Mann Ki Baat: ದೇಶ ಈಗಿ ಹಿಂದೆಂದಿಗಿಂತಲೂ 10 ಪಟ್ಟು ಹೆಚ್ಚು ಆಕ್ಸಿಜನ್ ಉತ್ಪಾದಿಸುತ್ತಿದೆ ಎಂದ ಪ್ರಧಾನಿ

ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಆಕ್ಸಿಜನ್​ಗಾಗಿ ಎಲ್ಲೆಡೆ ಹಾಹಾಕಾರ ಎದ್ದಿದೆ. ದೇಶದ ಮೂಲೆಮೂಲೆಗೆ ಆಕ್ಸಿಜನ್ ತಲುಪಿಸುವುದು ಬಹುದೊಡ್ಡ ಸವಾಲಾಗಿತ್ತು. ಆದರೆ ಕ್ರೈಯೊಜೆನಿಕ್ ಆಕ್ಸಿಜನ್ ಟ್ಯಾಂಕರ್ ಗಳ ಮೂಲಕ ಚಾಲಕರು ಯುದ್ಧೋಪಾದಿಯಲ್ಲಿ ಕೆಲಸ ಮಾಡಿ ಲಕ್ಷಾಂತರ ಜನರ ಜೀವವನ್ನು ಕಾಪಾಡಿದ್ದಾರೆ ಎಂದು ಪ್ರಧಾನಿ ಅವರೆಲ್ಲರಿಗೆ ಧನ್ಯವಾದ ತಿಳಿಸಿದರು.

ಪ್ರಧಾನಿ ಮೋದಿ

ಪ್ರಧಾನಿ ಮೋದಿ

  • Share this:
Mann Ki Baat: ಪ್ರತೀ ತಿಂಗಳ ಕೊನೆಯ ಭಾನುವಾರ ದೇಶವೆಲ್ಲಾ ಕಿವಿಯಾಗಿ ಕಾಯೋದು ಪ್ರಧಾನಿ ನರೇಂದ್ರ ಮೋದಿಯ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ. ಈ ಸಲವೂ ಪ್ರಧಾನಿ ಕೋವಿಡ್ ಎರಡನೇ ಅಲೆ, ಅದರ ವಿರುದ್ಧ ದೇಶ ಹೇಗೆ ಹೋರಾಡುತ್ತಿದೆ, ಸರ್ಕಾರ ಏನು ಮಾಡುತ್ತಿದೆ, ಎರಡು ಚಂಡಮಾರುತಗಳನ್ನು ದೇಶ ಹೇಗೆ ಎದುರಿಸಿದೆ ಎನ್ನುವ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಭಾರತ ತನ್ನ ಶಕ್ತಿಯನ್ನೆಲ್ಲಾ ಬಳಸಿ ಕೋವಿಡ್ ಎರಡನೇ ಅಲೆಯ ವಿರುದ್ಧ ಹೋರಾಡುತ್ತಿದೆ ಎಂದಿದ್ದಾರೆ.

ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಆಕ್ಸಿಜನ್​ಗಾಗಿ ಎಲ್ಲೆಡೆ ಹಾಹಾಕಾರ ಎದ್ದಿದೆ. ದೇಶದ ಮೂಲೆಮೂಲೆಗೆ ಆಕ್ಸಿಜನ್ ತಲುಪಿಸುವುದು ಬಹುದೊಡ್ಡ ಸವಾಲಾಗಿತ್ತು. ಆದರೆ ಕ್ರೈಯೊಜೆನಿಕ್ ಆಕ್ಸಿಜನ್ ಟ್ಯಾಂಕರ್ ಗಳ ಮೂಲಕ ಚಾಲಕರು ಯುದ್ಧೋಪಾದಿಯಲ್ಲಿ ಕೆಲಸ ಮಾಡಿ ಲಕ್ಷಾಂತರ ಜನರ ಜೀವವನ್ನು ಕಾಪಾಡಿದ್ದಾರೆ ಎಂದರು. ಕೋವಿಡ್​ನಿಂದ ಮೃತರಾದ ಕುಟುಂಬಗಳಿಗೆ ಸಂತಾಪ ಸೂಚಿಸಿದ ಪ್ರಧಾನಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆಯ ಮಾತುಗಳನ್ನಾಡಿದರು.

ಕಳೆದ 100 ವರ್ಷಗಳಲ್ಲಿ ಇದು ಅತಿ ದೊಡ್ಡ ಸಾಂಕ್ರಾಮಿಕ ರೋಗ. ಕೊರೋನಾ ಎರಡನೇ ಅಲೆಯ ಜೊತೆಗೆ ದೇಶ ಈ ಬಾರಿ ಚಂಡಮಾರುತದಂತಹ ಪ್ರಕೃತಿ ವಿಕೋಪವನ್ನು ಕಂಡಿದೆ. ಪ್ರವಾಹ ಪೀಡಿತ ರಾಜ್ಯಗಳು ಧೈರ್ಯದಿಂದ ಶಿಸ್ತು ಮತ್ತು ತಾಳ್ಮೆಯಿಂದ ಹೋರಾಟ ನಡೆಸಿದ್ದಾರೆ. ಚಂಡಮಾರುತದ ಪ್ರವಾಹ ಸಮಯದಲ್ಲಿ ಸಕ್ರಿಯವಾಗಿ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದ ಸಿಬ್ಬಂದಿಯನ್ನು ನಾನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: Black Fungus: ಕೋಳಿಯಿಂದ ಬ್ಲಾಕ್​ ಫಂಗಸ್ ಹರಡುತ್ತದಂತೆ ! ನಿಜವಾ? ಸತ್ಯ ಇಲ್ಲಿದೆ !

ಕಳೆದ ಹತ್ತು ದಿನಗಳಲ್ಲಿ ಯಾಸ್ ಮತ್ತು ತೌಕ್ತೆ ಎಂಬ ಎರಡು ದೊಡ್ಡ ಚಂಡಮಾರುತ ಎದುರಿಸಿದ್ದೇವೆ. ಈ ಎರಡೂ ಚಂಡಮಾರುತಗಳಿಂದ ಸಾಕಷ್ಟು ರಾಜ್ಯಗಳಿಗೆ ಹಾನಿಯಾಗಿದೆ.ಈ ಸಮಯದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ, ಸಮಯಕ್ಕೆ ಸರಿಯಾಗಿ ಸಮರೋಪಾದಿಯಲ್ಲಿ ಕೆಲಸ ಮಾಡಿ ಚಂಡಮಾರುತದಿಂದ ಭಾರೀ ಸಂಖ್ಯೆಯ ಜೀವಹಾನಿಯನ್ನು ತಪ್ಪಿಸಲಾಗಿದೆ. ಈ ಹಿಂದಿನ ಪ್ರಾಕೃತಿಕ ವಿಕೋಪಗಳಿಗೆ ಹೋಲಿಸಿದರೆ ಈಗ ಸಾವು, ನೋವು ಹಾನಿಯ ಪ್ರಮಾಣ ಕಡಿಮೆಯಾಗಿದೆ ಎಂದರು.

ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಆಡಳಿತಗಳು ಒಟ್ಟಾಗಿ ಕೆಲಸ ಮಾಡಿವೆ. ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ಪ್ರಧಾನಿ ಧನ್ಯವಾದಗಳನ್ನು ಅರ್ಪಿಸಿದರು. ನಮ್ಮ ಮುಂದಿನ ಸವಾಲುಗಳು ಎಷ್ಟೇ ದೊಡ್ಡದಾಗಿರಲಿ, ಭಾರತದ ವಿಜಯ ಸಂಕಲ್ಪ ಪ್ರಮಾಣದಲ್ಲಿ ಸಮನಾಗಿರುತ್ತದೆ. ಪ್ರತಿ ಚಂಡಮಾರುತ, ಬಿರುಗಾಳಿ ಎದುರಾದಾಗಲೂ ದೇಶದ ನಾಗರಿಕರ ಸಾಮೂಹಿಕ ಶಕ್ತಿ ಮತ್ತು ಸೇವೆಯ ಸ್ಪೂರ್ತಿ ದೇಶವನ್ನು ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಕಾಪಾಡಿದೆ.

ಇದನ್ನೂ ಓದಿ: Bellary Couple: ಬಳ್ಳಾರಿಯಲ್ಲಿ ಮಾದರಿ ಜೋಡಿ; ಬದುಕು ಗೆದ್ದವರಿಗೆ ಕೊರೋನಾ ಯಾವ ಲೆಕ್ಕ?

ದೇಶದಲ್ಲಿ ಇದುವರಗೆ 33 ಕೋಟಿಗೂ ಹೆಚ್ಚಿನ ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಕರೋನಾದ ಆರಂಭದಲ್ಲಿ, ದೇಶದಲ್ಲಿ ಕೇವಲ ಒಂದು ಪರೀಕ್ಷಾ ಪ್ರಯೋಗಾಲಯವಿತ್ತು ಆದರೆ ಇಂದು 2500 ಕ್ಕೂ ಹೆಚ್ಚು ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಆರಂಭದಲ್ಲಿ ಒಂದು ದಿನದಲ್ಲಿ ಕೆಲವೇ ನೂರು ಪರೀಕ್ಷೆಗಳನ್ನು ಮಾತ್ರ ನಡೆಸಬಹುದಿತ್ತು, ಈಗ ಒಂದು ದಿನದಲ್ಲಿ 20 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

ಸಾಮಾನ್ಯ ಸಂದರ್ಭಗಳಲ್ಲಿ ನಾವು ಒಂದು ದಿನದಲ್ಲಿ 900 ಮೆಟ್ರಿಕ್ ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ಉತ್ಪಾದಿಸುತ್ತಿದ್ದೆವು. ಈಗ, ಇದು ಎಂದಿಗಿಂತ 10ರಿಂದ 15 ಪಟ್ಟು ಹೆಚ್ಚು ಉತ್ಪಾದಿಸುತ್ತಿದ್ದೇವೆ. ಈಗ ಪ್ರತಿದಿನ ಸುಮಾರು 9500 ಮೆಟ್ರಿಕ್ ಟನ್‌ಗಳನ್ನು ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತಿದೆ.

ಸ್ನೇಹಿತರೇ, ನಮ್ಮ ಈ ಯೋಧರಿಗೆ ಅವರು ಮಾಡಿದ ಕೆಲಸಕ್ಕೆ ರಾಷ್ಟ್ರವು ಸದಾ ಋಣಿಯಾಗಿರುತ್ತದೆ. ಲಕ್ಷಾಂತರ ಜನರು ಈಗಲೂ ಹಗಲು- ರಾತ್ರಿ ಶ್ರಮಿಸುತ್ತಿದ್ದಾರೆ. ಅವರೆಲ್ಲಾ ಈ ಕೆಲಸ ಮಾಡಲೇಬೇಕು ಎಂದೇನಿಲ್ಲ, ಆದರೂ ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಅವರೆಲ್ಲರಿಗೆ ನನ್ನ ಧನ್ಯವಾದ ಎಂದು ಪ್ರಧಾನಿ ಮೋದಿ ಹೇಳಿದರು.
Published by:Soumya KN
First published: