ಲಡಾಕ್ ಗಡಿಭಾಗದಲ್ಲಿ ಪಾಕಿಸ್ತಾನದ ಫೈಟರ್ ವಿಮಾನಗಳ ಜಮಾವಣೆ? ಕಟ್ಟೆಚ್ಚರದಲ್ಲಿ ಭಾರತ

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿಯನ್ನು ಸಂವಿಧಾನದಿಂದ ತೆಗೆದುಹಾಕಿದ ಬಳಿಕ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಸೂಕ್ಷ್ಮ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಕಟ್ಟೆಚ್ಚರಿಕೆಯಿಂದ ಗಮನಿಸುತ್ತಿದೆ.

news18
Updated:August 12, 2019, 6:56 PM IST
ಲಡಾಕ್ ಗಡಿಭಾಗದಲ್ಲಿ ಪಾಕಿಸ್ತಾನದ ಫೈಟರ್ ವಿಮಾನಗಳ ಜಮಾವಣೆ? ಕಟ್ಟೆಚ್ಚರದಲ್ಲಿ ಭಾರತ
ಜೆಎಫ್-17 ಫೈಟರ್
news18
Updated: August 12, 2019, 6:56 PM IST
ನವದೆಹಲಿ(ಆ. 12): ಜಮ್ಮು-ಕಾಶ್ಮೀರದ ವಿಶೇಷಾಧಿಕಾರ ಹಿಂಪಡೆದ ಬಳಿಕ ಭಾರತ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿ ಆತಂಕದ ವಾತಾವರಣ ನೆಲಸಿದೆ. ಇದೀಗ ಲಡಾಕ್ ಕಡೆಯ ಗಡಿಭಾಗದಲ್ಲಿ ಪಾಕಿಸ್ತಾನವು ಯುದ್ಧೋಪಕರಣ ಸಾಗಿಸುತ್ತಿರುವುದು ಕಂಡುಬಂದಿದೆ. ಲಡಾಕ್ ಗಡಿಭಾಗಕ್ಕೆ ಸಮೀಪವಿರುವ ತನ್ನ ಸೇನಾ ನೆಲೆಯಲ್ಲಿ ಪಾಕ್ ಸೇನೆ ಯುದ್ಧೋಪಕರಣಗಳನ್ನ ಜಮಾವಣೆಗೊಳಿಸುತ್ತಿದೆ.

ಪಾಕಿಸ್ತಾನದ ಮೂರು ಸಿ-130 ಮಿಲಿಟರಿ ಸಾಗಣೆ ವಿಮಾನಗಳ ಮೂಲಕ ಸ್ಕಾರ್ಡು ವಾಯುನೆಲೆಗೆ ಯುದ್ಧೋಪಕರಣಗಳ ಸಾಗಣೆಯಾಗುತ್ತಿದೆ. ಈ ಬೆಳವಣಿಗೆಯ ಮೇಲೆ ಭಾರತೀಯ ಸೇನೆ ನಿಗಾ ಇರಿಸಿದೆ ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿವೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ಚಂಡೀಗಢ ಮಾಲ್​ನಲ್ಲಿ ಹುಸಿ ಬಾಂಬ್​ ಬೆದರಿಕೆ; ಎಲ್ಲಾ ಮಳಿಗೆಗಳನ್ನು ಖಾಲಿ ಮಾಡಿಸಿದ ಪೊಲೀಸ್ ಇಲಾಖೆ

ಚೀನಾ ಮತ್ತು ಪಾಕಿಸ್ತಾನದ ಜಂಟಿ ನಿರ್ಮಿತ ಜೆಎಫ್-17 ಫೈಟರ್ ವಿಮಾನಗಳನ್ನು ಸ್ಕಾರ್ಡು ವಾಯುನೆಲೆಗೆ ಸಾಗಿಸುವ ಸಾಧ್ಯತೆ ಇದೆ. ಆ ಯುದ್ಧವಿಮಾನಕ್ಕೆ ಸಂಬಂಧಿಸಿದ ಉಪಕರಣೆಗಳನ್ನು ಈಗಾಗಲೇ ಸಾಗಿಸಲಾಗುತ್ತಿದೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ.

ಪಾಕಿಸ್ತಾನದ ವಾಯು ಸೇನೆಯು ಸಮರಾಭ್ಯಾಸ ನಡೆಸಲು ಯೋಜಿಸಿದೆ. ಈ ಹಿನ್ನೆಲೆಯಲ್ಲಿ ಜೆಎಫ್-17 ಯುದ್ಧವಿಮಾನವನ್ನು ಸ್ಕಾರ್ಡು ನೆಲೆಗೆ ತಂದಿಡುತ್ತಿರುವ ಸಾಧ್ಯತೆ ಇದೆ. ಆದರೆ, 370ನೇ ವಿಧಿ ರದ್ದು ಮಾಡಿದ ಬಳಿಕ ಗಡಿಭಾಗದಲ್ಲಿ ಏನು ಬೇಕಾದರೂ ನಡೆಯುವ ಸಂಭವವಿರುವುದರಿಂದ ಭಾರತೀಯ ಸೇನೆ ಕಟ್ಟೆಚ್ಚರಿಕೆಯಿಂದ ಪಾಕಿಸ್ತಾನದ ನಡೆಗಳನ್ನ ಗಮನಿಸುತ್ತಿದೆ.

(ವರದಿ: ಎಎನ್​ಐ ಸುದ್ದಿ ಸಂಸ್ಥೆ)

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
Loading...

First published:August 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...