• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Population In India: ಜಾಗತಿಕ ಜನಸಂಖ್ಯೆಯ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನ! ಆರ್ಥಿಕತೆಯ ಮೇಲೆ ಪರಿಣಾಮ ಬೀಳಲಿದ್ಯಾ ಈ ಬೆಳವಣಿಗೆ?

Population In India: ಜಾಗತಿಕ ಜನಸಂಖ್ಯೆಯ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನ! ಆರ್ಥಿಕತೆಯ ಮೇಲೆ ಪರಿಣಾಮ ಬೀಳಲಿದ್ಯಾ ಈ ಬೆಳವಣಿಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಚೀನಾವನ್ನು ಜನಸಂಖ್ಯೆಯಲ್ಲಿ ಹಿಂದಿಕ್ಕಿದ ಭಾರತ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ವರದಿಗಳು ಹೇಳಿವೆ.

 • Share this:

ಭಾರತವು ಚೀನಾವನ್ನು (India-China) ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ (World's Largest Population) ಹೊಂದಿರುವ ದೇಶವಾಗಿದೆ ಎಂದು ಬುಧವಾರದ ಅಂಕಿಅಂಶಗಳ ಮೂಲಕ ತಿಳಿದುಬಂದಿದೆ . ಆದರೆ, ಯುಎನ್‌ಎಫ್‌ಪಿಎ (UNFPA) ಪ್ರಕಾರ, ಜನಸಂಖ್ಯೆಯಲ್ಲಿನ ಬದಲಾವಣೆಯು ವಿವಿಧ ಪ್ರಮುಖ ಆರ್ಥಿಕ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಸುಮಾರು 63 ಪ್ರತಿಶತದಷ್ಟು ಭಾರತೀಯರು ತಮ್ಮ ಆತಂಕವನ್ನು ವ್ಯಕ್ತಪಡಿಸಿರುವುದಾಗಿ ಹಲವು ವರದಿಗಳು ಪ್ರಕಟಿಸಿವೆ. ಕೋವಿಡ್ -19 (Covid-19) ಸಾಂಕ್ರಾಮಿಕ ರೋಗದಿಂದ ಜಾಗತಿಕ ಆರ್ಥಿಕತೆಯು ಚೇತರಿಸಿಕೊಳ್ಳುತ್ತಿದ್ದಂತೆ, ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ.


ಆದರೆ, ಸಮಾಜದಲ್ಲಿ ಪ್ರಚಲಿತದಲ್ಲಿರುವ ಅಸಮಾನತೆಗಳ ಬಗ್ಗೆ ಅರ್ಥಶಾಸ್ತ್ರಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಕಡಿಮೆ-ಮಧ್ಯಮ ಆದಾಯದ ಜನಸಂಖ್ಯೆಯು ಹೆಚ್ಚಾಗಿ ಆರ್ಥಿಕತೆ ಸಮಸ್ಯೆಗಳನ್ನು ಅನುಭವಿಸುತ್ತಿರುವುದರಿಂದ, ದಿನಬಳಕೆಯು ಆದಾಯವು ತೀಕ್ಷ್ಣವಾಗಿ ಕುಸಿದಿದೆ ಮತ್ತು ಮನೆಯ ಉಳಿತಾಯವು ಮೂರು ದಶಕದ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಇಟಿ ಈ ಹಿಂದೆ ವರದಿಯನ್ನು ಪ್ರಕಟಿಸಿತ್ತು.


ಕಡಿಮೆ ಮಹಿಳಾ ಕಾರ್ಮಿಕ ಬಲ


ಚೀನಾಕ್ಕೆ ಹೋಲಿಸಿದರೆ ಕಡಿಮೆ ಮಹಿಳಾ ಕಾರ್ಮಿಕ ಬಲ ಮತ್ತು ಗ್ರಾಮೀಣ ಆರ್ಥಿಕ ಮಂದಗತಿ ಕೂಡ ಭಾರತದಲ್ಲಿ ಕಳವಳಕಾರಿಯಾಗಿದೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ.


ಇದನ್ನೂ ಓದಿ: ಉಂಡ ಮನೆಗೆ ದ್ರೋಹ ಬಗೆದ ಕಿರಾತಕ; ಮಾಲೀಕನ ಮಗಳನ್ನೇ ಅತ್ಯಾಚಾರಗೈದ ಕಾಮುಕ!


ಎಷ್ಡಿದೆ ದೇಶದಲ್ಲಿ ಜನಸಂಖ್ಯೆ?


ವಿಶ್ವಸಂಸ್ಥೆಯ ವಿಶ್ವ ಜನಸಂಖ್ಯೆಯ ಅಂಕಿಅಂಶಗಳ ಪ್ರಕಾರ, ಭಾರತವು ಪ್ರಸ್ತುತ 1,428.6 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ, ಚೀನಾ 1,425.7 ಮಿಲಿಯನ್‌ ಜನಸಂಖ್ಯೆಯನ್ನು ಹೊಂದಿದೆ ಎಂದು ತಿಳಿದುಬಂದಿದೆ.


1950 ರಲ್ಲಿ ಯುಎನ್ ಜನಸಂಖ್ಯೆಯ ಡೇಟಾವನ್ನು ಸಂಗ್ರಹಿಸಲು ಪ್ರಾರಂಭಿಸಿದ ನಂತರ ಭಾರತವು ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳ ಯುಎನ್ ಪಟ್ಟಿಯಲ್ಲಿ ಮೊದಲ ಬಾರಿಗೆ ಅಗ್ರಸ್ಥಾನದಲ್ಲಿದೆ.


ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರ ಪ್ರತಿಕ್ರಿಯೆ


ವರದಿಗೆ ಪ್ರತಿಕ್ರಿಯಿಸಲು ಕೇಳಿದಾಗ, "ದೇಶದ ಆರ್ಥಿಕತೆಯು ಜನಸಂಖ್ಯೆ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ, ಗುಣಮಟ್ಟದ ಮೇಲೆ ಸಹ ಅವಲಂಬಿತವಾಗಿರುತ್ತದೆ ಎಂದು ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು. ಅಮೆರಿಕದ ನಂತರ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾದ ಬಗ್ಗೆ ಮಾತನಾಡುವಾಗ, ಜನಸಂಖ್ಯೆ ಬಹಳ ಮುಖ್ಯ ಮತ್ತು ಪ್ರತಿಭೆಯೂ ಬಹಳ ಮುಖ್ಯ ಎಂದು ಹೇಳಿದರು.


ಸಾಂದರ್ಭಿಕ ಚಿತ್ರ


ಯುಎನ್-ಹ್ಯಾಬಿಟಾಟ್‌ನ ಅಂದಾಜಿನ ಪ್ರಕಾರ, ಎರಡೂ ದೇಶಗಳ ಕಾರ್ಮಿಕರು ಉತ್ತಮ ಭವಿಷ್ಯಕ್ಕಾಗಿ ಮೆಗಾಸಿಟಿಗಳಿಗೆ ವಲಸೆ ಹೋಗುವುದನ್ನು ಗಮನಿಸಬಹುದು. ಭಾರತದ ಬಹುಪಾಲು ಜನರು ತಮ್ಮ ಹಳ್ಳಿಗಳಲ್ಲಿ ಉಳಿಯುತ್ತಾರೆ, ಆದರೆ ಚೀನಾದ ಬಹುಪಾಲು ಜನರು 2035 ರ ವೇಳೆಗೆ ನಗರಗಳಿಗೆ ವಲಸೆ ಹೋಗುತ್ತಾರೆ ಎಂದು ಯುಎನ್-ಹ್ಯಾಬಿಟಾಟ್‌ ತಿಳಿಸಿದೆ.


ಹಿಂದಿನ ವರ್ಷ, ಚೀನಾದ ಜನಸಂಖ್ಯೆಯು 1960 ರ ನಂತರ ಮೊದಲ ಬಾರಿಗೆ ಕುಗ್ಗಿತು. 2016 ರಲ್ಲಿ, ಬೀಜಿಂಗ್ ಅಧಿಕ ಜನಸಂಖ್ಯೆಯ ಭಯದ ನಡುವೆ 1980 ರ ದಶಕದಲ್ಲಿ ಹೇರಲಾದ ಕಟ್ಟುನಿಟ್ಟಾದ "ಒಂದು ಮಗುವಿನ ನೀತಿ" ಯನ್ನು ಕೊನೆಗೊಳಿಸಿತು ಮತ್ತು 2021 ರಲ್ಲಿ ದಂಪತಿಗೆ ಮೂರು ಮಕ್ಕಳನ್ನು ಹೊಂದಲು ಅವಕಾಶ ನೀಡಿತು.


ಚೀನಾ ತನ್ನ ವಯಸ್ಸಾದ ಕಾರ್ಯಪಡೆ ಮತ್ತು ಫಲವತ್ತತೆಯ ದರಗಳು ಕುಸಿಯುತ್ತಿರುವ ಕಾರಣ ಜನಸಂಖ್ಯೆಯ ಕುಸಿತವನ್ನು ಎದುರಿಸುತ್ತಿದೆ ಎಂದು ವರದಿಗಳು ತಿಳಿಸಿವೆ.


ಯುನೈಟೆಡ್ ಸ್ಟೇಟ್ಸ್ 340 ಮಿಲಿಯನ್ ಜನಸಂಖ್ಯೆಯೊಂದಿಗೆ ಮೂರನೇ ಸ್ಥಾನದಲ್ಲಿದೆ.


ಸಮೀಕ್ಷೆ ಏನನ್ನು ಹೇಳುತ್ತದೆ?


ಈ ಜನಸಂಖ್ಯೆಯ ಕುರಿತು ಪ್ರತಿಕ್ರಿಯಿಸಿದ ಭಾರತೀಯರು ತಮ್ಮ ದೇಶದಲ್ಲಿ ಜನಸಂಖ್ಯೆಯು "ತುಂಬಾ ದೊಡ್ಡದಾಗಿದೆ" ಮತ್ತು ಫಲವತ್ತತೆ ದರಗಳು "ತುಂಬಾ ಹೆಚ್ಚು" ಎಂದು ಅಭಿಪ್ರಾಯಪಟ್ಟಿದ್ದಾರೆ.


"ರಾಷ್ಟ್ರೀಯ ಫಲವತ್ತತೆ ದರಗಳಲ್ಲಿ ಭಾರತದಲ್ಲಿ ಪುರುಷರು ಮತ್ತು ಮಹಿಳೆಯರ ಅಭಿಪ್ರಾಯಗಳ ನಡುವೆ ಯಾವುದೇ ಮಹತ್ವದ ವ್ಯತ್ಯಾಸವಿಲ್ಲ" ಎಂದು ವಾರ್ಷಿಕ ಯುನೈಟೆಡ್ ನೇಷನ್ಸ್ ಪಾಪ್ಯುಲೇಶನ್ ಫಂಡ್ (UNFPA) ಸ್ಟೇಟ್ ಆಫ್ ದಿ ವರ್ಲ್ಡ್ ಪಾಪ್ಯುಲೇಶನ್ ರಿಪೋರ್ಟ್ (SWOP) 2023 ಸೂಚಿಸಿದೆ.


ಸಾಂದರ್ಭಿಕ ಚಿತ್ರ


SWOP 2023 ರ ಭಾಗವಾಗಿ, YouGov ನಡೆಸಿದ UNFPA-ನಿಯೋಜಿತ ಸಾರ್ವಜನಿಕ ಸಮೀಕ್ಷೆಯು ಜನಸಂಖ್ಯೆಯ ಸಮಸ್ಯೆಗಳ ಕುರಿತು ಅವರ ಅಭಿಪ್ರಾಯಗಳ ಕುರಿತು ಭಾರತದಲ್ಲಿ 1,007 ಪ್ರತಿನಿಧಿಗಳ ಅಭಿಪ್ರಾಯ ಮಾದರಿಯನ್ನು ಸಂಗ್ರಹಿಸಿದೆ.


ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ


ಯುಎನ್‌ಎಫ್‌ಪಿಎ ಪ್ರಕಾರ, ಜನಸಂಖ್ಯೆಯಲ್ಲಿನ ಬದಲಾವಣೆಯು ವಿವಿಧ ಪ್ರಮುಖ ಆರ್ಥಿಕ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಸುಮಾರು 63 ಪ್ರತಿಶತದಷ್ಟು ಭಾರತೀಯರು ತಮ್ಮ ಆತಂಕವನ್ನು ವ್ಯಕ್ತಪಡಿಸಿರುವುದಾಗಿ ಹಲವು ವರದಿಗಳು ಪ್ರಕಟಿಸಿವೆ.


"ಭಾರತದಲ್ಲಿನ ಸಂಶೋಧನೆಗಳು ಜನಸಂಖ್ಯಾ ಆತಂಕಗಳು ದೊಡ್ಡ ಮಟ್ಟದ ಸಾರ್ವಜನಿಕರ ತಲೆಕೆಡಿಸಿದೆ ಎಂದು ಸೂಚಿಸುತ್ತವೆ" ಎಂದು 2023 ರ ವಿಶ್ವ ಜನಸಂಖ್ಯೆಯ ಸ್ಥಿತಿ (SWOP) ವರದಿಯಲ್ಲಿ ಭಾರತದ UNFPA ಪ್ರತಿನಿಧಿ ಮತ್ತು ಭೂತಾನ್ ದೇಶದ ನಿರ್ದೇಶಕ ಆಂಡ್ರಿಯಾ ವಾರ್ನರ್ ಹೇಳಿದ್ದಾರೆ.


2021 ರಲ್ಲಿ, ಭಾರತವು ಬಲವಂತದ ಕುಟುಂಬ ಯೋಜನೆಗೆ ತನ್ನ ವಿರೋಧವನ್ನು ಒತ್ತಿಹೇಳಿತು, ಸಂಸತ್ತು ಸೇರಿದಂತೆ ಹಲವಾರು ವೇದಿಕೆಗಳಲ್ಲಿ, ಅಂತಹ ನೀತಿಗಳನ್ನು ತಾನು ಸಹಿಸುವುದಿಲ್ಲ ಎಂದು ಹೇಳಿದೆ ಏಕೆಂದರೆ ಅವು "ಪ್ರತಿಉತ್ಪಾದಕ" ಎಂದು ಸಾಬೀತುಪಡಿಸುತ್ತವೆ.


ಮಹಿಳೆಯರು ಮತ್ತು ಹುಡುಗಿಯರು ಲೈಂಗಿಕ ಮತ್ತು ಸಂತಾನೋತ್ಪತ್ತಿ ನೀತಿಗಳು ಮತ್ತು ಕಾರ್ಯಕ್ರಮಗಳ ಕೇಂದ್ರದಲ್ಲಿರಬೇಕು ಎಂದು ವೋಜ್ನರ್ ಹೇಳಿದ್ದಾರೆ.


top videos  "ಜೀವನಚಕ್ರದ ವಿಧಾನವನ್ನು ಬಳಸಿಕೊಂಡು ತಮ್ಮ ಜೀವನದ ಪ್ರತಿ ಹಂತದಲ್ಲೂ ಹುಡುಗಿಯರು ಮತ್ತು ಮಹಿಳೆಯರನ್ನು ಸಶಕ್ತಗೊಳಿಸಲು, ಲಿಂಗ-ಸೂಕ್ಷ್ಮ ಕೆಲಸದ ವ್ಯವಸ್ಥೆಗಳು (ಪುರುಷ ಮತ್ತು ಮಹಿಳೆ ಇಬ್ಬರೂ) ಮಹಿಳೆಯರಿಗೆ ದೀರ್ಘಾವಧಿಯಲ್ಲಿ ಯೋಗ್ಯವಾದ ಕೆಲಸದ ಅವಕಾಶಗಳನ್ನು ಹೊಂದಲು ಅನುವು ಮಾಡಿಕೊಡುತ್ತದೆ, ಅಡೆತಡೆಗಳನ್ನು ಕಡಿಮೆ ಮಾಡುತ್ತದೆ" ಎಂದು ವೋಜ್ನರ್ ಹೇಳಿದರು.

  First published: