India to Lift Quarantine Requirement| ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕ್ವಾರಂಟೈನ್ ಆಗುವ ಅವಶ್ಯಕತೆ ತೆಗೆದು ಹಾಕಿದ ಭಾರತ

CoronaVirus: ಕೋವಿಡ್-19 ಸಾಂಕ್ರಾಮಿಕ ರೋಗಿಗಳ ಸಂಖ್ಯೆಯಲ್ಲಿ ಇತ್ತೀಚೆಗೆ ಇಳಿಕೆ ಕಾಣುತ್ತಿದ್ದು, ವೈರಸ್‌ನ ನಿರಂತರ ಬದಲಾಗುತ್ತಿರುವ ಸ್ವರೂಪ ಮತ್ತು SARS-COV2 ರೂಪಾಂತರಗಳ ಬಗ್ಗೆ ನಿಗಾ ಇಡುವುದು ಇನ್ನೂ ಅಗತ್ಯವಾಗಿದೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:

    ಸಾಮಾನ್ಯವಾಗಿ ಕೋವಿಡ್-19 ವೈರಸ್ (CoronaVirus) ಹಾವಳಿಯ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ (International Travellers) ತಮ್ಮ ದೇಶದಲ್ಲಿ ಕೋವಿಡ್-19 ಟೆಸ್ಟ್ (Covid Test) ಮಾಡಿಸಿಕೊಂಡ ನೆಗೆಟಿವ್ ವರದಿಯನ್ನು ಭಾರತಕ್ಕೆ (India) ಬಂದಿಳಿದಾಗ ಅದನ್ನು ತೋರಿಸಿ ವಿಮಾನ ನಿಲ್ದಾಣಗಳಿಂದ (Airport) ಹೊರ ಹೋಗಬೇಕಾಗಿತ್ತು ಮತ್ತು ಅವಶ್ಯಕತೆ ಇದ್ದಲ್ಲಿ ಅವರನ್ನು ಕ್ವಾರಂಟೈನ್‌ನಲ್ಲಿ ಸಹ ಇರಿಸಲಾಗುತ್ತಿತ್ತು.ಆದರೆ ಇಂದಿನಿಂದ ವಿಶ್ವ ಆರೋಗ್ಯ ಸಂಸ್ಥೆ (WHO) ಅನುಮೋದಿತ ಕೋವಿಡ್-19 ಲಸಿಕೆಗಳನ್ನು ಪರಸ್ಪರ ಸ್ವೀಕರಿಸಲು ಭಾರತವು ವ್ಯವಸ್ಥೆ ಹೊಂದಿರುವ ಮತ್ತು ಸಂಪೂರ್ಣ ಲಸಿಕೆ (CoronaVirus Vaccine) ಪಡೆದಂತಹ ಪ್ರಯಾಣಿಕರು ಯಾವುದೇ ದೇಶದಿಂದ ಪ್ರಯಾಣಿಕರು ಭಾರತಕ್ಕೆ ಬಂದರೂ ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿ ನೀಡಲಾಗುವುದು.


    ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕ್ವಾರಂಟೈನ್ ಅಗತ್ಯವಿಲ್ಲ:

    ಕಳೆದ ಬುಧವಾರ ಬಿಡುಗಡೆಯಾದ ಅಂತಾರಾಷ್ಟ್ರೀಯ ಆಗಮನದ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ ಸೋಮವಾರದಿಂದ ಕ್ವಾರಂಟೈನ್ ಮತ್ತು ಯಾವುದೇ ಪರೀಕ್ಷೆಗೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.


    ಆದರೂ, ಪ್ರಯಾಣಿಕರು ನೆಗೆಟಿವ್ ಕೋವಿಡ್-19 ಆರ್‌ಟಿ-ಪಿಸಿಆರ್ ವರದಿ ಹಾಜರುಪಡಿಸಬೇಕಾಗುತ್ತದೆ. ಅಂತಾರಾಷ್ಟ್ರೀಯ ಆಗಮನದ ಈ ಹೊಸ ಮಾರ್ಗಸೂಚಿಗಳು ಈ ವರ್ಷದ ಫೆಬ್ರವರಿ 17ರಂದು ಮತ್ತು ನಂತರ ಹೊರಡಿಸಲಾದ ಇತರ ಮಾರ್ಗಸೂಚಿಗಳಿಗಿಂತಲೂ ವಿಭಿನ್ನವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.


    ವೈರಸ್​ ಬಗ್ಗೆ ನಿಗಾ ಇಡಲು ಆರೋಗ್ಯ ಇಲಾಖೆ ಸೂಚನೆ:

    "ಕೋವಿಡ್-19 ಸಾಂಕ್ರಾಮಿಕ ರೋಗಿಗಳ ಸಂಖ್ಯೆಯಲ್ಲಿ ಇತ್ತೀಚೆಗೆ ಇಳಿಕೆ ಕಾಣುತ್ತಿದ್ದು, ವೈರಸ್‌ನ ನಿರಂತರ ಬದಲಾಗುತ್ತಿರುವ ಸ್ವರೂಪ ಮತ್ತು SARS-COV2 ರೂಪಾಂತರಗಳ ಬಗ್ಗೆ ನಿಗಾ ಇಡುವುದು ಇನ್ನೂ ಅಗತ್ಯವಾಗಿದೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.


    "ಭಾರತಕ್ಕೆ ಅಂತಾರಾಷ್ಟ್ರೀಯ ಆಗಮನಕ್ಕಾಗಿ ಪ್ರಸ್ತುತ ಇರುವ ಮಾರ್ಗಸೂಚಿಗಳು (ಫೆಬ್ರುವರಿ 17, 2021ರಂದು ಹೊರಡಿಸಲಾದ ಮಾರ್ಗಸೂಚಿ) ಆಗಿನ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿತ್ತು. ಈಗ ಜಗತ್ತಿನಾದ್ಯಂತ ಜನರು ಲಸಿಕೆಗಳನ್ನು ಹಾಕಿಸಿಕೊಂಡಿರುವುದರಿಂದ ಮತ್ತು ಸಾಂಕ್ರಾಮಿಕ ರೋಗದ ಸ್ವರೂಪ ಬದಲಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತಕ್ಕೆ ಅಂತಾರಾಷ್ಟ್ರೀಯ ಪ್ರಯಾಣಿಕರ ಆಗಮನಕ್ಕಾಗಿ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ಪರಿಶೀಲಿಸಿ ಬದಲಾವಣೆಗಳನ್ನು ಮಾಡಲಾಗಿದೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.


    ಇತ್ತೀಚಿನ ಹೊಸ ಮಾರ್ಗಸೂಚಿಗಳನ್ನು ಇಲ್ಲಿ ಓದಿ ತಿಳಿದುಕೊಳ್ಳಿ




    • ಭಾಗಶಃ ಅಥವಾ ಲಸಿಕೆ ಹಾಕಿಸಿಕೊಳ್ಳದೆ ಇದ್ದರೆ, ಪ್ರಯಾಣಿಕರು ಆಗಮನದ ನಂತರ ಕೋವಿಡ್-19 ಪರೀಕ್ಷೆಗಾಗಿ ಮಾದರಿ ಸಲ್ಲಿಸುವುದು ಸೇರಿದಂತೆ ಇನ್ನಿತರೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ನಂತರ ಅವರಿಗೆ ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿ ನೀಡಲಾಗುತ್ತದೆ. ಆದರೆ ಏಳು ದಿನಗಳ ಕಾಲ ಹೋಮ್ ಕ್ವಾರಂಟೈನ್ ಆಗಿ ಮತ್ತು ಎಂಟನೇ ದಿನದಂದು ಮರು ಪರೀಕ್ಷೆ ಮಾಡಿಸಿಕೊಳ್ಳಬೇಕು. ಅದು ನೆಗೆಟಿವ್ ಆಗಿದ್ದರೆ, ಮುಂದಿನ ಏಳು ದಿನಗಳವರೆಗೆ ಅವರ ಆರೋಗ್ಯವನ್ನು ತಾವೇ ಸ್ವಯಂ ಮೇಲ್ವಿಚಾರಣೆ ಮಾಡಿಕೊಳ್ಳಬೇಕು

    • ಹೊಸ ಮಾರ್ಗಸೂಚಿಗಳು ಅಂತರರಾಷ್ಟ್ರೀಯ ಪ್ರಯಾಣಿಕರೊಂದಿಗೆ ಅನುಸರಿಸಬೇಕಾದ ಶಿಷ್ಟಾಚಾರಗಳನ್ನು ಸಹ ಒದಗಿಸುತ್ತವೆ.

    • ಈ ಪ್ರಮಾಣಿತ ಮಾರ್ಗಸೂಚಿ ಸೋಮವಾರದಿಂದ ಮುಂದಿನ ಆದೇಶಗಳವರೆಗೆ ಮಾನ್ಯವಾಗಿರುತ್ತದೆ. ಕೋವಿಡ್-19 ವೈರಸ್ ಅಪಾಯದ ಮೌಲ್ಯಮಾಪನದ ಆಧಾರದ ಮೇಲೆ, ಈ ದಾಖಲೆಯನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

    • ಹೊಸ ಮಾರ್ಗಸೂಚಿಗಳ ಪ್ರಕಾರ, ಪ್ರಯಾಣಕ್ಕಾಗಿ ಯೋಜಿಸುವಾಗ, ಎಲ್ಲಾ ಪ್ರಯಾಣಿಕರು ನಿಗದಿತ ಪ್ರಯಾಣಕ್ಕೆ ಮೊದಲು ಆನ್‌ಲೈನ್‌ನಲ್ಲಿ ಏರ್ ಸುವಿಧಾ ಪೋರ್ಟಲ್‌ನಲ್ಲಿ ಸ್ವಯಂ ಘೋಷಣೆ ನಮೂನೆ ಸಲ್ಲಿಸಬೇಕು ಮತ್ತು ನೆಗೆಟಿವ್ ಕೋವಿಡ್-19 ಆರ್‌ಟಿ-ಪಿಸಿಆರ್ ವರದಿಯನ್ನು ಅಪ್‌ಲೋಡ್ ಮಾಡಬೇಕು. ಪ್ರಯಾಣ ಕೈಗೊಳ್ಳುವ ಮೊದಲು ಈ ಪರೀಕ್ಷೆಯನ್ನು 72 ಗಂಟೆಗಳ ಒಳಗೆ ನಡೆಸಿರಬೇಕು.

    • ಎಲ್ಲಾ ಪ್ರಯಾಣಿಕರು ವರದಿಯ ಸತ್ಯಾಸತ್ಯತೆಗೆ ಸಂಬಂಧಿಸಿದಂತೆ ಘೋಷಣೆಯನ್ನು ಸಲ್ಲಿಸಬೇಕು ಮತ್ತು ಇದರಲ್ಲಿ ಏನಾದರೂ ಲೋಪ ದೋಷಗಳು ಕಂಡು ಬಂದರೆ ಕ್ರಿಮಿನಲ್ ಮೊಕದ್ದಮೆಗೆ ಹೊಣೆಗಾರರಾಗುತ್ತಾರೆ.


    ಇದನ್ನೂ ಓದಿ: Airlines: ವಿಮಾನಯಾನ ಸಂಸ್ಥೆಗೆ ಸರ್ಕಾರದಿಂದ ಶೇ. 100ರಷ್ಟು ಅನುಮತಿ: ಬೃಹತ್‌ ನಷ್ಟದಿಂದ ಹೊರಬರಲಿವೆಯೇ ವಿಮಾನಯಾನ ಸಂಸ್ಥೆಗಳು..?

    • "ಅಪಾಯದಲ್ಲಿರುವ ದೇಶಗಳನ್ನು ಹೊರತುಪಡಿಸಿ ಇನ್ನಿತರೆ ದೇಶಗಳಿಂದ ಬರುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಿಂದ ಹೊರಹೋಗಲು ಅವಕಾಶ ನೀಡಲಾಗುವುದು ಮತ್ತು ಆಗಮನದ ನಂತರ 14 ದಿನಗಳ ಕಾಲ ಅವರ ಆರೋಗ್ಯವನ್ನು ಸ್ವಯಂ ಮೇಲ್ವಿಚಾರಣೆ ಮಾಡಬೇಕು. WHO ಅನುಮೋದಿತ ಕೋವಿಡ್-19 ಲಸಿಕೆಗಳನ್ನು ಪರಸ್ಪರ ಸ್ವೀಕರಿಸಲು ಪರಸ್ಪರ ವ್ಯವಸ್ಥೆಗಳು ಅಸ್ತಿತ್ವದಲ್ಲಿರುವ ಎಲ್ಲಾ ದೇಶಗಳ ಪ್ರಯಾಣಿಕರಿಗೆ ಇದು ಅನ್ವಯಿಸುತ್ತದೆ" ಎಂದು ಮಾರ್ಗಸೂಚಿಗಳು ತಿಳಿಸಿವೆ.


    ಇದನ್ನೂ ಓದಿ: Crime News| T-20 ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಸೋಲು; ಪಂಜಾಬ್‌ನಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ!

    • ಗೃಹ ಕ್ವಾರಂಟೈನ್ ಅಥವಾ ಸ್ವಯಂ ಆರೋಗ್ಯ ನಿಗಾದಲ್ಲಿರುವ ಪ್ರಯಾಣಿಕರು ಕೋವಿಡ್-19 ಪಾಸಿಟಿವ್ ಇರುವ ರೋಗ ಲಕ್ಷಣಗಳು ಕಂಡು ಬಂದರೆ, ಅವರು ತಕ್ಷಣವೇ ತಮ್ಮನ್ನು ಬೇರೆಯವರಿಂದ ಪ್ರತ್ಯೇಕಿಸಿಕೊಂಡು ತಮ್ಮ ಹತ್ತಿರದ ಆರೋಗ್ಯ ಕೇಂದ್ರಕ್ಕೆ ವರದಿ ಮಾಡಬೇಕು ಅಥವಾ 1075 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕು.

    First published: