಂದು ಶಕ್ತಿಯಾಗಿ ಬಲದಂತೆ ಬೆಳೆಯುತ್ತಿದೆ ಹಾಗೂ ಈ ಸಾಮರ್ಥ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲು ಯುಎಸ್ ಜೊತೆಗೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದು ಬಾಗ್ಚಿ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕಾ ಪ್ರವಾಸದ ಬಗ್ಗೆ ನಿರ್ಧಾರವಿಲ್ಲ
ಡಿಸೆಂಬರ್ನಲ್ಲಿ ಮೋದಿಯವರು ಕೈಗೊಳ್ಳಲಿರುವ ಅಮೆರಿಕಾ ಪ್ರವಾಸದ ವರದಿಗಳು ಸಮರ್ಪಕವಲ್ಲ ಎಂದು ತಿಳಿಸಿರುವ ಬಾಗ್ಚಿ, ಪ್ರಧಾನಿಯವರು ಡಿಸೆಂಬರ್ನಲ್ಲಿ ಅಮೇರಿಕಾಗೆ ತೆರಳುವ ಬಗ್ಗೆ ನಮ್ಮ ಕಡೆಯಿಂದ ಯಾವುದೇ ಪ್ರಸ್ತಾಪವನ್ನು ಮಾಡಲಾಗಿಲ್ಲ ಎಂದು ತಿಳಿಸಿದ್ದಾರೆ. ಈ ನಡುವೆ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಶ್ವೇತಭವನದ ವಕ್ತಾರರಿಗೆ ಕಾರಣವಾಗಿರುವ ಮೋದಿ ಮತ್ತು ಯುಎಸ್ ಅಧ್ಯಕ್ಷ ಬಿಡೆನ್ ನಡುವಿನ ಭೇಟಿಯ ಸುಳ್ಳು ಕಾಮೆಂಟ್ಗಳ ಪೋಸ್ಟ್ಗಳ ಬಗ್ಗೆ ಅವರು ಪ್ರತಿಕ್ರಿಯೆ ನೀಡಲಿಲ್ಲ.
ಜಮಾಲ್ ಖಶೋಗಿಯ ಕೊಲೆ ಆರೋಪ
ಸೌದಿ ನಾಯಕ ಮತ್ತು ಅವರ ಅಧಿಕಾರಿಗಳು ಅಮೆರಿಕ ನಿವಾಸಿ ಪತ್ರಕರ್ತ ಮತ್ತು ಪ್ರಜಾಪ್ರಭುತ್ವದ ವಕೀಲ ಜಮಾಲ್ ಖಶೋಗಿಯನ್ನು ಅಪಹರಿಸಿದ್ದಾರೆ, ಬಂಧಿಸಿದ್ದಾರೆ, ಮಾದಕ ದ್ರವ್ಯ ಮತ್ತು ಚಿತ್ರಹಿಂಸೆ ನೀಡಿದ್ದಾರೆ ಮತ್ತು ಹತ್ಯೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಜಮಾಲ್ ಖಶೋಗಿ ಭಾವೀ ಪತ್ನಿ ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ವಿರುದ್ಧ ಆರೋಪ ಹೊರಿಸಿದ್ದರು ಹಾಗೂ ರಾಜಕುಮಾರನ ಆದೇಶದ ಮೇರೆಗೆ ಪತ್ರಕರ್ತನ ಹತ್ಯೆ ನಡೆಸಲಾಗಿದೆ ಎಂದು ಯುಎಸ್ ಗುಪ್ತಚರ ಇಲಾಖೆ ವರದಿ ಮಾಡಿತ್ತು.
ಸೌದಿಯ ಪ್ರಮುಖ ವಿಮರ್ಶಕರಾದ ಖಶೋಗಿ ಅವರನ್ನು ಅಕ್ಟೋಬರ್ 2018 ರಲ್ಲಿ ಇಸ್ತಾನ್ಬುಲ್ನಲ್ಲಿರುವ ಸೌದಿ ಕಾನ್ಸುಲೇಟ್ನಲ್ಲಿ ಹತ್ಯೆ ಮಾಡಲಾಗಿತ್ತು. ಸೌದಿ ಪ್ರಧಾನ ಮಂತ್ರಿಯಾಗಿ ಅವರ ಹೊಸ ಹುದ್ದೆಯಿಂದ ರಾಜಕುಮಾರನಿಗೆ ವಿನಾಯಿತಿ ಇದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ತಿಳಿಸಿದೆ.
ಅಮ್ನಿಸ್ಟಿ ಇಂಟರ್ನ್ಯಾಶನಲ್ ಛೀಮಾರಿ
ಯುಎಸ್ನ ಈ ನಿರ್ಧಾರಕ್ಕೆ ಅಮ್ನೆಸ್ಟಿ ಇಂಟರ್ನ್ಯಾಶನಲ್ ಕಿಡಿಕಾರಿದ್ದು ಯುಎಸ್ ಸರಕಾರ ನಾಚಿಕೆಯಿಂದ ತಲೆತಗ್ಗಿಸಬೇಕು ಎಂಬ ಹೇಳಿಕೆಯನ್ನು ನೀಡಿದೆ. ಇದೊಂದು ಅನಾರೋಗ್ಯಕರ ಬೆಳವಣಿಗೆಯಾಗಿದ್ದು, ಇದು ದ್ರೋಹವಾಗಿದೆ ಎಂದು ಸಂಸ್ಥೆ ಜರಿದಿದೆ. ಇನ್ನು ಈ ವಿನಾಯಿತಿಯು ಯುಎಸ್ನ ಕಾಂಗ್ರೆಸ್ ಸದಸ್ಯರಿಗೆ ಮತ್ತಷ್ಟು ಕೋಪ ತರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ