• Home
 • »
 • News
 • »
 • national-international
 • »
 • Explained: ಶ್ರದ್ಧಾ ವಾಕರ್ ಹತ್ಯೆ ಬೆನ್ನಲ್ಲೇ ಲಿವ್‌-ಇನ್​ನಲ್ಲಿರೋ ಜೋಡಿಗಳಿಗೆ ಹೊಸ ಸಂಕಷ್ಟ: ಕೊನೆಯಾಗುತ್ತಾ ಈ ಸಂಸ್ಕೃತಿ?

Explained: ಶ್ರದ್ಧಾ ವಾಕರ್ ಹತ್ಯೆ ಬೆನ್ನಲ್ಲೇ ಲಿವ್‌-ಇನ್​ನಲ್ಲಿರೋ ಜೋಡಿಗಳಿಗೆ ಹೊಸ ಸಂಕಷ್ಟ: ಕೊನೆಯಾಗುತ್ತಾ ಈ ಸಂಸ್ಕೃತಿ?

ಲಿವ್ ಇನ್ ಸಂಸ್ಕೃತಿಗೆ ಬೀಳುತ್ತಾ ಬ್ರೇಕ್

ಲಿವ್ ಇನ್ ಸಂಸ್ಕೃತಿಗೆ ಬೀಳುತ್ತಾ ಬ್ರೇಕ್

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಲ್ಕರ್‌ ಹತ್ಯೆ ಮತ್ತೊಂದು ಆಯಾಮ ಪಡೆದುಕೊಂಡಿದೆ. ಲಿವಿಂಗ್‌ ಟುಗೆದರ್‌ನಲ್ಲಿರುವ ಯುವಕ-ಯುವತಿಯರ ಮೇಲೆ ಅನುಮಾನ ಪಡುವಂತಾಗಿದೆ. ಸ್ನೇಹಿತರು ಮತ್ತು ದೀರ್ಘಾವಧಿಯ ಲಿವ್-ಇನ್ ಪಾಲುದಾರರ ನಡುವೆ ಅನುಮೋದಿತವಲ್ಲದ ಪ್ರೀತಿyನ್ನು ಶಂಕಿಸಲಾಗುತ್ತಿದೆ, ನಿಗ್ರಹಿಸಲಾಗುತ್ತದೆ.

ಮುಂದೆ ಓದಿ ...
 • Trending Desk
 • Last Updated :
 • Delhi, India
 • Share this:

  ತನ್ನ ಲಿವ್ ಇನ್ ಸಂಗಾತಿ ಶ್ರದ್ಧಾ ವಾಲ್ಕರ್‌ಳನ್ನು (Shraddha Walker) ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ಮಾಡಿ ದೆಹಲಿಯ ವಿವಿಧೆಡೆ ಎಸೆದ ಕ್ರೂರಿ ಅಫ್ತಾಬ್‌ನನ್ನು (Aftab) ಬಂಧಿಸಿ ಈಗಾಗ್ಲೇ ವಿಚಾರಣೆ ನಡೆಸಲಾಗುತ್ತಿದೆ. ತನಿಖೆ ವೇಳೆ ಒಂದೊಂದೇ ಹೊಸ ವಿಷಯವನ್ನು ಆರೋಪಿ ಬಿಚ್ಚಿಡುತ್ತಿದ್ದಾನೆ. ಆದರೀಗ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಲ್ಕರ್‌ ಹತ್ಯೆ ಮತ್ತೊಂದು ಆಯಾಮ ಪಡೆದುಕೊಂಡಿದೆ. ಲಿವಿಂಗ್‌ ಟುಗೆದರ್‌ನಲ್ಲಿರುವ (Living Together)  ಯುವಕ-ಯುವತಿಯರ ಮೇಲೆ ಅನುಮಾನ ಪಡುವಂತಾಗಿದೆ. ಸ್ನೇಹಿತರು ಮತ್ತು ದೀರ್ಘಾವಧಿಯ ಲಿವ್-ಇನ್ ಪಾಲುದಾರರ (Live In Relationship)ನಡುವೆ ಅನುಮೋದಿತವಲ್ಲದ ಪ್ರೀತಿyನ್ನು ಶಂಕಿಸಲಾಗುತ್ತಿದೆ, ನಿಗ್ರಹಿಸಲಾಗುತ್ತದೆ.


  ಈ ಪ್ರಕರಣದ ನಂತರ ಈ ರೀತಿಯ ಸಂಬಂಧದಲ್ಲಿರುವವರಿಗೆ ಮನೆ ಬಾಡಿಗೆ ಕೊಡಲೂ ಸಹ ಮಾಲಿಕರು ಹಿಂದು ಮುಂದು ನೋಡುತ್ತಿದ್ದಾರೆ. ಹೆತ್ತವರು ಕೂಡ ಈ ರೀತಿಯಾಗಿ ಇರುವುದಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಅಷ್ಟೇ ಯಾಕೆ ಈಗ ರಿಲೇಶನ್‌ಶಿಪ್‌ನಲ್ಲಿರುವ ಜೋಡಿಗಳು ಸಹ ತಮ್ಮದೇ ಪಾಲುದಾರರ ಮೇಲೆ ಅನುಮಾನ ಪಡುತ್ತಿದ್ದಾರೆ. ಹೌದು, ಈ ರಿತಿಯಾಗಿ ಶ್ರದ್ಧಾ ವಾಲ್ಕರ್‌ ಕೊಲೆ ಪ್ರಕರಣವು ದೆಹಲಿ ಎನ್‌ಸಿಆರ್‌ನಲ್ಲಿ ಯುವ ಜೋಡಿಗಳ ಮೇಲೆ ಸಾರ್ವಜನಿಕ ದೃಷ್ಟಿಕೋನವನ್ನೇ ಬದಲಾಯಿಸುವಂತೆ ಮಾಡುತ್ತಿದೆ.


  ಲಿವ್‌-ಇನ್‌ ಸಂಗಾತಿಗಳಿಗೆ ಎದುರಾಗಿದೆ ಸಂಕಷ್ಟ


  ಗುರ್ಗಾಂವ್ ಮೂಲದ ನಿಕಿತಾ, (29) ಕಳೆದ ಏಳು ವರ್ಷಗಳಿಂದ ತನ್ನ ಸಂಗಾತಿಯೊಂದಿಗೆ ವಾಸಿಸುತ್ತಿದ್ದಾರೆ. ಅನೇಕರು ಅವರು ವಿವಾಹಿತರು ಎಂದು ನಂಬಿದ್ದಾರೆ, ಆದ್ದರಿಂದ ಅವರಿಗೆ ಈ ಹಿಂದೆ ಹೆಚ್ಚಿನ ತೊಂದರೆಗಳು ಎದುರಾಗಿರಲಿಲ್ಲ, ಆದರೆ ಅಫ್ತಾಬ್ ಪೂನಾವಾಲಾ ಶ್ರದ್ಧಾ ವಾಲ್ಕರ್‌ಳನ್ನು ಕೊಲೆ ಮಾಡಿದಾಗಿನಿಂದ ಇವರ ಮೇಲೆ ಗೊಣಗಾಟಗಳು ಶುರುವಾಗಿವೆ ಅಂತೆ.


  Deadly Murder: ಪ್ರಿಯತಮೆಯನ್ನು ಕೊಂದು 35 ಪೀಸ್ ಮಾಡಿ ಫ್ರಿಡ್ಜ್​ನಲ್ಲಿಟ್ಟ, ಆಮೇಲೆ ಮಾಡಿದ್ದು ಕೇಳಿದ್ರೆ ಮೈ  ಜುಂ ಎನ್ನುತ್ತೆ!


  "ನನ್ನ ಸಂಗಾತಿಯೊಂದಿಗೆ ವಾಸಿಸುವ ನನ್ನ ನಿರ್ಧಾರವನ್ನು ಒಪ್ಪುವುದಿಲ್ಲ ಎಂದು ನನ್ನ ಪೋಷಕರು ಹೇಳುತ್ತಿದ್ದಾರೆ. ಈಗ ಪ್ರತಿಯೊಬ್ಬರೂ ನಮ್ಮಂತಹ ದಂಪತಿಗೆ ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ”ಎಂದು ನಿಕಿತಾ ಹೇಳುತ್ತಾರೆ.


  ಮನೆ ಬಾಡಿಗೆಗೆ ಕೊಡಲು ಮಾಲಿಕರ ಮೀನಾಮೇಷ


  ಇಂತಹ ಪ್ರಕರಣಗಳು ಸಂಭವಿಸಿದಾಗ ರಿಲೇಶನ್‌ಶಿಫ್‌ನಲ್ಲಿರುವವರ ಮೇಲೆ ಹೆಚ್ಚಿನ ಅನುಮಾನಗಳು, ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಜಹ. ಅಂತೆಯೇ ಇಂತಹ ಜೋಡಿಗಳಿಗೆ ಮುಖ್ಯ ಸಮಸ್ಯೆಯಾಗುವುದು ಮನೆ ಬಾಡಿಗೆ ವಿಚಾರದಲ್ಲಿ. ಮಾಲೀಕರು ಮದುವೆಯ ಪ್ರಮಾಣಪತ್ರವನ್ನು ಹೊಂದಿರದ ಬಾಡಿಗೆದಾರರಿಗೆ ಮನೆ ನಡಲು ಮೀನಾಮೇಷ ಎಣಿಸುತ್ತಿದ್ದಾರೆ.


  ಹೇಗೋ ಬ್ರೋಕರ್‌ ಮೂಲಕ ವಿವಿಧ ಹಂತದ ಪರಿಶೀಲನೆಯ ನಂತರ ಮನೆ ಬಾಡಿಗೆಗೆ ಗಿಟ್ಟಿಸಿಕೊಂಡರೂ ಸಹ ನೀವು ಯಾವಾಗ ಮದುವೆಯಾಗುತ್ತೀರಿ? ಅನ್ನೋ ಪ್ರಶ್ನೆ ಹಲವು ಬಾರಿ ಕೇಳಿ ಬರುತ್ತಿದೆ ಎನ್ನುತ್ತಾರೆ ಜೋಡಿಗಳು.


  ಸುಳ್ಳು ಹೇಳಿ ಅವಿವಾಹಿತ ದಂಪತಿಗೆ ಮನೆ


  ನೋಯ್ಡಾ ಮೂಲದ ರಿಯಲ್ ಎಸ್ಟೇಟ್ ಏಜೆಂಟ್ ಮಮತಾ, ತಾನು ಸುಳ್ಳು ಹೇಳಿ ಅವಿವಾಹಿತ ದಂಪತಿಗಳಿಗೆ ಈ ಹಿಂದೆ ಮನೆ ಬಾಡಿಗೆಗೆ ಕೊಡಿಸಿದ್ದಾಗಿ ಹೇಳಿಕೊಂಡರು. "ಲಿವ್‌ ಇನ್‌ ಸಂಗಾತಿಗಳಿಗೆ ಮನೆ ಬಾಡಿಗೆಗೆ ನೀಡಲು ಮಾಲೀಕರು ಯಾವುದೇ ರೀತಿಯಲ್ಲೂ ಒಪ್ಪುವುದಿಲ್ಲ, ಹೀಗಾಗಿ ನಾನು ಇಲ್ಲಿ ಸುಳ್ಳು ಹೇಳಬೇಕಾಯಿತು, ಫ್ಲಾಟ್‌ನಲ್ಲಿ ಒಬ್ಬರು ಮಾತ್ರ ವಾಸಿಸುತ್ತಾರೆ ಎಂದು ನಾನು ಮಾಲೀಕರಿಗೆ ಹೇಳಿದೆ” ಎಂದು ಮಮತಾ ಹೇಳುತ್ತಾರೆ.


  ಆದರೆ ಈಗಿನ ಪ್ರಕರಣಗಳನ್ನು ನೋಡಿದರೆ ಈ ರೀತಿಯ ಕೇಸ್‌ಗಳಿಗೆ ಸುಳ್ಳು ಹೇಳಿ ಮನೆ ಬಾಡಿಗೆಗೆ ಕೊಡಿಸದಿರುವುದೇ ಉತ್ತಮ ಎಂದೆನಿಸುತ್ತದೆ. ಈ ವಿಚಾರದಲ್ಲಿ ಮನೆ ಮಾಲೀಕರದು ತಪ್ಪಿಲ್ಲ. ಶ್ರದ್ಧಾ ಹೇಗೆ ಕೊಲೆಯಾಗಿದ್ದಾರೆ ಎಂಬುವುದು ಎಲ್ಲರ ಕಣ್ಣ ಮುಂದಿದೆ. ಅವರು ಭಯಪಡುವುದು ತುಂಬಾ ಸಹಜ ಎನ್ನುತ್ತಾರೆ ಮಮತಾ.
  ಮಮತಾ ಅವರು, ಲಿವ್-ಇನ್ ಸಂಬಂಧಗಳು ಹೆಚ್ಚು ದಿನ ಉಳಿಯುವುದಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ. ಯುವತಿಯರು ಗರ್ಭಿಣಿಯಾಗುತ್ತಾರೆ, ದಂಪತಿಗಳು ಪ್ರತಿದಿನ ಜಗಳವಾಡುತ್ತಾರೆ, ಇಲ್ಲಿ ತಮ್ಮ ಹೆತ್ತವರಿಗೂ ಅವರು ಸುಳ್ಳು ಹೇಳುತ್ತಿರುತ್ತಾರೆ. ಹೀಗೆಲ್ಲಾ ಇರುವಾಗ ಮುಂದೆ ಅನಾಹುತಗಳು ಸಂಭವಿಸಿದರೆ ಮಾಲೀಕರು ಪೊಲೀಸ್ ಪ್ರಕರಣವನ್ನು ಏಕೆ ಎದುರಿಸಬೇಕು? ಎಂದು ಮಮತಾ ಹೇಳುತ್ತಾರೆ.


  ನ್ಯಾಯಾಂಗದಲ್ಲೂ ಲಿವ್-ಇನ್ ಸಂಬಂಧಗಳನ್ನು ರಕ್ಷಿಸುವ ಕಾನೂನುಗಳಿಲ್ಲ


  ಭಾರತೀಯ ನ್ಯಾಯಾಂಗವು ಸಹ ಲಿವ್-ಇನ್ ಸಂಬಂಧಗಳ ಬಗ್ಗೆ ಯಾವುದೇ ನಿಲುವನ್ನು ಹೊಂದಿಲ್ಲ. ಅಂತಹ ದಂಪತಿಗಳ ಹಕ್ಕುಗಳನ್ನು ರಕ್ಷಿಸುವ ಯಾವುದೇ ಕಾನೂನುಗಳಿಲ್ಲ ಆದರೆ ಪ್ರಗತಿಪರ ವ್ಯಾಖ್ಯಾನಗಳು ಮತ್ತು ಅಸ್ತಿತ್ವದಲ್ಲಿರುವ ಶಾಸನದ ತಿದ್ದುಪಡಿಗಳಿಂದಾಗಿ ಅವರು ಒಟ್ಟಿಗೆ ವಾಸಿಸುವ ಕಾನೂನುಬದ್ಧ ಹಕ್ಕನ್ನು ಹೊಂದಿದ್ದಾರೆ. ನ್ಯಾಯಾಧೀಶರು ಸಂಬಂಧಗಳನ್ನು ನೈತಿಕವಾಗಿ ಅಸಮರ್ಥನೀಯ ಎಂದು ಕರೆದಿದ್ದಾರೆ, ಮತ್ತು ಸಾಂಸ್ಕೃತಿಕವಾಗಿ ಸ್ವೀಕಾರಾರ್ಹವಲ್ಲ ಎನ್ನುತ್ತಾರೆ.


  ಸಂಗಾತಿ ಬಗ್ಗೆ ತಿಳಿದುಕೊಳ್ಳಲು ಸಹಾಯ


  29 ವರ್ಷದ ಪೂಜಾ ಮಾನೆಕ್ ಇತ್ತೀಚೆಗಷ್ಟೇ ಮೂರು ವರ್ಷಗಳ ಕಾಲ ಲಿವ್-ಇನ್ ನಲ್ಲಿದ್ದ ಪಾಲುದಾರನನ್ನು ವಿವಾಹವಾದರು. ಮದುವೆಗೆ ಮೊದಲು ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದ, ಕೇವಲ ರೋಮ್ಯಾನ್ಸ್‌ ಅಥವಾ ಇನ್ಯಾವುದೋ ಪ್ರಣಯದ ವಿಚಾರಕ್ಕಲ್ಲ.


  “ಪ್ರಾಯೋಗಿಕ ಮತ್ತು ತಾರ್ಕಿಕ ಕಾರಣಗಳೂ ಇವೆ. ನಿಮ್ಮ ಸಂಗಾತಿಯನ್ನು ನೀವು ತಿಳಿದುಕೊಳ್ಳುವುದು ಮಾತ್ರವಲ್ಲದೆ ನೀವು ಒಟ್ಟಿಗೆ ಮನೆಯನ್ನು ಹೇಗೆ ನಡೆಸುತ್ತೀರಿ ಎಂಬುದನ್ನು ಸಹ ನೀವು ಕಂಡುಕೊಳ್ಳುತ್ತೀರಿ,” ಎಂದು ಅವರು ಹೇಳುತ್ತಾರೆ. ಮದುವೆಗೆ ಮುಂಚೆ ತನ್ನ ಸಂಗಾತಿಯೊಂದಿಗೆ ವಾಸಿಸುವ ಮೂಲಕ, ಅವರು ಹಣ ಮತ್ತು ಮನೆಯನ್ನು ಹೇಗೆ ನಿರ್ವಹಿಸುತ್ತಾರೆ ಎಂದು ಅರಿತುಕೊಂಡೆ ಎಂದಿದ್ದಾರೆ.


  ಸುಳ್ಳು ಹೇಳಿ ಬಾಡಿಗೆ ಮನೆ


  ಮೂರು ವರ್ಷಗಳ ಹಿಂದೆ, ಮಾಣೆಕ್ ಮತ್ತು ಅವಳ ಸಂಗಾತಿ ಬೆಂಗಳೂರಿನಲ್ಲಿ ತಮ್ಮ ಮೊದಲ ಮನೆಯನ್ನು ಹುಡುಕಲು ಹೋದಾಗ, ಬ್ರೋಕರ್ ಮದುವೆ ಬಗ್ಗೆ ಹೆಚ್ಚಾಗಿ ಕೇಳಿರದಿದ್ದರೂ ಮಾಲೀಕರಿಗೆ ನಮ್ಮದು ಎಂಗೇಜ್‌ಮೆಂಟ್‌ ಆಗಿದೆ ಎಂದು ಸುಳ್ಳು ಹೇಳಿದ್ದರಂತೆ.


  ಇದನ್ನೂ ಓದಿ: Explainer: ಅನುಪಮಾ ಗುಲಾಟಿ ಪ್ರಕರಣದ ಕರಾಳತೆ ನೆನಪಿಸಿದ ಶ್ರದ್ಧಾ ಕೊಲೆ ಕೇಸ್​​: ಪತ್ನಿಯನ್ನು 72 ತುಂಡು ಮಾಡಿದ್ದ ಪತಿ!


  “ನಾವು ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ ಮತ್ತು ಶೀಘ್ರದಲ್ಲೇ ಮದುವೆಯಾಗಲಿದ್ದೇವೆ ಎಂದು ಬ್ರೋಕರ್ ಮಾಲೀಕರಿಗೆ ಹೇಳಿದಾಗ, ಅದು ನಮ್ಮ ಹಕ್ಕುಗಳ ಉಲ್ಲಂಘನೆಯಂತೆ ಭಾಸವಾಯಿತು” ಎಂದು ಮಾನೆಕ್ ಹೇಳುತ್ತಾರೆ. ಮನೆ ಸಿಕ್ಕಿದ ಮೇಲೆ ಮಾಲೀಕರು ಅವರಿಬ್ಬರಿಗೂ ಮದುವೆ ಯಾವಾಗ ಎಂಬ ಪ್ರಶ್ನೆಯನ್ನು ಕೇಳುತ್ತಲೆ ಇದ್ದರಂತೆ.


  "ಲಿವ್-ಇನ್ ಸಂಬಂಧಗಳು ನಂಬಿಕೆ, ಸ್ವಾತಂತ್ರ್ಯ, ದುರ್ಬಲತೆಯ ಆಚರಣೆ"


  ಸಾಮಾಜಿಕ ವಿಜ್ಞಾನಿ ಶಿವ ವಿಶ್ವನಾಥನ್ ಅವರು ಲಿವ್-ಇನ್ ಸಂಬಂಧಗಳನ್ನು ನಂಬಿಕೆ, ಸ್ವಾತಂತ್ರ್ಯ ಮತ್ತು ದುರ್ಬಲತೆಯ ಆಚರಣೆ ಎಂದು ಕರೆಯುತ್ತಾರೆ. "ಅಂತಹ ಸಂಬಂಧಗಳ ದುರ್ಬಲತೆ ಈಗ ಪ್ರಶ್ನಾರ್ಹವಾಗಿದೆ. ಇಂತಹ ಸಂಬಂಧಗಳನ್ನು ಸಮಾಜ ಇನ್ನೂ ಒಪ್ಪಿಕೊಂಡಿಲ್ಲವಾದ್ದರಿಂದ ಸಾಕಷ್ಟು ಅನುಮಾನಗಳು ಕಾಡುತ್ತಿವೆ. ಲಿವ್-ಇನ್ ಜೋಡಿಗಳನ್ನು ಭಿನ್ನಾಭಿಪ್ರಾಯಗಳೆಂದು ಪರಿಗಣಿಸಲಾಗುತ್ತದೆ ಮತ್ತು ಯಾವುದೇ ಕೆಟ್ಟ ಸುದ್ದಿಯನ್ನು ವಿಚಿತ್ರ ರೀತಿಯಲ್ಲಿ ಸಾರ್ವಜನಿಕಗೊಳಿಸಲಾಗುತ್ತದೆ. ಅಂತಹ ಘರ್ಷಣೆಗಳನ್ನು ಪರಿಹರಿಸಲು ಯಾವುದೇ ಪ್ರಯತ್ನವಿಲ್ಲ ”ಎಂದು ಅವರು ಹೇಳುತ್ತಾರೆ.


  ಧರ್ಮದ ತೊಂದರೆ


  ಧರ್ಮವು ಈ ರೀತಿಯ ಸಂಬಂಧದಲ್ಲಿರುವ ಜೋಡಿಗಳು ಎದುರಿಸುತ್ತಿರುವ ಮತ್ತೊಂದು ತಡೆಗೋಡೆಯಾಗಿದೆ. 31 ವರ್ಷದ ಶಹಾನಾ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಅವರು ಸೆಪ್ಟೆಂಬರ್‌ನಲ್ಲಿ ನಾಲ್ಕು ವರ್ಷಗಳ ತನ್ನ ಲಿವ್-ಇನ್ ಪಾಲುದಾರರೊಂದಿಗೆ ದೊಡ್ಡ ಫ್ಲಾಟ್‌ಗಾಗಿ ಹುಡುಕಲಾರಂಭಿಸಿದರು ಮತ್ತು ಪ್ರತಿ ಹಂತದಲ್ಲೂ ತೊಂದರೆ ಎದುರಿಸಿದರು.


  ಬ್ರೋಕರ್‌ಗಳು ನಮಗೆ ಮತ್ತೆ ಕರೆ ಮಾಡುತ್ತಿರಲಿಲ್ಲ, ಕೆಲವರು ಜನನ ಪ್ರಮಾಣಪತ್ರವನ್ನು ಕೇಳುತ್ತಿದ್ದರು. ಇನ್ನು ಕೆಲವರಂತೂ ತುಂಬಾ ಕೆಟ್ಟದಾಗಿ ಮಾತನಾಡುತ್ತಿದ್ದರು. "ಕಟ್ಟಡದಲ್ಲಿ ಈಗಾಗಲೇ ಎರಡು ನಾಯಿಗಳಿವೆ ಮತ್ತು ನಾವು ಮೂರನೆಯದನ್ನು ಬಯಸುವುದಿಲ್ಲ ಎಂದು ಒಬ್ಬ ಮಾಲೀಕರು ಹೇಳಿದರು ಎನ್ನುತ್ತಾರೆ ಶಹಾನಾ. "ನಮ್ಮ ಸಂಬಂಧಕ್ಕಿಂತ ಹೆಚ್ಚಾಗಿ ನಾನು ಮುಸ್ಲಿಂ ಎಂಬ ಕಾರಣ ಹೆಚ್ಚು ಅನಾನುಕೂಲವನ್ನುಂಟು ಮಾಡಿದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳುತ್ತಾರೆ.


  ಪೂಜಾ ಮಾಣೆಕ್‌ಗೆ ಆಕೆಯ ಮನೆಯ ಮಾಲೀಕರು ಪೂಜಾ ಅವರ ಸಂಗಾತಿ ಕ್ರಿಶ್ಚಿಯನ್ ಆಗಿರುವುದು ಒಳ್ಳೆಯದು, ನಮ್ಮ ಪುಣ್ಯ ಅವರು ಮುಸ್ಲಿಂ ಅಲ್ವಲ್ಲ ಎಂದಿದ್ದರಂತೆ. ಅವರು ಮುಸ್ಲಿಮರನ್ನು ತುಂಬಾ ದ್ವೇಷಿಸುವ ಕಾರಣ, ಕ್ರಿಶ್ಚಿಯನ್ನರಾಗಿದ್ದಕ್ಕೆ ಮನೆ ಬಾಡಿಗೆಗೆ ಒಪ್ಪಿಗೆ ನೀಡಿದ್ದಾರೆ " ಎಂದು ಮಾಣೆಕ್ ಹೇಳುತ್ತಾರೆ.


  ಕೆಲ ಮನೆ ಮಾಲೀಕರಿಂದ ಎಚ್ಚರಿಕೆ


  ಪುಣೆ ಮೂಲದ ನಿಶಾ, (25) ಲಿವ್-ಇನ್ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವ ಮನೆ ಮಾಲೀಕರನ್ನು ಕಂಡುಕೊಂಡಿದ್ದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ ಎಂದು ಹೇಳುತ್ತಾರೆ. “ನಾವಿಬ್ಬರೂ ಹಣಕ್ಕಾಗಿ ಹೆಣಗಾಡುತ್ತಿದ್ದರಿಂದ ಮತ್ತು ನಗರದ ಬೇರೆ ಬೇರೆ ಕಡೆ ಏಕಾಂಗಿಯಾಗಿ ವಾಸಿಸುತ್ತಿದ್ದರಿಂದ ನನ್ನ ಸಂಗಾತಿ ಮತ್ತು ನಾನು ಒಟ್ಟಿಗೆ ವಾಸಿಸಲು ನಿರ್ಧರಿಸಿದೆವು. ಲಿವಿಂಗ್ ಟುಗೆದರ್ ನಮ್ಮ ಹಲವಾರು ಸಮಸ್ಯೆಗಳನ್ನು ಪರಿಹರಿಸಿದೆ ಮತ್ತು ನಾವು ಒಬ್ಬರನ್ನೊಬ್ಬರು ಉತ್ತಮವಾಗಿ ಬೆಂಬಲಿಸಲು ಸಮರ್ಥರಾಗಿದ್ದೇವೆ, ”ಎಂದು ಅವರು ಹೇಳುತ್ತಾರೆ.


  ಆದರೆ ಈಗ ಮನೆ ಮಾಲೀಕರು ಶ್ರದ್ಧಾ ಹತ್ಯೆಯನ್ನು ಉದಾಹರಣೆ ನೀಡಿ ನನಗೆ ಎಚ್ಚರಿಕೆ ಇಂದಿರಲೂ ಸಹ ಹೇಳುತ್ತಿದ್ದಾರೆ ಎಂದು ನೆನಪಿಸಿಕೊಳ್ಳುತ್ತಾರೆ ನಿಶಾ.


  ಇಂತಹ ಪ್ರಕರಣಗಳು ಸಂಭವಿಸಿದಾಗ ಸಹಜವಾಗಿಯೇ ನಂಬಿಕೆ, ಭದ್ರತೆಯ ಬಗ್ಗೆ ಅಪಸ್ವರ ಮೂಡುವುದು ಸಹಜ. ಹೆತ್ತವರಿಗೂ ತಮ್ಮ ಮಕ್ಕಳು ಏನಾಗುತ್ತಾರೋ ಎಂಬ ದುಗುಡ ಇರುತ್ತದೆ. ಯಾವುದೇ ಸಂಬಂಧದಲ್ಲಿ ಉಳಿಯುವ ಮುನ್ನ ಯೋಚಿಸುವುದು ಉತ್ತಮ.

  Published by:Precilla Olivia Dias
  First published: