Monkeypox: ಹೆಚ್ಚುತ್ತಿದೆ ಮಂಕಿಪಾಕ್ಸ್ ಆರ್ಭಟ, ವಿಜಯವಾಡದಲ್ಲಿ ಪತ್ತೆಯಾಯ್ತಾ 2ನೇ ಕೇಸ್?

ಸೌದಿ ಅರೇಬಿಯಾದಿಂದ ಆಂಧ್ರಪ್ರದೇಶದ ವಿಜಯವಾಡಕ್ಕೆ ತನ್ನ ಪೋಷಕರೊಂದಿಗೆ ವಾಪಸ್ ಆಗಿದ್ದ ಮಗುವಿನಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಂಡು ಬಂದಿವೆ. ಈ ಮಗು ತನ್ನ ತಾಯಿ ಹಾಗೂ ಇಬ್ಬರು ಸಹೋದರರ ಜೊತೆ ಆಗಮಿಸಿತ್ತು.

ಮಂಕಿಪಾಕ್ಸ್ ರೋಗದ ಗ್ರಾಫಿಕ್ಸ್ ಚಿತ್ರ

ಮಂಕಿಪಾಕ್ಸ್ ರೋಗದ ಗ್ರಾಫಿಕ್ಸ್ ಚಿತ್ರ

  • Share this:
ವಿಜಯವಾಡ: ವಿದೇಶಗಳಲ್ಲಿ (foreign countries) ಅಬ್ಬರಿಸುತ್ತಿರುವ ಮಂಕಿಪಾಕ್ಸ್ (Monkeypox) ಎಂಬ ರೋಗ (disease), ಇದೀಗ ಭಾರತಕ್ಕೂ (India) ತೀವ್ರ ತಲೆನೋವು ತರುತ್ತಿದೆ. ಕೆಲ ದಿನಗಳ ಹಿಂದಷ್ಟೇ ವಿದೇಶದಿಂದ ಹಿಂತಿರುಗಿದ್ದ ಕೇರಳದ (Kerala) ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಸೋಂಕು (Infection) ಇರೋದು ದೃಢಪಟ್ಟಿತ್ತು (Confirm). ಇದೀಗ ಮತ್ತೊಂದು ಶಂಕಿತ (suspected) ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ಆಂಧ್ರ ಪ್ರದೇಶದ (Andhra Pradesh) ವಿಜಯವಾಡದಲ್ಲಿ (Vijayawada) ಶಂಕಿತ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ಸೌದಿ ಅರೆಬಿಯಾದಿಂದ (Saudi Arabia) ಪೋಷಕರೊಂದಿಗೆ (parents) ವಿಜಯವಾಡಕ್ಕೆ ವಾಪಸ್ಸಾಗಿದ್ದ ಬಾಲಕನಲ್ಲಿ (Boy) ಮಂಕಿಪಾಕ್ಸ್‌ನ ರೋಗ ಲಕ್ಷಣ ಕಂಡುಬಂದಿದೆ. ಇದರಿಂದ ಆರೋಗ್ಯ ಇಲಾಖೆಗೆ (Health Department) ಟೆನ್ಶನ್ ಮತ್ತಷ್ಟು ಹೆಚ್ಚಾಗಿದೆ.

 ಸೌದಿ ಅರೇಬಿಯಾದಿಂದ ಬಂದ ಮಗುವಿಲ್ಲಿ ಶಂಕಿತ ರೋಗ ಲಕ್ಷಣ

ಸೌದಿ ಅರೇಬಿಯಾದಿಂದ ಆಂಧ್ರಪ್ರದೇಶದ ವಿಜಯವಾಡಕ್ಕೆ ತನ್ನ ಪೋಷಕರೊಂದಿಗೆ ವಾಪಸ್ ಆಗಿದ್ದ ಮಗುವಿನಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಂಡು ಬಂದಿವೆ. ಈ ಮಗು ತನ್ನ ತಾಯಿ ಹಾಗೂ ಇಬ್ಬರು ಸಹೋದರರ ಜೊತೆ ಆಗಮಿಸಿತ್ತು. ಮಗುವಿನ ಮೈಮೇಲೆ ಕಜ್ಜಿ ಅಥವಾ ಗುಳ್ಳೆಗಳು ಕಾಣಿಸಿಕೊಳ್ಳಲು ಆರಂಭಿಸಿದೆ. ದೇಹ ತುರಿಕೆ ಹೆಚ್ಚಾಗಿದೆ. ಹೀಗಾಗಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಲಾಗಿದೆ. ಮಂಕಿಪಾಕ್ಸ್ ಪ್ರಕರಣ ಮಕ್ಕಳಿಗೆ ಮಾರಕವಾಗಬಹುದು ಅನ್ನೋ ಏಮ್ಸ್ ತಜ್ಞರ ಎಚ್ಚರಿಕೆ ಬೆನ್ನಲ್ಲೇ ಇದೀಗ ಎರಡನೇ ಪ್ರಕರಣದ ಶಂಕೆ ಕಾಡುತ್ತಿದೆ.

ಮಗುವಿನ ಕುಟುಂಬಸ್ಥರಿಗೂ ಹೋಂ ಕ್ವಾರಂಟೈನ್

ಶಂಕಿತ ಮಂಕಿಪಾಕ್ಸ್ ರೋಗ ಲಕ್ಷಣಗಳನ್ನು ಹೊಂದಿರುವ ಮಗುವನ್ನು ವೈದ್ಯರು ತೀವ್ರ ಪರೀಕ್ಷೆಗೆ ಒಳಪಡಿಸಿದ್ದಾರೆ. “ಮಗುವಿನ ಕುಟುಂಬವನ್ನು ಹೋಮ್ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಕುಟುಂಬ  ಸೌದಿ ಅರೇಬಿಯಾ ಪ್ರವಾಸದಿಂದ ಭಾರತಕ್ಕೆ ಮರಳಿದೆ,’’ ಎಂದು ಸೂಪರಿಂಟೆಂಡೆಂಟ್ ಎನ್ ರಾವ್ ತಿಳಿಸಿದ್ದಾರೆ.

ಇದನ್ನೂ ಓದಿ: Monkeypox: ಭಾರತದಲ್ಲಿ ಮಂಕಿಪಾಕ್ಸ್ ಟೆನ್ಶನ್, ಮಹಾಮಾರಿ ಕಂಟ್ರೋಲ್‌ಗೆ ಕೇಂದ್ರದಿಂದ ಗೈಡ್‌ಲೈನ್

ಮಗುವಿನ ವರದಿ ನೆಗೆಟಿವ್ ಎಂದಿರುವ ವೈದ್ಯರು

ಇನ್ನು ಮಗುವಿನ ರಕ್ತ, ಕಫ, ಮೂತ್ರದ ಮಾದರಿಗಳನ್ನು ಪರೀಕ್ಷೆಗಾಗಿ ಪುಣೆಯ ಲ್ಯಾಬ್‌ಗೆ ಕಳಿಸಿಕೊಡಲಾಗಿತ್ತು. ಇದರ ಫಲಿತಾಂಶ ಬಂದಿದ್ದು, ಪರೀಕ್ಷೆಯ ಫಲಿತಾಂಶವು ನೆಗೆಟಿವ್ ಆಗಿದೆ ಎನ್ನಲಾಗಿದೆ. ಹೀಗಾಗಿ ಆಂಧ್ರಪ್ರದೇಶದಲ್ಲಿ ಯಾವುದೇ ಮಂಕಿಪಾಕ್ಸ್ ಪ್ರಕರಣಗಳಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತ ಜೆ.ನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇರಳದಲ್ಲಿ ಪತ್ತೆಯಾಗಿದ್ದ ಮೊದಲ ಪ್ರಕರಣ

ಕೇರಳದ ಕೊಲ್ಲಂ ಜಿಲ್ಲೆಯ 35 ವರ್ಷದ ವ್ಯಕ್ತಿಯಲ್ಲಿ ಭಾರತದ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿತ್ತು. ಮಂಕಿಪಾಕ್ಸ್ ದೃಢಪಟ್ಟ ವ್ಯಕ್ತಿ ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಕೇರಳ ಆರೋಗ್ಯ ಸಚಿವ ವೀನಾ ಜಾರ್ಜ್ ಈಗಾಗಲೇ ತುರ್ತು ಸಭೆ ನಡೆಸಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ. ತಪಾಸನೆ ನಡೆಸುವಂತೆ ಸೂಚಿಸಿದ್ದಾರೆ. ವಿದೇಶದಿಂದ ಆಗಮಿಸುವವರ ಬಗ್ಗೆ ನಿಗಾ ಇಡಲು ಸೂಚಿಸಲಾಗಿದೆ.

ಕೇರಳ ರಾಜ್ಯದಾದ್ಯಂತ ಹೈ ಅಲರ್ಟ್

ಕೇರಳದಲ್ಲಿ ಈಗಾಗಲೇ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವ ಕಾರಣ 5 ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ. ಪ್ರಯಾಣಿಕರ ತಪಾಸಣೆ ನಡೆಸಲಾಗುತ್ತದೆ. ಪ್ರಯಾಣಿಕರ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತಿದೆ. ಇದೀಗ ಕೇರಳದಲ್ಲಿ ಕೋವಿಡ್ ಜೊತೆಗೆ ಮಂಕಿಪಾಕ್ಸ್ ಪ್ರಕರಣ ಭೀತಿ ಹೆಚ್ಚಾಗಿದೆ.

ಇದನ್ನೂ ಓದಿ: Explained: ವಿದೇಶಗಳನ್ನು ಕಂಗೆಡಿಸುತ್ತಿರುವ ಮಂಕಿಪಾಕ್ಸ್! ಏನಿದು ಕಾಯಿಲೆ? ಇದರ ಲಕ್ಷಣಗಳೇನು?

ಕೇರಳದಲ್ಲಿ ಕೇಂದ್ರದ ತಜ್ಞರಿಂದ ಪರಿಶೀಲನೆ

ಕೇರಳದಲ್ಲಿ ಮಂಕಿಪಾಕ್ಸ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರದಿಂದ ಕೇರಳಕ್ಕೆ ಉನ್ನತ ಮಟ್ಟದ ಪರಿಶೀಲನಾ ತಂಡ ನಿನ್ನೆ ತಿರುವನಂತಪುರಕ್ಕೆ ಆಗಮಿಸಿದೆ. ಕೊಲ್ಲಂ ಜಿಲ್ಲೆಯಲ್ಲಿ ಮಂಗನ ಕಾಯಿಲೆ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಆರೋಗ್ಯ ಅಧಿಕಾರಿಗಳೊಂದಿಗೆ ಸಲಹೆ ಹಾಗೂ ಸಹಕಾರಕ್ಕೆ ಕೇಂದ್ರ ಆರೋಗ್ಯ ಸಚಿವಾಲಯವು ಕೇಂದ್ರ ತಂಡವನ್ನು ಕೇರಳಕ್ಕೆ ಕಳುಹಿಸಿಕೊಟ್ಟಿದೆ.
Published by:Annappa Achari
First published: