ಅಗ್ನಿ-5 ಅಣು ಬಾಲಿಸ್ಟಿಕ್ ಕ್ಷಿಪಣಿ (Agni V Nuclear Capable Ballistic Missile) ಪರೀಕ್ಷೆ ಯಶಸ್ವಿಯಾಗಿದೆ. ಒಡಿಶಾದ ಅಬ್ದುಲ್ ಕಲಾಂ ಐಲ್ಯಾಂಡ್ನಲ್ಲಿ ( Abdul Kalam Island) ನಡೆದ ಪ್ರಯೋಗ ಯಶಸ್ವಿಯಾಗಿದ್ದು, ಡಮ್ಮಿ ವಾರ್ಹೆಡ್ಸ್ನೊಂದಿಗೆ ಅಗ್ನಿ-5 ಕ್ಷಿಪಣಿ 5,400 ಕಿಮೀ ದೂರದ ಗುರಿಯನ್ನು ಯಶಸ್ವಿಯಾಗಿ ಹೊಡೆದುರುಳಿಸಿದೆ. ಈ ಮಿಸೈಲ್ ಭಾರತದಿಂದ ಹಾರಿಸಿದರೆ ಚೀನಾ (China), ಪಾಕಿಸ್ತಾನ (Pakistan) ಮಾತ್ರವಲ್ಲದೇ ರಷ್ಯಾ, ಯುರೋಪ್, ಆಫ್ರಿಕಾ ಖಂಡವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಸೇನೆಯಲ್ಲಿ ಸ್ವವಲಂಬನೆಯನ್ನು ಸಾಧಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ನಿರಂತರ ಪ್ರಯೋಗಳನ್ನು ಮಾಡುತ್ತಿದ್ದು, ಮಹತ್ವದಲ್ಲಿ ಪ್ರಯೋಗದಲ್ಲಿ ಭಾರತಕ್ಕೆ ಶುಭ ಸುದ್ದಿ ಲಭಿಸಿದೆ. ಪರಿಣಾಮ ಭಾರತದ ಬತ್ತಳಿಕೆಯಲ್ಲಿ ಮತ್ತೊಂದು ವಿಧ್ವಂಸಕ ಶಸ್ತ್ರಾಸ್ತ್ರ ಸೇರ್ಪಡೆಯಾಗಿದೆ.
ಅರುಣಾಚಲ ಪ್ರದೇಶದ ತವಾಂಗ್ ಗಡಿ ಪ್ರದೇಶದಲ್ಲಿ ಚೀನಾ ಸೈನಿಕರೊಂದಿಗೆ ಭಾರತ ಸೈನಿಕರು ಸಂಘರ್ಷ ನಡೆಸಿದ ಕೆಲವೇ ದಿನಗಳಲ್ಲಿ ಭಾರತ ಮಹತ್ವದ ಕ್ಷಿಪಣಿ ಪರೀಕ್ಷೆಯನ್ನು ನಡೆಸಿದ್ದು, ಅಗ್ನಿ-5 ಪ್ರಯೋಗ ಎದುರಾಳಿಗಳಿಗೆ ಮಹತ್ವದ ಸಂದೇಶವನ್ನು ನೀಡಿದೆ. ಸಂಪೂರ್ಣವಾಗಿ ಸ್ವದೇಶಿ ಪರಿಕರಗಳೊಂದಿಗೆ ಕ್ಷಿಪಣಿಯನ್ನು ಸಿದ್ಧಪಡಿಸಲಾಗಿದ್ದು, ಸುದೀರ್ಘ ಗುರಿಯನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.
ಮಿಸೈಲ್ ಪರೀಕ್ಷೆಗೆ ಚೀನಾ ಈ ಹಿಂದೆ ಆಕ್ಷೇಪವನ್ನು ವ್ಯಕ್ತಪಡಿಸಿತ್ತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ಮುಂದಿಟ್ಟು ಇಂತಹ ಪರೀಕ್ಷೆಗಳನ್ನು ನಡೆಸುವಂತಿಲ್ಲ ಎಂದು ಹೇಳಿತ್ತು. ಆದರೆ ಭಾರತ ಎಂದಿನಂತೆ ಚೀನಾ ಆಕ್ಷೇಪ ನಿರ್ಲಕ್ಷ್ಯ ಮಾಡಿ, ಪರೀಕ್ಷೆಯನ್ನು ಯಶಸ್ವಿಯಾಗಿ ಮುಕ್ತಾಯ ಮಾಡಿದೆ.
ಇದನ್ನೂ ಓದಿ: BrahMos: ಸೇನಾ ನೌಕೆಗೆ ಬಲವಾಗಿ ಹೊಡೆದ ಬ್ರಹ್ಮೋಸ್ ಸೂಪರ್ಸೋನಿಕ್ ಮಿಸೈಲ್! ಇದರ ಪವರ್ ಸೂಪರ್
ಅಗ್ನಿ-5 ಕ್ಷಿಪಣಿಯ 7ನೇ ಪರೀಕ್ಷೆ
ಇನ್ನು, ಗುರುವಾರ ನಡೆದ ಅಗ್ನಿ-5 ಕ್ಷಿಪಣಿಯ ಪರೀಕ್ಷೆ ಇದೇ ಮೊದಲ ಬಾರಿಗೆ ನಡೆಸಿಲ್ಲ. ಒಟ್ಟಾರೆ ಭಾರತ ನಡೆಸಿದ ಅಗ್ನಿ-5 ಪರೀಕ್ಷೆಯಲ್ಲಿ ಇದು 7ನೇ ಪರೀಕ್ಷೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಇಲಾಖೆ ಇದು ಎಂದಿನಂತೆ ನಡೆಯುವ ಸಾಮಾನ್ಯ ಪರೀಕ್ಷೆ ಎಂದಿದೆ. ಇದಕ್ಕೂ ಮುನ್ನ ಎಂದರೇ, 2013, 2015, 2016, 2018 ಹಾಗೂ 2021ರಲ್ಲೂ ಕ್ಷಿಪಣಿ ಪರೀಕ್ಷೆಯನ್ನು ಭಾರತ ಯಶಸ್ವಿಯಾಗಿ ನಡೆಸಿತ್ತು.
2012ರಲ್ಲಿ ನಡೆದಿದ್ದ ಅಗ್ನಿ-1 ಕ್ಷಿಪಣಿ ಪರೀಕ್ಷೆಯಲ್ಲಿ ಮಿಸೈಲ್ 1200 ಕಿಮೀ ದೂರ ಸಾಗುವ ಸಾಮರ್ಥ್ಯವನ್ನು ಹೊಂದಿತ್ತು. ಆ ಬಳಿಕ ಅಗ್ನಿ-2 ಕ್ಷಿಪಣಿ 2000 ಕಿಮೀ ದೂರ, ಅಗ್ನಿ-3 ಕ್ಷಿಪಣಿ 3000 ಕಿಮೀ ದೂರ, ಅಗ್ನಿ-4 ಕ್ಷಿಪಣಿ 4000 ಕಿಮೀ ದೂರ ಹಾಗೂ ಗುರುವಾರ ನಡೆಸಿರುವ ಅಗ್ನಿ-2 ಕ್ಷಿಪಣಿಯೂ 5400 ಪ್ಲಸ್ ಕಿಮೀ ದೂರ ಸಾಗುವ ಸಾಮರ್ಥ್ಯವನ್ನು ಹೊಂದಿದೆ.
ಇದನ್ನೂ ಓದಿ: APJ Abdul Kalam: ಯುವಕರಿಗೆ ಸ್ಫೂರ್ತಿ ತುಂಬುತ್ತೆ ಕಲಾಂರ ಸಾಧನೆ! ಭಾರತದ ಕ್ಷಿಪಣಿ ಮನುಷ್ಯನ ಹೆಜ್ಜೆ ಗುರುತು ಇಲ್ಲಿದೆ
ಭಾರತ ಕ್ಷಿಪಣಿ ಪರೀಕ್ಷೆಯಿಂದ ಚೀನಾಗೆ ಆತಂಕ
ಗಡಿಯಲ್ಲಿ ಪದೇ ಪದೇ ಚೀನಾ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಈ ನಡುವೆಯೇ ಭಾರತ ಅಗ್ನಿ-5 ಕ್ಷಿಪಣಿ ಪರೀಕ್ಷೆಯನ್ನು ನಡೆಸಿದ್ದು, ಅದರಲ್ಲೂ ಅಣ್ವಸ್ತ್ರವನ್ನು ಹೊತ್ತು ಸಾಗಬಲ್ಲ ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆ ಯಶಸ್ವಿ ಆಗಿರೋದು ಚೀನಾಗೆ ಆತಂಕ ಮೂಡಿಸಿದೆ.
Congratulations to Team @DRDO_India for successfully carrying out the night trials of nuclear-capable ballistic missile #Agni5. This is another important step in the direction of Prime Minister Shri @narendramodi Ji's clarion call for 'Atmanirbhar Bharat'. pic.twitter.com/CewlFOodZi
— Nitin Gadkari (@nitin_gadkari) December 16, 2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ