ಕಾಶ್ಮೀರ, ಪಿಓಕೆ ಭಾಗದ ಯಥಾಸ್ಥಿತಿ ಬದಲಿಸಲು ಯಾವ ರಾಷ್ಟ್ರವೂ ಪ್ರಯತ್ನಿಸುವಂತಿಲ್ಲ; ವಿದೇಶಾಂಗ ಸಚಿವಾಲಯದ ಎಚ್ಚರಿಕೆ!

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ಯಥಾಸ್ಥಿತಿಯನ್ನು ಬದಲಾಯಿಸಲು ಇತರೆ ದೇಶಗಳು ತೆಗೆದುಕೊಳ್ಳುವ ಯಾವುದೇ ಕ್ರಮಗಳನ್ನು ಭಾರತ ಕಟುವಾಗಿ ವಿರೋಧಿಸುತ್ತದೆ ಎಂದು ಭಾರತ ವಿದೇಶಾಂಗ ಸಚಿವಾಲಯದ ರವೀಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

MAshok Kumar | news18-kannada
Updated:September 10, 2019, 3:43 PM IST
ಕಾಶ್ಮೀರ, ಪಿಓಕೆ ಭಾಗದ ಯಥಾಸ್ಥಿತಿ ಬದಲಿಸಲು ಯಾವ ರಾಷ್ಟ್ರವೂ ಪ್ರಯತ್ನಿಸುವಂತಿಲ್ಲ; ವಿದೇಶಾಂಗ ಸಚಿವಾಲಯದ ಎಚ್ಚರಿಕೆ!
ಸಾಂದರ್ಭಿಕ ಚಿತ್ರ.
  • Share this:
ನವ ದೆಹಲಿ (ಸೆಪ್ಟೆಂಬರ್.10); ಇತ್ತೀಚೆಗೆ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದ ಚೀನಾ ಮತ್ತು ಪಾಕಿಸ್ತಾನ ತಮ್ಮ ಹೇಳಿಕೆಯಲ್ಲಿ ಕಾಶ್ಮೀರ ವಿವಾದವನ್ನು ಉಲ್ಲೇಖಿಸಿತ್ತು. ಆದರೆ, ಇದನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಭಾರತದ ಮಂಗಳವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಜಮ್ಮು-ಕಾಶ್ಮೀರ ಇತಿಹಾಸದಲ್ಲಿ ಉಳಿದಿರುವ ವಿವಾದವಾಗಿದ್ದು, ಇದ್ನು ಪರಸ್ಪರ ಗೌರವ ಮತ್ತು ಸಮಾನತೆಯ ಆಧಾರದ ಮೇಲೆ ಮಾತುಕತೆಯ ಮೂಲಕ ಮಾತ್ರ ಶಾಂತಿಯುತವಾಗಿ ಇತ್ಯರ್ಥಪಡಿಸುವುದು ಸಾಧ್ಯ ಎಂದು ತಿಳಿಸಿದೆ.

ಈ ಕುರಿತು ಮಾತನಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್, “ಚೀನಾ ವಿದೇಶಾಂಗ ಸಚಿವರು ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪಾಕಿಸ್ತಾನದ ಜೊತೆ ಜಂಟಿ ಹೇಳಿಕೆ ನೀಡಿರುವ ಚೀನಾ ತನ್ನ ಹೇಳಿಕೆಯಲ್ಲಿ ಜಮ್ಮು-ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿತ್ತು. ಆದರೆ, ಉಬಯ ದೇಶಗಳ ಈ ಹೇಳಿಕೆಯನ್ನು ಭಾರತ ಸಾರಾಸಗಟಾಗಿ ತಿರಸ್ಕರಿಸುತ್ತಿದೆ. ಅಲ್ಲದೆ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಭಾರತ-ನೇಪಾಳ ನಡುವಿನ ದಕ್ಷಿಣ ಏಷ್ಯಾದ ಮೊದಲ ಗಡಿಯಾಚೆಗಿನ ಪೆಟ್ರೋಲಿಯಂ ಪೈಪ್​ಲೈನ್ ಉದ್ಘಾಟಿಸಿದ ಪ್ರಧಾನಿ ಮೋದಿ

ಅಲ್ಲದೆ, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯ ವಿರುದ್ಧವೂ ಕಿಡಿಕಾರಿದ ಅವರು, “1947ರಿಂದ ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರದ ಭೂ ಪ್ರದೇಶ ಭಾರತದ ಅವಿಭಾಜ್ಯ ಅಂಗ. ಆದರೆ, ಈ ಭಾಗದಲ್ಲಿ ಚೀನಾ ಮತ್ತು ಪಾಕಿಸ್ತಾನ ರಾಷ್ಟ್ರಗಳು ವಾಣಿಜ್ಯ ವಹಿವಾಟು ಸಲುವಾಗಿ ಆರ್ಥಿಕ ಕಾರಿಡಾರ್ ರಚಿಸುತ್ತಿರುವುದು ಭಾರತದ ಸಾರ್ವಭೌಮತೆಗೆ ದಕ್ಕೆ ತರುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ಯಥಾಸ್ಥಿತಿಯನ್ನು ಬದಲಾಯಿಸಲು ಇತರೆ ದೇಶಗಳು ತೆಗೆದುಕೊಳ್ಳುವ ಯಾವುದೇ ಕ್ರಮಗಳನ್ನು ಭಾರತ ಕಟುವಾಗಿ ವಿರೋಧಿಸುತ್ತದೆ" ಎಂದು ಅವರು ತಿಳಿಸಿದ್ದಾರೆ.

ಚೀನಾ ಹಾಗೂ ಪಾಕಿಸ್ತಾನ ತಮ್ಮ ದೇಶದ ಆರ್ಥಿಕತೆಯನ್ನು ವೃದ್ಧಿಸಿಕೊಳ್ಳುವ ಸಲುವಾಗಿ ಪಾಕಿಸ್ತಾನದ ಬಲೂಚಿಸ್ತಾನ್​ನಿಂದ ಚೀನಾದವರೆಗೆ ಸುಸಜ್ಜಿತ ಸಾರಿಗೆ ಹಾಗೂ ಸಂಪರ್ಕ ವ್ಯವಸ್ಥೆ ನಿರ್ಮಿಸುವ ಕಾಮಗಾರಿಯನ್ನು ಚೀನಾ 2017ರಿಂದ ಆರಂಭಿಸಿದೆ. ಈ ಯೋಜನೆಯ ಅಂದಾಜು ಮೊತ್ತ 62 ಬಿಲಿಯನ್ ಡಾಲರ್. ಆದರೆ, ಈ ಯೋಜನೆ ಭಾರತದ ಭೂ ಭಾಗವಾದ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹಾದು ಹೋಗುವ ಕಾರಣ ನೆರೆ ರಾಷ್ಟ್ರಗಳ ಈ ಯೋಜನೆಗೆ ಆರಂಭದಿಂದಲೂ ಭಾರತ ತಗಾದೆ ತೆಗೆಯುತ್ತಲೇ ಇದೆ. ಈ ಕುರಿತ ಪ್ರಕರಣವೂ ವಿಶ್ವಸಂಸ್ಥೆ ಮುಂದಿದೆ.

ಇದನ್ನೂ ಓದಿ : ನೂತನ ಮೋಟಾರು ಕಾಯ್ದೆ ತಂದ ಸಾವು; ಸಂಚಾರಿ ಪೊಲೀಸರ ಬಳಿ ವಾಗ್ವಾದ ನಡೆಸುತ್ತಲೇ ಹೃದಯಾಘಾತಕ್ಕೆ ಬಲಿಯಾದ ಟೆಕ್ಕಿ!
First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading