ದೆಹಲಿಯಲ್ಲಿ ನಡೆಯುವ ಎಸ್​ಸಿಒ ಸಭೆಗೆ ಪಾಕ್ ಪ್ರಧಾನಿ ಇಮ್ರಾನ್​ ಖಾನ್​ಗೆ ಆಹ್ವಾನ ನೀಡಲಿರುವ ಭಾರತ

ಚೀನಾ, ಕಜಕಿಸ್ತಾನ, ಕಿರ್ಗಿಸ್ತಾನ್, ರಷ್ಯಾ, ತಜಕಿಸ್ತಾನ್, ಉಜಕಿಸ್ತಾನ್, ಭಾರತ ಮತ್ತು ಪಾಕಿಸ್ತಾನ ಎಸ್​ಸಿಒನ ಎಂಟು ಸದಸ್ಯ ರಾಷ್ಟ್ರಗಳಾಗಿವೆ. ಅಘ್ಗಾನಿಸ್ತಾನ, ಇರಾನ್,  ಬೆಲಾರಸ್ ಮತ್ತು ಮಂಗೊಲಿಯಾ ನಾಲ್ಕು ವೀಕ್ಷಕ ರಾಷ್ಟ್ರಗಳಾಗಿವೆ.

HR Ramesh | news18-kannada
Updated:January 16, 2020, 6:00 PM IST
ದೆಹಲಿಯಲ್ಲಿ ನಡೆಯುವ ಎಸ್​ಸಿಒ ಸಭೆಗೆ ಪಾಕ್ ಪ್ರಧಾನಿ ಇಮ್ರಾನ್​ ಖಾನ್​ಗೆ ಆಹ್ವಾನ ನೀಡಲಿರುವ ಭಾರತ
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್.
  • Share this:
ನವದೆಹಲಿ: ಈ ವರ್ಷದ ನಂತರ ದೆಹಲಿಯಲ್ಲಿ ನಡೆಯಲಿರುವ ಶಾಂಘೈ ಕೊಆಪರೇಷನ್ ಆರ್ಗನೈಸೆಷನ್ (ಎಸ್​ಸಿಒ) ಸಭೆಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಆಹ್ವಾನ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಶೀಘ್ರದಲ್ಲಿ ಅವರಿಗೆ ಅಧಿಕೃತ ಆಹ್ವಾನ ನೀಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರಿಗೆ ಸಭೆಗೆ ಇಮ್ರಾನ್​ ಖಾನ್ ಅವರಿಗೆ ಆಹ್ವಾನ ನೀಡಲಾಗುತ್ತದೆಯೇ ಎಂದು ಕೇಳಿದಾಗ ಅವರು, ಎಲ್ಲ ಎಂಟು ದೇಶಗಳು ಮತ್ತು ನಾಲ್ಕು ವೀಕ್ಷಕ ದೇಶಗಳಿಗೂ ಆಹ್ವಾನ ನೀಡಲಾಗುವುದು ಎಂದು ತಿಳಿಸಿದ್ದರು.

ಚೀನಾ, ಕಜಕಿಸ್ತಾನ, ಕಿರ್ಗಿಸ್ತಾನ್, ರಷ್ಯಾ, ತಜಕಿಸ್ತಾನ್, ಉಜಕಿಸ್ತಾನ್, ಭಾರತ ಮತ್ತು ಪಾಕಿಸ್ತಾನ ಎಸ್​ಸಿಒನ ಎಂಟು ಸದಸ್ಯ ರಾಷ್ಟ್ರಗಳಾಗಿವೆ. ಅಘ್ಗಾನಿಸ್ತಾನ, ಇರಾನ್,  ಬೆಲಾರಸ್ ಮತ್ತು ಮಂಗೊಲಿಯಾ ನಾಲ್ಕು ವೀಕ್ಷಕ ರಾಷ್ಟ್ರಗಳಾಗಿವೆ.

Published by: HR Ramesh
First published: January 16, 2020, 6:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading