ಕರ್ತಾರ್​ಪುರ್ ಸಾಹಿಬ್ ಕಾರಿಡಾರ್ ಯೋಜನೆ ಒಪ್ಪಂದಕ್ಕೆ ನಾಳೆ ಭಾರತ-ಪಾಕ್ ಸಹಿ ಸಾಧ್ಯತೆ

ಸೇವಾ ಶುಲ್ಕು ಸಂಬಂಧ ಸೋಮವಾರ ಮಾತನಾಡಿದ್ದ ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರ ಮೊಹಮ್ಮದ್ ಫೈಸಲ್​, ಸೇವಾ ಶುಲ್ಕ ಸಮಸ್ಯೆ ಪರಿಹಾರವಾಗಿದೆ. ಕಾರಿಡಾರ್ ಯೋಜನೆಯಡಿ ಕರ್ತಾರ್​ಪುರ್​ ಸಾಹಿಬ್​ಗೆ ಭೇಟಿ ನೀಡುವ ಭಾರತೀಯ ಯಾತ್ರಾರ್ಥಿಗಳಿಗೆ ವೀಸಾ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಹೇಳಿದ್ದರು.

HR Ramesh | news18-kannada
Updated:October 22, 2019, 5:51 PM IST
ಕರ್ತಾರ್​ಪುರ್ ಸಾಹಿಬ್ ಕಾರಿಡಾರ್ ಯೋಜನೆ ಒಪ್ಪಂದಕ್ಕೆ ನಾಳೆ ಭಾರತ-ಪಾಕ್ ಸಹಿ ಸಾಧ್ಯತೆ
ಕರ್ತಾರ್​ಪುರ್ ಕಾರಿಡಾರ್ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿರುವುದು.
  • Share this:
ನವದೆಹಲಿ: ಕರ್ತಾರ್​ಪುರ್ ಸಾಹಿಬ್ ಕಾರಿಡಾರ್ ಒಪ್ಪಂದಕ್ಕೆ ಈ ಹಿಂದೆ ನಿರ್ಧರಿಸಿದಂತೆ ನಾಳೆ ಭಾರತ ಮತ್ತು ಪಾಕಿಸ್ತಾನ ಸಹಿ ಹಾಕಲಿವೆ ಮತ್ತು ಮುಂದಿನ ಒಪ್ಪಂದದ ಸಹಿಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

ಕರ್ತಾರ್​ಪುರ್​ನಲ್ಲಿರುವ ದರ್ಬಾರ್ ಸಾಹಿಬ್ ​ಗುರುದ್ವಾರಕ್ಕೆ ತೆರಳಲು ಯಾತ್ರಾರ್ಥಿಗಳು ಗಡಿ ರೇಖೆ ದಾಟುವ ಕಾರಿಡಾರ್ ಯೋಜನೆ ಒಪ್ಪಂದಕ್ಕೆ ಪಾಕಿಸ್ತಾನದೊಂದಿಗೆ ಭಾರತ ಸಹಿ ಮಾಡಲಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಸೋಮವಾರ ಹೇಳಿತ್ತು.

ಈ ಸಂಬಂಧ ಪತ್ರಿಕಾ ಪ್ರಕರಣೆ ಹೊರಡಿಸಿದ್ದ ಭಾರತೀಯ ವಿದೇಶಾಂಗ ಸಚಿವಾಲಯ, ಗುರುದ್ವಾರದ ಕರ್ತಾರ್​ಪುರ್ ಸಾಹಿಬ್​ಗೆ ವೀಸಾ ಮುಕ್ತ ಪ್ರವೇಶವನ್ನು ನೀಡಬೇಕು ಎಂಬ ಯಾತ್ರಾರ್ಥಿಗಳ ಬಹುದಿನಗಳ ಬೇಡಿಕೆಯ ಹಿನ್ನೆಲೆಯಲ್ಲಿ ನವೆಂಬರ್ 12 ರ ಮೊದಲು ಕಾರಿಡಾರ್ ಅನ್ನು ಕಾರ್ಯಗತಗೊಳಿಸಲು ಅಕ್ಟೋಬರ್ 23 ರಂದು ಒಪ್ಪಂದಕ್ಕೆ ಸಹಿ ಮಾಡಲು ಭಾರತ ಸಿದ್ಧವಿದೆ ಎಂದು ತಿಳಿಸಿತ್ತು.

ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಕೊಳ್ಳಲಾಗಿದೆ. ಯಾತ್ರಾರ್ಥಿಗಳಿಗೆ ವಿಧಿಸುವ ಲೇವಿ ಸೇವಾ ಶುಲ್ಕ 20 ಡಾಲರ್ ಅನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರ ಮತ್ತೊಮ್ಮೆ ಮರುಪರಿಶೀಲನೆ ನಡೆಸುವಂತೆ ಮನವಿ ಮಾಡಲಾಗಿದೆ. ತಿದ್ದುಪಡಿ ಒಪ್ಪಂದಕ್ಕೆ ಯಾವುದೇ ಸಮಯದಲ್ಲಿ ಸಹಿ ಮಾಡಲು ಭಾರತ ಸಿದ್ಧವಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಇದನ್ನು ಓದಿ: ಪ್ರಧಾನಿ ಮೋದಿ ಅವರಿಂದ ಕರ್ತಾರ್​ಪುರ್ ಕಾರಿಡಾರ್ ಯೋಜನೆ ಉದ್ಘಾಟನೆ; ಕೇಂದ್ರ ಸಚಿವೆ ಹರ್​ಸಿಮ್ರತ್ ಕೌರ್ ಟ್ವೀಟ್

ಸೇವಾ ಶುಲ್ಕು ಸಂಬಂಧ ಸೋಮವಾರ ಮಾತನಾಡಿದ್ದ ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರ ಮೊಹಮ್ಮದ್ ಫೈಸಲ್​, ಸೇವಾ ಶುಲ್ಕ ಸಮಸ್ಯೆ ಪರಿಹಾರವಾಗಿದೆ. ಕಾರಿಡಾರ್ ಯೋಜನೆಯಡಿ ಕರ್ತಾರ್​ಪುರ್​ ಸಾಹಿಬ್​ಗೆ ಭೇಟಿ ನೀಡುವ ಭಾರತೀಯ ಯಾತ್ರಾರ್ಥಿಗಳಿಗೆ ವೀಸಾ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಹೇಳಿದ್ದರು.

First published:October 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ