• Home
  • »
  • News
  • »
  • national-international
  • »
  • ಒಡಿಶಾ ಕರಾವಳಿಯಲ್ಲಿ ಹೊಸ ತಲೆಮಾರಿನ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಭಾರತ

ಒಡಿಶಾ ಕರಾವಳಿಯಲ್ಲಿ ಹೊಸ ತಲೆಮಾರಿನ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಭಾರತ

ಅಗ್ನಿ ಪ್ರೈಮ್ ಕ್ಷಿಪಣಿ

ಅಗ್ನಿ ಪ್ರೈಮ್ ಕ್ಷಿಪಣಿ

ಕ್ಷಿಪಣಿಯನ್ನು ಭಾರತೀಯ ವಾಯುಪಡೆಯ (IAF) ಸುಖೋಯ್ 30 MKI ಸೂಪರ್‌ಸಾನಿಕ್ ಫೈಟರ್ ಏರ್‌ಕ್ರಾಫ್ಟ್‌ನಿಂದ ಒಡಿಶಾದ ಕರಾವಳಿಯ ಚಂಡೀಪುರ ಮೂಲದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR) ನಿಂದ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

  • Share this:

ಒಡಿಶಾದ(Odisha) ಕರಾವಳಿ ಪ್ರದೇಶದ ಬಾಲಾಸೋರ್‌ನಲ್ಲಿ ಭಾರತ ಅಗ್ನಿ ಪ್ರೈಮ್ ( Prime missile at Balasore,)ಕ್ಷಿಪಣಿಯನ್ನು (Successfully tested) ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. Agni - P ಅಗ್ನಿ (Agni - P )ವರ್ಗದ ಕ್ಷಿಪಣಿಗಳ ( Missiles) ಹೊಸ ಪೀಳಿಗೆಯ ಸುಧಾರಿತ ರೂಪಾಂತರವಾಗಿದೆ. ಇದು 2 ಹಂತದ ಕ್ಯಾನಿಸ್ಟರೈಸ್ಡ್ (Canisterized missile) ಕ್ಷಿಪಣಿಯಾಗಿದ್ದು, 1,000 ಮತ್ತು 2,000 ಕಿಮೀ ವ್ಯಾಪ್ತಿಯ ಸಾಮರ್ಥ್ಯ ಹೊಂದಿದೆ ಎಂದು ವರದಿಯಾಗಿದೆ.


 ಕ್ಷಿಪಣಿಯ ಎರಡನೇ ಪರೀಕ್ಷೆ
ಇನ್ನು, ಇದು ಅಗ್ನಿ ಪ್ರಧಾನ ಕ್ಷಿಪಣಿಯ ಎರಡನೇ ಪರೀಕ್ಷೆಯಾಗಿದ್ದು, ಬಾಲಸೋರ್‌ನ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಬೆಳಗ್ಗೆ 11 ಗಂಟೆಗೆ ಈ ಪರೀಕ್ಷೆ ನಡೆಸಲಾಯಿತು ಎಂದು ತಿಳಿದುಬಂದಿದೆ. ಈ ಪರೀಕ್ಷೆಯಲ್ಲಿ ಪರಮಾಣು ಸಾಮರ್ಥ್ಯದ ಕಾರ್ಯತಂತ್ರದ ಕ್ಷಿಪಣಿ ಅಗ್ನಿ ಪ್ರೈಮ್‌ಗೆ ಸಾಕಷ್ಟು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ ಎಂದು ಎಎನ್‌ಐ ವರದಿ ತಿಳಿಸಿದೆ.


ಇದನ್ನೂ ಓದಿ: ಕೋವಿಡ್​ ರೋಗಿಗಳಿಗೆ 2-ಡಿಜಿ ಔಷಧಿ ಬಳಕೆಯ ನಿರ್ದೇಶನಗಳನ್ನು ನೀಡಿದ ಡಿಆರ್​ಡಿಒ: ಇದನ್ನು ಬಳಸುವುದು ಹೇಗೆ? ಯಾವಾಗ?


 ರಕ್ಷಣಾ ಸಚಿವರಿಗೆ ಅಭಿನಂದನೆ
ಕ್ಷಿಪಣಿ ಪರೀಕ್ಷೆಯು ಅದರ ಎಲ್ಲಾ ಮಿಷನ್ ಉದ್ದೇಶಗಳನ್ನು ಉನ್ನತ ಮಟ್ಟದ ನಿಖರತೆಯೊಂದಿಗೆ ಪೂರೈಸಿದೆ" ಎಂದು ಅಧಿಕಾರಿಯೊಬ್ಬರು ಉಲ್ಲೇಖಿಸಿದ್ದಾರೆ. ಅಲ್ಲದೆ, ಮೊದಲ ಪರೀಕ್ಷೆಯನ್ನು ಜೂನ್ 28ರಂದು ಅದೇ ಸ್ಥಳದಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. ಯಶಸ್ವಿ ಹಾರಾಟ ಪರೀಕ್ಷೆಗಾಗಿ ರಕ್ಷಣಾ ಮತ್ತು ಸಂಶೋಧನಾ ಅಭಿವೃದ್ಧಿ ಸಂಸ್ಥೆ (DRDO) ಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದರು ಮತ್ತು ವ್ಯವಸ್ಥೆಯ ಕಾರ್ಯಕ್ಷಮತೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು.


 ಕ್ಷಿಪಣಿ ಪಥ ಟ್ರ್ಯಾಕ್
ಡಿಆರ್‌ಡಿಒ ಬೆಳಗ್ಗೆ 11.06ಕ್ಕೆ ಪರೀಕ್ಷೆ ನಡೆಸಿತು. ಟೆಲಿಮೆಟ್ರಿ, ರಾಡಾರ್, ಎಲೆಕ್ಟ್ರೋ-ಆಪ್ಟಿಕಲ್ ಸ್ಟೇಷನ್‌ಗಳು ಮತ್ತು ಡೌನ್‌ರೇಂಜ್ ಹಡಗುಗಳು ಪೂರ್ವ ಕರಾವಳಿಯುದ್ದಕ್ಕೂ ಕ್ಷಿಪಣಿ ಪಥ ಮತ್ತು ನಿಯತಾಂಕಗಳನ್ನು ಟ್ರ್ಯಾಕ್ ಮಾಡುತ್ತವೆ ಹಾಗೂ ಮೇಲ್ವಿಚಾರಣೆ ಮಾಡುತ್ತವೆ. ಕ್ಷಿಪಣಿಯು ಪಠ್ಯಪುಸ್ತಕದ ಪಥ ಅನುಸರಿಸಿತು, ಇದು ಉನ್ನತ ಮಟ್ಟದ ನಿಖರತೆಯೊಂದಿಗೆ ಎಲ್ಲಾ ಮಿಷನ್ ಉದ್ದೇಶಗಳನ್ನು ಪೂರೈಸಿದೆ” ಎಂದು DRDO ತನ್ನ ಹೇಳಿಕೆಯಲ್ಲಿ ತಿಳಿಸಿದೆ.


 ಪ್ರಮುಖ ಮೈಲಿಗಲ್ಲು
ಬ್ಯಾಲಿಸ್ಟಿಕ್ ಕ್ಷಿಪಣಿಯು ಅಗ್ನಿ 3ಗಿಂತ 50 ಪ್ರತಿಶತ ಕಡಿಮೆ ತೂಗುತ್ತದೆ ಮತ್ತು ಈ ಕ್ಷಿಪಣಿಯನ್ನು ರೈಲು ಮತ್ತು ರಸ್ತೆಯಿಂದಲೂ ಉಡಾವಣೆ ಮಾಡಬಹುದು ಮತ್ತು ದೀರ್ಘಾವಧಿಯವರೆಗೆ ಸಂಗ್ರಹಿಸಬಹುದು ಹಾಗೂ ಕಾರ್ಯಾಚರಣೆಯ ಅಗತ್ಯತೆಗಳಿಗೆ ಅನುಗುಣವಾಗಿ ದೇಶಾದ್ಯಂತ ಸಾಗಿಸಬಹುದು ಎನ್ನಲಾಗಿದೆ. ಡಿಸೆಂಬರ್ 7ರಂದು, ದೇಶವು ಬ್ರಹ್ಮೋಸ್ ಸೂಪರ್‌ಸಾನಿಕ್‌ ಕ್ರೂಸ್ ಕ್ಷಿಪಣಿಯ ವಾಯು ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷಿಸಿತು, ಇದನ್ನು ರಕ್ಷಣಾ ಸಚಿವಾಲಯವು ಬ್ರಹ್ಮೋಸ್ ಅಭಿವೃದ್ಧಿಯಲ್ಲಿ 'ಪ್ರಮುಖ ಮೈಲಿಗಲ್ಲು' ಎಂದು ಬಣ್ಣಿಸಿದೆ.


 ಸುಖೋಯ್ ಪರಿಶೀಲನೆ
ಕ್ಷಿಪಣಿಯನ್ನು ಭಾರತೀಯ ವಾಯುಪಡೆಯ (IAF) ಸುಖೋಯ್ 30 MKI ಸೂಪರ್‌ಸಾನಿಕ್ ಫೈಟರ್ ಏರ್‌ಕ್ರಾಫ್ಟ್‌ನಿಂದ ಒಡಿಶಾದ ಕರಾವಳಿಯ ಚಂಡೀಪುರ ಮೂಲದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR) ನಿಂದ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಅದೇ ಸಮಯದಲ್ಲಿ, ಲಂಬವಾಗಿ ಉಡಾವಣೆಯಾದ ಕಿರು-ಶ್ರೇಣಿಯ ಮೇಲ್ಮೈಯಿಂದ ವಾಯು ಕ್ಷಿಪಣಿ (VL-SRSAM) ಅನ್ನು ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR) ನಿಂದ ಯಶಸ್ವಿಯಾಗಿ ಪರೀಕ್ಷಿಸಲಾಯಿತು.


ಇದನ್ನೂ ಓದಿ: Agni-5 Missile: ಭಾರತದ ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿ: 5,000 ಕಿ.ಮೀ ಗುರಿ ಭೇದಿಸುವ ಡೆಡ್ಲಿ ಮಿಸೈಲ್​!


DRDOನಿಂದ ವಿನ್ಯಾಸ
ವಾಯು ರಕ್ಷಣಾ ವ್ಯವಸ್ಥೆಯು ಸುಮಾರು 15 ಕಿಮೀ ಗುರಿಗಳಲ್ಲಿ ತೊಡಗಿಸಿಕೊಳ್ಳುತ್ತದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಅಧಿಕಾರಿಗಳು (DRDO) ಮಾಹಿತಿ ನೀಡಿದ್ದಾರೆ. ಇನ್ನು, VL-SRSAM, ಭಾರತೀಯ ನೌಕಾಪಡೆಗಾಗಿ DRDOನಿಂದ ಸ್ಥಳೀಯವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ. ಇದು ಸಮುದ್ರದ ಸ್ಕಿಮ್ಮಿಂಗ್ ಗುರಿಗಳನ್ನು ಒಳಗೊಂಡಂತೆ ಹತ್ತಿರದ ವ್ಯಾಪ್ತಿಯಲ್ಲಿ ವಿವಿಧ ವೈಮಾನಿಕ ಬೆದರಿಕೆಗಳನ್ನು ತಟಸ್ಥಗೊಳಿಸಲು ಉದ್ದೇಶಿಸಲಾಗಿದೆ ಎಂದೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಹೇಳಿದೆ.

Published by:vanithasanjevani vanithasanjevani
First published: