ಬ್ರಹ್ಮೋಸ್ ಕ್ಷಿಪಣಿ ಯಶಸ್ವಿ ಪ್ರಯೋಗ; ಕರಾರುವಾಕ್ ದಾಳಿಯಿಂದ ಗಮನ ಸೆಳೆದ ಮಿಸೈಲ್

ಪಂಜಾಬ್ನ ವಾಯುನೆಲೆಯಿಂದ ಹೊರಟು 3 ಗಂಟೆ ಹಾರಾಟ ನಡೆಸಿ ಮಾರ್ಗಮಧ್ಯೆ ಆಗಸದಲ್ಲಿ ಇಂಧನ ತುಂಬಿಸಿಕೊಂಡು ಬಂಗಾಳ ಕೊಲ್ಲಿ ತಲುಪಿದ ಸುಖೋಯ್ ಯುದ್ಧವಿಮಾನದಿಂದ ಚಿಮ್ಮಿಸಲಾದ ಬ್ರಹ್ಮೋಸ್ ಕ್ಷಿಪಣಿ ತನ್ನ ನಿಗದಿತ ಗುರಿಯನ್ನು ನಿಖರವಾಗಿ ಹೊಡೆದುರುಳಿಸಿತು.

news18
Updated:October 30, 2020, 11:15 PM IST
ಬ್ರಹ್ಮೋಸ್ ಕ್ಷಿಪಣಿ ಯಶಸ್ವಿ ಪ್ರಯೋಗ; ಕರಾರುವಾಕ್ ದಾಳಿಯಿಂದ ಗಮನ ಸೆಳೆದ ಮಿಸೈಲ್
ಯುದ್ಧವಿಮಾನ
  • News18
  • Last Updated: October 30, 2020, 11:15 PM IST
  • Share this:
ನವದೆಹಲಿ(ಅ. 30): ಭಾರತದ ಬತ್ತಳಿಕೆಯಲ್ಲಿರುವ ಪ್ರಬಲ ಅಸ್ತ್ರಗಳ ಪೈಕಿ ಎಂದು ಪರಿಗಣಿಸಲಾಗಿರುವ ಬ್ರಹ್ಮೋಸ್ ಸೂಪರ್​ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಭಾರತದ ವಾಯುಪಡೆ ಇಂದು ಯಶಸ್ವಿಯಾಗಿ ಪ್ರಯೋಗ ಮಾಡಿದೆ. ಬಂಗಾಳ ಕೊಲ್ಲಿಯಲ್ಲಿ ಸುಖೋಯ್ ಫೈಟರ್ ಜೆಟ್​ನಿಂದ ಆಗಸದಿಂದಲೇ ಹಾರಿಸಲಾದ ಕ್ಷಿಪಣಿ ತನ್ನ ನಿಶ್ಚಿತ ಗುರಿಯನ್ನು ಬಹಳ ಕರಾರುವಾಕ್ಕಾಗಿ ಹೊಡೆದುಹಾಕಿದೆ. ಸಮುದ್ರದಲ್ಲಿ ಮುಳುಗುತ್ತಿರುವ ಹಡಗನ್ನು ಗುರಿಯಾಗಿಸಿ ಬಿಡಲಾಗಿದ್ದ ಈ ಕ್ಷಿಪಣಿ ಬಹಳ ನಿಖರವಾಗಿ ಹಡಗನ್ನು ಉಡಾಯಿಸಿತು. ವಾಯುಪಡೆಗೆ ಈ ಪರೀಕ್ಷೆ ಸಂಪೂರ್ಣ ಸಮಾಧಾನ ತಂದಿದೆ.

ಪಂಜಾಬ್​ನಲ್ಲಿರುವ ವಾಯುಪಡೆಯ ನೆಲೆಯಿಂದ ಹೊರಟ ಸುಖೋಯ್ Su-30 MKI ಯುದ್ಧವಿಮಾನ ಮೂರು ಗಂಟೆ ಪ್ರಯಾಣಿಸಿ ಬಂಗಾಳ ಕೊಲ್ಲಿ ತಲುಪಿತು. ಮಾರ್ಗಮಧ್ಯದಲ್ಲಿ ಆಗಸದಲ್ಲೇ ಅದಕ್ಕೆ ಇಂಧನ ತುಂಬಿಸಲಾಯಿತು. ಮೂರು ಗಂಟೆ ಹಾರಾಟದ ಬಳಿಕ ಸುಖೋಯ್​ನಲ್ಲಿದ್ದ ಬ್ರಹ್ಮೋಸ್ ಕ್ಷಿಪಣಿಯನ್ನು ಹಾರಿಸಲಾಯಿತು. ಯುದ್ಧದ ಸಂದರ್ಭದಲ್ಲಿ ಬ್ರಹ್ಮೋಸ್ ಕ್ಷಿಪಣಿಗಳ ಪಾತ್ರ ಅತ್ಯಂತ ಮಹತ್ವದ್ದು. ಇವು ಸಮುದ್ರ ಅಥವಾ ನೆಲದಲ್ಲಿ ದೂರದಲ್ಲಿರುವ ಗುರಿಗಳನ್ನು ಬಹಳ ನಿಖರವಾಗಿ ತಲುಪಿ ಉಡಾಯಿಸಬಲ್ಲವು. ಹಗಲಾಗಲೀ, ರಾತ್ರಿಯಾಗಲೀ ಅಥವಾ ಕೆಟ್ಟ ಹವಾಮಾನ ಇರಲಿ ಇವು ಇಟ್ಟ ಗುರಿ ತಪ್ಪುವುದಿಲ್ಲ. ಹೀಗಾಗಿ, ನೈಜ ಯುದ್ಧದ ಸಂದರ್ಭದಲ್ಲಿ ಇವುಗಳ ಪಾತ್ರ ಬಹಳ ಮುಖ್ಯ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಪ್ರವಾದಿಗೆ ಅವಹೇಳನ: ಫ್ರಾನ್ಸ್ ವಿರುದ್ಧ ಕ್ರಮ ಕೈಗೊಳ್ಳಿ - ಇಸ್ಲಾಮಿಕ್ ರಾಷ್ಟ್ರಗಳಿಗೆ ದಾರುಲ್ ಉಲೂಮ್ ಕರೆ

ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಬ್ರಹ್ಮೋಸ್ ಕ್ಷಿಪಣಿಗಳನ್ನ ಸುಖೋಯ್ ಯುದ್ಧವಿಮಾನಗಳಿಗೆ ಅಳವಡಿಸುವ ಕಾರ್ಯ ಬಹುತೇಕ ಮುಗಿದಿದೆ. ಕಳೆದ ಎರಡು ತಿಂಗಳಲ್ಲಿ ಭಾರತ ಹಲವು ಕ್ಷಿಪಣಿಗಳ ಪರೀಕ್ಷೆ ನಡೆಸಿದೆ. ಇದರಲ್ಲಿ ಆ್ಯಂಟಿ-ರೇಡಿಯೇಶನ್ ಕ್ಷಿಪಣಿ ರುದ್ರಮ್-1 ಕೂಡ ಸೇರಿದೆ. ಈ ರುದ್ರಮ್ ಮಿಸೈಲ್ 2022ರಲ್ಲಿ ಸೇವೆಗೆ ನಿಯೋಜಿತಗೊಳ್ಳಲಿದೆ. ಈ ಕೆಟಗರಿಯಲ್ಲಿ ದೇಶೀಯ ತಂತ್ರಜ್ಞಾನದಿಂದ ನಿರ್ಮಾಣವಾದ ಮೊದಲ ಕ್ಷಿಪಣಿ ರುದ್ರಮ್ ಆಗಿದೆ.

ನೆಲದಿಂದ, ಸಬ್​ಮರೀನ್​ಗಳಿಂದ, ಹಡಗುಗಳಿಂದ, ಯುದ್ಧವಿಮಾನಗಳಿಂದ ಹಾರಿಸಬಹುದಾದ ಸೂಪರ್​ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನ ಸಾಕಷ್ಟು ಸಂಖ್ಯೆಯಲ್ಲಿ ಭಾರತ ತಯಾರಿಸಿದೆ. ಲೇಸರ್ ಪ್ರಭಾವದ ಆ್ಯಂಟಿ-ಟ್ಯಾಂಕ್ ಮಿಸೈಲ್, ಅಣ್ವಸ್ತ್ರ ಸಾಮರ್ಥ್ಯದ ಹೈಪರ್​ಸೋನಿಕ್ ಕ್ಷಿಪಣಿ ಶೌರ್ಯ ಮೊದಲಾದವುಗಳ ಪ್ರಯೋಗವೂ ಯಶಸ್ವಿಯಾಗಿವೆ. ಇವೆಲ್ಲವೂ ಕೂಡ ಚೀನಾದ ಗಡಿಭಾಗದಲ್ಲಿರುವ ಲಡಾಖ್ ಮತ್ತು ಅರುಣಾಚಲ ಪ್ರದೇಶದ ಆಯಕಟ್ಟಿನ ಜಾಗಗಳಲ್ಲಿ ನಿಯೋಜಿಸಲಾಗುತ್ತಿದೆ.
Published by: Vijayasarthy SN
First published: October 30, 2020, 11:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading