ಭಾರತದ ಆರ್ಥಿಕ ಸುಧಾರಣೆಯನ್ನು ಶ್ಲಾಘಿಸಿದ ಐಎಂಎಫ್​

ಐಎಂಎಫ್​ನ ಸಂವಹನ ನಿರ್ದೇಶಕ ಗೆರ್ರಿ ರೈಸ್​ ಭಾರತದ ಆರ್ಥಿಕತೆ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ ಭಾರತದ ಬೆಳವಣಿಗೆಯನ್ನು ಅವರು ಶ್ಲಾಘಿಸಿದರು.  

Rajesh Duggumane | news18
Updated:March 22, 2019, 12:14 PM IST
ಭಾರತದ ಆರ್ಥಿಕ ಸುಧಾರಣೆಯನ್ನು ಶ್ಲಾಘಿಸಿದ ಐಎಂಎಫ್​
ಅಂತಾರಾಷ್ಟ್ರೀಯ ಹಣಕಾಸು ನಿಧಿ
Rajesh Duggumane | news18
Updated: March 22, 2019, 12:14 PM IST
ವಾಷಿಂಗ್ಟನ್ (ಮಾ.22)​: ಅತಿವೇಗದ ಬೆಳವಣಿಗೆ ಕಾಣುತ್ತಿರುವ ಬೃಹತ್ ಆರ್ಥಿಕ ರಾಷ್ಟ್ರಗಳ ಪೈಕಿ ಭಾರತ ಕೂಡ ಒಂದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ​ (ಐಎಂಎಫ್​) ಹೇಳಿದೆ. ಕಳೆದ ಐದು ವರ್ಷಗಳಲ್ಲಿ ಆರ್ಥಿಕತೆ ಸುಧಾರಿಸುವ ಸಾಕಷ್ಟು ಕಾರ್ಯಗಳು ನಡೆದಿವೆ ಎಂದು ಐಎಂಎಫ್​ ಶ್ಲಾಘಿಸಿದೆ.

ಐಎಂಎಫ್​ನ ಸಂವಹನ ನಿರ್ದೇಶಕ ಗೆರ್ರಿ ರೈಸ್​ ಭಾರತದ ಆರ್ಥಿಕತೆ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ ಭಾರತದ ಬೆಳವಣಿಗೆಯನ್ನು ಅವರು ಶ್ಲಾಘಿಸಿದರು.  “ವೇಗವಾಗಿ ಬೆಳೆಯುತ್ತಿರುವ ಬೃಹತ್ ಆರ್ಥಿಕ ರಾಷ್ಟ್ರಗಳ ಪೈಕಿ ಭಾರತ ಕೂಡ ಇದೆ ಎಂಬುದರಲ್ಲಿ ಯಾವುದೇ ಅನುಮಾನವೇ ಇಲ್ಲ. ಕಳೆದ ಐದು ವರ್ಷಗಳಲ್ಲಿ ಶೇ. 7 ರಷ್ಟು ಬೆಳವಣಿಗೆ ಕಂಡಿದೆ,” ಎಂದಿದ್ದಾರೆ.

ಇದೇ ವೇಳೆ ಗೆರ್ರಿ ದೇಶದ ಆರ್ಥಿಕ ಸುಧಾರಣೆಗೆ ಮತ್ತಷ್ಟು ಕ್ರಮಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಸುಧಾರಣಾ ಕೆಲಸಗಳು ನಡೆದಿವೆ. ಇದೇ ಬೆಳವಣಿಗೆ ಮುಂದುವರೆಯಲು ಮತ್ತಷ್ಟು ಸುಧಾರಣಾ ನೀತಿಗಳನ್ನು ತರಬೇಕು. ಶೀಘ್ರದಲ್ಲೇ ಈ ಬಗ್ಗೆ ಸಮೀಕ್ಷೆ ಬಹಿರಂಗಪಡಿಸಲಾಗುತ್ತದೆ ಎಂದು,” ಅವರು ಹೇಳಿದರು.

ಇದನ್ನೂ ಓದಿ: ಧಾರವಾಡ ಕಟ್ಟಡ ಕುಸಿತ: ಅವಶೇಷಗಳ ಅಡಿ ಮೂವರು ಜೀವಂತ

ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರದಲ್ಲಿ ಆರ್ಥಿಕ ಸುಧಾರಣೆ ಹಳ್ಳ ಹಿಡಿದಿದೆ ಎಂದು ಕಾಂಗ್ರೆಸ್​ ಆರೋಪಿಸುತ್ತಾ ಬಂದಿದೆ. ಈಗ ಈ ಐಎಂಎಫ್​ನಿಂದ ಶ್ಲಾಘನೆ ದೊರೆತ ಹಿನ್ನೆಲೆಯಲ್ಲಿ ವಿಪಕ್ಷಗಳಿಗೆ ತೀವ್ರ ಹಿನ್ನಡೆ ಉಂಟಾಗಿದೆ.

First published:March 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...