Modi Mann Ki Baat: ನೀರಿನ ಸಂರಕ್ಷಣೆಗಾಗಿ ದೇಶದ ಜನರ ಮುಂದೆ 3 ಮನವಿ ಇಟ್ಟ ಪ್ರಧಾನಿ ಮೋದಿ

ದೇಶದ ಹಲವೆಡೆ ಬರಗಾಲ ಸೃಷ್ಟಿಯಾಗಿದ್ದು, ನೀರಿಗೆ ಹಾಹಾಕಾರ ಶುರುವಾಗಿದೆ.  ಈ ಬಾರಿ ಮುಂಗಾರು ಕಡಿಮೆ ಇರುವುದರಿಂದ ನೀರಿನ ಸಮಸ್ಯೆ ತಲೆದೋರಿದೆ.

Latha CG | news18
Updated:June 30, 2019, 12:56 PM IST
Modi Mann Ki Baat: ನೀರಿನ ಸಂರಕ್ಷಣೆಗಾಗಿ ದೇಶದ ಜನರ ಮುಂದೆ 3 ಮನವಿ ಇಟ್ಟ ಪ್ರಧಾನಿ ಮೋದಿ
ನರೇಂದ್ರ ಮೋದಿ
Latha CG | news18
Updated: June 30, 2019, 12:56 PM IST
ನವದೆಹಲಿ,(ಜೂ.30): ದೇಶದ ನಾಗರಿಕರೆಲ್ಲರೂ ನೀರಿನ ಸಂರಕ್ಷಣೆಗೆ ಮುಂದಾಗಬೇಕು.  ಎಲ್ಲರೂ ಸೇರಿದರೆ ನೀರಿನ ಸಂರಕ್ಷಣೆ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ‘ಮನ್​ ಕಿ ಬಾತ್’ ಕಾರ್ಯಕ್ರಮದಲ್ಲಿ ಕರೆ ನೀಡಿದ್ಧಾರೆ.

ಪ್ರಧಾನಿ ನರೇಂದ್ರ ಮೋದಿ ‘ಮನ್​ ಕಿ ಬಾತ್’ 2ನೇ ಸರಣಿಯಲ್ಲಿ ನೀರಿನ ಮಹತ್ವದ ಬಗ್ಗೆ ಮಾತನಾಡಿದರು. ದೇಶದ ಪ್ರಜೆಗಳೆಲ್ಲರೂ ನೀರನ್ನು ಉಳಿಸಬೇಕು. ನೀರಿನ ಸಂರಕ್ಷಣೆ ಸಂಬಂಧ ಗ್ರಾಮ ಪಂಚಾಯಿತಿಗೆ ಪತ್ರ ಬರೆಯುತ್ತೇನೆ. ನೀರಿನ ರಕ್ಷಣೆಗಾಗಿಯೇ  ಜಲಶಕ್ತಿ ಮಂತ್ರಾಲವನ್ನು ರಚನೆ ಮಾಡಲಾಗಿದೆ. ಎಲ್ಲರೂ ಸೇರಿದರೆ ನೀರನ್ನು ಉಳಿಸಬಹುದು. ಮಂದಿನ ಪೀಳಿಗೆಗೆ ನೀರನ್ನು ಉಳಿಸುವ ಮಹತ್ಕಾರ್ಯಕ್ಕೆ ನಾವೆಲ್ಲರೂ ಮುಂದಾಗಬೇಕು ಎಂದು ಹೇಳಿದರು.

"ನೀರಿನ ಸಂರಕ್ಷಣೆಗಾಗಿ ನಾವೆಲ್ಲಾ ಜಲಾಂದೋಲನ ಮಾಡಬೇಕು. ನೀರನ್ನು ಸಂರಕ್ಷಿಸಲು ಇಂತಹದ್ದೇ ಎಂಬ ಯಾವುದೇ ನಿಶ್ಚಿತ ಮಾರ್ಗಗಳಿಲ್ಲ. ವಿವಿಧ ರೀತಿ, ವಿಭಿನ್ನ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಆದರೆ ಆ ಎಲ್ಲಾ ವಿಧಾನಗಳ ಗುರಿ ಒಂದೇ ಆಗಿರುತ್ತದೆ, ಪ್ರತಿ ಹನಿ ನೀರನ್ನು ಸಂರಕ್ಷಿಸುವುದು" ಎಂದು ಮೋದಿ ಕಿವಿಮಾತು ಹೇಳಿದರು.

ಪ್ರಧಾನಿ ಮೋದಿ ನೀರಿನ ಸಂರಕ್ಷಣೆಗಾಗಿ ದೇಶದ ಜನರಲ್ಲಿ ಮೂರು ಮನವಿಗಳನ್ನು ಇಟ್ಟಿದ್ಧಾರೆ. ನೀರನ್ನು ಉಳಿಸಲು ಜಲಾಂದೋಲನ ಮಾಡಬೇಕು ಎಂದು ಕರೆ ನೀಡಿದ್ದಾರೆ. ನೀರಿನ ಸಂರಕ್ಷಣೆಗಾಗಿ ಜಾಗೃತಿ ಮೂಡಿಸಲು  #JanShakti4JalShakti ಎಂಬ ಟ್ವಿಟ್ವರ್ ಆಂದೋಲನ ಶುರುವಾಗಿದೆ.

ನೀರಿನ ಸಂರಕ್ಷಣೆಗಾಗಿ ಮೋದಿ ಮಾಡಿದ 3  ಮನವಿಗಳು

1.  ದೇಶದ ಪ್ರಭಾವಶಾಲಿ ವ್ಯಕ್ತಿಗಳು ಸೇರಿದಂತೆ ಎಲ್ಲಾ ಜನರು ನೀರಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಬೇಕು.

2. ನೀರನ್ನು ಸಂರಕ್ಷಿಸುವ ಸಾಂಪ್ರದಾಯಿಕ ವಿಧಾನಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಲಬೇಕು.

3. ಯಾವುದೇ ವ್ಯಕ್ತಿ ಅಥವಾ ಸರ್ಕಾರೇತರ ಸಂಸ್ಥೆಗಳು ನೀರಿನ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿದ್ದರೆ, ಅವರ ಬಗ್ಗೆ ಜನರಿಗೆ ತಿಳಿಸಬೇಕು.



ದೇಶದ ಹಲವೆಡೆ ಬರಗಾಲ ಸೃಷ್ಟಿಯಾಗಿದ್ದು, ನೀರಿಗೆ ಹಾಹಾಕಾರ ಶುರುವಾಗಿದೆ.  ಈ ಬಾರಿ ಮುಂಗಾರು ಕಡಿಮೆ ಇರುವುದರಿಂದ ನೀರಿನ ಸಮಸ್ಯೆ ತಲೆದೋರಿದೆ.
First published:June 30, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...