ವ್ಯಾಟಿಕನ್ ಸಿಟಿ: ಆಗಸ್ಟ್ ನಲ್ಲಿ ವ್ಯಾಟಿಕನ್‌ನಲ್ಲಿ (Vatican) ನಡೆಯಲಿರುವ ಸಮಾರಂಭದಲ್ಲಿ ಭಾರತದ ಇಬ್ಬರು ಸೇರಿದಂತೆ 21 ಚರ್ಚ್‌ಮೆನ್‌ಗಳನ್ನು (churchmen) ಕಾರ್ಡಿನಲ್ (Cardinal) ಶ್ರೇಣಿಗೆ ನೇಮಕ ಮಾಡಲಾಗುವುದು ಎಂದು ಪೋಪ್ ಫ್ರಾನ್ಸಿಸ್ (Pope Francis) ಘೋಷಿಸಿದ್ದು, ಈ ನಿರ್ಧಾರವನ್ನು ದೇಶದ ಕ್ರಿಶ್ಚಿಯನ್ ಸಮುದಾಯವು (Christian community) ಪ್ರಶಂಸಿಸಿದೆ. ವಿಶೇಷ ಏನೆಂದರೆ ಹೈದರಾಬಾದ್‌ನ ಆರ್ಚ್‌ಬಿಷಪ್ ರೆವ್ ಆಂಥೋನಿ ಪೂಲಾ ಅವರ ಉನ್ನತೀಕರಣದೊಂದಿಗೆ ಭಾರತದ ಮೊದಲ ದಲಿತ ಕಾರ್ಡಿನಲ್ (Dalit Cardinal) ಆಗಿದ್ದಾರೆ. ಪೋಪ್ ಘೋಷಿಸಿದ ಇನ್ನೊಂದು ಹೆಸರು ಫಿಲಿಪೆ ನೇರಿ ಆಂಟೋನಿಯೊ ಸೆಬಾಸ್ಟಾವೊ ಡಿ ರೊಸಾರಿಯೊ ಫೆರಾವೊ, ಇವರು ಗೋವಾ ಮತ್ತು ದಮನ್‌ನ ಆರ್ಚ್‌ಬಿಷಪ್ ಆಗಿದ್ದಾರೆ.
ಭಾರತದ ಇಬ್ಬರು ಕಾರ್ಡಿನಲ್‌ಗಳು - ಆರ್ಚ್‌ಬಿಷಪ್ ಫಿಲಿಪ್ ನೇರಿ ಆಂಟೋನಿಯೊ ಸೆಬಾಸ್ಟಿಯೊ ಡಿ ರೊಸಾರಿಯೊ ಫೆರಾವೊ ಮತ್ತು ಆರ್ಚ್‌ಬಿಷಪ್ ಡಿ ಆಂಥೋನಿ ಪೂಲಾ ಎಂದು ಅಧಿಕೃತ ವ್ಯಾಟಿಕನ್ ನ್ಯೂಸ್ ವರದಿ ಮಾಡಿದೆ. ಭಾನುವಾರದಂದು ನಡೆದ ಸಮಾರೋಪದಲ್ಲಿ, ಪೋಪ್ ಫ್ರಾನ್ಸಿಸ್ ಅವರು ಆಗಸ್ಟ್ 27ರಂದು ಹೊಸ ಕಾರ್ಡಿನಲ್‌ಗಳ ರಚನೆಗಾಗಿ ಕಾನ್ಸಿಸ್ಟರಿಯನ್ನು ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿದೆ.
ಆಗಸ್ಟ್ ನಲ್ಲಿ ಹೊಸ ಕಾರ್ಡಿನಲ್‌ಗಳ ರಚನೆ
ಹೊಸ ಅಪೋಸ್ಟೋಲಿಕ್ ಸಂವಿಧಾನದ ಪ್ರೆಡಿಕೇಟ್ ಇವಾಂಜೆಲಿಯಮ್ ಅನ್ನು ಪ್ರತಿಬಿಂಬಿಸಲು ಎಲ್ಲಾ ಕಾರ್ಡಿನಲ್‌ಗಳೊಂದಿಗೆ ಆಗಸ್ಟ್ 29 ಮತ್ತು 30 ರಿಂದ ಭೇಟಿಯಾಗುವುದಾಗಿ ಅವರು ಹೇಳಿದರು. ಹೊಸದಾಗಿ ಹೆಸರಿಸಲಾದ ಎಂಟು ಕಾರ್ಡಿನಲ್‌ಗಳು ಯುರೋಪ್‌ನಿಂದ, ಆರು ಏಷ್ಯಾದಿಂದ, ಇಬ್ಬರು ಆಫ್ರಿಕಾದಿಂದ, ಒಬ್ಬರು ಉತ್ತರ ಅಮೆರಿಕದಿಂದ ಮತ್ತು ನಾಲ್ಕು ಮಧ್ಯ ಮತ್ತು ಲ್ಯಾಟಿನ್ ಅಮೆರಿಕದಿಂದ ಬಂದವರು.
ಕಾರ್ಡಿನಲ್ಸ್ ಕಾಲೇಜ್ ಪ್ರಸ್ತುತ 208 ಕಾರ್ಡಿನಲ್‌ಗಳನ್ನು ಒಳಗೊಂಡಿದೆ, ಅವರಲ್ಲಿ 117 ಮತದಾರರು ಮತ್ತು 91 ಮತದಾರರಲ್ಲದವರು ಇದ್ದಾರೆ. ಆಗಸ್ಟ್ 27ರ ಹೊತ್ತಿಗೆ ಈ ಸಂಖ್ಯೆಯು 229 ಕಾರ್ಡಿನಲ್‌ಗಳಿಗೆ ಬೆಳೆಯುತ್ತದೆ ಮತ್ತು ಮತದಾರರ ಸಂಖ್ಯೆ 131ಕ್ಕೆ ಏರಿಕೆಯಾಗುತ್ತದೆ.
ಫಾದರ್ ಫೆರಾವೊ ಪರಿಚಯ
ಫಾದರ್ ಫೆರಾವೊ ಅವರು ಜನವರಿ 20,1953 ರಂದು ಪಣಜಿ ಬಳಿಯ ಅಲ್ಡೋನಾ ಗ್ರಾಮದಲ್ಲಿ ಜನಿಸಿದರು ಮತ್ತು ಸಾಲಿಗಾವೊದ ಅವರ್ ಲೇಡಿ ಸೆಮಿನರಿಯಲ್ಲಿ ಧಾರ್ಮಿಕ ಅಧ್ಯಯನವನ್ನು ಪ್ರಾರಂಭಿಸಿದರು ಮತ್ತು ನಂತರ ಪುಣೆಯ ಪಾಪಲ್ ಸೆಮಿನರಿಗೆ ಹೋದರು ಎಂದು ಗೋವಾದ ಪಣಜಿಯ ಆರ್ಚ್‌ಬಿಷಪ್ ಅರಮನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Justin Bieber: ಭಾರತಕ್ಕೆ ಬರಲಿದ್ದಾರಂತೆ ಪಾಪ್ ಸ್ಟಾರ್ ಜಸ್ಟಿನ್ ಬೈಬರ್! ಯಾವಾಗ ಎಲ್ಲಿ ಗೊತ್ತಾ?
ಅವರು ತತ್ವಶಾಸ್ತ್ರ ಮತ್ತು ದೇವತಾಶಾಸ್ತ್ರದಲ್ಲಿ ಪದವಿ ಪಡೆದರು ಮತ್ತು ಕೊಂಕಣಿ, ಇಂಗ್ಲಿಷ್, ಪೋರ್ಚುಗೀಸ್, ಇಟಾಲಿಯನ್, ಫ್ರೆಂಚ್ ಮತ್ತು ಜರ್ಮನ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ ಎಂದು ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಿದರು.
Fr ಫೆರಾವೊ ಅವರು ಅಕ್ಟೋಬರ್ 28, 1979 ರಂದು ಪಾದ್ರಿಯಾಗಿ ದೀಕ್ಷೆ ಪಡೆದರು ಮತ್ತು ಡಿಸೆಂಬರ್ 12, 2003 ರಂದು ಆಗಿನ ಆರ್ಚ್‌ಬಿಷಪ್ ರೆವ್ ಫ್ರಾ ರೌಲ್ ಗೊನ್ಕಾಲ್ವ್ಸ್ ರಾಜೀನಾಮೆ ನೀಡಿದ ನಂತರ ಅವರನ್ನು ಪೋಪ್ ಜಾನ್ ಪಾಲ್ II ಅವರು ಗೋವಾ ಮತ್ತು ದಮನ್‌ನ ಆರ್ಚ್‌ಬಿಷಪ್ ಆಗಿ ನೇಮಿಸಿದರು.
ಅಂತೋನಿ ಪೂಲಾ ಯಾರು?
ಆರ್ಚ್‌ಬಿಷಪ್ ಅಂತೋನಿ ಪೂಲಾ (60) ನವೆಂಬರ್ 15, 1961ರಂದು ಕರ್ನೂಲ್ ಡಯಾಸಿಸ್‌ನ ಪೋಲೂರುನಲ್ಲಿ ಜನಿಸಿದರು. ಅವರು ಫೆಬ್ರವರಿ 20, 1992ರಂದು ಪಾದ್ರಿಯಾಗಿ ದೀಕ್ಷೆ ಪಡೆದರು. ಮತ್ತು ಫೆಬ್ರವರಿ 8, 2008ರಂದು ಕರ್ನೂಲ್‌ನ ಬಿಷಪ್ ಆಗಿ ನೇಮಕಗೊಂಡರು. ಅವರು ಆಂಧ್ರಪ್ರದೇಶ ಬಿಷಪ್‌ಗಳ ಸಮ್ಮೇಳನದಲ್ಲಿ ಯುವ ಆಯೋಗದ ಅಧ್ಯಕ್ಷರಾಗಿದ್ದಾರೆ ಎಂದು ಯೂನಿಯನ್ ಆಫ್ ಕ್ಯಾಥೋಲಿಕ್ ನ್ಯೂಸ್ ವರದಿ ಮಾಡಿದೆ.
ಇದನ್ನೂ ಓದಿ: Ukraine Crisis: 3 ತಿಂಗಳು ರಷ್ಯಾ ದಾಳಿಗೆ ನಲುಗಿದ ದೇಶ! ಉಕ್ರೇನ್ ಪರಿಸ್ಥಿತಿ ಹೇಗಾಗಿದೆ ನೋಡಿ
ನವೆಂಬರ್ 19, 2020 ರಂದು ರೆವ. ಆಂಥೋನಿ ಪೂಲಾ ಅವರನ್ನು ಹೈದರಾಬಾದ್‌ನ ಆರ್ಚ್‌ಬಿಷಪ್ ಆಗಿ ನೇಮಿಸಲಾಯಿತು. ಈ ಪ್ರಕಟಣೆಯು ಭಾರತೀಯ ಕ್ರಿಶ್ಚಿಯನ್ ಸಮುದಾಯಕ್ಕೆ ಒಂದು ದೊಡ್ಡ ಗೌರವವಾಗಿದೆ ಮತ್ತು ಈ ದೇಶದಲ್ಲಿ ಗಮನಾರ್ಹ ಸಂಖ್ಯೆಯ ಚರ್ಚ್ ಸಂಸ್ಥೆಗಳ ಉಪಸ್ಥಿತಿ ಮತ್ತು ಯುನಿವರ್ಸಲ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ಭಾರತೀಯ ಚರ್ಚ್ ವಹಿಸಬೇಕಾದ ಪಾತ್ರದ ಅಂಗೀಕಾರವಾಗಿದೆ ಎಂದು ಹಿರಿಯ ಪತ್ರಕರ್ತ ಕ್ಯಾಮಿಲ್ ಪಾರ್ಖೆ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ