World Peace Center: ಗುರುಗ್ರಾಮದಲ್ಲಿ ಉದ್ಘಾಟನೆಯಾಗಲಿದೆ 'ವಿಶ್ವ ಶಾಂತಿ ಕೇಂದ್ರ'! ಇದರ ವಿಶೇಷತೆಗಳು ಏನು ಗೊತ್ತಾ?

ಯುವಕರ ವ್ಯಕ್ತಿತ್ವ ವಿಕಸನ, ಮಹಿಳಾ ಸಬಲೀಕರಣ ಮತ್ತು ಮಕ್ಕಳಲ್ಲಿ ಸಂಸ್ಕಾರ ಅಭಿವೃದ್ಧಿ, ಧ್ಯಾನ, ಯೋಗ, ಭಾರತೀಯ ಸಂಸ್ಕೃತಿ ಮತ್ತು ಜೈನ ಜೀವನ ಶೈಲಿಯ ಮೂಲಕ ಮಕ್ಕಳಲ್ಲಿ ಸಂಸ್ಕಾರ, ಅಭಿವೃದ್ಧಿಯಂತಹ ವಿವಿಧ ಆಯಾಮಗಳಲ್ಲಿ ವ್ಯಕ್ತಿತ್ವ ನಿರ್ಮಾಣಕ್ಕೆ ವಿಶ್ವ ಶಾಂತಿ ಕೇಂದ್ರವು ವಿಶ್ವ ದರ್ಜೆಯ ಪ್ರಮುಖ ಕೇಂದ್ರವಾಗಲಿದೆ.

ಹರಿಯಾಣ ಸಿಎಂ ಜೊತೆ ವಿಶ್ವ ಶಾಂತಿ ಕೇಂದ್ರದ ರೂವಾರಿಗಳು

ಹರಿಯಾಣ ಸಿಎಂ ಜೊತೆ ವಿಶ್ವ ಶಾಂತಿ ಕೇಂದ್ರದ ರೂವಾರಿಗಳು

  • Share this:
ಹರಿಯಾಣ: ಇಲ್ಲಿನ ಗುರುಗ್ರಾಮದಲ್ಲಿ (Gurugrama) ಭಾರತದ (India) ಮೊಟ್ಟ ಮೊದಲನೇ (First) ವಿಶ್ವ ಶಾಂತಿ ಕೇಂದ್ರ (World Peace Center) ಸ್ಥಾಪನೆಯಾಗಲಿದೆ. ಶಾಂತಿಯ ರಾಯಭಾರಿ (Ambassador of Peace), ಪ್ರಖ್ಯಾತ ಜೈನಾಚಾರ್ಯ (Jain Gurur) ಡಾ. ಲೋಕೇಶ್‌ ಜಿ ಸ್ಥಾಪಿಸಿದ ಅಹಿಂಸಾ ವಿಶ್ವ ಭಾರತಿ ಸಂಸ್ಥೆಯು ಹರಿಯಾಣದ (Haryana) ಗುರುಗ್ರಾಮ್‌ನಲ್ಲಿ ಭಾರತದ ಮೊದಲ ವಿಶ್ವ ಶಾಂತಿ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಿದೆ. ಹಾಗಾದರೆ ವಿಶ್ವ ಶಾಂತಿ ಕೇಂದ್ರ ಅಂದರೆ ಏನು? ಅವರ ವಿಶೇಷತೆಗಳು ಏನು? ಆಧುನಿಕ ಜೀವನದಲ್ಲಿ ಈ ವಿಶ್ವ ಶಾಂತಿ ಕೇಂದ್ರದ ಆವಶ್ಯಕತೆ ಎಷ್ಟಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ…

ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ ವಿಶ್ವ ಶಾಂತಿ ಕೇಂದ್ರ

ಹರಿಯಾಣ ಸರ್ಕಾರವು ಗುರುಗ್ರಾಮ್‌ನ ಸೆಕ್ಟರ್ 39ರಲ್ಲಿ ವಿಶ್ವ ಶಾಂತಿ ಕೇಂದ್ರದ ಸ್ಥಾಪನೆಗಾಗಿ ಜಾಗ ನೀಡಿದೆ. ಮೆದಾಂತ ಆಸ್ಪತ್ರೆಯ ಎದುರು ಮತ್ತು ದೆಹಲಿ-ಜೈಪುರ ಹೆದ್ದಾರಿಯ ಪಕ್ಕದಲ್ಲಿ ಸಂಸ್ಥೆಗೆ ಒಂದು ಪ್ಲಾಟ್ ಅನ್ನು ನಿಗದಿಪಡಿಸಿದೆ. ಅಹಿಂಸಾ ವಿಶ್ವ ಭಾರತಿಯ ಸಂಸ್ಥಾಪಕ ಆಚಾರ್ಯ ಡಾ ಲೋಕೇಶ್‌ಜಿ ಮಾತನಾಡಿ, ಸಂಸ್ಥೆಯು ಈ ಪ್ಲಾಟ್‌ನಲ್ಲಿ ವಿಶ್ವ ಶಾಂತಿ ಕೇಂದ್ರ (ಡಬ್ಲ್ಯೂಪಿಸಿ) ನಿರ್ಮಾಣವನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ ಎಂದು ಹೇಳಿದರು.

2 ವರ್ಷಗಳಲ್ಲಿ ಕಟ್ಟಡ ಕಾಮಗಾರಿ ಪೂರ್ಣ

ಅಹಿಂಸಾ ವಿಶ್ವಭಾರತಿ ಸಂಸ್ಥೆಯವರು ಸಂಪೂರ್ಣ ಹಣವನ್ನು ಸರ್ಕಾರದ ಖಜಾನೆಗೆ ಜಮಾ ಮಾಡಿ ನಿವೇಶನ ಪಡೆದಿದ್ದು, ಎರಡು ವರ್ಷಗಳಲ್ಲಿ ಸುಮಾರು 25000 ಚದರ ಅಡಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ.

ಇದನ್ನೂ ಓದಿ:  Deve Gowda: "ಕಾಂಗ್ರೆಸ್‌ನಿಂದ ಕಹಿ ಅನುಭವ ಆಗಿದೆ, ಮತ್ತೆ ಸಹವಾಸವೇ ಬೇಡ" ಎಂದ ದೇವೇಗೌಡ! ಮಾಜಿ ಪ್ರಧಾನಿ Exclusive ಮಾತು

ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್‌ಗೆ ಕೃತಜ್ಞತೆ

ದೆಹಲಿಯಲ್ಲಿ ಶಾಂತಿ ರಾಯಭಾರಿ ಆಚಾರ್ಯ ಡಾ ಲೋಕೇಶ್‌ಜಿ ಅವರು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಇಂದು ಭೇಟಿ ಮಾಡಿದರು. ವಿಶ್ವ ಶಾಂತಿ ಕೇಂದ್ರ ಸ್ಥಾಪನೆಗೆ ಸಹಕರಿಸಿದ್ದಕ್ಕೆ ಹರಿಯಾಣ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅವರು, ‘ವಿಶ್ವ ಶಾಂತಿ ಕೇಂದ್ರ' ವಿಶ್ವದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಸ್ಥಾಪನೆಗೆ ಶ್ರಮಿಸುತ್ತದೆ ಎಂದು ಹೇಳಿದರು.

ಪ್ರಾಚೀನ ಹಾಗೂ ಆಧುನಿಕ ವಿಜ್ಞಾನದ ಸಂಗಮ

ವಿಶ್ವಸಂಸ್ಥೆ ಮತ್ತು ವಿಶ್ವ ಧರ್ಮ ಸಂಸತ್ತು ಸೇರಿದಂತೆ ಗುರುಗ್ರಾಮ್‌ನ ಈ ಕೇಂದ್ರದ ಧ್ವನಿಯು ಅದರ ಕೆಲಸದಿಂದ ಪ್ರಪಂಚದಾದ್ಯಂತ ಕೇಳಿಬರುತ್ತದೆ. ಪ್ರಾಚೀನ ಜ್ಞಾನ ಮತ್ತು ಆಧುನಿಕ ವಿಜ್ಞಾನದ ಸಮನ್ವಯದೊಂದಿಗೆ ಸಿದ್ಧಪಡಿಸಲಾದ ಶಾಂತಿ ಶಿಕ್ಷಣದ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು, ಶಿಕ್ಷಕರು, ಯುವಕರು, ಮಹಿಳೆಯರು, ವೈದ್ಯರು, ಎಂಜಿನಿಯರ್‌ಗಳು, ವಕೀಲರು, ವ್ಯಾಪಾರಿಗಳು, ರೈತರು ಹೀಗೆ ಎಲ್ಲರಿಗೂ ನಡೆಸಲಾಗುವುದು ಎಂದು ಆಚಾರ್ಯ ಲೋಕೇಶ್ ತಿಳಿಸಿದರು.

ಯೋಗ, ಧ್ಯಾನದ ಜೊತೆಗೆ ಸಂಸ್ಕಾರದ ಬಗ್ಗೆ ಪಾಠ

ಶಿಕ್ಷಣ ಇಲಾಖೆಯು ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವಾಗ, ವಿಶ್ವ ಶಾಂತಿ ಕೇಂದ್ರವು ಜನರ ಮಾನಸಿಕ, ಭಾವನಾತ್ಮಕ ಮತ್ತು ಚಾರಿತ್ರ್ಯದ ಬೆಳವಣಿಗೆಗೆ ಮೀಸಲಾಗಿರುತ್ತದೆ.

ಇದನ್ನೂ ಓದಿ: Modi: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಗ್ಗೆ ಮೋದಿ ಮೆಚ್ಚುಗೆ! ಈ Movie ನೋಡ್ತಾರಾ ಪ್ರಧಾನಿ?

ವೈಜ್ಞಾನಿಕ ಕಾರ್ಯಕ್ರಮಗಳಿಗೂ ಆದ್ಯತೆ

ಯುವಕರ ವ್ಯಕ್ತಿತ್ವ ವಿಕಸನ, ಮಹಿಳಾ ಸಬಲೀಕರಣ ಮತ್ತು ಮಕ್ಕಳಲ್ಲಿ ಸಂಸ್ಕಾರ ಅಭಿವೃದ್ಧಿ, ಧ್ಯಾನ, ಯೋಗ, ಭಾರತೀಯ ಸಂಸ್ಕೃತಿ ಮತ್ತು ಜೈನ ಜೀವನ ಶೈಲಿಯ ಮೂಲಕ ಮಕ್ಕಳಲ್ಲಿ ಸಂಸ್ಕಾರ, ಅಭಿವೃದ್ಧಿಯಂತಹ ವಿವಿಧ ಆಯಾಮಗಳಲ್ಲಿ ವ್ಯಕ್ತಿತ್ವ ನಿರ್ಮಾಣಕ್ಕೆ ವಿಶ್ವ ಶಾಂತಿ ಕೇಂದ್ರವು ವಿಶ್ವ ದರ್ಜೆಯ ಪ್ರಮುಖ ಕೇಂದ್ರವಾಗಲಿದೆ. ವೈಜ್ಞಾನಿಕ ಕಾರ್ಯಕ್ರಮಗಳನ್ನೂ ಇಲ್ಲಿ ನಡೆಸಲಾಗುವುದು ಎಂದು ಆಚಾರ್ಯ ಲೋಕೇಶ್‌ ಜಿ ಹೇಳಿದರು.
Published by:Annappa Achari
First published: