HOME » NEWS » National-international » INDIA TAKE IMPORTANT STEP AGAINST CORONA THE COVISHIELD VACCINE IS BEING SHIPPED ACROSS THE COUNTRY MAK

Covishield Vaccine: ಕೊರೋನಾ ವಿರುದ್ಧ ಭಾರತ ಮಹತ್ವದ ಹೆಜ್ಜೆ; ದೇಶದೆಲ್ಲೆಡೆ ರವಾನೆಯಾಗುತ್ತಿದೆ ಕೋವಿಶೀಲ್ಡ್​ ಲಸಿಕೆ

ತಾಪಮಾನ-ನಿಯಂತ್ರಿತ ಮೂರು ಟ್ರಕ್‌ಗಳು ಪುಣೆ ಸೀರಮ್ ಇನ್‌ಸ್ಟಿಟ್ಯೂಟ್ ಗೇಟ್‌ಗಳಿಂದ ಇಂದು ಬೆಳಿಗ್ಗೆ 5 ಗಂಟೆಗೆ ಪುಣೆ ವಿಮಾನ ನಿಲ್ದಾಣಕ್ಕೆ ತೆರಳಿವೆ. ಅಲ್ಲಿಂದ ಭಾರತದಾದ್ಯಂತ ಲಸಿಕೆಗಳನ್ನು ಪೂರೈಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

news18-kannada
Updated:January 12, 2021, 9:50 AM IST
Covishield Vaccine: ಕೊರೋನಾ ವಿರುದ್ಧ ಭಾರತ ಮಹತ್ವದ ಹೆಜ್ಜೆ; ದೇಶದೆಲ್ಲೆಡೆ ರವಾನೆಯಾಗುತ್ತಿದೆ ಕೋವಿಶೀಲ್ಡ್​ ಲಸಿಕೆ
ಪುಣೆಯ ಸೀರಮ್​ ಇನ್ಸ್​ಟಿಟ್ಯೂಟ್​ನಿಂದ ದೇಶದೆಲ್ಲೆಡೆ ಪೂರೈಕೆಗೆ ಸಿದ್ಧವಾಗಿರುವ ಕೋವಿಶೀಲ್ಡ್​ ಲಸಿಕೆ.
  • Share this:
ಪುಣೆ (ಜನವರಿ 12); ಕೊರೋನಾ ವೈರಸ್​ನಿಂದಾಗಿ ಸಾಕಷ್ಟು ನಷ್ಟ ಅನುಭವಿಸಿದೆ ದೇಶಗಳ ಪಟ್ಟಿಯಲ್ಲಿ ಭಾರತ ಮುಂಚೂಣಿಯಲ್ಲಿದೆ. ದೇಶದಲ್ಲಿ ಈ ವೈರಸ್​ಗೆ ಈವರೆಗೆ 1 ಕೋಟಿಗೂ ಅಧಿಕ ಜನ ತುತ್ತಾಗಿದ್ದರೆ, 1.5 ಲಕ್ಷ ಜನ ಮೃತಪಟ್ಟಿದ್ದಾರೆ. ಹೀಗಾಗಿ ಈ ವೈರಸ್​ಗೆ ಪರಿಣಾಮಕಾರಿಯಾದ ಲಸಿಕೆಯನ್ನು ಸಂಶೋಧಿಸಲು ದೇಶದ ವಿಜ್ಞಾನಿಗಳು ಕಳೆದ ಒಂದು ವರ್ಷದಿಂದ ಪ್ರಯತ್ನಿಸುತ್ತಿದ್ದಾರೆ. ಈ ಪ್ರಯತ್ನದ ಫಲವಾಗಿ ಇದೀಗ ಕೋವಿಶೀಲ್ಡ್​ ಲಸಿಕೆಯನ್ನು ಸಂಶೋಧಿಸಲಾಗಿದೆ. ಜನವರಿ 16 ರಂದು ಈ ಲಸಿಕೆಯನ್ನು ದೇಶದ ಎಲ್ಲಾ ಪ್ರಜೆಗಳಿಗೆ ನೀಡಬೇಕು ಎಂದು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಕೊರೋನಾ ವಿರುದ್ಧ ಮಹತ್ವದ ಹೆಜ್ಜೆ ಇಟ್ಟಿದೆ. ಹೀಗಾಗಿ ಪುಣೆಯಲ್ಲಿರುವ ಸೀರಮ್​ ಇನ್ಸ್​ಟಿಟ್ಯೂಟ್​ನಿಂದ ಈ ಲಸಿಕೆ ವಿಮಾನ ನಿಲ್ದಾಣಕ್ಕೆ ತಲುಪಿದ್ದು, ಅಲ್ಲಿಂದ ಇಡೀ ರಾಷ್ಟ್ರಕ್ಕೆ ಪೂರೈಕೆಯಾಗುತ್ತದೆ ಎನ್ನಲಾಗುತ್ತಿದೆ. ಈ ಮಹತ್ವದ ಲಸಿಕೆ ಕಾರ್ಯಕ್ರಮಕ್ಕೂ ಮುನ್ನವೇ ಕೇಂದ್ರ ಸರ್ಕಾರ ಈ ಕೋವಿಶೀಲ್ಡ್​ ಲಸಿಕೆಯನ್ನು ಹಲವು ರಾಜ್ಯಗಳಲ್ಲಿ ಮೂರು ಸುತ್ತಿನ ಡ್ರೈರನ್​ ಮೂಲಕವೂ ಜನರಿಗೆ ನೀಡಿ ಪರೀಕ್ಷಿಸಿತ್ತು. ಅದರಲ್ಲಿ ಯಶಸ್ಸನ್ನು ಸಾಧಿಸಿತ್ತು.  ರಾಷ್ಟ್ರವ್ಯಾಪಿ ಇನಾಕ್ಯುಲೇಷನ್ ಡ್ರೈವ್ ಉಡಾವಣೆಗೆ ಇನ್ನೂ ಕೇವಲ ನಾಲ್ಕು ದಿನಗಳಷ್ಟೇ ಇದ್ದು, ತಾಪಮಾನ-ನಿಯಂತ್ರಿತ ಮೂರು ಟ್ರಕ್‌ಗಳು ಪುಣೆ ಸೀರಮ್ ಇನ್‌ಸ್ಟಿಟ್ಯೂಟ್ ಗೇಟ್‌ಗಳಿಂದ ಇಂದು ಬೆಳಿಗ್ಗೆ 5 ಗಂಟೆಗೆ ಪುಣೆ ವಿಮಾನ ನಿಲ್ದಾಣಕ್ಕೆ ತೆರಳಿವೆ. ಅಲ್ಲಿಂದ ಭಾರತದಾದ್ಯಂತ ಲಸಿಕೆಗಳನ್ನು ಪೂರೈಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಪ್ರತಿ ಟ್ರಕ್​ಗಳಲ್ಲಿ 478 ಪೆಟ್ಟಿಗೆಗಳಿದ್ದು, ಪ್ರತಿ ಪೆಟ್ಟಿಗೆ 32 ಕೆಜಿ ತೂಕವಿರುತ್ತದೆ ಎಂದು ಲಸಿಕೆ ಸಾರಿಗೆ ವ್ಯವಸ್ಥೆಯಲ್ಲಿ ತೊಡಗಿರುವ ಮೂಲಗಳು ಪಿಟಿಐಗೆ ತಿಳಿಸಿವೆ. ಟ್ರಕ್‌ಗಳು ಮಂಜರಿಯಲ್ಲಿರುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಆವರಣದಿಂದ ಹೊರಟು ವಿಮಾನ ನಿಲ್ದಾಣವನ್ನು ತಲುಪಿದ್ದು, ವಿಮಾನ ನಿಲ್ದಾಣದಿಂದ ಲಸಿಕೆಗಳನ್ನು ಬೆಳಿಗ್ಗೆ 10 ಗಂಟೆಯ ಒಳಗೆ ದೇಶದಾದ್ಯಂತ 13 ಸ್ಥಳಗಳಿಗೆ ರವಾನಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Farmers Protest: ರೈತರು ಆಯೋಜಿಸಿರುವ ಜನವರಿ 26ರ ಟ್ರ್ಯಾಕ್ಟರ್​ ರ‍್ಯಾಲಿಯನ್ನು ತಡೆಯುವಂತೆ ಸುಪ್ರೀಂಗೆ ಕೇಂದ್ರ ಸರ್ಕಾರ ಮನವಿ

ಪುಣಿಯಿಂದ ಈ ಕೋವಿಶೀಲ್ಡ್ ಲಸಿಕೆಗಳನ್ನು ದೆಹಲಿ, ಅಹಮದಾಬಾದ್, ಕೋಲ್ಕತಾ, ಚೆನ್ನೈ, ಬೆಂಗಳೂರು, ಕರ್ನೂಲ್, ಹೈದರಾಬಾದ್, ವಿಜಯವಾಡ, ಗುವಾಹಟಿ, ಲಕ್ನೋ, ಚಂಡೀಗಢ ಮತ್ತು ಭುವನೇಶ್ವರ ರಾಜ್ಯಗಳಿಗೆ ರವಾನಿಸಲಾಗಿದೆ. ಎರಡು ಸರಕು ವಿಮಾನಗಳು ಸೇರಿದಂತೆ ಎಂಟು ವಾಣಿಜ್ಯ ವಿಮಾನಗಳಲ್ಲಿ ಲಸಿಕೆಗಳನ್ನು ಪುಣೆಯಿಂದ ಈ ಎಲ್ಲಾ ರಾಜ್ಯಗಳಿಗೆ ಪೂರೈಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಮೊದಲ ಸರಕು ಹಾರಾಟವು ಹೈದರಾಬಾದ್, ವಿಜಯವಾಡ, ಮತ್ತು ಭುವನೇಶ್ವರವನ್ನು ತಲುಪಿದರೆ, ಎರಡನೇ ಸರಕು ಹಾರಾಟವು ಕೋಲ್ಕತಾ ಮತ್ತು ಗುವಾಹಟಿಗೆ ತೆರಳಿದೆ. ಇನ್ನೂ ಮುಂಬೈ ರಾಜ್ಯಕ್ಕೆ ರಸ್ತೆ ಮೂಲಕವೇ ಲಸಿಕೆಯನ್ನು ಪೂರೈಸಲಾಗಿದೆ. ಸೀರಮ್ ಇನ್‌ಸ್ಟಿಟ್ಯೂಟ್‌ನಿಂದ ಲಸಿಕೆ ದಾಸ್ತಾನು ಸಾಗಿಸಲು ಕೂಲ್-ಎಕ್ಸ್ ಕೋಲ್ಡ್ ಚೈನ್ ಲಿಮಿಟೆಡ್‌ಗೆ ಸೇರಿದ ಟ್ರಕ್‌ಗಳನ್ನು ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ.
Published by: MAshok Kumar
First published: January 12, 2021, 9:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories