• Home
  • »
  • News
  • »
  • national-international
  • »
  • ಭಾರತದಿಂದ ಸಬ್​ಮರೈನ್ ನಾಶಮಾಡಬಲ್ಲ ಶಕ್ತಿಶಾಲಿ SMART ಕ್ಷಿಪಣಿ ಯಶಸ್ವಿ ಪ್ರಯೋಗ

ಭಾರತದಿಂದ ಸಬ್​ಮರೈನ್ ನಾಶಮಾಡಬಲ್ಲ ಶಕ್ತಿಶಾಲಿ SMART ಕ್ಷಿಪಣಿ ಯಶಸ್ವಿ ಪ್ರಯೋಗ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಮುದ್ರದೊಳಗಿನ ಶತ್ರು ದೇಶದ ಸಬ್​ಮರೈನ್​ಗಳನ್ನ ಪತ್ತೆ ಹಚ್ಚಿ ಉಡಾಯಿಸಬಲ್ಲ ಸ್ಮಾರ್ಟ್ ಕ್ಷಿಪಣಿಯನ್ನು ಒಡಿಶಾದ ದ್ವೀಪವೊಂದರಲ್ಲಿ ಯಶಸ್ವಿಯಾಗಿ ಪ್ರಯೋಗ ಮಾಡಲಾಗಿದೆ. ಇದು ವಿಶ್ವದ ಅತ್ಯಂತ ಪ್ರಬಲ ಆ್ಯಂಟಿ-ಸಬ್​ಮರೈನ್ ಕ್ಷಿಪಣಿಗಳಲ್ಲೊಂದೆನಿಸಿದೆ.

  • News18
  • Last Updated :
  • Share this:

ನವದೆಹಲಿ(ಅ. 05): ಸಮುದ್ರದಾಳದಲ್ಲಿರುವ ಶತ್ರುದೇಶಗಳ ಸಬ್​ಮರೀನ್​ಗಳನ್ನ ಪತ್ತೆ ಹಚ್ಚಿ ಉಡಾಯಿಸಬಲ್ಲ ಸಾಮರ್ಥ್ಯದ ಸೂಪರ್ ಸಾನಿಕ್ ಸ್ಮಾರ್ಟ್ ಮಿಸೈಲ್​ ಅನ್ನು ಭಾರತ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಡಿಆರ್​ಡಿಒದಿಂದ ದೇಶೀಯ ತಂತ್ರಜ್ಞಾನದ ಮೂಲಕ ನಿರ್ಮಾಣವಾದ SMART (Supersonic Missile Assisted Release of Torpedo) ಕ್ಷಿಪಣಿಯನ್ನ ಒಡಿಶಾ ರಾಜ್ಯದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಬೆಳಗ್ಗೆ 11:45ಕ್ಕೆ ಪರೀಕ್ಷೆ ಮಾಡಲಾಯಿತು. ಈ ಪರೀಕ್ಷೆಯಲ್ಲಿ ಕ್ಷಿಪಣಿ ತನ್ನ ಎಲ್ಲಾ ಉದ್ದೇಶಗಳಲ್ಲೂ ಯಶಸ್ವಿಯಾಯಿತು ಎಂದು ಮೂಲಗಳು ಹೇಳಿವೆ. ಡಿಆರ್​ಡಿಒ ಅಭಿವೃದ್ಧಿಪಡಿಸಿದ ಈ ಕ್ಷಿಪಣಿ ವಿಶ್ವದ ಅತಿ ಶಕ್ತಿಶಾಲಿ ಆ್ಯಂಟಿ-ಸಬ್​​ಮರೀನ್ ಮಿಸೈಲ್​ಗಳಲ್ಲೊಂದೆನಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಕ್ಷಿಪಣಿ ಅಭಿವೃದ್ಧಿಪಡಿಸಿದ ಡಿಆರ್​ಡಿಒ ವಿಜ್ಞಾನಿಗಳಿಗೆ ಅಭಿನಂದನೆ ಹೇಳಿದ್ದಾರೆ.


ನಿನ್ನೆಯಷ್ಟೇ ಹೈಪರ್​ಸಾನಿಕ್ ಕ್ಷಿಪಣಿ ‘ಶೌರ್ಯ’ದ ಪರೀಕ್ಷೆ ಯಶಸ್ವಿಯಾಗಿತ್ತು. ಅದೂ ಕೂಡ ದೇಶೀಯವಾಗಿ ನಿರ್ಮಿತವಾದ ಕ್ಷಿಪಣಿ. 1,000 ಕಿಮೀ ದೂರದವರೆಗಿನ ಗುರಿಯನ್ನು ಶೌರ್ಯ ಉಡಾಯಿಸಬಲ್ಲ ಸಾಮರ್ಥ್ಯ ಹೊಂದಿದೆ. ಈಗ ಸಾಗರದಾಳದಲ್ಲಿ ಅವಿತಿರುವ ಜಲಾಂತರ್ಗಾಮಿ ನೌಕೆಯನ್ನ ನಾಶ ಮಾಡಬಲ್ಲ ಸೂಪರ್ ಸಾನಿಕ್ ಸ್ಮಾರ್ಟ್ ಕ್ಷಿಪಣಿ ಭಾರತದ ನೌಕಾದಳದ ಬತ್ತಳಿಕೆ ಸೇರಿದೆ. ಸಾಗರದ ಮೂಲಕ ಬರುವ ಶತ್ರುಗಳ ಅಪಾಯವನ್ನು ಎದುರಿಸುವ ಭಾರತದ ಸಾಮರ್ಥ್ಯ ಈಗ ಇನ್ನಷ್ಟು ಹೆಚ್ಚಿದಂತಾಗಿದೆ.


ಇದನ್ನೂ ಓದಿ: RAISE 2020: ಜಾಗತಿಕ ಕೃತಕ ಬುದ್ಧಿಮತ್ತೆ ಶೃಂಗ ಸಭೆಗೆ ಇಂದು ಪ್ರಧಾನಿ ಚಾಲನೆ


SMART ಕ್ಷಿಪಣಿಯ ತಂತ್ರಜ್ಞಾನ ಅತಿ ವಿಶಿಷ್ಟವಾದುದು. ಹೈಬ್ರಿಡ್ ಟೆಕ್ನಾಲಜಿಯನ್ನ ಅಳವಡಿಸಲಾಗಿದೆ. ಇದು ಈಗಿರುವ ತಂತ್ರಜ್ಞಾನವನ್ನೂ ಸೂಕ್ತವಾಗಿ ಮಾರ್ಪಡಿಸಲು ಅನುವು ಮಾಡಿಕೊಡುತ್ತದೆ ಎಂದು ಡಿಆರ್​ಡಿಒದ ಮುಖ್ಯಸ್ಥ ಡಾ. ಜಿ ಸತೀಶ್ ರೆಡ್ಡಿ ಹೇಳುತ್ತಾರೆ.


ಸ್ಮಾರ್ಟ್ ಪ್ರಯೋಗ ಹೇಗೆ?


ಈಗಿರುವ ಯುದ್ಧನೌಕೆಗಳಲ್ಲಿ ಸ್ಮಾರ್ಟ್ ಕ್ಷಿಪಣಿಯನ್ನು ಸಾಗಿಸಬಹುದು. ಮಾಮೂಲಿಯ ಸೂಪರ್ ಸಾನಿಕ್ ಕ್ಷಿಪಣಿ ರೀತಿಯಲ್ಲೇ ಇದನ್ನು ಉಡಾವಣೆ ಮಾಡಬಹುದು. ಸಮುದ್ರದ ಮೇಲೆ ಕಡಿಮೆ ಎತ್ತರದಲ್ಲೇ ಸಾಗುವ ಇದು ಎರಡು ಕಡೆಯಿಂದ ಸಿಗ್ನಲ್ ಪಡೆಯುತ್ತದೆ. ಯುದ್ಧನೌಕೆಯಿಂದ ಸಿಗುವ ಸಿಗ್ನಲ್ ಅಥವಾ ಕ್ಷಿಪಣಿಯಲ್ಲಿ ಅಂತರ್ಗತವಾಗಿರುವ ಸಬ್​ಮರೀನ್ ಗುರಿ ಪತ್ತೆ ವ್ಯವಸ್ಥೆಯಿಂದ ಸಿಗ್ನಲ್ ಸ್ವೀಕರಿಸಬಲ್ಲುದು. ಈ ಮೂಲಕ ಶತ್ರುಗಳ ಜಲಾಂತರ್ಗಾಮಿ ನೌಕೆ (ಸಬ್​ಮರೈನ್) ಸಾಗುತ್ತಿರುವ ದಿಕ್ಕಿನ ಕಡೆ ತನ್ನ ದಿಕ್ಕನ್ನು ಬದಲಾಯಿಸಿ ಹೋಗಬಲ್ಲುದು. ಸಬ್​ಮರೈನ್ ಹತ್ತಿರ ಇರುವಂತೆ ಈ ಕ್ಷಿಪಣಿ ತನ್ನ ಒಳಗೆ ಇರುವ ಟಾರ್ಪೆಡೋವನ್ನ ಉಡಾವಣೆ ಮಾಡುತ್ತದೆ. ನಿಶ್ಚಿತ ಗುರಿಯೊಂದಿಗೆ ಈ ಟಾರ್ಪೆಡೋ ಸಮುದ್ರದೊಳಗೆ ನುಗ್ಗಿ ಸಬ್​ಮರೀನ್ ಅನ್ನು ಉಡಾಯಿಸುತ್ತದೆ.


ಇದನ್ನೂ ಓದಿ: ಕೇರಳದ ಕೊಚ್ಚಿಯಲ್ಲಿ ತರಬೇತಿ ವೇಳೆ ಗ್ಲೈಡರ್ ಪತನ; ಇಬ್ಬರು ನೌಕಾಧಿಕಾರಿಗಳು ಸಾವು


ಭಾರತದ ಅಕ್ಕಪಕ್ಕದ ಸಮುದ್ರಗಳಲ್ಲಿ ಶತ್ರುದೇಶಗಳಿಂದ ಅಪಾಯ ಇದ್ದೇ ಇದೆ. ಭವಿಷ್ಯದಲ್ಲಿ ಪಾಕಿಸ್ತಾನ ಮತ್ತು ಚೀನಾದಿಂದ ಎದುರಾಗುವ ಜಲಯುದ್ಧಗಳನ್ನ ಮೆಟ್ಟಿ ನಿಲ್ಲಲು ಇಂಥ ಕ್ಷಿಪಣಿ ಅಸ್ತ್ರಗಳು ಭಾರತಕ್ಕೆ ಬಹಳ ಉಪಯೋಗಕ್ಕೆ ಬರುವ ಅಂದಾಜು ಇದೆ.

Published by:Vijayasarthy SN
First published: