HOME » NEWS » National-international » INDIA RANKED 80TH IN CORRUPTION PERCEPTION INDEX LG

ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ; ಭಾರತಕ್ಕೆ 80ನೇ ಸ್ಥಾನ

ಈ ವರ್ಷ ಬಹುತೇಕ ರಾಷ್ಟ್ರಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ವರದಿ ತಿಳಿಸಿದೆ. ಅನೇಕ ರಾಷ್ಟ್ರಗಳಲ್ಲಿ ಚುನಾವಣಾ ಪ್ರಚಾರದ ವೇಳೆ ಅಧಿಕವಾಗಿ ಹಣದ ಹೊಳೆ ಹರಿದಿದೆ ಎಂದು ಟ್ರಾನ್ಸ್​ಪರೆನ್ಸಿ ಇಂಟರ್​ನ್ಯಾಷನಲ್​ ಹೇಳಿದೆ.

news18-kannada
Updated:January 24, 2020, 11:15 AM IST
ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ; ಭಾರತಕ್ಕೆ 80ನೇ ಸ್ಥಾನ
ವಿಶ್ವ ಆರ್ಥಿಕ ವೇದಿಕೆ
  • Share this:
ದಾವೋಸ್​(ಜ.24): ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ ಪಟ್ಟಿಯಲ್ಲಿ ಭಾರತ ಈ ವರ್ಷ 80ನೇ ಸ್ಥಾನವನ್ನು ಪಡೆದಿದ್ದು, 2 ಸ್ಥಾನಗಳ ಕುಸಿತ ಕಂಡಿದೆ. 180 ದೇಶ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ ಭಾರತ 80ನೇ ಸ್ಥಾನದಲ್ಲಿದೆ. ಕಳೆದ ಬಾರಿ 78ನೇ ಸ್ಥಾನಕ್ಕೆ ಏರಿದ್ದ ಭಾರತ ಇದೀಗ ಎರಡು ಸ್ಥಾನ ಕುಸಿದಿದೆ.

ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ ಪಟ್ಟಿಯನ್ನು 'ಟ್ರಾನ್ಸ್​ಪರೆನ್ಸಿ ಇಂಟರ್​ನ್ಯಾಷನಲ್​'(ಟಿಐ)  ಸಂಸ್ಥೆಯು ಸಿದ್ದಪಡಿಸುತ್ತದೆ. ಇದು ಸರ್ಕಾರೇತರ ಸಂಸ್ಥೆಯಾಗಿದೆ. ಸಾರ್ವಜನಿಕ ವಲಯದಲ್ಲಿ ನಡೆದ ಭ್ರಷ್ಟಾಚಾರ ಕುರಿತು ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆಯ ಆಧಾರದ ಮೇಲೆ 180 ರಾಷ್ಟ್ರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ರ‍್ಯಾಂಕ್​ ನೀಡಲಾಗಿದೆ.

ವರದಿಯ ಪ್ರಕಾರ, ಡೆನ್ಮಾರ್ಕ್​ ಮತ್ತು ನ್ಯೂಜಿಲೆಂಟ್​ ಟಾಪ್​ ಸ್ಥಾನದಲ್ಲಿವೆ. ಇನ್ನು, ಫಿನ್​ಲ್ಯಾಂಡ್​, ಸಿಂಗಪೂರ್, ಸ್ವೀಡೆನ್​ ಮತ್ತು ಸ್ವಿಟ್ಜರ್​​ಲೆಂಡ್​ ಟಾಪ್​ 10 ದೇಶಗಳಾಗಿವೆ. ಇನ್ನು, ನಾರ್ವೆ 7ನೇ ಸ್ಥಾನದಲ್ಲಿದ್ದರೆ, ನೆದರ್​ಲ್ಯಾಂಡ್​​ 8 ಸ್ಥಾನದಲ್ಲಿದೆ. ಜರ್ಮನಿ ಮತ್ತು ಲಕ್ಸಂಬರ್ಗ್​ 9 ನೇ ರ‍್ಯಾಂಕ್ ಪಡೆದಿವೆ.

Corona Virus: ಚೀನಾದಲ್ಲಿ ಮಹಾಮಾರಿ ಕರೋನಾ ವೈರಸ್​ಗೆ 25 ಬಲಿ; ಬೆಂಗಳೂರಿಗರಿಗೂ ಕಾಡಿದ ಆತಂಕ

100 ಪಾಯಿಂಟ್ಸ್​ಗಳ ಪೈಕಿ ಭಾರತ 41 ಪಾಯಿಂಟ್ಸ್​ ಪಡೆದಿದೆ. ಇದೇ ಸ್ಥಾನದಲ್ಲಿ ಚೀನಾ, ಬೆನಿನ್​, ಘಾನಾ ಮತ್ತು ಮೊರಾಕ್ಕೋ ದೇಶಗಳಿವೆ. ನೆರೆಯ ಪಾಕಿಸ್ತಾನ ರಾಷ್ಟ್ರ 120ನೇ ಸ್ಥಾನ ಪಡೆದಿದೆ.

ಈ ವರ್ಷ ಬಹುತೇಕ ರಾಷ್ಟ್ರಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ವರದಿ ತಿಳಿಸಿದೆ. ಅನೇಕ ರಾಷ್ಟ್ರಗಳಲ್ಲಿ ಚುನಾವಣಾ ಪ್ರಚಾರದ ವೇಳೆ ಅಧಿಕವಾಗಿ ಹಣದ ಹೊಳೆ ಹರಿದಿದೆ ಎಂದು ಟ್ರಾನ್ಸ್​ಪರೆನ್ಸಿ ಇಂಟರ್​ನ್ಯಾಷನಲ್​ ಹೇಳಿದೆ.

ಸರ್ಕಾರೇತರ ವರದಿಯ ಪ್ರಕಾರ, ಭಾರತ ಮತ್ತು ಆಸ್ಟ್ರೇಲಿಯಾದಂತಹ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ರಾಜಕೀಯ ಹಣಕಾಸು ವ್ಯವಸ್ಥೆ ಹಾಗೂ ಸರ್ಕಾರದ ದ್ವಂದ್ವ ನೀತಿಗಳು ಜಾಗತಿಕ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದ ಕುಸಿತಕ್ಕೆ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ.ಇಂದು ದಾವೋಸ್​ನಿಂದ ಸಿಎಂ ಬಿಎಸ್ ಯಡಿಯೂರಪ್ಪ ವಾಪಸ್​​​; ಪೂರ್ಣಗೊಳ್ಳಲಿದೆಯಾ ಕ್ಯಾಬಿನೆಟ್​ ವಿಸ್ತರಣೆ ಕಸರತ್ತು?

 
Youtube Video
First published: January 24, 2020, 11:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories