ಭಾರತದಲ್ಲಿ Covid-19 ಮತ್ತೆ ಸ್ಫೋಟವಾಗುತ್ತೆ: ಕೇಂಬ್ರಿಡ್ಜ್‌ ವಿವಿ ಪ್ರಾಧ್ಯಾಪಕ ಎಚ್ಚರಿಕೆ!

ಕೆಲವು ರಾಜ್ಯ ಹಾಗೂ ನಗರಗಳಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿದ್ದು, ಸರ್ಕಾರಿ ಪ್ರಾಧಿಕಾರಗಳು ಹಾಗೂ ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಕಳವಳದ ಅಲೆಯನ್ನೇ ಸೃಷ್ಟಿಸಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮುಂಬೈ, ದೆಹಲಿಯಂಥ (Mumbai and Delhi)  ಹಲವು ನಗರಗಳಲ್ಲಿ ಕೋವಿಡ್-19 ಪ್ರಕರಣಗಳು(Covid-19) ತೀವ್ರವಾಗಿ ಏರಿಕೆಯಾಗುತ್ತಿದ್ದು, ಭಾರತೀಯರು ಈ ಸಾಂಕ್ರಾಮಿಕದ 3ನೇ ಅಲೆಯ ಮಾರಣಾಂತಿಕ  ಹೊಡೆತದ ಬಗ್ಗೆ ಭೀತರಾಗಿದ್ದಾರೆ. ಮತ್ತೊಂದೆಡೆ ಸರ್ಕಾರಿ ಪ್ರಾಧಿಕಾರಗಳು ದೇಶದಲ್ಲಿ ಕಾಣಿಸಿಕೊಂಡಿರುವ ಓಮೈಕ್ರಾನ್ ರೂಪಾಂತರಿ ವೈರಸ್ (Omicron mutant virus) ವಿರುದ್ಧ ಹೋರಾಡಲು ಭರದ ಸಿದ್ಧತೆ ನಡೆಸತೊಡಗಿವೆ.ಭಾರತೀಯರಲ್ಲಿ ಭೀತಿ ಹೆಚ್ಚುತ್ತಿರುವ ನಡುವೆಯೇ ಕೆಲವೇ ದಿನಗಳಲ್ಲಿ ಭಾರತದಲ್ಲಿ ಕೋವಿಡ್-19 ( Epidemic) ಬೆಳವಣಿಗೆಯ ದರ ಗಂಭೀರ ಸ್ವರೂಪದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಇದು ತೀವ್ರ ಸ್ವರೂಪದ್ದಾಗಿರುತ್ತದೆಯಾದರೂ ಅಲ್ಪಕಾಲದ ಸೋಂಕಿನ ಅಲೆಯಾಗಿರಲಿದೆ ಎಂದು ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದUniversity of Cambridge) ಪ್ರಾಧ್ಯಾಪಕ ಪಾಲ್ ಕಟ್ಟುಮನ್ (Paul Kattuman) ಎಚ್ಚರಿಸಿದ್ದಾರೆ.

ಪ್ರಕರಣಗಳ ಸಂಖ್ಯೆ ಸ್ಫೋಟಕ ಹಂತ
ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ವ್ಯವಹಾರ ಶಾಲೆಯ ಪ್ರಾಧ್ಯಾಪಕ ಪಾಲ್ ಕಟ್ಟುಮನ್ ಭಾರತದಲ್ಲಿನ ಕೋವಿಡ್-19 ಶೋಧಕವೊಂದನ್ನು ಅಭಿವೃದ್ಧಿಪಡಿಸಿದ್ದು, ಮೇಲಿನಂತೆ ಅಂದಾಜಿಸಿದ್ದಾರೆ. "ಭಾರತದಲ್ಲಿನ ಪ್ರತಿದಿನದ ಪ್ರಕರಣಗಳ ಸಂಖ್ಯೆ ಸ್ಫೋಟಕ ಹಂತದ ಅವಧಿ ತಲುಪುವ ಸಾಧ್ಯತೆ ಇದ್ದು, ಅದರ ತೀವ್ರತೆ ಮಾತ್ರ ಅಲ್ಪಕಾಲದ್ದಾಗಿರಲಿದೆ" ಎಂದು ಬ್ಲೂಮ್‌ಬರ್ಗ್‌ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇದನ್ನೂ ಓದಿ: Omicron: ಭೀತಿ ಹುಟ್ಟಿಸುತ್ತಿರುವ ಓಮೈಕ್ರಾನ್‌ನ ಕೆಲ 'ಅಸಹಜ’ ಲಕ್ಷಣಗಳು ಪತ್ತೆ

ಹೊಸ ಸೋಂಕು ಪ್ರಕರಣ ಹೆಚ್ಚಳ
ಇದರೊಂದಿಗೆ ಇಮೇಲ್‌ವೊಂದರಲ್ಲಿ "ಹೊಸ ಸೋಂಕು ಪ್ರಕರಣಗಳು ಶೀಘ್ರವಾಗಿ ಉಲ್ಬಣಿಸುವ ಸಾಧ್ಯತೆ ಇದೆ. ಬಹುಶಃ ಈ ವಾರದೊಳಗೆ" ಎಂದೂ ಸೇರಿಸಿದ್ದಾರೆ. ಕೋವಿಡ್-19 ಪ್ರಕರಣಗಳಲ್ಲಿ ಏರಿಕೆ ಕಾಣಲಿರುವುದು ನಿರೀಕ್ಷಿತವೇ ಆಗಿದ್ದರೂ, ಪ್ರಕರಣಗಳ ಸಂಖ್ಯೆ ಎಷ್ಟು ಉಲ್ಬಣಿಸಬಹುದು ಎಂದು ಅಂದಾಜಿಸುವುದು ಅಸಾಧ್ಯವಾಗಿದೆ ಎಂದೂ ಹೇಳಿದ್ದಾರೆ.

ತೀವ್ರ ಕಳವಳಕಾರಿ
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಪಾಲ್ ಕಟ್ಟುಮನ್ ಹಾಗೂ ಅವರ ತಂಡದಲ್ಲಿರುವ ಸಂಶೋಧಕರು ಭಾರತದ ಕೋವಿಡ್-19 ಶೋಧಕ ಅಭಿವೃದ್ಧಿ ಪಡಿಸಿದ್ದು, ಭಾರತದಾದ್ಯಂತ ಸೋಂಕಿನ ದರವು ತೀವ್ರ ಗತಿಯಲ್ಲಿ ಏರಿಕೆಯಾಗಿರುವುದನ್ನು ಗುರುತಿಸಿದ್ದಾರೆ. ಸರಿದೂಗಿಸಿದ ಬೆಳವಣಿಗೆ ದರದ ಪ್ರಕಾರ ಭಾರತದ 6 ರಾಜ್ಯಗಳಲ್ಲಿ ಶೇಕಡವಾರು ಪ್ರಮಾಣ 5 ದಾಟಿದ್ದು, ಇದನ್ನು "ತೀವ್ರ ಕಳವಳಕಾರಿ" ಎಂದು ವಿಂಗಡಿಸಲಾಗಿದೆ.

34.8 ಮಿಲಿಯನ್‌ಗೆ ಏರಿಕೆ
ಕೆಲವು ರಾಜ್ಯ ಹಾಗೂ ನಗರಗಳಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿದ್ದು, ಸರ್ಕಾರಿ ಪ್ರಾಧಿಕಾರಗಳು ಹಾಗೂ ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಕಳವಳದ ಅಲೆಯನ್ನೇ ಸೃಷ್ಟಿಸಿದೆ. ದೇಶದಲ್ಲಿ 9,195 ನೂತನ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಕಳೆದ 3 ವಾರಗಳಲ್ಲೇ ಅತ್ಯಧಿಕ ಪ್ರಕರಣಗಳು ಎಂಬ ದಾಖಲೆಗೆ ಪಾತ್ರವಾಗಿದೆ. ಈ ಹೊಸ ಪ್ರಕರಣಗಳಿಂದ ದೇಶದಲ್ಲಿನ ಸೋಂಕಿತರ ಪ್ರಮಾಣ 34.8 ಮಿಲಿಯನ್‌ಗೆ ಏರಿಕೆಯಾದಂತಾಗಿದೆ.

ಲಸಿಕೆ ಅಭಿಯಾನ
ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಂಚೂಣಿ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು ಹಾಗೂ ಬಹುರೋಗಗಳಿಗೆ ತುತ್ತಾಗಿರುವ ಹಿರಿಯ ನಾಗರಿಕರಿಗೆ ಕೋವಿಡ್-19 ಲಸಿಕೆಯ ಬೂಸ್ಟರ್ ಡೋಸ್ ನೀಡುವುದಾಗಿಯೂ ಹಾಗೂ ಜನವರಿಯಿಂದ 15-18 ವಯಸ್ಸಿನ ಮಕ್ಕಳಿಗೆ ಲಸಿಕೆ ಅಭಿಯಾನ ಪ್ರಾರಂಭಿಸಲಾಗುವುದು ಎಂದು ಪ್ರಕಟಿಸಿದ್ದರು.

ಇದನ್ನೂ ಓದಿ: Night Curfew: ಚಿತ್ರಮಂದಿರಗಳಿಗೂ ತಟ್ಟಿದ ನೈಟ್​ ಕರ್ಫ್ಯೂ ಎಫೆಕ್ಟ್​: ಇಂದಿನಿಂದ 4 ಶೋ.. 7 ಗಂಟೆಗೆ ಕೊನೆಯ ಪ್ರದರ್ಶನ!

ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಭಾರತದ ಹಲವು ರಾಜ್ಯಗಳಲ್ಲಿ ಕಳೆದ ಒಂದು ವಾರದಿಂದ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಳದಿ ಎಚ್ಚರಿಕೆ ನೀಡಲಾಗಿದ್ದು, ಚಿತ್ರಮಂದಿಗರಗಳು, ಶಾಲೆಗಳು ಹಾಗೂ ಜಿಮ್‌ಗಳನ್ನು ಬಂದ್ ಮಾಡಿದೆ. ಇದರೊಂದಿಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಹೊಸ ಹೊಸ ರೂಪಾಂತರಗಳು ಅಂತ್ಯ:
ಕೆಲವು ವಿಜ್ಞಾನಿಗಳು ಓಮೈಕ್ರಾನ್ ಹರಡುವಿಕೆಯು ಸಾಂಕ್ರಾಮಿಕ ರೋಗದ ಅಂತ್ಯದ ಆರಂಭವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದು ನಿಸ್ಸಂದೇಹವಾಗಿ ಆಶಾವಾದಿ ಸನ್ನಿವೇಶವಾಗಿದೆ, ವಿಜ್ಞಾನದಲ್ಲಿ ಯಾವುದೇ ಆಧಾರವಿಲ್ಲದೆ ವಿಜ್ಞಾನಿಗಳು ಈ ಸತ್ಯವನ್ನು ಬಹಿರಂಗಪಡಿಸಲೂ ಸಾಧ್ಯವಿಲ್ಲ ಎಂಬುದನ್ನು ನಂಬಲೇಬೇಕು. ಸಾಂಕ್ರಾಮಿಕ ರೋಗದ "ಅಂತ್ಯ" ಎಂದರೆ ಏನು ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ - ರೋಗವು ಸಂಪೂರ್ಣವಾಗಿ ಕಣ್ಮರೆಯಾಗುತ್ತದೆಯೇ ಅಥವಾ ಅದರ ಪರಿಣಾಮ ಇಳಿಮುಖವಾಗಬಹುದೇ ಎಂಬುದು ಇದರ ತಾತ್ಪರ್ಯವಾಗಿದೆಯೇ ಎಂಬುದನ್ನು ಕಾಲಾನಂತರದಲ್ಲಿ ಅರಿತುಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಪರಿಣಾಮಕಾರಿ ಲಸಿಕೆಗಳು ಅಥವಾ ಚಿಕಿತ್ಸೆಗಳ ಲಭ್ಯತೆಯಿಂದಾಗಿ ಸಾಂಕ್ರಾಮಿಕಗಳು ಬೆದರಿಕೆಯಾಗಿ ಉಳಿಯುವುದಿಲ್ಲ ಎಂಬ ತೀರ್ಮಾನಕ್ಕೂ ಬರಬಹುದಾಗಿದೆ.
Published by:vanithasanjevani vanithasanjevani
First published: