ಪರಮಾಣು ಶಸ್ತ್ರಾಸ್ತ್ರ ಮೊದಲ ಬಳಕೆ ಇಲ್ಲ ನೀತಿ ಬದಲಾಗಬಹುದು; ರಕ್ಷಣಾ ಸಚಿವ ರಾಜನಾಥ ಸಿಂಗ್​

ಎದುರಾಳಿಗಳು ಮೊದಲು ಪರಮಾಣು ಶಸ್ತ್ರಾಸ್ತ್ರ ದಾಳಿ ಮಾಡುವ ಮೊದಲು ಪರಮಾಣು ಶಸ್ತ್ರಾಸ್ತ್ರವನ್ನು ಬಳಸುವಂತಿಲ್ಲ ಎಂಬ ಪ್ರತಿಜ್ಞೆಯೇ ನೋ ಫಸ್ಟ್​ ಯೂಸ್​ ನೀತಿಯಾಗಿದೆ.

HR Ramesh | news18
Updated:August 16, 2019, 2:48 PM IST
ಪರಮಾಣು ಶಸ್ತ್ರಾಸ್ತ್ರ ಮೊದಲ ಬಳಕೆ ಇಲ್ಲ ನೀತಿ ಬದಲಾಗಬಹುದು; ರಕ್ಷಣಾ ಸಚಿವ ರಾಜನಾಥ ಸಿಂಗ್​
ರಾಜನಾಥ್ ಸಿಂಗ್
  • News18
  • Last Updated: August 16, 2019, 2:48 PM IST
  • Share this:
ನವದೆಹಲಿ:  ಭಾರತ ಮತ್ತು ಪಾಕಿಸ್ತಾನ ನಡುವೆ ಪ್ರಕ್ಷುಬ್ಧ ಪರಿಸ್ಥಿತಿ ಮತ್ತಷ್ಟು ವಿಷಮಗೊಂಡಿದ್ದು, ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್​ ಶುಕ್ರವಾರ ಅಣುಬಾಂಬ್​ ಬಳಕೆಯಲ್ಲಿ ಮೊದಲ ಬಳಕೆ ನೀತಿಗೆ (ನೋ ಫಸ್ಟ್​ ಯೂಸ್​ ಪಾಲಿಸಿ) ಭಾರತ ಕಟ್ಟುಬೀಳುವುದಿಲ್ಲ ಎಂದು ಹೇಳಿದ್ದಾರೆ.

ಇವತ್ತಿನವರೆಗೂ ನಮ್ಮ ಪರಮಾಣು ನೀತಿ ಮೊದಲ ಬಳಕೆ ಇಲ್ಲ. ಭವಿಷ್ಯದಲ್ಲಿ ಏನಾಗಬಹುದು ಎಂಬುದು ಮುಂದಿನ ಸನ್ನಿವೇಶದ ಮೇಲೆ ಅವಲಂಬಿಸಿದೆ ಎಂದು ರಾಜನಾಥ ಸಿಂಗ್​ ಹೇಳಿದರು.

ಇದನ್ನು ಓದಿ: ಕಾಶ್ಮೀರದಲ್ಲಿ ಸೋಮವಾರದಿಂದ ಶಾಲೆ, ಸರ್ಕಾರಿ ಕಚೇರಿಗಳು ಪುನರಾರಂಭ

Loading...

ಎದುರಾಳಿಗಳು ಮೊದಲು ಪರಮಾಣು ಶಸ್ತ್ರಾಸ್ತ್ರ ದಾಳಿ ಮಾಡುವ ಮೊದಲು ಪರಮಾಣು ಶಸ್ತ್ರಾಸ್ತ್ರವನ್ನು ಬಳಸುವಂತಿಲ್ಲ ಎಂಬ ಪ್ರತಿಜ್ಞೆಯೇ ನೋ ಫಸ್ಟ್​ ಯೂಸ್​ ನೀತಿಯಾಗಿದೆ.
1998ರಲ್ಲಿ ಪೋಖ್ರಾನ್​-II ಪರಮಾಣು ಪರೀಕ್ಷೆ ಬಳಿಕ ನೋ ಫಸ್ಟ್​ ಯೂಸ್​ ನೀತಿಯನ್ನು ಭಾರತ ಸ್ವೀಕರಿಸಿತ್ತು. ಈವರೆಗೂ ಭಾರತ ಈ ನೀತಿಯನ್ನು ಚಾಚುತಪ್ಪದೆ ಪಾಲಿಸಿಕೊಂಡು ಬಂದಿದೆ. ಇದುವರೆಗೂ ಕೇವಲ ಪ್ರತಿಕಾರಕ್ಕೆ ಮಾತ್ರ ಬಳಸುವ ನೀತಿಯನ್ನು ಮುಂದುವರೆಸಿಕೊಂಡು ಬಂದಿದೆ.

First published:August 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...