ಮುಂದಿನ ವರ್ಷ 5 ಬಿಲಿಯನ್ ಕೊರೊನಾ ಲಸಿಕೆ ಉತ್ಪಾದಿಸಲು ನಿರ್ಧಾರ- ಪಿಯೂಷ್ ಗೋಯಲ್

Corona Vaccination: ಮುಂದಿನ ವರ್ಷ ಭಾರತವು 5 ಬಿಲಿಯನ್ ಡೋಸ್ ಲಸಿಕೆಗಳನ್ನು ಉತ್ಪಾದಿಸಲು ಯೋಜಿಸಿದೆ ಎಂಬುದನ್ನ ಪುನಾರಾವರ್ತಿಸಿ ಹೇಳಿದ ಅವರು, ವಿಶೇಷವಾಗಿ ಈ ಕಷ್ಟದ ಸಮಯದಲ್ಲಿ ನಾವು ಕೊರೊನಾ ವಿರುದ್ಧ ಹೋರಾಡುತ್ತಿರುವಾಗ ಜಗತ್ತನ್ನು ವಾಸಿಸಲು ಸುರಕ್ಷಿತ ಸ್ಥಳವನ್ನಾಗಿ ಮಾಡಲು ನಾವು ಕೊಡುಗೆ ನೀಡುತ್ತಿದ್ದೇವೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತವು(India) ಮುಂದಿನ ವರ್ಷ 5 ಬಿಲಿಯನ್(5 Billion) ಡೋಸ್ ಕೊರೊನಾ ಲಸಿಕೆಗಳನ್ನು( Corona Vaccination) ಉತ್ಪಾದಿಸಲು ಯೋಜಿಸಿದೆ ಮತ್ತು ಪ್ರಪಂಚವನ್ನು ವಾಸಿಸಲು ಸುರಕ್ಷಿತ ಸ್ಥಳವನ್ನಾಗಿ ಮಾಡಲು ಕೊಡುಗೆ ನೀಡಲು ಯೋಜನೆ ತಯಾರಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್(Piyush Goyal) ಹೇಳಿದ್ದಾರೆ. ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕ ದೇಶವಾಗಿರುವ ಭಾರತವು ಇತರ ದೇಶಗಳಿಗೆ  ಕೊರೊನಾ ಲಸಿಕೆಗಳ ಪೂರೈಕೆಯನ್ನು ಪುನರಾರಂಭಿಸಿದೆ. ಕೊರೊನಾ ವೈರಸ್(Coronavirus) ಸೋಂಕು  ಹಠಾತ್ ಏರಿಕೆ ಕಂಡ ಕಾರಣ ದೇಶದ ಜನರಿಗೆ ಸಂಪೂರ್ಣವಾಗಿ ಲಸಿಕೆ ನೀಡಲು ಕೇಂದ್ರಿಕರಿಸಲು ನಿರ್ಧರಿಸಿದ ಕಾರಣ  ಈ ವರ್ಷದ ಏಪ್ರಿಲ್‌ನಲ್ಲಿ ಕೊರೊನಾ ಲಸಿಕೆಗಳ ರಫ್ತನ್ನು ಸ್ಥಗಿತಗೊಳಿಸಿತ್ತು.

CII ಪಾಲುದಾರಿಕೆ ಶೃಂಗಸಭೆ 2021ರಲ್ಲಿ ಪಿಯೂಷ್ ಗೋಯಲ್ ಹೇಳಿಕೆ

CII ಪಾಲುದಾರಿಕೆ ಶೃಂಗಸಭೆ 2021 ರಲ್ಲಿ ಮಾತನಾಡಿದ ಗೋಯಲ್, ಭಾರತವು ತನ್ನದೇ ಆದ ಜನಸಂಖ್ಯೆಗೆ ಲಸಿಕೆ ಹಾಕುವುದರ ಜೊತೆಗೆ ಪ್ರಪಂಚದ ಇತರ ಭಾಗಗಳಿಗೆ ಲಸಿಕೆಗಳನ್ನು ಒದಗಿಸುವ ಅದ್ಭುತ ಉದಾಹರಣೆಗಳಲ್ಲಿ ಒಂದಾಗಿದೆ ಎಂದು ಹೇಳಿದರು. "ನಾವು ಈ ಹಿಂದೆ ರಫ್ತು ಮಾಡುತ್ತಿದ್ದೇವೆ, ನಾವು ರಫ್ತು ಮಾಡುವುದನ್ನು ಮುಂದುವರಿಸುತ್ತೇವೆ ಮತ್ತು ಎಲ್ಲರಿಗೂ ಲಸಿಕೆಗಳಿಗೆ ಕೈಗೆಟುಕುವ ಬೆಲೆಯಲ್ಲಿ ಸಮಾನವಾಗಿ ಎಲ್ಲರಿಗೂ ನೀಡಲು ಇತರ ದೇಶಗಳಿಗೆ ಅಗತ್ಯವಿರುವಷ್ಟು ಲಸಿಕೆಗಳನ್ನು ಪೂರೈಸಲು ನಾವು ಸಿದ್ಧರಿದ್ದೇವೆ ಎಂದು ನಾವು ಪ್ರಪಂಚದ ಎಲ್ಲಾ ದೇಶಗಳಿಗೆ ಭರವಸೆ ನೀಡಿದ್ದೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಜನವರಿ 31ರವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ಇರುವುದಿಲ್ಲ

ಮುಂದಿನ ವರ್ಷ ಭಾರತವು 5 ಬಿಲಿಯನ್ ಡೋಸ್ ಲಸಿಕೆಗಳನ್ನು ಉತ್ಪಾದಿಸಲು ಯೋಜಿಸಿದೆ ಎಂಬುದನ್ನ ಪುನಾರಾವರ್ತಿಸಿ ಹೇಳಿದ ಅವರು, ವಿಶೇಷವಾಗಿ ಈ ಕಷ್ಟದ ಸಮಯದಲ್ಲಿ ನಾವು ಕೊರೊನಾ ವಿರುದ್ಧ ಹೋರಾಡುತ್ತಿರುವಾಗ ಜಗತ್ತನ್ನು ವಾಸಿಸಲು ಸುರಕ್ಷಿತ ಸ್ಥಳವನ್ನಾಗಿ ಮಾಡಲು ನಾವು ಕೊಡುಗೆ ನೀಡುತ್ತಿದ್ದೇವೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.

ವೈದ್ಯಕೀಯ ಸರಬರಾಜು ಮತ್ತು ಸಲಕರಣೆಗಳೊಂದಿಗೆ ಸಹಾಯ ಮಾಡಲು ದೇಶವು ಇತರ ರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಗೋಯಲ್ ಸಭೆಯಲ್ಲಿ ತಿಳಿಸಿದ್ದು, ಭಾರತವೂ ಸಹ ಅನೇಕ ರಾಷ್ಟ್ರಗಳಿಂದ ಸಹಾಯ ಪಡೆದುಕೊಂಡಿದೆ ಎಂಬುದನ್ನ ಒಪ್ಪಿಕೊಂಡಿದ್ದಾರೆ. ಭಾರತವು 75 ವರ್ಷಗಳ ಸ್ವಾತಂತ್ರ್ಯದ 'ಆಜಾದಿ ಕಾ ಅಮೃತ್ ಮಹೋತ್ಸವ'ವನ್ನು ಆಚರಿಸುತ್ತಿದೆ ಮತ್ತು 2023 ರಲ್ಲಿ G20 ಅಧ್ಯಕ್ಷ ಸ್ಥಾನವನ್ನು ಸಹ ತೆಗೆದುಕೊಳ್ಳಲಿದೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಎರಡೂ ಪ್ರಮುಖ ಅಂಶಗಳಲ್ಲಿ, ಪಾಲುದಾರಿಕೆ, ರಾಷ್ಟ್ರಗಳ ನಡುವೆ ಸೌಹಾರ್ದತೆ, ನ್ಯಾಯಯುತ ವ್ಯಾಪಾರ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಉತ್ತೇಜಿಸಲು ನಾವು ಆಶಿಸುತ್ತೇವೆ ಎಂದು ಅವರು ಹೇಳಿದ್ದು, ಇಂದು ಜಗತ್ತು ಭಾರತವನ್ನು ವಿಶ್ವಾಸಾರ್ಹ ಪಾಲುದಾರನಾಗಿ ನೋಡುತ್ತಿದೆ  ಎಂಬುದು ಸಂತಸದ ವಿಚಾರ ಎಂದಿದ್ದಾರೆ.

ಇದನ್ನೂ ಓದಿ: Vaccine ಪರಿಣಾಮ ಕಡಿತಗೊಳಿಸಿ, ವೇಗವಾಗಿ ಹರಡುತ್ತೆ ಓಮೈಕ್ರಾನ್: WHO ಎಚ್ಚರಿಕೆಯ ಸಂದೇಶ

2030 ರ ವೇಳೆಗೆ ಅದರ ಶಕ್ತಿಯ ಸಾಮರ್ಥ್ಯವನ್ನು 500 ಗಿಗಾವ್ಯಾಟ್‌ಗಳಿಗೆ ಹೆಚ್ಚಿಸುವುದು ಮತ್ತು ನವೀಕರಿಸಬಹುದಾದ ಶಕ್ತಿಯಿಂದ 50 ಪ್ರತಿಶತದಷ್ಟು ಶಕ್ತಿಯ ಅಗತ್ಯವನ್ನು ಪೂರೈಸುವುದು ಮುಖ್ಯ ಗುರಿಯಾಗಿದೆ ಎಂದಿದ್ದಾರೆ.
Published by:Sandhya M
First published: