Agni-5 Missile: ಭಾರತದ ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿ: 5,000 ಕಿ.ಮೀ ಗುರಿ ಭೇದಿಸುವ ಡೆಡ್ಲಿ ಮಿಸೈಲ್​!

Successfully Test-fires Agni 5 : ಮೂರು ಹಂತದ ಘನ ಇಂಧನ ಎಂಜಿನ್(Engine) ಹೊಂದಿರುವ ಈ ಕ್ಷಿಪಣಿಯು ಗುರಿಯನ್ನು ಅತ್ಯಂತ ನಿಖರವಾಗಿ ತಲುಪಿ ಧ್ವಂಸಗೊಳಿಸಬಲ್ಲದು. ಅತ್ಯಂತ ನಿಖರತೆಯಿಂದ ತನ್ನ ಗುರಿಯನ್ನು ತಲುಪಬಲ್ಲ ಈ ಕ್ಷಿಪಣಿ ಇಡೀ ಚೀನಾ(China) ಮತ್ತು ಪಾಕಿಸ್ತಾನ(Pakistan)ವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

ಅಗ್ನಿ - 5 ಕ್ಷಿಪಣಿ ಪರೀಕ್ಷೆ ಯಶಸ್ವಿ

ಅಗ್ನಿ - 5 ಕ್ಷಿಪಣಿ ಪರೀಕ್ಷೆ ಯಶಸ್ವಿ

  • Share this:
Successfully Test-fires Agni 5 : 5000 ಕಿಮೀ ವ್ಯಾಪ್ತಿಯ ಮಾರಕ ಸಾಮರ್ಥ್ಯ ಹೊಂದಿರುವ ಅಗ್ನಿ-5 ಕ್ಷಿಪಣಿ(Agni 5 Missile)ಯನ್ನು ಯಶಸ್ವಿ ಉಡಾವಣೆ (Successfully Test)ಮಾಡಲಾಗಿದೆ. ಮೇಲ್ಮೈಯಿಂದ ಮೇಲ್ಮೈಗೆ ಮಾರಕ (Surface to a Surface) ಕ್ಷಮತೆ ಹೊಂದಿರುವ ಈ ಬ್ಯಾಲಿಸ್ಟಿಕ್ ಕ್ಷಿಪಣಿಯ (Ballistic Missile)ನ್ನು ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ (APJ Abdul Kalam Island off Odisha Coast) ಉಡಾವಣೆ ಮಾಡಲಾಗಿದೆ. ಮೂರು ಹಂತದ ಘನ ಇಂಧನ ಎಂಜಿನ್(Engine) ಹೊಂದಿರುವ ಈ ಕ್ಷಿಪಣಿಯು ಗುರಿಯನ್ನು ಅತ್ಯಂತ ನಿಖರವಾಗಿ ತಲುಪಿ ಧ್ವಂಸಗೊಳಿಸಬಲ್ಲದು. ಮೊದಲು ಅಣ್ವಸ್ತ್ರ ಬಳಸುವುದಿಲ್ಲ ಎಂಬ ಈ ಹಿಂದಿನ ನಿರ್ಧಾರಕ್ಕೆ ಇಂದಿಗೂ ಭಾರತ(India) ಬದ್ಧವಾಗಿದೆ. ಹೀಗಾಗಿಯೇ ನಿಖರವಾಗಿ ಗುರಿ ಮುಟ್ಟಬಲ್ಲ ಖಂಡಾಂತರ ಕ್ಷಿಪಣಿಗಳಿಗೆ ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಹೆಚ್ಚಿನ ಮಹತ್ವವಿದೆ. ಅತ್ಯಂತ ನಿಖರತೆಯಿಂದ ತನ್ನ ಗುರಿಯನ್ನು ತಲುಪಬಲ್ಲ ಈ ಕ್ಷಿಪಣಿ ಇಡೀ ಚೀನಾ(China) ಮತ್ತು ಪಾಕಿಸ್ತಾನ(Pakistan)ವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಈ ಅಗ್ನಿ- 5 ಕ್ಷಿಪ ಣಿ ಪರೀಕ್ಷೆಯಿಂದ ಚೀನಾ ಹಾಗೂ ಪಾಕಿಸ್ತಾನಕ್ಕೆ ಭಾರತ ಪರೋಕ್ಷವಾಗಿ ಎಚ್ಚರಿಕೆ(Warning) ನೀಡಿದೆ ಎಂದು ಹೇಳಲಾಗುತ್ತಿದೆ.

ಹಲವು ಗುರಿ, ಏಕಕಾಲಕ್ಕೆ ಧ್ವಂಸ!

ಇನ್ನೂ ಅಗ್ನಿ-5 ಖಂಡಾಂತರ ಕ್ಷಿಪಣಿಯು 50,000 ಕೆಜಿ ತೂಕವಿದೆ. 24 ಎಂಎಸಿಎಚ್ ವೇಗದಲ್ಲಿ ಸಂಚಾರ ನಡೆಸಲಿದೆ. 17.5 ಮೀಟರ್ ಉದ್ದವಿದೆ. 1,500 ಕೆಜಿ ಅಣ್ವಸ್ತವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಈ ಅಗ್ನಿ-5 ಕ್ಷಿಪಣಿ ಹೊಂದಿದೆ. ಎಂಐಆರ್​ವಿ (Multiple Independently Targetable Re-entry Vehicles ) ತಂತ್ರಜ್ಞಾನದ ಈ ಎಂಜಿನ್​ ಬಳಸಿ ಉಡಾಯಿಸಿದ ಕ್ಷಿಪಣಿಯು ಹಲವು ಗುರಿಗಳನ್ನು ಏಕಕಾಲಕ್ಕೆ ಧ್ವಂಸ ಮಾಡುತ್ತೆ.

ಇದನ್ನು ಓದಿ: ಭಾರತದ ಬಳಿ ಅಗ್ನಿ ಅಸ್ತ್ರ; ವಿಶ್ವದ 5 ಅತ್ಯಂತ ಪ್ರಬಲ ಕ್ಷಿಪಣಿ ರಾಷ್ಟ್ರಗಳ ಸಾಲಿನಲ್ಲಿ ಭಾರತ

2007ರಲ್ಲಿ ಮೊದಲ ಬಾರಿಗೆ ಅಗ್ನಿ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ

ರಕ್ಷಣಾ ವಿಜ್ಞಾನಿ ನಟರಾಜನ್ 2007ರಲ್ಲಿ ಮೊದಲ ಬಾರಿಗೆ ಅಗ್ನಿ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಮಾಡಿದ್ದರು. ನಿಖರವಾಗಿ ಗುರಿ ಮುಟ್ಟುವ ಸಾಮರ್ಥ್ಯ ಇರುವುದು ಈ ಕ್ಷಿಪಣಿಯ ಪ್ರಮುಖ ವೈಶಿಷ್ಟ್ಯವಾಗಿದೆ.ಇನ್ನೂ ಈ ಕ್ಷಿಪಣಿಯನ್ನು ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸಲು ಹೆಚ್ಚು ಕಷ್ಟವಾಗುವುದಿಲ್ಲ. ಟ್ರಕ್​ ಮೇಲೆ ಲೋಡ್​​ ಮಾಡಿ ಅಗ್ನಿ-5 ಕ್ಷಿಪಣಿಯನ್ನು ಸ್ಥಳಾಂತರಿಸಬಹುದು. ಈ ರೀತಿಯ ಕ್ಷಿಪಣಿ ನಮ್ಮ ಬಳಿ ಇರುವುದು ಇತರ ದೇಶಗಳಿಗೆ ನಡುಕ ಶುರುವಾಗಿದೆ. ಭಾರತದ ಮೇಲೆ ಯುದ್ಧ ಘೋಷಿಸಲು ಇತರ ದೇಶಗಳು ಯೋಚಿಸುವಂತಾಗಿದೆ.

ಅಗ್ನಿ ಕ್ಷಿಪಣಿ ಕುರಿತು ಕಂಪ್ಲೀಟ್​ ಡಿಟೇಲ್ಸ್​​

2021ರ ಏಪ್ರಿಲ್​ 19ರಂದು ಭಾರತದ ಅಗ್ನಿ - 1 ಕ್ಷಿಪಣಿ ಪ್ರಯೋಗ ಮಾಡಿತ್ತು. ಇದು 700 ಕೀ.ಮೀ ಸಾಗುವ ಸಾಮರ್ಥ್ಯ ಹೊಂದಿತ್ತು. 2013ರ ಸೆಪ್ಟೆಂಬರದದದ 15ರಂದಯ ಅಗ್ನಿ-2 ಕ್ಷಿಪಣಿ ಪರೀಕ್ಷೆ ನಡೆಸಲಾಯ್ತು. ಇದು ಬರೋಬ್ಬರಿ 2 ಸಾವಿರ ಕಿ.ಮೀ. ಬೇಧಿಸಿವ ಶಕ್ತಿ ಹೊದಿತ್ತು. 2015ರ ಜನವರಿ 31ರಂದು 3,500 ಕಿ.ಮೀ ಸಾಗುವ ಅಗ್ನಿ-3 ಕ್ಷಿಪಣಿ ಪ್ರಯೋಗ ಮಾಡಲಾಯ್ತು. ಇದೇ ವರ್ಷ ನವೆಂಬರ್​ 9ರಂದು 4 ಸಾವಿರ ಕಿ.ಮೀ ಸಂಚರಿಸುವ ಅಗ್ನಿ-4 ಕ್ಷಿಪಣಿ ಪ್ರಯೋಗ ನಡೆಸಿ ಯಶಸ್ವಿಯಾಗಿತ್ತು. ಇದೀಗ 5 ಸಾವಿರ ಕಿ.ಮೀ. ಅಗ್ನಿ-5 ಕ್ಷಿಪಣಿ ಪ್ರಯೋಗ ಯಶಸ್ವಿಯಾಗಿದೆ.

ಇದನ್ನು ಓದಿ :ಕೆಟ್ಟ ಹವಾಮಾನದಲ್ಲೂ ನಿಖರವಾಗಿ ವೈಮಾನಿಕ ದಾಳಿ ನಡೆಸುವ Akash Prime ಕ್ಷಿಪಣಿ ಪ್ರಯೋಗ ಯಶಸ್ವಿ!

ಅಗ್ನಿ-5  ಮಿಸೈಲ್​ ಸ್ಪೆಷಾಲಿಟಿಗಳೇನು?

- ಈ ಅಗ್ನಿ-5 ಕ್ಷಿಪಣಿ 17 ಮೀಟರ್​ ಉದ್ದ, ಎರಡು ಮೀಟರ್​ ಅಗಲವಿದೆ.

- 1.5 ಟನ್​ಗಳಷ್ಟು ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನ ಅಗ್ನಿ-5 ಕ್ಷಿಪಣಿ ಹೊಂದಿದೆ.

- ಮತ್ತೊಂದು ವಿಶೇಷ ಅಂದರೆ ಅಗ್ನಿ- ಕ್ಷಿಪಣಿ ಮೂರು ಹಂತದ ಕ್ಷಿಪಣಿಯಾಗಿದೆ.

- ಈ ಅಗ್ನಿ ಸರಣಿಯ ಇತರ ಕ್ಷಿಪಣಿಗಳಿಗಿಂತ ಅಗ್ನಿ-5 ಕ್ಷಿಪಣಿ ಭಿನ್ನವಾಗಿದೆ. ಪಥ ಮತ್ತು ಮಾರ್ಗದರ್ಶನ, ಸ್ಫೋಟಕ ಸಾಗಿಸುವ ಮೇಲ್ಭಾಗ ಮತ್ತಯ ಎಂಜಿನ್​ ವಿಷಯದಲ್ಲಿ ಅಗ್ನಿ -5 ಅಪ್​ಗ್ರೇಡ್​ ಆಗಿದೆ.
Published by:Vasudeva M
First published: