ಹೊಸ ನಕ್ಷೆಗೆ ಮುಂದಾಗಿರುವ ನೇಪಾಳಕ್ಕೆ ಎರಡೂ ದೇಶಗಳ ಐತಿಹಾಸಿಕ ಸ್ನೇಹ ನೆನಪಿಸಿಕೊಟ್ಟ ಭಾರತ

ಭಾರತದ ಭಾಗದಲ್ಲಿರುವ ಲಿಂಪಿಯಾಧುರ, ಕಾಲಾಪಾನಿ ಮತ್ತು ಲಿಪುಲೇಖ್ ಪ್ರದೇಶಗಳು ನೇಪಾಳಕ್ಕೆ ಸೇರಿದ್ದವು ಎಂಬುದು ನೇಪಾಳದ ವಾದ. ತನ್ನ ಹೊಸ ನಕ್ಷೆಯಲ್ಲಿ ಈ ಪ್ರದೇಶಗಳನ್ನ ಒಳಗೊಂಡಿದೆ. ಇದಕ್ಕೆ ಸಂವಿಧಾನದ ಮಾನ್ಯತೆ ತರಲು ಹೊರಟಿದೆ.

Vijayasarthy SN | news18
Updated:June 13, 2020, 5:17 PM IST
ಹೊಸ ನಕ್ಷೆಗೆ ಮುಂದಾಗಿರುವ ನೇಪಾಳಕ್ಕೆ ಎರಡೂ ದೇಶಗಳ ಐತಿಹಾಸಿಕ ಸ್ನೇಹ ನೆನಪಿಸಿಕೊಟ್ಟ ಭಾರತ
ನೆಪಾಳ ಪಿಎಂ ಕೆಪಿ ಶರ್ಮ ಓಲಿ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ
  • News18
  • Last Updated: June 13, 2020, 5:17 PM IST
  • Share this:
ನವದೆಹಲಿ(ಜೂನ್13): ಚೀನಾ ಮತ್ತು ಪಾಕಿಸ್ತಾನದಂತೆ ಈಗ ನೇಪಾಳ ಕೂಡ ಭಾರತಕ್ಕೆ ಗಡಿತಂಟೆ ನಡೆಸುತ್ತಿದೆ. ಭಾರತದ ಕೆಲ ಭೂಭಾಗಗಳನ್ನ ಒಳಗೊಂಡಿರುವ ತನ್ನ ಕಲ್ಪಿತ ಹೊಸ ನಕ್ಷೆಯನ್ನ ನೇಪಾಳ ಅಧಿಕೃತಗೊಳಿಸಲು ಹೊರಟಿದೆ. ಅದಕ್ಕಾಗಿ ನೇಪಾಳದ ಸಂಸತ್ತಿಗೆ ತಿದ್ದುಪಡಿ ತರಲಾಗುತ್ತಿದೆ. ಇವತ್ತು ಸಂಜೆಯ ವೇಳೆ ನೇಪಾಳ ಸಂಸತ್ತು ಈ ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಇವೆಲ್ಲ ಬೆಳವಣಿಗೆಗಳ ನಡುವೆ ಭಾರತವು ಎರಡೂ ದೇಶಗಳ ಮಧ್ಯೆ ಇರುವ ಸ್ನೇಹತ್ವದ ಇತಿಹಾಸವನ್ನು ತನ್ನ ನೆರೆಯ ರಾಷ್ಟ್ರಕ್ಕೆ ಮನದಟ್ಟು ಮಾಡಲು ಯತ್ನಿಸುತ್ತಿದೆ.

ಸದ್ಯ ಭಾರತದ ಭಾಗದಲ್ಲಿರುವ ಲಿಂಪಿಯಾಧುರ, ಕಾಲಾಪಾನಿ ಮತ್ತು ಲಿಪುಲೇಖ್ ಪ್ರದೇಶಗಳು ನೇಪಾಳಕ್ಕೆ ಸೇರಿದ್ದವು ಎಂಬುದು ನೇಪಾಳದ ವಾದ. ತನ್ನ ಹೊಸ ನಕ್ಷೆಯಲ್ಲಿ ಈ ಪ್ರದೇಶಗಳನ್ನ ಒಳಗೊಂಡಿದೆ. ನೇಪಾಳದ ಈ ವಾದವನ್ನು ಭಾರತ ಸಾರಾಸಗಟಾಗಿ ತಳ್ಳಿಹಾಕಿದೆ. ಹೊಸ ನಕ್ಷೆಗಾಗಿ ಸಂವಿಧಾನದಲ್ಲಿ ತಿದ್ದುಪಡಿ ಮಾಡುತ್ತಿರುವ ನೇಪಾಳಕ್ಕೆ ಎರಡೂ ದೇಶಗಳ ನಡುವಿನ ಸಂಬಂಧದ ಮಹತ್ವವನ್ನು ಮನವರಿಕೆ ಮಾಡಲು ಪ್ರಯತ್ನಿಸುತ್ತಿದೆ.

ಇವತ್ತು ಸೇನಾ ಮುಖ್ಯಸ್ಥ ಎಂಎಂ ನರವಣೆ ಅವರು ಈ ವಿಚಾರದ ಬಗ್ಗೆ ಮಾತನಾಡಿ, ಎರಡೂ ದೇಶಗಳ ಮಧ್ಯೆ ಬಹಳಷ್ಟು ಬಾಂಧವ್ಯ ಇದೆ. ಜನರ ಮಧ್ಯೆ ಬೆಸುಗೆ ಇದೆ. ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿ ಮತ್ತು ಧಾರ್ಮಿಕವಾಗಿ ಗಟ್ಟಿ ಬಂಧ ಇದೆ. ನಮ್ಮ ಸಂಬಂಧ ಯಾವತ್ತೂ ಗಟ್ಟಿಯಾಗಿಯೇ ಇತ್ತು. ಮುಂದೆಯೂ ಹಾಗೇ ಇರುತ್ತದೆ ಎಂದು ಜನರಲ್ ನರವಣೆ ಹೇಳಿದ್ದಾರೆ.

ಇದನ್ನೂ ಓದಿ: ಚೀನಾ ಗಡಿಭಾಗದಲ್ಲಿ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದೆ: ಸೇನಾ ಮುಖ್ಯಸ್ಥರ ಸ್ಪಷ್ಟನೆ

ಎರಡು ದಿನಗಳ ಹಿಂದೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರಾದ ಅನುರಾಗ್ ಶ್ರೀವಾಸ್ತವ್ ಅವರೂ ಇದೇ ವಿಚಾರವನ್ನು ಹೈಲೈಟ್ ಮಾಡಿ ಹೇಳಿದ್ದರು. ನೇಪಾಳದ ಜೊತೆ ಭಾರತಕ್ಕೆ ನಾಗರಿಕ, ಸಾಂಸ್ಕೃತಿಕ ಮತ್ತು ಸ್ನೇಹ ಸಂಬಂಧವಿದೆ ಎಂದು ಹೇಳಿದ್ದರು. ನೇಪಾಳಕ್ಕೆ ಭಾರತ ನೀಡುತ್ತಿರುವ ನೆರವನ್ನೂ ನೆನಪಿಸಿಕೊಟ್ಟರು.

“ನೇಪಾಳಕ್ಕೆ ನಾವು 25 ಟನ್​ಗಳಷ್ಟು ವೈದ್ಯಕೀಯ ಸಾಮಗ್ರ ಪೂರೈಕೆ ಮಾಡಿದ್ದೇವೆ ಇದರಲ್ಲಿ ಪಾರಾಸಿಟಮಾಲ್, ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಗಳು, ಟೆಸ್ಟ್ ಕಿಟ್​ಗಳು ಮತ್ತಿತರ ವೈದ್ಯಕೀಯ ಸಾಮಗ್ರಿಗಳಿವೆ” ಎಂದು ಅನುರಾಗ್ ಶ್ರೀವಾಸ್ತವ್ ಹೇಳುತ್ತಾರೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತಿಗೆ ಭಾರತದ ಮಾಡಿದ ಮೊದಲ ಪಟ್ಟಿಯಲ್ಲಿ ನೇಪಾಳವನ್ನು ಒಳಗೊಂಡಿತ್ತು. ಅದಕ್ಕೂ ಮುನ್ನ, ವಿದೇಶಗಳಲ್ಲಿ ಸಿಲುಕಿದ್ದ ನೇಪಾಳೀ ಪ್ರಜೆಗಳನ್ನ ಅವರ ದೇಶಕ್ಕೆ ತಲುಪಿಸಲೂ ಭಾರತ ನೆರವಾಗಿತ್ತು. ಲಾಕ್ ಡೌನ್ ಸಂದರ್ಭದಲ್ಲೂ ನೇಪಾಳಕ್ಕೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಭಾರತ ಎಚ್ಚರ ವಹಿಸಿತ್ತು. ಆದರೂ ಕೂಡ ಕೊರೋನಾ ವಿಚಾರದಲ್ಲಿ ನೇಪಾಳ ದೇಶ ಭಾರತದ ವಿರುದ್ಧ ಗಂಭೀರ ಆರೋಪಗಳನ್ನ ಮಾಡುತ್ತಲೇ ಬಂದಿದೆ. ಭಾರತದಿಂದಲೇ ನೇಪಾಳಕ್ಕೆ ಕೊರೋನಾ ಸೋಂಕು ಹರಡುತ್ತಿದೆ ಎಂದು ಹೇಳುತ್ತಿದೆ. ಇದೇ ಕೊರೋನಾ ವಿಚಾರಕ್ಕೆ ನೇಪಾಳ ಗಡಿಭಾಗದಲ್ಲಿ ಅಲ್ಲಿನ ಪೊಲೀಸರು ಭಾರತೀಯ ನಾಗರಿಕರೊಬ್ಬರನ್ನು ಗುಂಡೇಟು ಹೊಡೆದು ಹತ್ಯೆಗೊಳಿಸಿದ್ದರು ಎಂಬಂತಹ ಸುದ್ದಿ ಇದೆ.ಇದನ್ನೂ ಓದಿ: ಕಾಬೂಲ್​ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 4 ಜನ ಸಾವು

ಇನ್ನು, ನೇಪಾಳದ ಪ್ರಧಾನ ಮಂತ್ರಿ ಕೆ.ಪಿ. ಶರ್ಮಾ ಓಲಿ ಅವರು ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿರುವಂತೆ ಮೇಲ್ನೋಟಕ್ಕೆ ತೋರುತ್ತದೆ. 2016ರಲ್ಲಿ ಓಲಿ ಅವರ ಸರ್ಕಾರ ಪತನಗೊಂಡಿತ್ತು. ಅದಕ್ಕೆ ಭಾರತವೇ ಕಾರಣ ಎಂದು ಆಗ ಅವರು ಆಪಾದಿಸಿದ್ದರು. ಅದಾದ ಬಳಿಕ ಅವರು 2018ರಲ್ಲಿ ಮತ್ತೆ ಅಧಿಕಾರಕ್ಕೆ ಮರಳಿದ್ದರು. ಆಗಿನಿಂದಲೂ ಅವರು ಭಾರತದ ಜೊತೆ ಉತ್ತಮ ಸಂಬಂಧ ಬೆಳೆಸಿಕೊಳ್ಳಲು ಹೆಚ್ಚು ಆಸಕ್ತಿ ತೋರಿಲ್ಲ. ಚೀನಾ ಜೊತೆ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ಚೀನಾ ಕೂಡ ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ನೇಪಾಳಕ್ಕೆ ದಾರಾಳವಾಗಿ ಸಹಾಯ ಮಾಡುವ ಇರಾದೆ ತೋರಿಸುತ್ತಿದೆ.

ನೇಪಾಳ ತನ್ನ ಜನರ ಕೆಲ ಅಗತ್ಯ ವಸ್ತುಗಳಿಗೆ ಭಾರತವನ್ನೇ ಹೆಚ್ಚು ಅವಲಂಬಿತವಾಗಿದೆ. ಬಹಳ ವರ್ಷಗಳಿಂದಲೂ ಭಾರತ ತನ್ನ ನೆರೆ ರಾಷ್ಟ್ರಕ್ಕೆ ಈ ಅಗತ್ಯವಸ್ತುಗಳನ್ನ ಪೂರೈಸುತ್ತಾ ಬಂದಿದೆ. ಆದರೆ, 2015ರಲ್ಲಿ ಈ ಪೂರೈಕೆ ಸ್ಥಗಿತಗೊಂಡಿತ್ತು. ಇದು ಭಾರತ ಮತ್ತು ನೇಪಾಳದ ನಡುವಿನ ಸಂಬಂಧಕ್ಕೆ ಗಂಭೀರವಾಗಿ ಧಕ್ಕೆ ತಂದಿತ್ತು. ಭಾರತ ಉದ್ದೇಶಪೂರ್ವಕವಾಗಿ ಸರಬರಾಜು ನಿಲ್ಲಿಸಿದೆ. ಇದರಿಂದ ನೇಪಾಳದ ಗುಡ್ಡಗಾಡು ಪ್ರದೇಶಗಳ ಜನರಿಗೆ ಬಹಳ ತೊಂದರೆಯಾಯಿತು ಎಂದು ಆರೋಪಿಸಿತ್ತು. ಆದರೆ, ನೇಪಾಳದಲ್ಲಿ ನಡೆಯುತ್ತಿದ್ದ ಮಧೇಶಿ ಜನರ ಪ್ರತಿಭಟನೆಯಿಂದಾಗಿ ಪೂರೈಕೆ ನಿಂತಿತ್ತು ಎಂಬುದು ಭಾರತದ ಸಮಜಾಯಿಷಿ. ಆದರೆ, ನೇಪಾಳ ಇದನ್ನ ಒಪ್ಪಿಕೊಳ್ಳಲು ತಯಾರಿಲ್ಲ.

ಇದನ್ನೂ ಓದಿ: ‘ನಿಮ್ಮ ಕೊನೆಯ ಗಿಫ್ಟ್ ಧರೆಗಿಳಿದಿದೆ; ಸ್ವರ್ಗದಿಂದ ಕಾಣುತ್ತಿದೆಯಾ?’: ಕರುಳು ಹಿಂಡಿದೆ ಚೀನೀ ಮಹಿಳೆ ಮಾತು

ಇವೆಲ್ಲದರ ಮಧ್ಯೆ ನೇಪಾಳದಲ್ಲಿ ಭಾರತ ಕೆಲ ಮೂಲಸೌಕರ್ಯಗಳನ್ನ ನಿರ್ಮಿಸಲು ನೆರವಾಗುತ್ತಿದೆ. ತೈಲ ಮತ್ತು ಅನಿಲ ವಲಯದಲ್ಲಿ ನೇಪಾಳದಲ್ಲಿ ಕೆಲ ಯೋಜನೆಗಳಿಗೆ ಭಾರತ ನೆರವಾಗುತ್ತಿದೆ. ಐಒಸಿಎಲ್ ಸಂಸ್ಥೆ 324 ಕೋಟಿ ಖರ್ಚು ಮಾಡಿ ನೇಪಾಳಕ್ಕೆ ಪೆಟ್ರೋಲಿಯಮ್ ಪೈಪ್​​ಲೈನ್ ಅಳವಡಿಸಿದೆ.ಈಗ ಬಂದಿರುವ ಹೊಸ ಬಿಕ್ಕಟ್ಟು ಒಂದು ತಾತ್ಕಾಲಿಕ ತಡೆಯಾಗಿದ್ದು ಮುಂದಿನ ದಿನಗಳಲ್ಲಿ ಎರಡೂ ದೇಶಗಳ ಮಧ್ಯೆ ಮತ್ತೆ ಉತ್ತಮ ಬಾಂಧವ್ಯ ಏರ್ಪಡುತ್ತದೆ ಎಂಬ ವಿಶ್ವಾಸದಲ್ಲಿ ಭಾರತ ಇದೆ.
First published: June 13, 2020, 5:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading