ನವದೆಹಲಿ: ಚೀನಾ (China), ಹಾಂಗ್ ಕಾಂಗ್ (HongKong), ಜಪಾನ್ (Japan), ದಕ್ಷಿಣ ಕೊರಿಯಾ (South Korea), ಸಿಂಗಾಪುರ್ (Singapore) ಮತ್ತು ಥೈಲ್ಯಾಂಡ್ನಿಂದ (Thailand) ಭಾರತಕ್ಕೆ (India) ಆಗಮಿಸುವ ಪ್ರತಿಯೊಬ್ಬ ಪ್ರಯಾಣಿಕರು ಜನವರಿ (January) 1ರಿಂದ ಕೋವಿಡ್ -19 (Covid-19) ನೆಗೆಟಿವ್ ರಿಪೋರ್ಟ್ (Negative Report) ಅನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Union Health Minister Mansukh Mandaviya) ಆದೇಶಿಸಿದ್ದಾರೆ. ಈ ದೇಶಗಳಿಂದ ಜನರು ನಿರ್ಗಮಿಸುವ ಮುನ್ನ ತಮ್ಮ ಟೆಸ್ಟ್ ರಿಪೋರ್ಟ್ಗಳನ್ನು ಸರ್ಕಾರದ ಏರ್ ಸುವಿಧಾ ಪೋರ್ಟಲ್ (Air Suvidha Portal) ನಲ್ಲಿ ಅಪ್ಲೋಡ್ ಮಾಡಬೇಕು ಎಂದು ಟ್ವೀಟ್ (Tweet) ಮಾಡುವ ಮೂಲಕ ತಿಳಿಸಿದ್ದಾರೆ. ಚೀನಾ ಮತ್ತು ಪೂರ್ವ ಏಷ್ಯಾದ ದೇಶಗಳಲ್ಲಿ (East Asian countries) ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.
RT-PCR test has been made mandatory for flyers coming from China, Hong Kong, Japan, South Korea, Singapore and Thailand from 1st January 2023. They will have to upload their reports on the Air Suvidha portal before travel.
— Dr Mansukh Mandaviya (@mansukhmandviya) December 29, 2022
ಹಿಂದಿನ ಕೊರೊನಾ ಅಲೆಗಳ ಸಮಯಗಳನ್ನು ಉಲ್ಲೇಖಿಸಿ, ಭಾರತದಲ್ಲಿ ಜನವರಿ ಹೊತ್ತಿಗೆ ಕೊರೊನಾ ಪ್ರಕರಣಗಳು ಏರಿಕೆಯಾಗಬಹುದು. ಆದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಮತ್ತು ಸಾಯುವವರ ಸಂಖ್ಯೆ ವಿರಳವಾಗಿರಲಿದೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿದೆ.
ಜನವರಿಯಲ್ಲಿ ಜನ ಎಚ್ಚರಿಕೆಯಿಂದು ಇರುವಂತೆ ಸೂಚನೆ
ಈ ಮುನ್ನ ಕೊರೊನಾ ಪೂರ್ವ ಏಷ್ಯಾದ ದೇಶಗಳಲ್ಲಿ ಹೇಗೆ ವರದಿಯಾಯಿತು ಎಂಬುವುದನ್ನು ನಾವೆಲ್ಲರೂ ಗಮನಿಸಿರುತ್ತೇವೆ. ಸುಮಾರು 10 ದಿನಗಳಲ್ಲಿ ಯುರೋಪ್, ಮತ್ತೆ 10 ದಿನಗಳಲ್ಲಿ ಅಮೆರಿಕ ಮತ್ತು ಇನ್ನೊಂದು ಹತ್ತು ದಿನಗಳಲ್ಲಿ ಪೆಸಿಫಿಕ್ ದ್ವೀಪ ದೇಶಗಳಿಗೆ ಕೊರೊನಾ ಹಬ್ಬಿದ್ದನ್ನು ನಾವು ನೋಡಿದ್ದೇವೆ. ನಂತರ 30 ರಿಂದ 35 ದಿನಗಳಲ್ಲಿ ಕೊರೊನಾ ಭಾರತವನ್ನು ಕೂಡ ತಲುಪಿತ್ತು. ಆದ್ದರಿಂದ ಜನವರಿ ತಿಂಗಳಲ್ಲಿ ಜನರು ಜಾಗರೂಕರಾಗಿರಬೇಕು ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕಳೆದ 3 ದಿನದಲ್ಲಿ 6 ಸಾವಿರ ಟೆಸ್ಟ್, 39 ಮಂದಿಗೆ ಪಾಸಿಟಿವ್
ದೇಶದಲ್ಲಿ ಸದ್ಯ ಕೋವಿಡ್-19 ಪ್ರಕರಣಗಳು ಕಡಿಮೆ ಇದೆ. ಹಿಂದಿನ ದಿನ 24 ಗಂಟೆಗಳಲ್ಲಿ 188 ಹೊಸ ಪ್ರಕರಣಗಳು ವರದಿಯಾಗಿದೆ. ಆದರೆ ಕಳೆದ ಆರು ವಾರಗಳಲ್ಲಿ ಜಾಗತಿಕವಾಗಿ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವುದನ್ನು ಗಮನಿಸಿದ ಸರ್ಕಾರ ಡಿಸೆಂಬರ್ 24 ರಿಂದ ಅಂತರರಾಷ್ಟ್ರೀಯ ಪ್ರಯಾಣಿಕರ ಯಾದೃಚ್ಛಿಕ ಮಾದರಿಯನ್ನು ಪರೀಕ್ಷಿಸುವುದನ್ನು ಪುನಃ ಜಾರಿಗೆ ತಂದಿದೆ. ಕಳೆದ ಮೂರು ದಿನಗಳಲ್ಲಿ ಸುಮಾರು 6,000 ಪ್ರಯಾಣಿಕರನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ 39 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಹೆಚ್ಚಳ ಹಿನ್ನೆಲೆ ಲಸಿಕೆಗೆ ಬೇಡಿಕೆ
ಇದೀಗ ದೇಶದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಲಸಿಕೆಕೆ ಬೇಡಿಕೆ ಹೆಚ್ಚಾಗುತ್ತಿದೆ. ಭಾರತ್ ಬಯೋಟೆಕ್ನ ಇಂಟ್ರಾನಾಸಲ್ ಕೋವಿಡ್ ಲಸಿಕೆ ಇನ್ಕೋವಾಕ್ (iNCOVACC) ಜನವರಿಯಿಂದ ಜನಸಾಮಾನ್ಯರಿಗೆ ಲಭ್ಯವಾಗಲಿದೆ.
ಇದನ್ನೂ ಓದಿ: Covid Crisis in India: ಭಾರತದಲ್ಲಿ ಮತ್ತೆ ಅಬ್ಬರಿಸಲಿದೆ ಕೊರೊನಾ: ಮುಂದಿನ 40 ದಿನಗಳು ಡೇಂಜರಸ್ ಏಕೆ?
ಜನವರಿ ನಾಲ್ಕನೇ ವಾರದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ರೂ. 325 ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 800 ರೂಪಾಯಿಗೆ ಈ ಲಸಿಕೆ ಲಭ್ಯವಿರಲಿದೆ. ಕೋವಿನ್ ಅಪ್ಲಿಕೇಷನ್ ನಲ್ಲಿ ಈಗಾಗಲೇ iNCOVACC ಎಂಟ್ರಿಯಾಗಿದ್ದು, 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಈ ಲಸಿಕೆಯನ್ನು ಪಡೆಯಬಹುದಾಗಿದೆ. ಆದ್ರೆ ಅವರು ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ನಂತಹ ಎರಡು ಡೋಸ್ಗಳ ಲಸಿಕೆಗಳನ್ನು ಮೊದಲೇ ಪಡೆದಿರಬೇಕಾಗುತ್ತದೆ.
ಈ ತಿಂಗಳ ಆರಂಭದಲ್ಲಿ, ಭಾರತ್ ಬಯೋಟೆಕ್ iNCOVACC ಲಸಿಕೆಯು ಬೂಸ್ಟರ್ ಡೋಸ್ಗಳ ಬಳಕೆಗಾಗಿ ಕೇಂದ್ರೀಯ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ನಿಂದ ಅನುಮೋದನೆಯನ್ನು ಪಡೆಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ