• Home
  • »
  • News
  • »
  • national-international
  • »
  • Sex Ratio: ಇಲ್ಲಿ 1000 ಗಂಡುಗಳಿಗೆ 907 ಹೆಣ್ಣುಗಳಂತೆ! ಭಾರತದಲ್ಲಿ ಸುಧಾರಿಸಿತಾ ಲಿಂಗಾನುಪಾತ?

Sex Ratio: ಇಲ್ಲಿ 1000 ಗಂಡುಗಳಿಗೆ 907 ಹೆಣ್ಣುಗಳಂತೆ! ಭಾರತದಲ್ಲಿ ಸುಧಾರಿಸಿತಾ ಲಿಂಗಾನುಪಾತ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇನ್ನೂ ಕೂಡ ಬಹಳಷ್ಟು ಜನರು ಗಂಡು ಮಗು ಬೇಕು. ಹೆಣ್ಣಾದರೆ ಆ ಮಗುವೇ ಬೇಡ ಎಂಬ ಮೌಢ್ಯದಲ್ಲೇ ಇದ್ದಾರೆ. ಹುಟ್ಟುವ ಮೊದಲೇ ಯಾವ ಮಗುವೆಂದು ಗುರುತಿಸಿ ಗರ್ಭಪಾತ ಮಾಡಿಸುವ ಕ್ರೂರಿಗಳೂ ಇದ್ದಾರೆ. ಇದರ ನಡುವೆಯೂ ದೇಶದಲ್ಲಿ ಲಿಂಗಾನುಪಾತ ಸುಧಾರಿಸುತ್ತಿದೆಯಂತೆ!

  • Share this:

ಭಾರತದಲ್ಲಿ ಇತ್ತೀಚಿನ ನಡೆದ ಜನಸಂಖ್ಯೆಯ (Population) ಮಾದರಿ ನೋಂದಣಿ ಸಮೀಕ್ಷೆಯು ಮಕ್ಕಳ ಮರಣ ಮತ್ತು ಜನನದ ಸರಾಸರಿ ಲಿಂಗ ಅನುಪಾತದಲ್ಲಿ ಸುಧಾರಣೆ ಆಗಿರುವುದನ್ನ ತೋರಿಸಿದೆ. ಆದರೆ ಆ ಅನುಪಾತ ಪ್ರಸವಪೂರ್ವ ಲಿಂಗ ನಿರ್ಣಯ ಮತ್ತು ಲಿಂಗ ಆಧಾರದ ಮೇಲೆ ನಡೆಯುವ ಗರ್ಭಪಾತದ (Abortion) ಸಂಭವನೀಯ ಸೂಚಕವು ಬಂಗಾಳ ಸೇರಿದಂತೆ 10 ರಾಜ್ಯಗಳಲ್ಲಿ ಇಳಿಮುಖವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು 2020 ರ ಎಸ್‌ಆರ್‌ಎಸ್ ಅಂಕಿ ಅಂಶಗಳ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನವಜಾತ ಶಿಶುಗಳು, ಶಿಶುಗಳು (Babies) ಮತ್ತು ಐದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮರಣ ಪ್ರಮಾಣವು 2030 ರ ವೇಳೆಗೆ ಯುಎನ್‌ನ ಸುಸ್ಥಿರ ಅಭಿವೃದ್ಧಿ ಗುರಿ ಎಸ್‌ಡಿಜಿ (SDG) ಸಾಧಿಸುವತ್ತ ಸಾಗುತ್ತಿದೆ ಎಂದು ವರದಿ ಹೇಳಿದೆ.


ನವಜಾತ ಶಿಶುಗಳ ಮರಣ ಪ್ರಮಾಣದಲ್ಲಿ ಇಳಿಕೆ!
ಅಂದಹಾಗೆ ಭಾರತದ ಸರಾಸರಿ ನವಜಾತ ಶಿಶುಗಳ ಮರಣ (ಜನನದ 30 ದಿನಗಳೊಳಗೆ ಸಾವುಗಳು)ಪ್ರಮಾಣವು ಒಂದು ಸಾವಿರ ಜೀವಂತ ಜನನಗಳಿಗೆ ಹೋಲಿಸಿದಲ್ಲಿ 2014 ರಲ್ಲಿ 26, 2019 ರಲ್ಲಿ 22 ಆಗಿದ್ದು, 2020 ರಲ್ಲಿ 20 ಕ್ಕೆ ಇಳಿಕೆಯಾಗಿದೆ ಎಂದು ವರದಿ ಹೇಳಿದೆ.


ಶಿಶು ಮರಣ ಪ್ರಮಾಣವು (ಜನನದ ನಂತರದ ಮೊದಲ ವರ್ಷದೊಳಗಿನ ಸಾವುಗಳು) 2014 ರಲ್ಲಿ 39ರಷ್ಟಿದ್ದದ್ದು, 2019 ರಲ್ಲಿ 30 ಆಗಿದ್ದು, 2020 ರಲ್ಲಿ 28 ಕ್ಕೆ ಇಳಿದಿದೆ. ಅಲ್ಲದೇ, ಐದು ವರ್ಷದೊಳಗಿನ ಮರಣವು 2019 ರಲ್ಲಿ 35 ರಿಂದ 2014 ರಲ್ಲಿ 45 ರಿಂದ 2020 ರಲ್ಲಿ 32 ಕ್ಕೆ ಇಳಿದಿದೆ.


ಸುಧಾರಿಸಿದ ಲಿಂಗಾನುಪಾತ!
2017-19 ರಲ್ಲಿ ಜನನದ ಸಮಯದಲ್ಲಿ ರಾಷ್ಟ್ರೀಯ ಲಿಂಗ ಅನುಪಾತ - 1,000 ಹುಡುಗರಿಗೆ ಜನಿಸಿದ ಹುಡುಗಿಯರ ಸಂಖ್ಯೆ ಸರಾಸರಿ 904 ಇತ್ತು. ಆದರೆ 2018-20 ರಲ್ಲಿ ಇದು ಮೂರು ಅಂಕ ಸುಧಾರಿಸಿದ್ದು, 907 ಕ್ಕೆ ಏರಿಕೆಯಾಗಿದೆ.


ಇದನ್ನೂ ಓದಿ:  California: 8 ತಿಂಗಳ ಮಗು ಸೇರಿ ಕಿಡ್ನ್ಯಾಪ್​ ಆದ ಸಿಖ್ ಕುಟುಂಬ ಉದ್ಯಾನದಲ್ಲಿ ಶವವಾಗಿ ಪತ್ತೆ!


ಆದರೆ ಆಂಧ್ರಪ್ರದೇಶ, ಅಸ್ಸಾಂ, ಬಂಗಾಳ, ದೆಹಲಿ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ ಮತ್ತು ಉತ್ತರಾಖಂಡದಲ್ಲಿ ಅನುಪಾತ ಕುಸಿದಿದೆ.


ಕೇರಳದಲ್ಲಿ ಅತಿ ಹೆಚ್ಚು ಲಿಂಗ ಅನುಪಾತ 974 ಇದ್ದರೆ, ಉತ್ತರಾಖಂಡದಲ್ಲಿ ಅತಿ ಕಡಿಮೆ 844 ಇದೆ. ಬಂಗಾಳದಲ್ಲಿ ಈ ಅನುಪಾತವು 944 ರಿಂದ 936 ಕ್ಕೆ ಕುಸಿದಿದೆ. "ಈ ಅಂಕಿ ಅಂಶವು ಬಹುಶಃ ನೆಲದ ಮೇಲಿನ ಅಭ್ಯಾಸಗಳನ್ನು ಪ್ರತಿಬಿಂಬಿಸುತ್ತದೆ. ಇದು ದುರದೃಷ್ಟಕರ. ಆದರೆ ಹಲವೆಡೆ ಕಾನೂನು ನಿಬಂಧನೆಗಳು ಬಿಗಿಯಾಗಿಲ್ಲ. ಅವು ಸರಿಯಾಗಿ ಜಾರಿಯಾಗಿಲ್ಲ" ಎಂದು ಸ್ತ್ರೀರೋಗ ತಜ್ಞ ನೀಲಮ್‌ ಸಿಂಗ್‌ ಹೇಳಿದ್ದಾರೆ.


1994 ರಲ್ಲೇ ಬಂದಿದೆ ಕಾನೂನು!SRS Statistic
ಹೆಣ್ಣು ಭ್ರೂಣಗಳ ಆಯ್ದ ಗರ್ಭಪಾತವನ್ನು ತಡೆಯಲು ಭಾರತವು 1994 ರಲ್ಲಿ ಪ್ರಸವಪೂರ್ವ ಲಿಂಗ ಪತ್ತೆ ತಡೆ ಕಾನೂನನ್ನು ಜಾರಿಗೆ ತಂದಿದೆ. ಆದರೆ ಅದು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲಾ ಅನ್ನೋದು ಅಷ್ಟೇ ನಿಜ. ಕರ್ನಾಟಕದಲ್ಲಿ ಲಿಂಗ ಅನುಪಾತವು 2014-16 ರಲ್ಲಿ 935 ರಿಂದ 2018-2020 ರಲ್ಲಿ 916 ಕ್ಕೆ ಬದಲಾಗಿದೆ. ಬಿಹಾರದಲ್ಲಿ ಇದು 2014-16ರಲ್ಲಿ 908 ರಿಂದ 2015-17ರಲ್ಲಿ 900ಕ್ಕೆ ಮತ್ತು 2016-18ರಲ್ಲಿ 895ಕ್ಕೆ ಕುಸಿದು 894 (2017-19) ಮತ್ತು 895 (2018-20)ರಲ್ಲಿ ಸ್ಥಗಿತಗೊಂಡಿತು.


ಅಂದಹಾಗೆ ಇದು ಭಾರತದ ರಿಜಿಸ್ಟ್ರಾರ್-ಜನರಲ್ ನಡೆಸಿದ ಜನನ ಮತ್ತು ಮರಣಗಳನ್ನು ದಾಖಲಿಸುವ ದೇಶದ ಅತಿದೊಡ್ಡ ವಾರ್ಷಿಕ ಜನಸಂಖ್ಯಾ ಸಮೀಕ್ಷೆ ಆಗಿದೆ.


ಇದನ್ನೂ ಓದಿ: Harassment: ಬಾಲಕಿ ಮೇಲೆ ಅತ್ಯಾಚಾರ ಮಾಡಿ, ಬ್ಯಾಗ್‌ನಲ್ಲಿ ತುಂಬಿ ಕಾಡಿಗೆ ಬಿಟ್ಟ ಪಾಪಿ! ಅಲ್ಲಿ ಮುಂದಾಗಿದ್ದೇ ಬೇರೆ!


ಒಟ್ಟಾರೆ.. ಇನ್ನೂ ಕೂಡ ಬಹಳಷ್ಟು ಜನರು ಗಂಡು ಮಗು ಬೇಕು. ಹೆಣ್ಣಾದರೆ ಆ ಮಗುವೇ ಬೇಡ ಎಂಬ ಮೌಢ್ಯದಲ್ಲೇ ಇದ್ದಾರೆ. ಹುಟ್ಟುವ ಮೊದಲೇ ಯಾವ ಮಗುವೆಂದು ಗುರುತಿಸಿ ಗರ್ಭಪಾತ ಮಾಡಿಸುವ ಕ್ರೂರಿಗಳೂ ಇದ್ದಾರೆ. ಇದು ಕಾನೂನು ಪ್ರಕಾರ ಅಪರಾಧವೆಂದು ತಿಳಿದಿದ್ದರೂ ಇಂಥ ಕೃತ್ಯಗಳು ಬೆಳಕಿಗೆ ಬರದೇ ನಡೆಯುತ್ತಿರುವುದು ದುರದೃಷ್ಟಕರ.

Published by:Ashwini Prabhu
First published: