India's Population: ಜನಸಂಖ್ಯೆಯಲ್ಲಿ ಚೀನಾವನ್ನೂ ಮೀರಿಸಲಿದೆ ಭಾರತ! ಓರ್ವನ ಜೀವಿತಾವಧಿ ಇಷ್ಟೇ ವರ್ಷ

2021 ರಲ್ಲಿ ಜಾಗತಿಕ ಜೀವಿತಾವಧಿ 71.0 ವರ್ಷಗಳಿಗೆ ಇಳಿದಿದೆ.  2019 ರಲ್ಲಿ 72.8 ರಷ್ಟಿದ್ದ ಜೀವಿತಾವಧಿ ಇದೀಗ ಕಡಿಮೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  2023 ಅಥವಾ 2022 ರ ನವೆಂಬರ್ ಮಧ್ಯದ ವೇಳೆಗೆ ವಿಶ್ವದ ಜನಸಂಖ್ಯೆಯು 8 ಶತಕೋಟಿಗೆ ತಲುಪುವ (World Population By 2023) ಮುನ್ಸೂಚನೆ ಇದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ. ಅಲ್ಲದೇ ಇನ್ನೊಂದು ಶಾಕಿಂಗ್ ಸುದ್ದಿಯೆಂದರೆ  ಭಾರತದ ಜನಸಂಖ್ಯೆಯು (India Population) ಮುಂದಿನ ವರ್ಷ ಚೀನಾದ ಜನಸಂಖ್ಯೆಯನ್ನೂ (World's Most Populous Country) ಮೀರಿಸಲಿದೆ. ಅಂದಹಾಗೆ ಜಾಗತಿಕ ಮಟ್ಟದಲ್ಲಿ ಜನಸಂಖ್ಯೆಯು 1950 ರಿಂದ ಅದರ ನಿಧಾನಗತಿಯ ದರದಲ್ಲಿ ಬೆಳೆಯುತ್ತಿದೆ.  2021 ರಲ್ಲಿ ಜಾಗತಿಕ ಜೀವಿತಾವಧಿ 71.0 ವರ್ಷಗಳಿಗೆ ಇಳಿದಿದೆ.  2019 ರಲ್ಲಿ 72.8 ರಷ್ಟಿದ್ದ ಜೀವಿತಾವಧಿ ಇದೀಗ ಕಡಿಮೆಯಾಗಿದೆ.  ಹೆಚ್ಚಾಗಿ ಕೋವಿಡ್ -19 ಸಾಂಕ್ರಾಮಿಕದ ಪ್ರಭಾವದಿಂದಾಗಿ ಈ ಪರಿಣಾಮ ಉಂಟಾಗಿದೆ.  

  ಕಡಿಮೆ ಅಭಿವೃದ್ಧಿ ಹೊಂದಿದ 46 ದೇಶಗಳು ಜನಸಂಖ್ಯೆಯ ದೃಷ್ಟಿಯಿಂದ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶಗಳ ಪಟ್ಟಿಗೆ ಸೇರಿವೆ.  2022 ಮತ್ತು 2050 ರ ನಡುವೆ ಜನಸಂಖ್ಯೆಯಲ್ಲಿ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಅಧ್ಯಯನ ವಿಭಾಗದಿಂದ ವರ್ಲ್ಡ್ ಪಾಪ್ಯುಲೇಶನ್ ಪ್ರಾಸ್ಪೆಕ್ಟ್ಸ್ 2022 (The World Population Prospects 2022) ಜಾಗತಿಕ ಜನಸಂಖ್ಯೆಯು ನವೆಂಬರ್ 15, 2022 ರಂದು ಎಂಟು ಬಿಲಿಯನ್ ತಲುಪಲಿದೆ ಎಂದು ಅಂದಾಜಿಸಲಾಗಿದೆ.

  2080 ರ ದಶಕದಲ್ಲಿ ಎಷ್ಟಾಗಲಿದೆ ಜನಸಂಖ್ಯೆ?
  ವಿಶ್ವದ ಜನಸಂಖ್ಯೆಯು 2080 ರ ದಶಕದಲ್ಲಿ ಸುಮಾರು 10.4 ಶತಕೋಟಿ ಜನರನ್ನು ತಲುಪುತ್ತದೆ. 2100 ರವರೆಗೆ ಅದೇ ಮಟ್ಟದಲ್ಲಿ ಉಳಿಯುತ್ತದೆ ಎಂದು ಅಂದಾಜಿಸಲಾಗಿದೆ.

  ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶಗಳಿವು
  2023 ರ ವೇಳೆಗೆ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ ಎಂದು ವರದಿ ಹೇಳಿದೆ. 2022 ರಲ್ಲಿ ವಿಶ್ವದ ಎರಡು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶಗಳೆಂದರೆ ಪೂರ್ವ ಮತ್ತು ಆಗ್ನೇಯ ಏಷ್ಯಾ.  ಈ ಎರಡು ಪ್ರದೇಶಗಳಲ್ಲಿ ವಾಸಿಸುವ 2.3 ಶತಕೋಟಿ ಜನರು, ಜಾಗತಿಕ ಜನಸಂಖ್ಯೆಯ 29 ಪ್ರತಿಶತವನ್ನು ಪ್ರತಿನಿಧಿಸುತ್ತಾರೆ.  ಮಧ್ಯ ಮತ್ತು ದಕ್ಷಿಣ ಏಷ್ಯಾ, 2.1 ಶತಕೋಟಿಯೊಂದಿಗೆ ಒಟ್ಟು ವಿಶ್ವದ ಜನಸಂಖ್ಯೆಯ 26 ಪ್ರತಿಶತವನ್ನು ಪ್ರತಿನಿಧಿಸುತ್ತದೆ.

  ಈ ದೇಶಗಳಲ್ಲಿ ಅತಿ ಹೆಚ್ಚು ಜನಸಂಖ್ಯೆ
  2050 ರವರೆಗಿನ ಜಾಗತಿಕ ಜನಸಂಖ್ಯೆಯ ಯೋಜಿತ ಹೆಚ್ಚಳದ ಅರ್ಧಕ್ಕಿಂತ ಹೆಚ್ಚು ಭಾರತ ಸೇರಿದಂತೆ ಕೇವಲ ಎಂಟು ದೇಶಗಳಲ್ಲಿ ಕೇಂದ್ರೀಕೃತವಾಗಿರುತ್ತದೆ.
  ಇತರ ದೇಶಗಳೆಂದರೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಈಜಿಪ್ಟ್, ಇಥಿಯೋಪಿಯಾ, ನೈಜೀರಿಯಾ, ಪಾಕಿಸ್ತಾನ, ಫಿಲಿಪೈನ್ಸ್ ಮತ್ತು ತಾಂಜಾನಿಯಾ.
  ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್, ಉತ್ತರ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ ಮತ್ತು ಓಷಿಯಾನಿಯಾ. ಈ ದೇಶಗಳಲ್ಲಿ ಜನಸಂಖ್ಯೆಯು ಶತಮಾನದ ಅಂತ್ಯದ ವೇಳೆಗೆ ನಿಧಾನವಾಗಿ ಆದರೆ ಧನಾತ್ಮಕ ಬೆಳವಣಿಗೆಯನ್ನು ಕಾಣುವ ನಿರೀಕ್ಷೆಯಿದೆ ಎಂದು ವಿಶ್ವಸಂಸ್ಥೆಯ ವರದಿ ಉಲ್ಲೇಖಿಸುತ್ತದೆ.

  ಇದನ್ನೂ ಓದಿ:AIADMK Tussle: ಎಐಎಡಿಎಂಕೆ ಪಕ್ಷದ ನಾಯಕತ್ವ ಸ್ಥಾನಕ್ಕೆ ಭಾರೀ ಕಿತ್ತಾಟ; ತಮಿಳುನಾಡಲ್ಲಿ ಏನಾಗುತ್ತಿದೆ?

  ಪೂರ್ವ ಮತ್ತು ಆಗ್ನೇಯ ಏಷ್ಯಾ, ಮಧ್ಯ ಮತ್ತು ದಕ್ಷಿಣ ಏಷ್ಯಾ, ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್, ಮತ್ತು ಯುರೋಪ್ ಮತ್ತು ಉತ್ತರ ಅಮೇರಿಕಾ ತಮ್ಮ ಜನಸಂಖ್ಯೆಯ ಉತ್ತುಂಗವನ್ನು ತಲುಪುವ ಸಾಧ್ಯತೆಯಿದೆ ಎಂದು ವರದಿ ತಿಳಿಸುತ್ತದೆ.

  ಇದನ್ನೂ ಓದಿ: Vijay Mallya: ವಿಜಯ್ ಮಲ್ಯಗೆ 4 ತಿಂಗಳು ಜೈಲು, 2 ಸಾವಿರ ರೂ. ದಂಡ ವಿಧಿಸಿದ ಸುಪ್ರೀಂಕೋರ್ಟ್; ಯಾವ ಕೇಸ್ ಇದು?

  2010-2021 ರಿಂದ ವಲಸಿಗರ ನಿವ್ವಳ ಹೊರಹರಿವು 1 ಮಿಲಿಯನ್ ಮೀರಿರುವ 10 ದೇಶಗಳಲ್ಲಿ ಭಾರತವೂ ಸೇರಿದೆ. ಈ ಹಲವು ದೇಶಗಳಲ್ಲಿ, ಹೊರಹರಿವು ತಾತ್ಕಾಲಿಕ ಕಾರ್ಮಿಕ ಚಳುವಳಿಗಳ ಕಾರಣದಿಂದಾಗಿತ್ತು. ವಲಸಿಗರ ಅತಿ ಹೆಚ್ಚು ನಿವ್ವಳ ಹೊರಹರಿವು ಪಾಕಿಸ್ತಾನದಿಂದ ವರದಿಯಾಗಿದೆ. ಸಿರಿಯಾ, ವೆನೆಜುವೆಲಾ ಮತ್ತು ಮ್ಯಾನ್ಮಾರ್‌ನಂತಹ ದೇಶಗಳು ಅಭದ್ರತೆ ಮತ್ತು ಸಂಘರ್ಷದ ಕಾರಣದಿಂದ ಜನ ವಲಸೆ ಹೋಗುತ್ತಿದ್ದಾರೆ ಎಂದು ವರದಿಯಲ್ಲಿದೆ.
  Published by:guruganesh bhat
  First published: