ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿಯಲ್ಲಿ ಶೇ.50 ಸಿಬ್ಬಂದಿ ಕಡಿತಕ್ಕೆ ಭಾರತ ಸರ್ಕಾರ ನಿರ್ಧಾರ

ಪಾಕಿಸ್ತಾನ ಹೈ ಕಮಿಷನ್​ನ ಅಬಿದ್ ಹುಸೈನ್ ಮತ್ತು ಮುಹಮ್ಮದ್​ ತಾಹಿರ್ ಎಂಬ ಇಬ್ಬರು ಅಧಿಕಾರಿಗಳು ಭಾರತದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ ಕಡತಗಳನ್ನು ಸಂಗ್ರಹಿಸುವುದಾಗಿ ದೆಹಲಿ ಪೊಲೀಸರಿಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿದ್ದವು.

news18-kannada
Updated:June 23, 2020, 7:18 PM IST
ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿಯಲ್ಲಿ ಶೇ.50 ಸಿಬ್ಬಂದಿ ಕಡಿತಕ್ಕೆ ಭಾರತ ಸರ್ಕಾರ ನಿರ್ಧಾರ
ಭಾರತ ಮತ್ತು ಪಾಕಿಸ್ತಾನದ ಬಾವುಟಗಳು.
  • Share this:
ನವದೆಹಲಿ: ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿಯಲ್ಲಿ ಶೇ.50ರಷ್ಟು ಸಿಬ್ಬಂದಿ ಕಡಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ವಿದೇಶಾಂಗ ಸಚಿವಾಲಯ ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿದ್ದು, ಏಳು ದಿನಗಳೊಳಗೆ ಈ ಪ್ರಕ್ರಿಯೆ ಜಾರಿಯಾಗಲಿದೆ ಎಂದು ಹೇಳಿದೆ.

ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಕಚೇರಿಯಲ್ಲಿ ಪ್ರಸ್ತುತ 110 ಸಿಬ್ಬಂದಿ ಇದ್ದು, ಇದೀಗ ಈ ಕ್ರಮದಿಂದಾಗಿ ಆ ಸಂಖ್ಯೆ 55ಕ್ಕೆ ಇಳಿಯಲಿದೆ.

ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಸಿಬ್ಬಂದಿಯನ್ನು ಇಂದು ಕರೆಸಲಾಯಿತು. ಮತ್ತು ಹೈಕಮಿಷನ್ ಅಧಿಕಾರಿಗಳ ಚಟುವಟಿಕೆಗಳ ಬಗ್ಗೆ ಭಾರತ ಪದೇಪದೇ ಕಳವಳ ವ್ಯಕ್ತಪಡಿಸುತ್ತಿದೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದರು. ಅವರು ಬೇಹುಗಾರಿಕೆ ಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗೆ ವ್ಯವಹಾರದಲ್ಲಿ ತೊಡಗಿದ್ದರು. ಇಬ್ಬರು ಅಧಿಕಾರಿಗಳು ಮೇ 31 ರಂದು ರೆಡ್​ಹ್ಯಾಂಡ್​ ಆಗಿ ಸಿಲುಕಿಬಿದ್ದಿದ್ದರಿಂದ ಅವರನ್ನು ಉಚ್ಚಾಟಣೆ ಮಾಡಲಾಗಿತ್ತು.

ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನ ಹೈಕಮಿಷನ್​ನ ಇಬ್ಬರು ಅಧಿಕಾರಿಗಳನ್ನು ಭಾರತ ಕಳೆದ ತಿಂಗಳು ಉಚ್ಛಾಟಣೆ ಮಾಡಿತ್ತು. ಆ ಇಬ್ಬರು ಅಧಿಕಾರಿಗಳು 24 ಗಂಟೆಯೊಳಗೆ ದೇಶ ತೊರೆಯಬೇಕು ಎಂದು ಭಾರತ ಘೋಷಿಸಿತ್ತು.

ಪಾಕಿಸ್ತಾನ ಹೈ ಕಮಿಷನ್​ನ ಅಬಿದ್ ಹುಸೈನ್ ಮತ್ತು ಮುಹಮ್ಮದ್​ ತಾಹಿರ್ ಎಂಬ ಇಬ್ಬರು ಅಧಿಕಾರಿಗಳು ಭಾರತದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ ಕಡತಗಳನ್ನು ಸಂಗ್ರಹಿಸುವುದಾಗಿ ದೆಹಲಿ ಪೊಲೀಸರಿಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿದ್ದವು.

ಇಬ್ಬರು ಅಧಿಕಾರಿಗಳ ಉಚ್ಛಾಟನೆ ಮಾಡುವ ಭಾರತಕ್ಕೆ ನಿರ್ಧಾರಕ್ಕೆ ಪಾಕಿಸ್ತಾನ ಭಾರತದ ರಾಯಭಾರಿ ಕಚೇರಿಯಲ್ಲಿ ತೀವ್ರ ಪ್ರತಿರೋಧ ವ್ಯಕ್ತಪಡಿಸಿತ್ತು.

ಇದನ್ನು ಓದಿ: ಘರ್ಷಣೆಯ ಸ್ಥಳಗಳಿಂದ ಹಿಂಸರಿಯಲು ಪರಸ್ಪರ ಸಮ್ಮತಿಸಿದ ಭಾರತ ಮತ್ತು ಚೀನಾ ಪಡೆಗಳು

ಇಸ್ಲಾಮಾಬಾದ್‌ನಲ್ಲಿ ಭಾರತೀಯ ಹೈಕಮಿಷನ್‌ನ ಇಬ್ಬರು ಅಧಿಕಾರಿಗಳನ್ನು ಬಂಧಿಸಿದ ವರದಿಯ ನಂತರ ಈ ತಿಂಗಳ ಆರಂಭದಲ್ಲಿ ಭಾರತ ಸರ್ಕಾರ ಪಾಕಿಸ್ತಾನದ ವಿದೇಶಾಂಗ ಇಲಾಖೆಯ ಅಧಿಕಾರಿಗಳನ್ನು ಕರೆಸಿಕೊಂಡಿತ್ತು. ಪಾಕಿಸ್ತಾನದ ಭದ್ರತಾ ಸಂಸ್ಥೆಗಳು ಗೂಢಚಾರಿಕೆ ಆರೋಪದ ಮೇಲೆ ಭಾರತದ ಇಬ್ಬರು ಅಧಿಕಾರಿಗಳನ್ನು ಅಪಹರಿಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿತ್ತು ಎಂದು ಅಧಿಕೃತ ಮೂಲಗಳು ಸಿಎನ್​ಎನ್​-ನ್ಯೂಸ್ 18ಗೆ ತಿಳಿಸಿವೆ.  

 
First published: June 23, 2020, 7:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading