ವಾಷಿಂಗ್ಟನ್(ಅ.15): 2022 ರ ಜಾಗತಿಕ ಹಸಿವಿನ ಸೂಚ್ಯಂಕ (Global Hunger Index) ಪಟ್ಟಿಯಲ್ಲಿ ಭಾರತವು 107 ನೇ ಸ್ಥಾನಕ್ಕೆ ಕುಸಿದಿದೆ ಪಡೆದುಕೊಂಡಿದೆ. ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ (Pakistan), ಬಾಂಗ್ಲಾದೇಶ (Bangladesh) ಮತ್ತು ನೇಪಾಳ (Nepal) ಈ ಪಟ್ಟಿಯಲ್ಲಿ ಭಾರತಕ್ಕಿಂತ ಮೇಲಿ ಸ್ಥಾನದಲ್ಲಿವೆ. ಅಂದರೆ ಈ ದೇಶಗಳ ಸ್ಥಿತಿ ಭಾರತಕ್ಕಿಂತ ಉತ್ತಮವಾಗಿದೆ. ಪಾಕಿಸ್ತಾನ 99ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ 84, ನೇಪಾಳ 81 ಮತ್ತು ಶ್ರೀಲಂಕಾ (Sri Lanka) 64ನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ ಮಾತ್ರ ಭಾರತಕ್ಕಿಂತ ಹಿಂದಕ್ಕಿಳಿದಿದ್ದು, 109 ನೇ ಶ್ರೇಣಿ ಪಡೆದಿದೆ.
ಒಟ್ಟು 121 ದೇಶಗಳ ಈ ಪಟ್ಟಿಯಲ್ಲಿ ಭಾರತದ ಶ್ರೇಯಾಂಕ ನಿರಂತರವಾಗಿ ಕುಸಿಯುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತ 6 ಸ್ಥಾನಗಳಷ್ಟು ಕುಸಿದಿದೆ. 2021ರಲ್ಲಿ ಭಾರತದ ಸ್ಥಾನ 101 ಮತ್ತು 2019ರಲ್ಲಿ 94ರಲ್ಲಿತ್ತು, ಅಂದರೆ ಎರಡು ವರ್ಷಗಳಲ್ಲಿ ಭಾರತದ ಸ್ಥಿತಿ ತೀರಾ ಹದಗೆಟ್ಟಿದೆ. ಈ ಪಟ್ಟಿಯಲ್ಲಿ 17 ದೇಶಗಳು ಅಗ್ರಸ್ಥಾನದಲ್ಲಿವೆ. ಇವುಗಳಲ್ಲಿ ಚೀನಾ, ಟರ್ಕಿ ಮತ್ತು ಕುವೈತ್ ಸೇರಿವೆ. ಅವರ ಗ್ಲೋಬಲ್ ಹಂಗರ್ ಇಂಡೆಕ್ಸ್ ಸ್ಕೋರ್ 5 ಕ್ಕಿಂತ ಕಡಿಮೆ ಇದೆ.
ಇದನ್ನೂ ಓದಿ:ದಿನಕ್ಕೆ 25 ಬಾದಾಮಿ ತಿಂದ್ರೆ ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತಂತೆ
ಭಾರತಕ್ಕಿಂತ ಕೆಳಗಿರುವ ರಾಷ್ಟ್ರಗಳು ಯಾವುದು?
ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತಕ್ಕಿಂತ ಕೆಳಗಿರುವ ದೇಶಗಳೆಂದರೆ, ಜಾಂಬಿಯಾ, ಅಫ್ಘಾನಿಸ್ತಾನ್, ಟಿಮೋರ್-ಲೆಸ್ಟೆ, ಗಿನಿಯಾ-ಬಿಸ್ಸಾವ್, ಸಿಯೆರಾ ಲಿಯೋನ್, ಲೆಸೊಥೊ, ಲೈಬೀರಿಯಾ, ನೈಜರ್, ಹೈಟಿ, ಚಾಡ್, ಡೆಮ್. ಕಾಂಗೋ, ಮಡಗಾಸ್ಕರ್, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಯೆಮೆನ್. ಹಾಗೇ, ಗಿನಿಯಾ, ಮೊಜಾಂಬಿಕ್, ಉಗಾಂಡಾ, ಜಿಂಬಾಬ್ವೆ, ಬುರುಂಡಿ, ಸೊಮಾಲಿಯಾ, ದಕ್ಷಿಣ ಸುಡಾನ್ ಮತ್ತು ಸಿರಿಯಾ ಸೇರಿದಂತೆ 15 ದೇಶಗಳಿಗೆ ಮಾಹಿತಿಯ ಕೊರತೆಯಿಂದಾಗಿ ಶ್ರೇಯಾಂಕಗಳನ್ನು ನಿರ್ಧರಿಸಲು ಸಾಧ್ಯವಾಗಲಿಲ್ಲ ಎಂದು ವರದಿ ಹೇಳಿದೆ.
ಯಾವ ಡೇಟಾ ಆಧರಿಸಿ ಮಾಹಿತಿ?
ಅಪೌಷ್ಟಿಕತೆ, ಮಕ್ಕಳ ಬೆಳವಣಿಗೆಯ ಕುಂಠಿತ, ಮಕ್ಕಳ ಕ್ಷೀಣತೆ, ಮಕ್ಕಳ ಮರಣ ಹೀಗೆ GHI ಅಂಕಗಳು ನಾಲ್ಕು ಘಟಕ ಸೂಚಕಗಳ ಮೌಲ್ಯಗಳನ್ನು ಆಧರಿಸಿವೆ. ಈ ಸೂಚಕಗಳಿಗಾಗಿ ಬಳಸಲಾದ ಡೇಟಾವನ್ನು ಯುನಿಸೆಫ್, ವಿಶ್ವ ಬ್ಯಾಂಕ್, ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಸೇರಿದಂತೆ ವಿವಿಧ ವಿಶ್ವಸಂಸ್ಥೆ ಮತ್ತು ಇತರ ಏಜೆನ್ಸಿಗಳಿಂದ ಪಡೆಯಲಾಗಿದೆ ಎಂದು ವರದಿ ಹೇಳಿದೆ.
ಜಾಗತಿಕ ಹಸಿವು ಸೂಚ್ಯಂಕ ಅಥವಾ ಗ್ಲೋಬಲ್ ಹಂಗರ್ ಇಂಡೆಕ್ಸ್ ಎಂದರೇನು?
ಗ್ಲೋಬಲ್ ಹಂಗರ್ ಇಂಡೆಕ್ಸ್ (GHI) ಯಾವುದೇ ದೇಶದಲ್ಲಿರುವ ಹಸಿವಿನ ಸ್ಥಿತಿಯನ್ನು ಹೇಳುತ್ತದೆ. ಕನ್ಸರ್ನ್ ವರ್ಲ್ಡ್‌ವೈಡ್ ಮತ್ತು ವರ್ಲ್ಡ್ ಹಂಗರ್ ಹೆಲ್ಪ್ (ಜರ್ಮನಿಯಲ್ಲಿ ವೆಲ್ತುಂಗರ್‌ಹಿಲ್ಫ್) ಎಂಬ ಹೆಸರಿನ ಯುರೋಪಿಯನ್ ಎನ್‌ಜಿಒಗಳು ಪ್ರತಿ ವರ್ಷ ಈ ಪಟ್ಟಿಯನ್ನು ಸಿದ್ಧಪಡಿಸುತ್ತವೆ. ಪ್ರಪಂಚದಾದ್ಯಂತ ವಿವಿಧ ದೇಶಗಳಲ್ಲಿ 4 ಮಾಪಕಗಳನ್ನು ಅಂದಾಜು ಮಾಡಿ ಸೂಚ್ಯಂಕವನ್ನು ತಯಾರಿಸಲಾಗುತ್ತದೆ.
GHI ಸ್ಕೋರ್ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
ಪ್ರತಿ ದೇಶಕ್ಕೆ GHI ಸ್ಕೋರ್ ಅನ್ನು 3 ಆಯಾಮಗಳ 4 ಮಾಪಕಗಳಲ್ಲಿ ಲೆಕ್ಕಹಾಕಲಾಗುತ್ತದೆ. ಇವು ಮೂರು ಆಯಾಮಗಳು
ಇದನ್ನೂ ಓದಿ: ಅಪ್ಪಿ-ತಪ್ಪಿ ಸಂಗಾತಿ ಜೊತೆ ಈ ವಿಚಾರಗಳನ್ನು ಹಂಚಿಕೊಳ್ಳಬೇಡಿ
* ಅಪೌಷ್ಟಿಕತೆ: ಅಪೌಷ್ಟಿಕತೆ ಎಂದರೆ ಆರೋಗ್ಯವಂತ ವ್ಯಕ್ತಿಯು ದಿನಕ್ಕೆ ಅಗತ್ಯವಾದ ಕ್ಯಾಲೊರಿಗಳನ್ನು ಪಡೆಯದಿರುವುದು. ದಿನಕ್ಕೆ ಅಗತ್ಯ ಪ್ರಮಾಣದ ಕ್ಯಾಲೊರಿಗಳನ್ನು ಪಡೆಯದ ಜನಸಂಖ್ಯೆಯ ಒಟ್ಟು ಪಾಲನ್ನು ಲೆಕ್ಕಹಾಕಲಾಗುತ್ತದೆ.
* ಮಕ್ಕಳ ಮರಣ: ಮಕ್ಕಳ ಮರಣ ಎಂದರೆ ಪ್ರತಿ 1000 ಜನನಗಳಿಗೆ 5 ವರ್ಷಗಳೊಳಗೆ ಮರಣ ಹೊಂದಿದ ಮಕ್ಕಳ ಸಂಖ್ಯೆ.
ಮೂರನೇ ಆಯಾಮ ಮಕ್ಕಳ ಅಪೌಷ್ಟಿಕತೆ, ಇದರಲ್ಲಿ 2 ವಿಭಾಗಗಳಿವೆ.
* ಮಕ್ಕಳ ಕ್ಷೀಣತೆ: ಇಲ್ಲಿ ಮಗು ತನ್ನ ವಯಸ್ಸಿಗೆ ಅನುಗುಣವಾಗಿ ತುಂಬಾ ದುರ್ಬಲವಾಗಿರುತ್ತದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಮ್ಮ ಎತ್ತರದ ಅನ್ವಯ ಕಡಿಮೆ ತೂಕವನ್ನು ಹೊಂದಿರುತ್ತಾರೆ. ಇಂತಹ ಮಕ್ಕಳಿಗೆ ಸಾಕಷ್ಟು ಪೌಷ್ಟಿಕಾಂಶ ಸಿಗುತ್ತಿಲ್ಲ ಎಂದು ಅರ್ಥ. ಇದರಿಂದಾಗಿ ಈ ಮಕ್ಕಳು ದುರ್ಬಲರಾಗಿದ್ದಾರೆ ಎಂದು ಇದು ತೋರಿಸುತ್ತದೆ.
* ಚೈಲ್ಡ್ ಸ್ಟಂಟಿಂಗ್: ಚೈಲ್ಡ್ ಸ್ಟಂಟಿಂಗ್ ಎಂದರೆ ವಯಸ್ಸಿಗೆ ಕಡಿಮೆ ಎತ್ತರವಿರುವ ಮಕ್ಕಳು. ಅಂದರೆ, ಮಗುವಿನ ಎತ್ತರವು ವಯಸ್ಸಿಗೆ ಅನುಗುಣವಾಗಿ ಹೆಚ್ಚಾಗಬಾರದುದಿರುವುದು. ಎತ್ತರವು ನೇರವಾಗಿ ಪೋಷಣೆಗೆ ಸಂಬಂಧಿಸಿದೆ. ಮಕ್ಕಳು ದೀರ್ಘಕಾಲದವರೆಗೆ ಪೌಷ್ಟಿಕಾಂಶದ ಕೊರತೆ ಇದ್ದರೆ, ಮಕ್ಕಳ ಬೆಳವಣಿಗೆ ಕುಂಠಿತವಾಗುವ ಸಮಸ್ಯೆ ಕಾಣುತ್ತದೆ.
ಈ ಮೂರು ಆಯಾಮಗಳಿಗೆ 100 ಅಂಕಗಳ ಪ್ರಮಾಣಿತ ಸ್ಕೋರ್ ನೀಡಲಾಗಿದೆ. ಅಪೌಷ್ಟಿಕತೆ, ಮಕ್ಕಳ ಮರಣ ಮತ್ತು ಮಕ್ಕಳ ಅಪೌಷ್ಟಿಕತೆ ಈ ಸ್ಕೋರ್‌ನಲ್ಲಿ ಮೂರರಲ್ಲಿ ಮೂರನೇ ಒಂದು ಭಾಗವಾಗಿದೆ. ಸ್ಕೋರ್ ಸ್ಕೇಲ್‌ನಲ್ಲಿ, 0 ಅತ್ಯುತ್ತಮ ಸ್ಕೋರ್ ಆಗಿದ್ದರೆ, 100 ಬಹಳ ಕೆಟ್ಟದಾಗಿರುತ್ತದೆ ಕೆಟ್ಟದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ