• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Turkey: ಭೂಕಂಪದ ಸಂಕಷ್ಟದಲ್ಲಿ ನೆರವಾಗಿದ್ದ ಭಾರತಕ್ಕೆ ಟರ್ಕಿ ದೋಖಾ, ಜಮ್ಮು ಕಾಶ್ಮೀರ ವಿಚಾರದಲ್ಲಿ ಪಾಕ್ ಜೊತೆ ಮಸಲತ್ತು!

Turkey: ಭೂಕಂಪದ ಸಂಕಷ್ಟದಲ್ಲಿ ನೆರವಾಗಿದ್ದ ಭಾರತಕ್ಕೆ ಟರ್ಕಿ ದೋಖಾ, ಜಮ್ಮು ಕಾಶ್ಮೀರ ವಿಚಾರದಲ್ಲಿ ಪಾಕ್ ಜೊತೆ ಮಸಲತ್ತು!

ಕಾಶ್ಮೀರ ವಿಚಾರ ಪ್ರಸ್ತಾಪಿಸಿದ  ಟರ್ಕಿ

ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಟರ್ಕಿ

ಭೂಕಂಪದಲ್ಲಿ ನಲುಗಿದ್ದ ಟರ್ಕಿಗೆ 'ಆಪರೇಷನ್‌ ದೋಸ್ತ್‌' ಹೆಸರಿನಲ್ಲಿ ಟರ್ಕಿಯಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗೆ ಹಗಲು-ರಾತ್ರಿ ಎನ್ನದೆ ನೆರವಾಗಿತ್ತು. ಆದರೆ ಕೇವಲ ಎರಡು ವಾರಗಳ ಅಂತರದಲ್ಲಿ ಸಹಾಯಕ್ಕೆ ಬಂದ ಭಾರತಕ್ಕೆ ಟರ್ಕಿ ನಂಬಿಕೆದ್ರೋಹ ಎಸಗಿದೆ.

  • Share this:

ನವದೆಹಲಿ: ಫೆಬ್ರವರಿಯ ಮೊದಲ ವಾರ ಸಂಭವಿಸಿದ್ದ ಭೀಕರ ಭೂಕಂಪದ (Earthquake) ಸಂದರ್ಭದಲ್ಲಿ ಟರ್ಕಿಗೆ ( Turkey) ವಿವಿಧ ದೇಶಗಳು ನೆರವಾಗಿದ್ದವು. ಈ ವೇಳೆ ಭಾರತ ಸರ್ಕಾರ (Indian Government) ಕೂಡ ಭೂಕಂಪದಲ್ಲಿ ನಲುಗಿದ್ದ ಟರ್ಕಿಗೆ 'ಆಪರೇಷನ್‌ ದೋಸ್ತ್‌' (Operation Dost) ಹೆಸರಿನಲ್ಲಿ ಟರ್ಕಿಯಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗೆ (Relief Operations) ಹಗಲು-ರಾತ್ರಿ ಎನ್ನದೆ ನೆರವಾಗಿತ್ತು. ಆದರೆ ಕೇವಲ ಎರಡು ವಾರಗಳ ಅಂತರದಲ್ಲಿ ಸಹಾಯಕ್ಕೆ ಬಂದ ಭಾರತಕ್ಕೆ ಟರ್ಕಿ ನಂಬಿಕೆದ್ರೋಹ ಎಸಗಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC)ಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಪ್ರಸ್ತಾಪಿಸಿ ಪಾಕಿಸ್ತಾನಕ್ಕೆ ಬೆಂಬಲಿಸಿ ಭಾರತವನ್ನು ತರಾಟೆಗೆ ತೆಗೆದುಕೊಂಡಿದೆ ಎನ್ನಲಾಗಿದೆ. ಈ ಮೂಲಕ ಕಷ್ಟಕಾಲದಲ್ಲಿ ನೆರವಾದ ಭಾರತದ ಬೆನ್ನಿಗೆ ಚೂರಿ ಹಾಕಿದೆ.


ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ಸಂಗತಿ ಗೊತ್ತಿದ್ದರೂ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ ಪಾಕಿಸ್ತಾನವನ್ನು ಬೆಂಬಲಿಸಿದೆ. ಆದರೆ ಭಾರತ ಇದಕ್ಕೆ ಸಭೆಯಲ್ಲಿಯೇ ತಕ್ಕ ತಿರುಗೇಟು ನೀಡಿದೆ. ಮಾನವ ಹಕ್ಕುಗಳ ಮಂಡಳಿಯ 52 ನೇ ಅಧಿವೇಶನದ ಜಿನೀವಾದಲ್ಲಿನ ಭಾರತದ ಖಾಯಂ ಮಿಷನ್‌ನ ಮೊದಲ ಕಾರ್ಯದರ್ಶಿಯಾಗಿರುವ ಸೀಮಾ ಪೂಜಾನಿ, ಟರ್ಕಿ ಮತ್ತು ಒಐಸಿ ಪ್ರತಿನಿಧಿಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.


ಆಂತರಿಕ ವಿಚಾರಗಳಿಗೆ ತಲೆ ಹಾಕಬಾರದು


ಜಮ್ಮು-ಕಾಶ್ಮೀರದ ಬಗ್ಗೆ ಕೇಂದ್ರಾಡಳಿತ ಪ್ರದೇಶದ ಕುರಿತು ಟರ್ಕಿಯ ಅನಗತ್ಯವಾದ ಉಲ್ಲೇಖಗಳನ್ನು ನಾವು ತಿರಸ್ಕರಿಸುತ್ತೇವೆ. ಅದು ನಮ್ಮ ಆಂತರಿಕ ವಿಚಾರವಾಗಿದ್ದು, ಟರ್ಕಿ ಇಂತಹ ಅನಪೇಕ್ಷಿತ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಪೂಜಾನಿ ಹೇಳಿದ್ದಾರೆ. ಇದೇ ವೇಳೆ ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಸೀಮಾ ಎಳೆಎಳೆಯಾಗಿ ವಿಶ್ವ ಸಮುದಾಯದ ಮುಂದೆ ಬಿಚ್ಚಿಟ್ಟು, ಆ ದೇಶದ ಕರಾಳ ಮುಖವನ್ನು ಜಾಗತಿಕ ವೇದಿಕೆಯಲ್ಲಿ ಬಯಲು ಮಾಡಿದ್ದಾರೆ.


ಇದನ್ನೂ ಓದಿ: Turkey Earthquake: ಇದೇ ಕಾರಣಕ್ಕೆ ಟರ್ಕಿಯಲ್ಲಿ ಆಗಾಗ್ಗೆ ವಿನಾಶಕಾರಿ ಭೂಕಂಪ ಸಂಭವಿಸೋದು!


ಪಾಕಿಸ್ತಾನದ ವಿರುದ್ಧ ಅಸಮಾಧಾನ


ಅಹ್ಮದೀಯ ಸಮುದಾಯ, ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಸಿಖ್ಖರು ಸೇರಿದಂತೆ ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಕಿರುಕುಳವನ್ನು ಸಭೆಯಲ್ಲಿ ಭಾರತ ಎತ್ತಿ ತೋರಿಸಿದೆ. ಇದೇ ವೇಳೆ ಸೀಮಾ ಪೂಜಾನಿ ಅವರು ಪಾಕಿಸ್ತಾನವು ಬಲೂಚಿಸ್ತಾನ್ ಪ್ರಾಂತ್ಯ ಹಾಗೂ ಇತರ ಸ್ಥಳಗಳ ಜನರ ಮೇಲೆ ಏರುತ್ತಿರುವ ಬಲವಂತದ ನೀತಿಗಳನ್ನು ಟೀಕಿಸಿದರು.


ಅಹ್ಮದೀಯ ಸಮುದಾಯವು ಆ ದೇಶದಲ್ಲಿ ಕಿರುಕುಳಕ್ಕೆ ಒಳಗಾಗುತ್ತಿದೆ. ಅವರು ಪಾಕಿಸ್ತಾನಿ ಪಾಸ್‌ಪೋರ್ಟ್ ಪಡೆಯಲು ಸಹ ಪಡೆಯಲಾಗುತ್ತಿಲ್ಲ. ಪಾಕಿಸ್ತಾನದಲ್ಲಿ ಕ್ರಿಶ್ಚಿಯನ್ ಸಮುದಾಯದ ಸ್ಥಿತಿ ಕೂಡ ಅಷ್ಟೇ ಶೋಚನೀಯವಾಗಿದೆ ಎಂದು ಅವರು ತಿಳಿಸಿದರು. ಅಲ್ಲದೆ ಇತರೆ ಧರ್ಮದ ಅಪ್ರಾಪ್ತರನ್ನು ಬಲವಂತದ ಮತಾಂತರ ಮಾಡಲಾಗುತ್ತಿದೆ ಎಂದು ಪಾಕಿಸ್ತಾನದಲ್ಲಿ ಇತರೆ ಧರ್ಮದ ಜನರ ದುಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.




45000 ಕ್ಕೂ ಹೆಚ್ಚು ಮಂದಿ ಸಾವು


ಫೆಬ್ರವರಿ 6ರಂದು ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಸುಮಾರು 45968 ಮಂದಿ ಸಾವನ್ನಪ್ಪಿದ್ದಾರೆ. ಲಕ್ಷಾಂತರ ಮಂದಿ ಆಶ್ರಯ ಕಳೆದುಕೊಂಡಿದ್ದಾರೆ. ನೂರಾರು ಕಟ್ಟಡಗಳು ಕುಸಿದು ಬಿದ್ದಿವೆ.  ದೇಶದಲ್ಲಿ ನಾಪತ್ತೆಯಾಗಿರುವವರ ಸಂಖ್ಯೆ ಬಗ್ಗೆ ಇನ್ನೂ ಸ್ಪಷ್ಟತೆ  ಸಿಕ್ಕಿಲ್ಲ. ಇನ್ನು ವಿನಾಶವಾಗಿರುವ ದೇಶವನ್ನು ಪುನಃ ನಿರ್ಮಾಣ ಮಾಡುವುದಕ್ಕೆ ಸಾವಿರಾರು ಕೋಟಿಗಳ ಅಗತ್ಯವಿದೆ ಎಂದು ತಿಳಿದುಬಂದಿದೆ.


ಸಾಮಾನ್ಯವಾಗಿ ಟರ್ಕಿ, ಸಿರಿಯಾದಂತಹ ದೇಶಗಳಲ್ಲಿ ಉಂಟಾಗುವ ಭೂಕಂಪನಗಳ ಬಗ್ಗೆ ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಅಂದಹಾಗೆ ಟರ್ಕಿ ಹಲವಾರು ಭೂದೋಷ ಇರುವಂತಹ ರೇಖೆಗಳ (Fault lines) ಮೇಲೆ ಕುಳಿತಿದೆ. ಇದು ವಿಶ್ವದ ಅತ್ಯಂತ ಸಕ್ರಿಯ ಭೂಕಂಪನ ರಾಷ್ಟ್ರಗಳಲ್ಲಿ ಒಂದಾಗಿದೆ. ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುವ ಭೂಕಂಪಗಳಿಗೆ ವೈಜ್ಞಾನಿಕ ಕಾರಣಗಳನ್ನು ನೋಡೋದಾದ್ರೆ, ಭೂಮಿಯ ಅಡಿಯಲ್ಲಿ ಹಲವಾರು ಪದರಗಳಿರುತ್ತವೆ. ಇವುಗಳನ್ನು ಟೆಕ್ಟಾನಿಕ್ ಪ್ಲೇಟುಗಳೆನ್ನುತ್ತಾರೆ. ಹೀಗೆ ಇರುವಂಥ ಟೆಕ್ಟಾನಿಕ್ ಪ್ಲೇಟ್‌ಗಳ ಚಲನೆಯಿಂದಾಗಿ ಭೂಕಂಪಗಳು ಸಂಭವಿಸುತ್ತವೆ.

Published by:Rajesha M B
First published: